• Sat. Apr 27th, 2024

ದಲಿತ ಮಹಿಳೆಗೆ ನ್ಯಾಯ ಕೊಡಿಸುವಲ್ಲಿ ವಿಫಲವಾಗಿರುವ ಜಿಲ್ಲಾಡಳಿತ ಮತ್ತು ಮಾಲೂರು ತಾಲ್ಲೂಕು ಆಡಳಿತದ ದಲಿತ ವಿರೋಧಿ ನಿಲುವನ್ನು ಖಂಡಿಸಿ ಸೆ.೨೫ರಿಂದ ಮಾಲೂರು ತಾಲ್ಲೂಕು ಪಂಚಾಯ್ತಿ ಕಚೇರಿ ಮುಂದೆ ಪ್ರತಿಭಟನಾ ಧರಣಿ-ಸಂಗಸ0ದ್ರ ವಿಜಯಕುಮಾರ್

PLACE YOUR AD HERE AT LOWEST PRICE

ಕೋಲಾರ,ಸೆ.೨೩ : ದಲಿತ ಮಹಿಳೆಗೆ ನ್ಯಾಯ ಕೊಡಿಸುವಲ್ಲಿ ವಿಫಲವಾಗಿರುವ ಜಿಲ್ಲಾಡಳಿತ ಮತ್ತು ಮಾಲೂರು ತಾಲ್ಲೂಕು ಆಡಳಿತದ ದಲಿತ ವಿರೋಧಿ ನಿಲುವನ್ನು ಖಂಡಿಸಿ ಸೆ.೨೫ರಿಂದ ಮಾಲೂರು ತಾಲ್ಲೂಕು ಪಂಚಾಯ್ತಿ ಕಚೇರಿ ಮುಂದೆ ಪ್ರತಿಭಟನಾ ಧರಣಿ ನಡೆಸಲಾಗುವುದೆಂದು ಬಹುಜನ ಚಳುವಳಿ ಸಂಘಟನೆಗಳ ಒಕ್ಕೂಟದ ರಾಜ್ಯಾಧ್ಯಕ್ಷ ಸಂಗಸ0ದ್ರ ವಿಜಯಕುಮಾರ್ ತಿಳಿಸಿದರು.

ನಗರದ ಪತ್ರಕರ್ತರ ಭವನದಲ್ಲಿ ಶುಕ್ರವಾರ ಸುದ್ಧಿಗೋಷ್ಟಿ ನಡೆಸಿ ಅವರು ಮಾತನಾಡಿದರು. ತಾಲ್ಲೂಕಿನ ಕಸಬಾ ಹೋಬಳಿಗೆ ಸೇರಿದ ಹೊಸಹಳ್ಳಿ ಅಗ್ರಹಾರ ಗ್ರಾಮದ ಶ್ರೀಮತಿ ಭಾಗ್ಯಮ್ಮ ಕೋಂ ರಾಮಯ್ಯ ಶಿವಾರ ಪಟ್ಟಣ ಗ್ರಾಮ ಪಂಚಾಯ್ತಿ ವ್ಯಾಪ್ತಿಗೆ ಸೇರಿದ್ದು, ಇವರಿಗೆ ಕರ್ನಾಟಕ ಪಂಚಾಯತ್ ರಾಜ್ ಅದಿನಿಯಮ ೧೯೯೩ ರ ಪ್ರಕಾರ ೬೪ ನಿಯಮ ನಿಬಂದನೆಗಳು ನಿಯಮಗಳಿಗೆ ಒಳಪಟ್ಟ ನಕ್ಷೆಯನ್ನು ಅನುಮೋದಿಸಿರುತ್ತಾರೆ, ನಂತರ ೨೦೦೫ ಮತ್ತು ೨೦೦೬ನೇ ಸಾಲಿನಲ್ಲಿ ಶಿವಾರಪಟ್ಟಣ ಗ್ರಾಮ ಪಂಚಾಯ್ತಿಯಲ್ಲಿ ಭಾಗ್ಯಮ್ಮ ಕೋಂ ರಾಮಯ್ಯನವರ ಹೆಸರಿಗೆ ೧೫*೨೮ ಅಡಿಗಳಿಗೆ ವಿ.ಪಿ.ಖಾತೆ ಸಂಖ್ಯೆ ೨೧೧ ಸಹ ಆಗಿರುತ್ತದೆ.

