• Tue. Jun 18th, 2024

ಕೋಟಿಗಾನಹಳ್ಳಿ ರಾಮಯ್ಯರ ನಾಟಕಗಳು ಮಕ್ಕಳಲ್ಲಿ ರಾಜಕೀಯ ನೆಲೆಯ ಅರಿವು ವಿಸ್ತಾರಗೊಳಿಸುವಂತವು – ರಾಮಕೃಷ್ಣ ಬೆಳತೂರು

PLACE YOUR AD HERE AT LOWEST PRICE

ಕೋಟಿಗಾನಹಳ್ಳಿ ರಾಮಯ್ಯರ ಎಲ್ಲಾ ನಾಟಕಗಳು ಪ್ರಸಕ್ತ ವಿದ್ಯಮಾನಗಳ ರಾಜಕೀಯ ನೆಲೆಯಲ್ಲಿ ಮಕ್ಕಳ ಅರಿವನ್ನು ವಿಸ್ತಾರಗೊಳಿಸುತ್ತದೆಯೆಂದು ರಂಗನಿರ್ದೇಶಕ ಲೇಖಕ ರಾಮಕೃಷ್ಣ ಬೆಳತೂರು ಹೇಳಿದರು.

ಕೋಲಾರ ನಗರದ ಪತ್ರಕರ್ತರ ಭವನದಲ್ಲಿ ಭಾನುವಾರ ಓದುಗ ಕೇಳುಗ ನಮ್ಮನಡೆ ೨೫ ನೇ ತಿಂಗಳ ಕಾರ್ಯಕ್ರಮದಲ್ಲಿ ಕೋಟಿಗಾನಹಳ್ಳಿ ರಾಮಯ್ಯ ನಾಟಕಗಳ ಕುರಿತು ಅವರು ಮಾತನಾಡುತ್ತಾ, ಇವರ ಎಲ್ಲಾ ನಾಟಕಗಳು ಮಕ್ಕಳಲ್ಲಿ ರಾಜಕೀಯ ನೆಲೆಯ ಅರಿವನ್ನು ವಿಸ್ತಾರಗೊಳಿಸುತ್ತದೆ, ಸಮಾಜದ ಓರೆ ಕೊರೆಗಳನ್ನು ತಿದ್ದುವಂತಿರುತ್ತದೆ ಎಂದರು.

ಕೋಟಿಗಾನಹಳ್ಳಿ ರಾಮಯ್ಯನವರು ಕಾಲ, ಸ್ಥಳ ಹಾಗೂ ಸಂದರ್ಭವನ್ನು ಮನಸ್ಸಿನಲ್ಲಿಟ್ಟುಕೊಂಡು ಯಾವುದೇ ನಾಟಕವನ್ನು ರಚಿಸುತ್ತಾರೆ, ಈವರೆವಿಗೂ ಸುಮಾರು ೩೦ ನಾಟಕಗಳನ್ನು ಬರೆದಿದ್ದಾರೆ, ಈ ಪೈಕಿ ೮ ಮಾತ್ರವೇಪ್ರಕಟವಾಗಿದೆ, ಉಳಿದಂತೆ ೧೮ ನಾಟಕಗಳನ್ನು ನನ್ನದೇ ನಿರ್ದೇಶನದಲ್ಲಿ ರಂಗಕ್ಕೇರಿದೆ, ಇವರ ನಾಟಕಗಳನ್ನು ಮಕ್ಕಳ ನಾಟಕ, ದೊಡ್ಡವರಿಗಾಗಿ ಮಕ್ಕಳ ನಾಟಕ ಹಾಗೂ ಅಂಬೇಡ್ಕರ್ ಹಾದಿಯ ನಾಟಕಗಳೆಂಬ ಮೂರು ಭಾಗವಾಗಿ ವಿಂಗಡಿಸಬಹುದು, ನಾನು ಮೊದಲು ನಿರ್ದೇಶಿಸಿದ ಮರ್ಜಿನಾ ಮತ್ತು ನಲವತ್ತು ಕಳ್ಳರು ನಾಟಕವು ಆಲಿಬಾಬು ನಲವತ್ತು ಕಳ್ಳರು ಕಥೆಯ ನಾಟಕವಾಗಿದೆ, ಇದು ಈಗಾಗಲೇ ನಾಟಕ, ಸಿನಿಮಾ, ಕಾರ್ಟೂನ್ ಇನ್ನಿತರೆ ಪ್ರಕಾರಗಳಲ್ಲಿ ಹೊರ ಬಂದಿದೆ, ಆದರೆ, ಮರ್ಜಿನಾಮತ್ತು ನಲವತ್ತು ಕಳ್ಳರು ನಾಟಕ ಇರಾನ್ ಇರಾಕ್ ಯುದ್ಧದ ಸಂದರ್ಭದಲ್ಲಿ ಬರೆದ ನಾಟಕವಾಗಿದ್ದು, ಅಂದಿನ ಸುತ್ತಮುತ್ತಲಿನ ತಳಮಳ, ಪ್ರಚಲಿತ ವಿದ್ಯಮಾನಗಳನ್ನು ನಾಟಕ ಒಳಗೊಂಡಿದೆ ಎಂದು ವಿವರಿಸಿದರು.

