• Sun. Apr 28th, 2024

ಸವರ್ಣೀಯರಿಂದ ದಲಿತರ ಜಮೀನಲ್ಲಿ ಬೆಳೆದು ನಿಂತಿದ್ದ ೩ ಲಕ್ಷ ಮೌಲ್ಯದ ಮಾವಿನ ಸಸಿ ನಾಶ ಕೋಲಾರದ ವೇಮಗಲ್ ಠಾಣೆಯಲ್ಲಿ ಪ್ರಕರಣ ದಾಖಲು

PLACE YOUR AD HERE AT LOWEST PRICE

ಕೋಲಾರ,ಸೆ.,೦೧ : ದಲಿತರನ್ನು ಭೂಮಿಯಿಂದ ವಂಚಿಸುವ ದುರುದ್ದೇಶದಿಂದ ಸವರ್ಣೀಯರು ಸುಮಾರು ೩ ಲಕ್ಷ ಮೌಲ್ಯದ ಮಾವಿನ ಸಸಿಗಳನ್ನು ನಾಶ ಮಾಡಿರುವ ಘಟನೆ ಕೋಲಾರದ ಉದ್ದಪ್ಪನಹಳ್ಳಿಯಲ್ಲಿ ಜರುಗಿರುವ ಬಗ್ಗೆ ವೇಮಗಲ್ ಠಾಣೆಯಲ್ಲಿ ೧೦ ಜನರ ವಿರುದ್ಧ ಪ್ರಕರಣ ದಾಖಲಾಗಿದೆ.

ನರಸಾಪುರ ಹೋಬಳಿ ಬೆಳ್ಳೂರು ಗ್ರಾಮ ಪಂಚಾಯತಿ ಉದ್ದಪ್ಪನಹಳ್ಳಿಗೆ ಸೇರಿದ ಸರ್ವೇ ನಂ ೯೬ ಹೊಸ ಸರ್ವೇ ನಂ ೧೫೬ ರ ಮೂರು ಎಕರೆ ಜಮೀನಿನಲ್ಲಿದ್ದ ೧೭೫ ಮಾವಿನ ಗಿಡ ಸೇರಿದಂತೆ ಹಲವಾರು ತೆಂಗಿನ ಸಸಿ,ಹಲಸಿನ ಗಿಡ,ಸಪೋಟ ಗಿಡಗಳನ್ನು ಕಳೆದ ರಾತ್ರಿ ಕಿತ್ತು ಹಾಕಿ ನಾಶ ಮಾಡಿ ೩ ಲಕ್ಷ ರೂಗಳಷ್ಟು ನಷ್ಟ ಉಂಟುಮಾಡಿದ್ದಾರೆoದು ಲಕ್ಷ್ಮೀಸಾಗರ ನಿವಾಸಿ ದಲಿತ ಜನಾಂಗಕ್ಕೆ ಸೇರಿದ ಬಸವರಾಜ್ ಬಿನ್ ರಾಮಕೃಷ್ಣಪ್ಪ ಸವರ್ಣಿಯರ ಮೇಲೆ ಗುಮಾನಿ ವ್ಯಕ್ತಪಡಿಸಿ ಗುರುವಾರ ವೇಮಗಲ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ.