ಈ ಜಾಗದಲ್ಲಿ ಭಾಗ್ಯಮ್ಮ ರವರು ಸುಮಾರು ೨೫ ವರ್ಷಗಳಿಂದ ಸ್ವಾಧೀನ ಮತ್ತು ಸರ್ಕಾರಿ ಮನೆ ಸಹ ನಿರ್ಮಾಣ ಮಾಡಿಕೊಂಡು ಅಲ್ಲಿ ಜೀವನ ಮಾಡುತ್ತಿರುತ್ತಾರೆ, ಇವರ ಮನೆ ಪಕ್ಕದಲ್ಲೇ ೨೦೧೩-೧೪ ನೇ ಸಾಲಿನಲ್ಲಿ ಭಾಗ್ಯಮ್ಮ ರವರ ಮನೆ ಮುಂದೆ ರಾಷ್ಟಿçÃಯ ಉದ್ಯೋಗ ಖಾತರಿ ಯೋಜನೆಯಡಿಯಲ್ಲಿ ಸಿಮೆಂಟ್ ರಸ್ತೆ ಮತ್ತು ಚರಂಡಿ ಕಾಮಗಾರಿಯನ್ನು ಸಹ ಮಾಡಲಾಗಿದೆ. ಈ ಚರಂಡಿ ಭಾಗ್ಯಮ್ಮ ಮನೆಗೆ ಹೊಂದಿಕೊAಡಿದ್ದು ಇವರು ಬಳಕೆ ಮಾಡುವ ನೀರೆಲ್ಲಾ ಸದರಿ ಚರಂಡಿ ಕಾಲುವೆಯಲ್ಲೇ ಹೊರ ಹೋಗುತ್ತಿತ್ತು. ಆದರೆ ಈ ಚರಂಡಿಯನ್ನು ಅದೇ ಗ್ರಾಮದ ಸವರ್ಣೀಯ ಮಂಜುನಾಥ ಬಿನ್ ಕೃಷ್ಣಪ್ಪ, ಶ್ರೀನಿವಾಸ್ ಬಿನ್ ಮುನಿವೆಂಟಕಟಪ್ಪ ಇವರುಗಳ ಸೇರಿಕೊಂಡು ಉದ್ಯೋಗ ಖಾತ್ರಿ ಯೋಜನೆಯಲ್ಲಿ ಮಾಡಿರುವಂತಹ ದನಗಳಿಗಾಗಿ ನಿರ್ಮಾಣ ಮಾಡಿರುವ ಕುಡಿಯುವ ನೀರಿನ ತೊಟ್ಟಿಯನ್ನು ಹಾಗೂ ಚರಂಡಿಯನ್ನು ಅತಿಕ್ರಮ ಪ್ರವೇಶ ಮಾಡಿ ಮುಚ್ಚಿರುತ್ತಾರೆ.

