• Fri. Apr 19th, 2024

PLACE YOUR AD HERE AT LOWEST PRICE

ಬಂಗಾರಪೇಟೆ:ತಾಲ್ಲೂಕು ಮಟ್ಟದ ಅಧಿಕಾರಿಗಳ ಎದುರು ದಲಿತ ಮುಖಂಡರನ್ನು ರೋಲ್ ಕಾಲ್ ಗಳು ಎಂದು ಕರೆದು ಅವಮಾನಿಸಿರುವ ಕ್ಷೇತ್ರದ ಶಾಸಕ ಎಸ್.ಎನ್.ನಾರಾಯಣಸ್ವಾಮಿ ಸಾರ್ವಜನಿಕವಾಗಿ ಕ್ಷಮೆ ಕೋರಬೇಕು ಎಂದು ದಲಿತ ಮುಖಂಡರು ಒತ್ತಾಯಿಸಿದರು.

ಪಟ್ಟಣದ ಡಾ.ಬಿ.ಆರ್ ಅಂಬೇಡ್ಕರ್ ಪ್ರತಿಮೆಯ ಮುಂಭಾಗದಲ್ಲಿ ಕರೆಯಲಾಗಿದ್ದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಮುಖಂಡರು, 2023ರ ಚುನಾವಣೆಯಲ್ಲಿ ನಾವು ಶಾಸಕರ ಪರ ಕೆಲಸ ಮಾಡಲಿಲ್ಲ ಎಂದು ಬಾಯಿಗೆ ಬಂದಂಗೆ ಮಾತನಾಡುತ್ತಿದ್ದಾರೆ.

“ದಲಿತ ಮುಖಂಡರು” ಅಧಿಕಾರಿಗಳಿಗೆ ಬೆದರಿಕೆ ಹಾಕುವುದರ ಮೂಲಕ “ರೋಲ್ ಕಾಲ್” ಮಾಡುತ್ತಿದ್ದಾರೆ ಎಂದು ಆರೋಪ ಮಾಡಿದ್ದು ಇದು ಸತ್ಯಕ್ಕೆ ದೂರವಾದ ವಿಷಯವಾಗಿದ್ದು, ತನಿಖೆ ನಡೆಸಲಿ ಎಂದು ಸವಾಲೆಸೆದರು.

ದಲಿತ ಪರ ಸಂಘಟನೆಗಳ ಮುಖಂಡರು ಈ ಹಿಂದೆ ಎಸ್. ಎನ್. ನಾರಾಯಣಸ್ವಾಮಿಯವರಿಗೆ ಸಂಪೂರ್ಣ ಬೆಂಬಲ ಸೂಚಿಸಿದ ಹಿನ್ನೆಲೆಯಲ್ಲಿ 10 ವರ್ಷ ಶಾಸಕರಾಗಿ ಅಧಿಕಾರದ ಗದ್ದುಗೆ ಹಿಡಿದಿದ್ದರು.

ದಲಿತ ಸಂಘಟನೆಗಳು ಮತ್ತು ಮುಖಂಡರು ಅನೇಕ ಸಂದಿಗ್ಧ ಸಮಯಗಳಲ್ಲಿ ಶಾಸಕರ ಪರನಿಂತು ಹೋರಾಟ ಮಾಡಿದ ಇತಿಹಾಸವಿದೆ. ಶಾಸಕರು ಈಗ ಇತಿಹಾಸವನ್ನು ಮರೆತು ದಲಿತರ ಮೇಲೆಯೇ ಆರೋಪ ಮಾಡಲು ಶರು ಮಾಡಿದ್ದಾರೆ.