ನರಸಾಪುರ ಹೋಬಳಿ ಬೆಳ್ಳೂರು ಗ್ರಾಮ ಪಂಚಾಯ್ತಿಯ ಉದ್ದಪ್ಪನಹಳ್ಳಿ ಗ್ರಾಮದ ವಕ್ಕಲಿಗ ಸಮುದಾಯಕ್ಕೆ ಸೇರಿದ ಮುನಿವೆಂಕಟಪ್ಪ ಬಿನ್ ನಾರಾಯಣಪ್ಪ, ಈರಪ್ಪ ಬಿನ್ ನಾರಾಯಣಪ್ಪ, ನಾಗರಾಜು ಬಿನ್ ಮುನಿವೆಂಕಟಪ್ಪ, ನಾರಾಯಣಸ್ವಾಮಿ ಬಿನ್ ಈರಪ್ಪ, ಅಂಬರೀಶ್ ಬಿನ್ ಈರಪ್ಪ, ಶ್ರೀನಿವಾಸ ಬಿನ್ ಈರಪ್ಪ, ಕೃಷ್ಣಪ್ಪ ಬಿನ್ ಈರಪ್ಪ,ರಮೇಶ್ ಬಿನ್ ಮುನಿಯಪ್ಪ, ಚೇತನ್ ಬಿನ್ ನಾರಾಯಣಸ್ವಾಮಿ, ನವೀನ್ ಬಿನ್ ನಾರಾಯಣಸ್ವಾಮಿ ಇವರುಗಳು ದಿನಾಂಕ: ೩೧-೦೮-೨೦೨೩ರ ಮದ್ಯರಾತ್ರಿ ೧೨ ಗಂಟೆಯ ನಂತರ ಜಮೀನಿಗೆ ಅಕ್ರಮವಾಗಿ ಪ್ರವೇಶ ಮಾಡಿ ಕಳೆದ ಮೂರು ತಿಂಗಳ ಹಿಂದೆ ಸದರಿ ಜಮೀನಿನಲ್ಲಿ ಹೂಳಿದ್ದ ೧೭೫ ಮಾವಿನ ಗಿಡ, ೧೦ ತೆಂಗಿ ಸಸಿ, ೫ ಹಲಸಿನ ಗಿಡ, ೧೦ ಸಪೋಟ ಬೆಳೆದು ನಿಂತಿದ್ದ ಗಿಡಗಳನ್ನು ಕಿತ್ತು ಹಾಕಿ ಮಾವಿನ ಸಸಿಗಳನ್ನು ನಾಶ ಮಾದ್ದಾರುವ ಶಂಕೆ ವ್ಯಕ್ತಪಡಿಸಿ ನೀಡಿರುವ ಗುಮಾನಿ ದೂರು ಆಧರಿಸಿ ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ಮುಂದುವರೆಸಿದ್ದಾರೆ.

ಘಟನಾ ಸ್ಥಳಕ್ಕೆ ಭೇಟಿ ನೀಡಿದ ಮಾಧ್ಯಮದವರೊಂದಿಗೆ ಮಾತನಾಡಿದ ಜಮೀನು ಮಾಲೀಕ ಬಸವರಾಜ್ ಮಾತನಾಡುತ್ತಾ, ೧೯೭೫ರಲ್ಲಿ ನಮ್ಮ ತಂದೆಯವರಾದ ರಾಮಕೃಷ್ಣಪ್ಪನವರಿಗೆ ಸದರಿ ಮೂರು ಎಕರೆ ಮಂಜೂರು ಆಗಿ ೨೦೧೬ರಲ್ಲಿ ದುರಸ್ತಿ ಆಗಿ ಪೋಡಿ ಸಹ ಆಗಿರುತ್ತದೆ. ೨೦೦೪ರಲ್ಲಿ ನಮ್ಮ ತಂದೆಯವರ ಮರಣ ನಂತರ ನನಗೆ ಪವತಿ ಖಾತೆ ಸಹ ಆಗಿದ್ದು, ವಿನಾಕಾರಣ ಯಾವುದೇ ಮಾಹಿತಿ ನೀಡದೆ ಜಿಲ್ಲಾಧಿಕಾರಿಗಳ ನ್ಯಾಯಾಲಯದಲ್ಲಿ ೨೦೧೯ರಲ್ಲಿ ದುರಸ್ತಿಯನ್ನು ರದ್ದು ಪಡಿಸಿದ್ದು, ಸದರಿ ಆದೇಶದ ವಿರುದ್ಧ ರಾಜ್ಯ ಉಚ್ಚನ್ಯಾಯಾಲಯದಲ್ಲಿ ಅಪೀಲು ಹೋಗಿರುವುದಾಗಿ ತಿಳಿಸಿದರು.