ಆದರೆ ಮನೆಯ ನೀರು ಚರಂಡಿಗೆ ಹೋಗದ ಕಾರಣ ಈ ಕುರಿತು ಒತ್ತುವರಿದಾರ ಮಂಜುನಾಥ ಬಿನ್ ಕೃಷ್ಣಪ್ಪರವರನ್ನು ಕೇಳಿದಾಗ ಭಾಗ್ಯಮ್ಮ ಏಕಾಏಕಿ ಅತಿ ಹೀನ ಅವಾಚ್ಯ ಶಬ್ದಗಳಿಂದ ನಿಂದಿಸಿ, ನಿನ್ನ ಮನೆಯನ್ನು ಸಹ ತಳ್ಳಿಸಿ ನಿನ್ನನ್ನು ಕೂಡ ಊರಿನಿಂದ ಖಾಲೀ ಮಾಡಿಸುತ್ತೇನೆಂದು ಬೆದರಿಸಿ ಅವ್ಯಾಚ್ಯ ಶಬ್ದಗಳಿಂದ ನಿಂದಿಸಿರುತ್ತಾರೆ. ಈ ವಿಷಯವನ್ನು ಭಾಗ್ಯಮ್ಮ ಕಳೆದು ಜುಲೈ ೪ರಂದು ಮಾಲೂರು ಪೊಲೀಸ್ ಠಾಣೆಗೆ ಹೋಗಿ ದೂರು ನೀಡಿದರೂ ಸಹಾ ಪೊಲೀಸರು ಏನೂ ಕ್ರಮ ಜರುಗಿಸಿರುವುದಿಲ್ಲ.

ಆನಂತರ ನೀರು ಹೋಗುವ ಚರಂಡಿ ಒತ್ತುವರಿಯನ್ನು ತೆರವುಗೊಳಿಸಲು ಜುಲೈ ೨೧ರಂದು ತಹಶೀಲ್ದಾರ್‌ಗೆ ಮನವಿ ನೀಡಲಾಗಿದೆಯಾದರೂ ನ್ಯಾಯ ಸಿಗಲಿಲ್ಲ, ತದನಂತರ ಜಿಲ್ಲಾ ಪಂಚಾಯ್ತಿ ಮುಖ್ಯಕಾರ್ಯನಿರ್ವಹಣಾಧಿಕಾರಿಗಳಿಗೆ ಆಗಸ್ಟ್ ೮ರಂದು ಮನವಿ ನೀಡಲಾಗಿದೆ ಅವರಿಂದಲೂ ನ್ಯಾಯ ಸಿಗಲಿಲ್ಲವಾದ್ದರಿಂದ ಸ್ಥಳೀಯ ಶಾಸಕರ ಬಳಿ ಹೋಗಿ ಅವಲೊತ್ತಿಕೊಂಡರೆ, ಶಾಸಕ ನಂಜೇಗೌಡರು ನೀನು ಹೆಣ್ಣು ಹೆಣ್ನಾಳಂಗೆ ಇರು ನೀನು ಇದನ್ನೆಲ್ಲಾ ಪ್ರಶ್ನೆ ಮಾಡಬಾರದೆಂದು ಎಚ್ಚರಿಕೆ ನೀಡಿರುತ್ತಾರೆ. ಇದರಿಂದ ಭಾಗ್ಯಮ್ಮನಿಗೆ ತೀವ್ರ ನಿರಾಸೆ ಮತ್ತು ನೋವಾಗಿರುತ್ತದೆ.