ಕಾನೂನಿನ ಪರಿಮಿತಿಯಲ್ಲಿ ಯಾರೇ ಆಗಲಿ ಅಧಿಕಾರಿಗಳಿಗೆ ಬೆದರಿಕೆ ಹಾಕುವುದು ಮತ್ತು ಭ್ರಷ್ಟಾಚಾರ ನಡೆಸುವುದು ಕಾನೂನುಬಾಹಿರ ಆದರೆ ಅಧಿಕಾರಿಗಳು ಭ್ರಷ್ಟಾಚಾರ ನಡೆಸುವುದಿಲ್ಲವೇ?

ಇವರೇನು ಸತ್ಯಹರಿಶ್ಚಂದ್ರರೇ? ಒಂದು ವೇಳೆ ಅಧಿಕಾರಿಗಳು ಭ್ರಷ್ಟಾಚಾರ ನಡೆಸಿದ್ದೆ ಆದಲ್ಲಿ ಅವರು ವಿರುಧ್ಧ ನಾವು ಹೋರಾಟಗಳನ್ನು ಮಾಡುತ್ತೇವೆ ಮುಂದೆ ಆಗಬಹುದಾದ ಅನಾಹುತಗಳಿಗೆ ಶಾಸಕರೇ ನೇರ ಹೊಣೆ ಎಂದರು.

ರಾಜ್ಯದಲ್ಲಿ ಶೇ 70ರಷ್ಟು ದಲಿತರು ಕಾಂಗ್ರೆಸ್ ಪಕ್ಷಕ್ಕೆ ಮತ ಭಿಕ್ಷೆ ನೀಡಿದ ಕಾರಣ ಕಾಂಗ್ರೆಸ್ ಸಂಪೂರ್ಣ ಬಹುಮತದೊಂದಿಗೆ ಅಧಿಕಾರಕ್ಕೆ ಬಂದಿದೆ, ರಾಜ್ಯದ ಇತಿಹಾಸವನ್ನು ಅವಲೋಕಿಸಿದಾಗ ದಲಿತರ ವಿರೋಧ ಮಾತನಾಡಿದ ಯಾವ ನಾಯಕನು ತಮ್ಮ ರಾಜಕೀಯ ಜೀವನದಲ್ಲಿ ಯಶಸ್ಸನ್ನು ಕಂಡಿಲ್ಲ.

ಕಾಂಗ್ರೆಸ್ ಅಧಿಕಾರಕ್ಕೆ ಬಂದಾಗಿನಿಂದ ಬಂಗಾರಪೇಟೆ ವಿಧಾನಸಭಾ ಕ್ಷೇತ್ರದ ಶಾಸಕ ಎಸ್ ಎನ್ ನಾರಾಯಣಸ್ವಾಮಿ ರವರನ್ನು ಒಳಗೊಂಡಂತೆ ಕೋಲಾರ, ಮಾಲೂರು ,ಹಾಗೂ ರಾಜ್ಯದ ಇತರ ಕ್ಷೇತ್ರಗಳಲ್ಲಿನ ಶಾಸಕರು ದಲಿತ ನಾಯಕರನ್ನು ನಿಂದಿಸುವ ಕಾಯಕವನ್ನು ಮಾಡುತ್ತಿದ್ದಾರೆ.

 

ಇದು ಖಂಡನೀಯ, ಅಧಿಕಾರಿಗಳ ನಿರ್ಲಕ್ಷತನ ಹಾಗೂ ತಾರತಮ್ಯದ ಧೋರಣೆಯಿಂದ ಕ್ಷೇತ್ರದಲ್ಲಿ ಅಭಿವೃದ್ಧಿ ಮರೀಚಿಕೆಯಾಗುತ್ತಿದೆ. ಶಾಸಕರು “ರೋಲ್ ಕಾಲ್ “ಎಂಬ ಶಬ್ದವನ್ನು ವಾಪಸ್ ಪಡೆದು ಕ್ಷಮೆಯಾಚಿಸಬೇಕು ಇಲ್ಲದೆ ಹೋದಲ್ಲಿ ರಾಜ್ಯದ್ಯಂತ ಎಲ್ಲಾ ದಲಿತಪರ ಸಂಘಟನೆಗಳು ಸರ್ಕಾರದ ವಿರುದ್ಧ ಪ್ರತಿಭಟಿಸಲಾಗುವುದು ಎಂದು ಎಚ್ಚರಿಕೆ ನೀಡಿದರು.