ಈ ಜಮೀನಿನ ವಿಷಯವಾಗಿ ನಮಗೂ ಉದ್ದಪ್ಪನಹಳ್ಳಿಯ ವಕ್ಕಲಿಗ ಜನಾಂಗಕ್ಕೆ ಸೇರಿದ ಮುನಿವೆಂಕಟಪ್ಪ ಸೇರಿದಂತೆ ಅವರ ಕುಟುಂಬಕ್ಕೆ ಸೇರಿದ ಮಕ್ಕಳು, ಮೊಮ್ಮಕ್ಕಳು ಸೇರಿದ ಹತ್ತು ಜನರ ವಿರುದ್ದ ಕಾನೂನು ಹೋರಾಟ ನಡೆಯುತ್ತಿದ್ದು, ಈ ಕುಟುಂಬ ಹಣದ ಪ್ರಭಾವ ಬಳಸಿ ಜಮೀನಿನ ದುರಸ್ತಿ ರದ್ದು ಪಡಿಸಿದ್ದು, ಇದರ ಬಗ್ಗೆ ಪ್ರಸ್ತುತ ಹೈಕೋರ್ಟ್ನಲ್ಲಿ ದಾವೆ ನಡೆಯುತ್ತಿದೆ ಎಂದ ಹೇಳಿದರು.

ನಷ್ಟು ಉಂಟು ಮಾಡಿರುವ ಬಗ್ಗೆ ವೇಮಗಲ್ ಪೋಲಿಸ್ ಠಾಣೆಯಲ್ಲಿ ದೂರು ಸಲ್ಲಿಸಲಾಗಿದೆ. ಉದ್ದಪ್ಪನಹಳ್ಳಿಯ ವಕ್ಕಲಿಗ ಜನಾಂಗಕ್ಕೆ ಸೇರಿದ ಮುನಿವೆಂಕಟಪ್ಪ ನವರ ಕುಟುಂಬದವರೇ ಈ ಕೃತ್ಯ ಎಸಗಿರುವ ಬಗ್ಗೆ ನಮಗೆ ಅನುಮಾನ ಮತ್ತು ದಾಖಲೆ ಇದ್ದು,ಇವರ ಮೇಲೆ ಕಾನೂನು ರೀತಿ ಕ್ರಮ ಕೈಗೊಂಡು ನಮ್ಮ ಕುಟುಂಬಕ್ಕೆ ಆಗಿರುವ ನಷ್ಟವನ್ನು ವಸೂಲಿ ಮಾಡಿ ಕೊಡ ಬೇಕೆಂದು ದೂರು ನೀಡಿರುವುದಾಗಿ ಮಾದ್ಯಮವರಿಗೆ ತಿಳಿಸಿದ್ದಾರೆ.

ಈ ಸಂಧರ್ಭದಲ್ಲಿ ನಷ್ಟಕ್ಕೆ ಒಳಗಾದ ಕುಟುಂಬದ ಸದಸ್ಯರು ಹಾಜರಿದ್ದು ತಮ್ಮ ಅಳಲನ್ನು ತೋಡಿಕೊಂಡರು.

Related Post

ಜೆಡಿಎಸ್‌ ಬಿಜೆಪಿ ಒಂದಾಗಿ ಸಂವಿಧಾನಕ್ಕೆ ಅಪಾಯ ಎಚ್ವತ್ತು ಕಾಂಗ್ರೆಸ್ ಬೆಂಬಲಿಸಿ: ಬೈರತಿ ಸುರೇಶ್
ವಚನ ಭ್ರಷ್ಟ ಬಿಜೆಪಿ ನೇತೃತ್ವದ ಎನ್.ಡಿ.ಎ. ಮೈತ್ರಿಕೂಟಕ್ಕೆ ಮತ ಕೇಳುವ ನೈತಿಕತೆ ಇಲ್ಲ-ಕೆ.ವಿ.ಗೌತಮ್
ಏಪ್ರಿಲ್ ೨೬ ರೊಳಗೆ ಎಕ್ಸಿಡಿ ಕಾರ್ಮಿಕರ ಬೇಡಿಕೆಗಳನ್ನು ಈಡೇರಿಸಲು ಆಗ್ರಹ ಇಲ್ಲವಾದಲ್ಲಿ ತೀವ್ರ ರೀತಿಯ ಹೋರಾಟ ನಡೆಸಲು ಕಾರ್ಮಿಕರ ಸಂಘಗಳ ಸಭೆಯಲ್ಲಿ ನಿರ್ಧಾರ

Leave a Reply

Your email address will not be published. Required fields are marked *

You missed

error: Content is protected !!