PLACE YOUR AD HERE AT LOWEST PRICE
ಕೋಲಾರ : ಲೋಕ ಕಲ್ಯಾಣಾರ್ಥವಾಗಿ ೭೦೦ ವರ್ಷಗಳ ಬಳಿಕ ಶಿವ ಶ್ರೀ ಮೀಡಿಯ ಪ್ರೈವೇಟ್ ಲಿಮಿಟೆಡ್ ವತಿಯಿಂದ ಅಖಿಲ ಭಾರತ ಸಂಪೂರ್ಣ ಮಹಾ ಕುಬೇರ ಯಾಗವನ್ನು ಬೆಂಗಳೂರಿನ ತ್ರಿಪುರ ವಾಸಿನಿ ಅರಮನೆ ಮೈದಾನದಲ್ಲಿ ಹಮ್ಮಿಕೊಂಡಿದ್ದು, ಜಿಲ್ಲೆಯ ಪ್ರತಿಯೊಬ್ಬರೂ ಸಹ ಭಾಗವಹಿಸಿ, ಇಷ್ಟಾರ್ಥಗಳನ್ನು ನೆರವೇರಿಸಿಕೊಳ್ಳುವ ಮೂಲಕ ದೇವರ ಕೃಪೆಗೆ ಪಾತ್ರರಾಗಿ ಎಂದು ರಾಜ್ ನ್ಯೂಸ್ ಕನ್ನಡ ವಾಹಿನಿಯ ವಿಷೇಶ ಪ್ರತಿನಿಧಿ ಸೋಮಶೇಖರ್ (ಗಾಂಧಿ) ತಿಳಿಸಿದರು.
ನಗರದ ಪತ್ರಕರ್ತರ ಭವನದಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ಆಧ್ಯಾತ್ಮ ಧರ್ಮದರ್ಶಿಗಳು ಬ್ರಹ್ಮಾಂಡ ಗುರೂಜಿ ಶ್ರೀ ಶ್ರೀ ನರೇಂದ್ರ ಬಾಬು ಶರ್ಮಾ ಹಾಗೂ ಆಧ್ಯಾತ್ಮಿಕ ಚಿಂತಕರು ಖ್ಯಾತ ಜ್ಯೋತಿಷಿ ಮಹರ್ಷಿ ಡಾ. ಶ್ರೀ ಆನಂದ ಗುರೂಜಿ ಇವರ ಮಾರ್ಗದರ್ಶನದಲ್ಲಿ ಸೆಪ್ಟೆಂಬರ್ 11 ರಿಂದ 21 ರವರೆಗೆ ಶಿವ ಶ್ರೀ ಮೀಡಿಯ ಪ್ರೈವೇಟ್ ಲಿಮಿಟೆಡ್ ವತಿಯಿಂದ ಅಖಿಲ ಭಾರತ ಸಂಪೂರ್ಣ ಮಹಾ ಕುಬೇರ ಯಾಗದಲ್ಲಿ ವಿವಿಧ ರೀತಿಯ ಪೂಜಾ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗಿದೆ ಎಂದರು.
ರಾಜ್ ನ್ಯೂನ್ ಕನ್ನಡ ಆಡಳಿತಾಧಿಕಾರಿ ಮಾತನಾಡಿ ಮಹಾ ಕುಬೇರೆ ಯಾಗಕ್ಕೆ ದೇಶದ ನಾನಾ ಭಾಗಗಳ ಸಾಧು ಸಂತರ ಸಂಕಲ್ಪದಂತೆ ನಡೆಯಲಿದೆ ಸಂಪೂರ್ಣ ಮಹಾಕುಬೇರ ಯಾಗ ಮಹಾಕುಂಡ ಸಮೇತ 108 ಹೋಮ ಕೊಂಡಾಗಳು 501 ಆಗಮಿಕರು ಮತ್ತು 500 ರಿಂದ ಕೆರಳ ತಂತ್ರಿಗಳ ಸಾರಥ್ಯದಲ್ಲಿ ಮಂತ್ರ ವಶಗಳೊಂದಿಗೆ 11 ದಿನಗಳ ಕಾಲ ಈ ಮಹಾಕೈಕರ್ಯ ನಡೆಯಲಿದೆ ಎಂದರಲ್ಲದೆ 300 ನುರಿತ ಬಾಣಸಿಗರ ಶ್ರಮದಲ್ಲಿ ನಿತ್ಯ ಐವತ್ತು ಸಾವಿರ ಭಕ್ತರಿಗೆ ಅನ್ನದಾತ ಸಹ ನಡೆಯಲಿದೆ ಮಹಾ ಯಜ್ಞದಲ್ಲಿ ಪಾಲ್ಗೊಂಡು ಲಕ್ಷ್ಮಿ ಕುಬೇರರ ಅನುಗ್ರಹ ಪಡೆಯಿರಿ ಎಂದರು.