ಕೋಟಿಗಾನಹಳ್ಳಿ ರಾಮಯ್ಯ ನಾಟಕ ರಂಗದಲ್ಲಿ ಸಾಕಷ್ಟು ಸಾಧನೆ ಮಾಡಿದ್ದರೂ ಕರ್ನಾಟಕ ನಾಟಕ ಅಕಾಡೆಮಿಯಲ್ಲಿ ಇವರ ಕುರಿತು ಒಂದೇ ಪುಟದಸಾಹಿತ್ಯ ಇಲ್ಲ ಎಂದು ವಿಷಾದಿಸಿದರು.
ಇವರ ಬಹುತೇಕ ನಾಟಕಗಳಲ್ಲಿ ತಿಪ್ಪ ತಳಸಮುದಾಯದ ಪ್ರತಿನಿಽಯಾಗಿ ಕಾಣಿಸಿಕೊಳ್ಳುತ್ತಾನೆ, ಕೋಟಿಗಾನಹಳ್ಳಿ ರಾಮಯ್ಯರ ಎಲ್ಲಾ ನಾಟಕಗಳನ್ನು ಮಕ್ಕಳ ಪಠ್ಯವಾಗಿಸಿ ಉಳಿಸಿ ಮಕ್ಕಳಿಗೆ ತಲುಪಿಸಬೇಕಾಗಿದೆಯೆಂದು ಅಭಿಪ್ರಾಯಪಟ್ಟರು.

ಅಧ್ಯಕ್ಷತೆವಹಿಸಿದ್ದ ಬೆಂಗಳೂರು ಕ್ರಿಸ್ತು ಕಾಲೇಜಿನ ಸಹಾಯಕ ಪ್ರಾಧ್ಯಾಪಕ ಡಾ.ಕುಪ್ಪನಹಳ್ಳಿ ಭೈರಪ್ಪ ಮಾತನಾಡಿ, ಕೋಟಿಗಾನಹಳ್ಳಿ ರಾಮಯ್ಯಸಾಂಸ್ಕೃತಿಕ ಚಿಂತನೆಗಳ ಮೂಲಕ ಬೌದ್ಧಿಕ ಬೆಳಗನ್ನು ಕೊಟ್ಟಂತವರು, ಇವರನ್ನು ಕೋಲಾರ ನೆಲದ ಶೇಕ್ಸಪಿಯರ್, ಕುವೆಂಪು, ಕಾರಂತ ಎಂದು ಬಣ್ಣಿಸಬಹುದು ಎಂದರು.

ಈವರೆವಿಗೂ ಸುಮಾರು ಐವತ್ತಕ್ಕೂ ಹೆಚ್ಚು ನಾಟಕಗಳನ್ನು ಬರೆದಿದ್ದಾರೆ, ಆದರೆ, ಇವುಗಳಲ್ಲಿ ಅರ್ಧವೂ ಪ್ರಕಟವಾಗಿಲ್ಲ, ಕೆ.ರಾಮಯ್ಯರ ನಾಟಕಗಳ ತಾಯಿಬೇರು ಜನಪದವಾಗಿದ್ದು, ಅಲ್ಲಿಂದ ಅವು ಹೂವುಗಳಂತೆ ಅರಳಿವೆ ಎಂದರು.