ಯಾವೊಬ್ಬ ದಲಿತ ನಾಯಕರು ತಮ್ಮ ಅವಶ್ಯಕತೆಗಾಗಿ ಶಾಸಕರ ಮನೆ ಬಾಗಿಲಿಗೆ ಹೋಗಿ ಸೌಲಭ್ಯಗಳನ್ನು ನೀಡುವಂತೆ ಕೈ ಒಡ್ಡಿಲ್ಲ. ಈ ಕ್ಷೇತ್ರದಲ್ಲಿ ಅಸ್ಪೃಶ್ಯ ಜನಾಂಗದ ವ್ಯಕ್ತಿ ಶಾಸಕರಾಗಿದ್ದಾರೆ ಎಂದು ಸಂತೋಷಪಟ್ಟವರು ನಾವು.

2017ರಲ್ಲಿ ರಘುರಾಮ್ ರೆಡ್ಡಿ ರವರು ಒತ್ತುವರಿ ಮಾಡಿಕೊಂಡಿದ್ದ ಸ್ಥಳಕ್ಕೆ ಸಂಬಂಧಪಟ್ಟಂತೆ ಪುರಸಭೆ ತೆರವುಗೊಳಿಸುವ ಸಮಯದಲ್ಲಿ ಸಬ್ ಇನ್ಸ್ಪೆಕ್ಟರ್  ರವರ ಮೇಲೆ ಉಂಟಾದಂತಹ ಹಲ್ಲೆಯ ವಿರುದ್ಧ ಹೋರಾಟ ಮಾಡಿ ಬಂಗಾರಪೇಟೆ ಬಂದ್ ಮಾಡಿದವರು ನಾವು.

ನಿಕಟಪೂರ್ವ ಜಿಲ್ಲಾಧಿಕಾರಿ ದಿವಂಗತ ಡಿ.ಕೆ. ರವಿ ಅವರ ನಿಧನದ ಸಮಯದಲ್ಲಿ ಶಾಸಕರ ವಿರುದ್ಧ ಕಲ್ಲು ತೂರಾಟ ನಡೆಸಿದ ಸಂದರ್ಭದಲ್ಲಿ ಎಲ್ಲಾ ದಲಿತ ಪರ ನಾಯಕರು ನಿಮ್ಮ ಬೆನ್ನೆಲುಬಾಗಿ ನಿಂತು ಸಹಕರಿಸಿದ್ದೇವೆ.

ಅಂಬೇಡ್ಕರ್ ಜಯಂತಿಯನ್ನು ವಿಜೃಂಭಣೆಯಿಂದ ಮಾಡಿ ಬೆಳ್ಳಿರಥದಲ್ಲಿ ಹಾರ ತುರಾಯಿಗಳ ಮೂಲಕ ಶಾಸಕರನ್ನು ಮೆರವಣಿಗೆ ನಡೆಸಿದವರು ನಾವು. ಅಂಬೇಡ್ಕರ್ ಭವನ ನಿರ್ಮಾಣದ ಕಾರ್ಯದಲ್ಲಿ ನಿಮ್ಮ ವಿರುದ್ಧ ಅನೇಕರು ಬಂಡೆದ್ದಾಗ ನಿಮ್ಮ ಪರವಾಗಿ ನಿಂತವರು ಇದೇ ದಲಿತ ಪರ ಸಂಘಟನೆಗಳ ನಾಯಕರು.

