• Thu. Sep 28th, 2023

PLACE YOUR AD HERE AT LOWEST PRICE

ಭಾನುವಾರ ನಲ್ಲಿ  ನಿಂದ .

ಬಂಗಾರಪೇಟೆ:ಇದೇ ಭಾನುವಾರ ಎಸ್ ಎನ್ ರೆಸಾರ್ಟ್ ನಲ್ಲಿ ಕಾಂಗ್ರೆಸ್ ಪಕ್ಷದಿಂದ ನಡೆಯಲಿರುವ ಕೃತಜ್ಞತೆ ಸಮಾರಂಭಕ್ಕೆ ತಾಲೂಕಿನ ಎಲ್ಲಾ ಕಾಂಗ್ರೆಸ್ ಬಂಧುಗಳು ಆಗಮಿಸಬೇಕೆಂದು ಶಾಸಕ ಎಸ್ ಎನ್ ನಾರಾಯಣಸ್ವಾಮಿ ಮನವಿ ಮಾಡಿದರು.

ಅವರು ಪಟ್ಟಣದ ಶಾಸಕರ ಕಚೇರಿಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿ, ಬಂಗಾರಪೇಟೆ ಕ್ಷೇತ್ರದ ಸಮಸ್ತ ಮತಬಾಂಧವರು, ಕಾಂಗ್ರೆಸ್ ಮುಖಂಡರು, ಪಂಚಾಯತಿ ಅಧ್ಯಕ್ಷರು, ಸದಸ್ಯರು, ಮಾಜಿ ಅಧ್ಯಕ್ಷರು, ಮಾಜಿ ಸದಸ್ಯರು.

ಜಿಲ್ಲಾ ಪಂಚಾಯಿತಿಯ ಮಾಜಿ ಸದಸ್ಯರು, ತಾಲೂಕು ಸಮಿತಿಯ ಮಾಜಿ ಸದಸ್ಯರುಗಳು, ಮುಂಚೂಣಿ ಘಟಕದ ಕಾರ್ಯಕರ್ತರು, ಕಾಂಗ್ರೆಸ್ ಪಕ್ಷದ ನಾಯಕರು, ಯುವ ನಾಯಕರು, ಎಲ್ಲಾ ಮಹಿಳಾ ಘಟಕದ ಅಧ್ಯಕ್ಷರು ಹಾಗೂ ಸದಸ್ಯರುಗಳು, ಕಾರ್ಯದರ್ಶಿಗಳು.

ಸಮಸ್ತ ಕಾಂಗ್ರೆಸ್ ಬಂಧುಗಳು 2023ರ ವಿಧಾನಸಭಾ ಚುನಾವಣೆಯಲ್ಲಿ ತಾವು ಎಲ್ಲಾ ಕೂಡ ಶಕ್ತಿ ಮೀರಿ ಚುನಾವಣೆಯಲ್ಲಿ ಕೆಲಸ ಮಾಡಿ ಕಾಂಗ್ರೆಸ್ ಪಕ್ಷದ ಗೆಲುವಿಗೆ ಕಾರಣಕರ್ತರಾಗಿದ್ದೀರಿ  ಎಂದು ಅಭಿನಂದನೆಗಳನ್ನು ತಿಳಿಸಿದರು.

ಈ ದಿಶೆಯಲ್ಲಿ ತಾಲೂಕಿನ ಸಮಸ್ತ ಕಾಂಗ್ರೆಸ್ ಬಂದುಗಳಿಗೆ ಬಂಗಾರಪೇಟೆ ನಗರ, ರಾಬರ್ಟ್ ಸನ್ ಪೇಟೆ ಹೋಬಳಿ, ಬೂದಿಕೋಟೆ ಹೋಬಳಿ, ಕಾಮಸಮುದ್ರ ಹೋಬಳಿ, ಹುತ್ತೂರು ಹೋಬಳಿ, ಕಸಬಾ ಹೋಬಳಿ.

ಎಲ್ಲಾ ಗ್ರಾಮ ಪಂಚಾಯಿತಿ ವ್ಯಾಪ್ತಿಗಳ ಮತ್ತು ಬಂಗಾರಪೇಟೆ ಪುರಸಭೆ ವ್ಯಾಪ್ತಿಯ ಎಲ್ಲಾ ಕಾಂಗ್ರೆಸ್ ಕಾರ್ಯಕರ್ತರಿಗೆ ಮುಖಂಡರಿಗೆ ಹಿರಿಯರಿಗೆ ಧನ್ಯವಾದಗಳು ಹೇಳುವ ಸಮಾರಂಭವನ್ನು ಹಮ್ಮಿಕೊಳ್ಳಲಾಗಿದೆ.

ಭಾನುವಾರ 11-06-23 ರಂದು ಬೆಳಿಗ್ಗೆ 10 ಗಂಟೆಗೆ ಎಸ್ ಎನ್ ರೆಸಾರ್ಟ್ ನಲ್ಲಿ ನಡೆಯಲಿರುವ ಕೃತಜ್ಞತಾ ಸಮಾರಂಭಕ್ಕೆ ದಯಮಾಡಿ ತಪ್ಪದೇ ಎಲ್ಲರೂ ಭಾಗವಹಿಸಬೇಕೆಂದು ತಮ್ಮಲ್ಲಿ ಮನವಿ ಮಾಡುತ್ತೇನೆ ಎಂದು ಹೇಳಿದರು.

ಈ ಸಂದರ್ಭದಲ್ಲಿ ಡಿಸಿಸಿ ಬ್ಯಾಂಕ್ ನ ನಿರ್ದೇಶಕ ಗೋವಿಂದರಾಜು, ಗ್ರಾಮ ಪಂಚಾಯಿತಿ ಸದಸ್ಯ ಗೋಪಾಲ ರೆಡ್ಡಿ, ಪುರಸಭೆ ಸದಸ್ಯರಾದ ವೆಂಕಟೇಶ್, ಗೋವಿಂದರಾಜು, ಶಫಿ, ಮುಖಂಡ  ಮುನೇಗೌಡ ಮೊದಲಾದವರಿದ್ದರು.

Leave a Reply

Your email address will not be published. Required fields are marked *

error: Content is protected !!