ಈ ಹಿನ್ನಲೆಯಲ್ಲಿ ಭಾಗ್ಯಮ್ಮನಿಗೆ ಅನ್ಯಾಯವಾಗಿರುವುದನ್ನು ಮನಗಂಡು ಬಹುಜನ ಚಳುವಳಿ ಸಂಘಟನೆಗಳ ಒಕ್ಕೂಟ ಗ್ರಾಮದಲ್ಲಿ ಭಾಗ್ಯಮ್ಮ ಮನೆಗೆ ಹೊಂದಿಕೊAಡಿರುವ ಚರಂಡಿ ಹಾಗೂ ಜಾನುವಾರುಗಳ ಕುಡಿಯುವ ನೀರಿನ ತೊಟ್ಟಿಯನ್ನ ಒತ್ತುವರಿ ಮಾಡಿರುವುದನ್ನು ತೆರವುಗೊಳಿಸಿ, ಭಾಗ್ಯಮ್ಮನಿಗೆ ನ್ಯಾಯ ಸಿಗುವ ತನಕ ಜಿಲ್ಲಾಡಳಿತದ ವಿರುದ್ಧ ಹೋರಾಟ ಅನಿವಾರ್ಯವಾಗಿದ್ದು, ಇದೇ ಸೆ.೨೫ರಿಂದ ಮಾಲೂರಿನ ತಾಲ್ಲೂಕು ಪಂಚಾಯ್ತಿ ಕಚೇರಿ ಮುಂದೆ ಪ್ರತಿಭಟನಾ ಧರಣಿ ನಡೆಸಲಾಗುವುದು ಎಂದು ತಿಳಿಸಿದ್ದಾರೆ. ಇದರ ಜೊತೆಗೆ ಕೋಲಾರ ಜಿಲ್ಲಾ ಉಸ್ತುವಾರಿ ಸಚಿವರು ಜಿಲ್ಲೆಯ ಯಾವುದೇ ಭಾಗಕ್ಕೆ ಆಗಮಿಸಿದರೂ ಅವರ ವಿರುದ್ಧ ಕಪ್ಪು ಪಟ್ಟಿ ಧರಿಸಿ ಘೆರಾವ್ ಮಾಡಲಾಗುವುದು ಎಂದು ಎಚ್ಚರಿಸಿದರು.

ಸುದ್ಧಿಗೋಷ್ಟಿಯಲ್ಲಿ ಬಹುಜನ ಚಳುವಳಿ ಸಂಘಟನೆಗಳ ಒಕ್ಕೂಟ ರಾಜ್ಯ ಸಂಘಟನಾ ಸಂಚಾಲಕ ವೇಮಗಲ್ ಮುರಳಿ, ಬಹುಜನ ರೈತ ಮತ್ತು ಕೃಷಿ ಕಾರ್ಮಿಕ ಸೇನೆ ರಾಜ್ಯಾಧ್ಕಕ್ಷ ದೇವರಾಜ್‌ಗೌಡ, ಜಿಲ್ಲಾ ಸಂಚಾಲಕ ಕಪ್ಪಲಮಡಗು ಶಂಕರ್, ಎಂ.ಸ್. ಕೃಷ್ಣಮೂರ್ತಿ, ವೀಣಾ, ಭಾಗ್ಯಮ್ಮ, ಜೈಪಾಲರೆಡ್ಡಿ ಮುಂತಾದವರು ಭಾಗವಹಿಸಿದ್ದರು.

Related Post

ಜೆಡಿಎಸ್‌ ಬಿಜೆಪಿ ಒಂದಾಗಿ ಸಂವಿಧಾನಕ್ಕೆ ಅಪಾಯ ಎಚ್ವತ್ತು ಕಾಂಗ್ರೆಸ್ ಬೆಂಬಲಿಸಿ: ಬೈರತಿ ಸುರೇಶ್
ವಚನ ಭ್ರಷ್ಟ ಬಿಜೆಪಿ ನೇತೃತ್ವದ ಎನ್.ಡಿ.ಎ. ಮೈತ್ರಿಕೂಟಕ್ಕೆ ಮತ ಕೇಳುವ ನೈತಿಕತೆ ಇಲ್ಲ-ಕೆ.ವಿ.ಗೌತಮ್
ಏಪ್ರಿಲ್ ೨೬ ರೊಳಗೆ ಎಕ್ಸಿಡಿ ಕಾರ್ಮಿಕರ ಬೇಡಿಕೆಗಳನ್ನು ಈಡೇರಿಸಲು ಆಗ್ರಹ ಇಲ್ಲವಾದಲ್ಲಿ ತೀವ್ರ ರೀತಿಯ ಹೋರಾಟ ನಡೆಸಲು ಕಾರ್ಮಿಕರ ಸಂಘಗಳ ಸಭೆಯಲ್ಲಿ ನಿರ್ಧಾರ

Leave a Reply

Your email address will not be published. Required fields are marked *

You missed

error: Content is protected !!