ಕಾಂಗ್ರೆಸ್‌ನಲ್ಲಿರುವ ಮಲ್ಲಿಕಾರ್ಜುನ ಖರ್ಗೆ, ಜಿ.ಪರಮೇಶ್ವರ್, ಪ್ರಿಯಾಂಕ ಖರ್ಗೆ, ಎಚ್.ಸಿ.ಮಹದೇವಪ್ಪ ಇನ್ನು ಹಲವರು ಸುಮಾರು ಭಾರಿ ಗೆದ್ದರೂ ಸಹ ಸಂಘಟನೆಗಳ ಬಗ್ಗೆ ಅಗೌರವ ತೋರದೆ ಗೌರವಿತವಾಗಿ ನಡೆದುಕೊಳ್ಳುತ್ತಿದ್ದಾರೆ.

ಅಂತಹವರ ಆದರ್ಶಗಳು ಇವರಿಗೆ ಮಾದರಿಯಾಗಲಿ, ಅವರ ಆರೋಪ ಖಂಡಿಸಿ ಮುಂದಿನ ದಿನಗಳಲ್ಲಿ ಸಂವಿಧಾನ ಬದ್ದ, ಸಾಮಾಜಿಕ ಹಿತದೃಷ್ಠಿಯಿಂದ ಹೋರಾಟ ಹಮ್ಮಿಕೊಳ್ಳಲಾಗುವುದೆಂದು ಎಚ್ಚರಿಕೆ ನೀಡಿದರು.

ಈ ವೇಳೆ ಮುಂಖಡರಾದ ಹೂವರಸನಹಳ್ಳಿ ರಾಜಪ್ಪ, ಸೂಲಿಕುಂಟೆ ರಮೇಶ್, ಸೂಲಿಕುಂಟೆ ಆನಂದ್, ಹುಣಸನಹಳ್ಳಿ ವೆಂಕಟೇಶ್, ಮಾರುತಿ ಪ್ರಸಾದ್, ರಮಣ್‌ಕುಮಾರ್, ರವಿಕುಮಾರ್, ಸಿದ್ದನಹಳ್ಳಿ ಮುನಿಸ್ವಾಮಿ, ಹುಳದೇನಹಳ್ಳಿ ವೆಂಕಟೇಶ್, ಸುರೇಶ್, ಸಂಜಯ್‌ಗಾಂಧಿನಗರ ಶಿವು, ಅಯ್ಯಪ್ಪ, ಗೌತಮ್, ಜಿ.ಕೆ.ಮೂರ್ತಿ ಹಾಗೂ ಮುಂತಾದವರು ಇದ್ದರು.

Related Post

ಶೇ.೯೦ ರಷ್ಟು ದೇಶದ ಸಮುದಾಯಗಳು ಮುಖ್ಯವಾಹಿನಿ ಮಾದ್ಯಮಗಳಲ್ಲಿ, ಕಾರ್ಪೋರೇಟ್ ವಿಭಾಗದಲ್ಲಿ ಮತ್ತು ಅತ್ಯುನ್ನತ ಸರ್ಕಾರಿ ಹುದ್ದೆಗಳಲ್ಲಿ ಭಾಗವಹಿಸುವಿಕೆ ಇಲ್ಲ! : ರಾಹುಲ್ ಗಾಂಧಿ
ರಾಜಕೀಯ ಪಕ್ಷಗಳು ಪರಿಶಿಷ್ಟ ಜಾತಿಯ ಬಲಗೈ ಸಮುದಾಯಕ್ಕೆ ಅನ್ಯಾಯ ಮಾಡಿವೆ : ಸಮುದಾಯ ಮುಖಂಡರ ಆಕ್ರೋಶ,
ಸಂವಿಧಾನ ಉಳಿಸಲು ದೇಶದ ಸಮಗ್ರತೆ ಕಾಪಾಡಲು ಬಿಜೆಪಿಯನ್ನು ಸೋಲಿಸಿ: ಮಂಜುನಾಥ್ ಅಣ್ಣಯ್ಯ

Leave a Reply

Your email address will not be published. Required fields are marked *

You missed

error: Content is protected !!