ಸುಮಾರು 11 ದಿನಗಳ ಕಾಲ ನಿರಂತರವಾಗಿ ಈ ಮಹಾಕುಬೇರ ಯಾಗ ನಡೆಯಲಿದೆ ತ್ರಿಮೂರ್ತಿಗಳಿಂದ ಪ್ರೇರಿತವಾದ ಪವಿತ್ರ ವೇದ ಮಂತ್ರಗಳ ಮುಖಾಂತರ ಕುಬೇರನಿಗೆ ಸಲ್ಲಿಸುವ ಪೂಜಾ ವಿಧಿ ವಿಧಾನಗಳು ನಡೆಯಲಿದೆ ಶ್ರೀ ಮಹಾಲಕ್ಷ್ಮಿ ಅನುಗ್ರಹವನ್ನು ಪಡೆದು ಪಾರ್ವತಿ ಪರಮೇಶ್ವರ ಆಶೀರ್ವಾದದಿಂದ ಸಂಪತ್ತಿನ ಒಡೆಯನಾದ ಕುಬೇರನನ್ನು ಪೂಜಿಸೋಣ ಆರಾಧಿಸೋಣ ಸಕಲ ಸಂಪತ್ತನ್ನು ಪಡೆದು ಧನ್ಯರಾಗೋಣ ಎಂದರು.
ಸೇವಾ ವಿವರಗಳು
ಪ್ಲಾಟಿನಂ ಸೇವೆ ಗೋಲ್ಡ್ ಸೇವೆ ಬ್ರಾಂಚ್ ಸೇವೆ ಡೈಮಂಡ್ ಸೇವೆ ಸಿಲ್ವರ್ ಸೇವೆ, ರಾಶಿ ಸಂಕಲ್ಪ ಸೇವೆ ಹಮ್ಮಿಕೊಳ್ಳಲಾಗಿದೆ ಎಂದು ಮಾಹಿತಿ ನೀಢಿದರು.
ಇದೇ ವೇಳೆ ಕಾರ್ಯನಿರತ ಪತ್ರಕರ್ತ ಸಂಘದ ವತಿಯಿಂದ ರಾಜ್ ನ್ಯೂಸ್ ವಿಶೇಷ ಪ್ರತಿನಿಧಿ ಸೋಮಶೇಖರ್ (ಗಾಂದಿ), ಹಾಗೂ ಆಡಳಿತಾಧಿಕಾರಿ ಹೋಮೇಶ್ ಮೂರ್ತಿ ಅವರನ್ನು ಆತ್ಮೀಯವಾಗಿ ಸನ್ಮಾನಿದರು.
ಈ ಸಂದರ್ಭದಲ್ಲಿ ಕರ್ನಾಟಕ ಕಾರ್ಯನಿರತ ಪತ್ರಕರ್ತ ಕೋಲಾರ ಜಿಲ್ಲಾಧ್ಯಕ್ಷ ಬಿವಿ ಗೋಫಿನಾಥ್, ಪತ್ರಕರ್ತ ಸಹಕಾರ ಸಂಘದ ಅಧ್ಯಕ್ಷ ಗಣೇಶ್, ರಾಜ್ ನ್ಯೂನ್ ಕನ್ನಡ ಕೋಲಾರ ಜಿಲ್ಲಾ ವರದಿಗಾರ ನವೀನ್ ಕುಮಾರ್ ಬಿ.ಎಸ್ ಉಪಸ್ಥಿತರಿದ್ದರು.