ಕೋಟಿಗಾನಹಳ್ಳಿ ರಾಮಯ್ಯ, ಲಕ್ಷ್ಮೀಪತಿ ಕೋಲಾರ ಮತ್ತು ಡಾ.ಕೆ.ವೈ.ನಾರಾಯಣಸ್ವಾಮಿಯವರನ್ನು ಕೋಲಾರ ನೆಲದಿಂದ ಬಂದ ರಂಗ ಚಕ್ರವರ್ತಿಗಳೆಂದು ಗುರುತಿಸಬಹುದು ಎಂದರು.

ಮರ್ಜಿನಾ, ಫಾಲೂಕಮ್ಮ, ಒಗಟಿನ ರಾಣಿ. ನಾಯಿ ತಿಪ್ಪನ ಅಜ್ಜಿ ಹೀಗೆ ಪ್ರತಿ ನಾಟಕದಲ್ಲೂ ಹೆಣ್ಣು ಪಾತ್ರಗಳ ಮೂಲಕ ಸಮಾಜಕ್ಕೆ ಸಾಮರಸ್ಯದ ಹಾರಿ ತೋರಿಸಿದ್ದಾರೆ, ಇವರ ನಾಟಕಗಳಲ್ಲಿ ಜಾನಪದ ಭಾಷೆಯ ವೈಶಿಷ್ಟ್ಯತೆ ಹಾಗೂ ಆದಿಮ ಪ್ರe ಜಾಗೃತವಾಗಿರುತ್ತದೆಯೆಂದ ವಿವರಿಸಿದರು.

ಇದೇ ಸಂದರ್ಭದಲ್ಲಿ ಓದುಗ ಕೇಳುಗ ೨೫ ತಿಂಗಳ ನೆನಪಿನ ಪುಸ್ತಕವನ್ನು ಕೋಟಿಗಾನಹಳ್ಳಿ ರಾಮಯ್ಯ ಬಿಡುಗಡೆ ಮಾಡಿದರು.

ಡಾ.ಕೆ.ಎನ್.ಗಣೇಶಯ್ಯ, ಸಿ.ಎಂ.ಮುನಿಯಪ್ಪ, ವಿ.ಎಸ್.ಎಸ್.ಶಾಸಿ, ಸ.ರಘುನಾಥ್ ಮತ್ತಿತರರು ಭಾಗವಹಿಸಿದ್ದರು.

೨೫ ತಿಂಗಳ ಓದುಗ ಕೇಳುಗ ಕುರಿತು ಎಚ್.ಎ.ಪುರುಷೋತ್ತಮ್‌ರಾವ್ ಪ್ರಾಸ್ತಾವಿಕವಾಗಿ ಮಾತನಾಡಿದರು. ಜೆ.ಜಿ.ನಾಗರಾಜ್ ನಿರೂಪಿಸಿದರು.

 

 

Related Post

ಜನ್ಮದಿನಕ್ಕೊಂದು ಸಸಿ ನೆಟ್ಟು ಹಸಿರನ್ನು ಉಸಿರಾಗಿಸಿ – ಹೆಚ್.ಎನ್.ಮೂರ್ತಿ
ಅಂಧಕಾರದಲ್ಲಿ ಮುಳುಗಿದ ವಿಶ್ವವನ್ನು ಸಮ-ಸಮಾಜದ ಬೆಳಕೆಂಬ ಜ್ಞಾನದ ಕಡೆ ಕೊಂಡೊಯ್ಯುವ ನವಯುಗವನ್ನು ಪ್ರತಿಷ್ಠಾಪನೆ ಮಾಡಿದ ಚೇತನ  ಗೌತಮಬುದ್ದ: ಕಲಾವಿದ ಯಲ್ಲಪ್ಪ
ಎಂಎಲ್ಸಿ ಸ್ಥಾನಕ್ಕೆ ನನ್ನ ಸೇವಾ ಹಿರಿತನವನ್ನು ಪರಿಗಣಿಸುವಂತೆ ಸಿಎಂಗೆ ಮನವಿ ಮಾಡಿದ ಊರಬಾಗಿಲು ಶ್ರೀನಿವಾಸ್

Leave a Reply

Your email address will not be published. Required fields are marked *

You missed

error: Content is protected !!