• Sat. Apr 27th, 2024

PLACE YOUR AD HERE AT LOWEST PRICE

ಕನ್ನಡ ಚಲನಚಿತ್ರರಂಗದ ಮಾತೃ ಸಂಸ್ಥೆ ಎಂದೇ ಕರೆಯಲಾಗುವ ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿ ಚುನಾವಣೆ ರಂಗೇರಿದೆ. ವಾಣಿಜ್ಯ ಮಂಡಳಿ ಹಾಲಿ ಅಧ್ಯಕ್ಷರು ಹಾಗೂ ಪದಾಧಿಕಾರಿಗಳ ಅಧಿಕಾರಾವಧಿ ಮುಕ್ತಾಯವಾಗಿದ್ದು ಇದೀಗ ಮತ್ತೆ ಚುನಾವಣೆ ನಡೀತಿದೆ. ಅಧ್ಯಕ್ಷ ಹಾಗೂ ಪದಾಧಿಕಾರಿಗಳ ಆಯ್ಕೆಗೆ ಇಂದು(ಸೆಪ್ಟೆಂಬರ್ 23) ಚುನಾವಣೆ ನಡೀತಿದೆ.

ಈ ಬಾರಿ ಸಿನಿಮಾ ಹಂಚಿಕೆದಾರ, ಪ್ರದರ್ಶಕ ಹಾಗೂ ನಿರ್ಮಾಪಕ ವಲಯಗಳಿಂದ 93 ಸ್ಥಾನಗಳಿಗೆ 100ಕ್ಕೂ ಅಧಿಕ ಅಭ್ಯರ್ಥಿಗಳು ರೇಸ್‌ನಲ್ಲಿದ್ದಾರೆ. ಒಬ್ಬರು ಅಧ್ಯಕ್ಷ, ಮೂರು ವಲಯಗಳಿಂದ ತಲಾ ಒಬ್ಬರು ಖಜಾಂಚಿ, ಮೂರು ವಲಯಕ್ಕೆ ಪ್ರತ್ಯೇಕ ಉಪಾಧ್ಯಕ್ಷ, ಕಾರ್ಯದರ್ಶಿಗಳ ಆಯ್ಕೆ ಚುನಾವಣೆಯಲ್ಲಿ ನಡೆಯುತ್ತದೆ.

ವಾಣಿಜ್ಯಮಂಡಳಿ ಕಚೇರಿಯ ಪಕ್ಕದಲ್ಲೇ ಇರುವ ಗುರುರಾಜ ಕಲ್ಯಾಣ ಮಂಟಪದಲ್ಲಿ ಚುನಾವಣೆ ನಡೆಯುತ್ತಿದೆ. ಈ ಬಾರಿ ಅಧ್ಯಕ್ಷ ಸ್ಥಾನಕ್ಕೆ ನಿರ್ಮಾಪಕರಾದ ಎನ್‌. ಎಂ ಸುರೇಶ್, ವಿತರಕ ಹಾಗೂ ನಿರ್ಮಾಪಕ ಶಿಲ್ಪಾ ಶ್ರೀನಿವಾಸ್, ವಿತರಕರಾದ ಎ. ಗಣೇಶ್ ಮತ್ತು ವಿತರಕ ಮಾರ್ಸ್ ಸುರೇಶ್ ನಡುವೆ ಪೈಪೋಟಿ ಏರ್ಪಟ್ಟಿದೆ. ನಿರ್ಮಾಪಕರು, ವಿತರಕರು ಮತ್ತು ಹಂಚಿಕೆದಾರರು ಮತದಾನ ಮಾಡುವ ಅರ್ಹತೆ ಇದ್ದು ಮತದಾರರನ್ನು ಸೆಳೆಯಲು ಪ್ರಯತ್ನ ನಡೆದಿತ್ತು.

ಅಂದಹಾಗೆ ಈ ಬಾರಿಯ ಚುನಾವಣೆಗೆ ಒಟ್ಟು 1638 ಮಂದಿ ಮತದಾ ಮಾಡುವ ಅರ್ಹತೆ ಪಡೆದಿದ್ದಾರೆ. ಅದರಲ್ಲಿ ನಿರ್ಮಾಪಕರ ವಲಯದಿಂದ 1150 ಮತದಾರರು, ವಿತರಕರ ವಲಯದಿಂದ 358 ಹಾಗೂ ಪ್ರದರ್ಶಕರು 138 ಜನ ಮತದಾನ ಮಾಡುತ್ತಿದ್ದಾರೆ. ಅಧ್ಯಕ್ಷ ಸ್ಥಾನಕ್ಕೆ ನಿರ್ಮಾಪಕ ಎಂ.ಎನ್.ಸುರೇಶ್ ಗೆಲುವು ಬಹುತೇಕ ನಿಶ್ಚಿತ ಎನ್ನಲಾಗುತ್ತಿದೆ. ಇವರ ನೇತೃತ್ವದ ತಂಡಕ್ಕೆ ಮಾಜಿ ವಾಣಿಜ್ಯ ಮಂಡಳಿ ಅಧ್ಯಕ್ಷ ಸಾ.ರಾ.ಗೋವಿಂದ್ ಬೆಂಬಲ ಇದೆ.

ಇನ್ನು ತಂಡದಲ್ಲಿ ಉಪಾಧ್ಯಕ್ಷ ಸ್ಥಾನಕ್ಕೆ ವಿತರಕ ವಲಯದಿಂದ ಜಿ. ವೆಂಕಟೇಶ್, ಬಿ. ಮಹದೇವ್ ಹಾಗೂ ಪ್ರದರ್ಶಕ ವಲಯದಿಂದ ಎಂ ನರಸಿಂಹಲು, ಕಾರ್ಯದರ್ಶಿ ಸ್ಥಾನಕ್ಕೆ ನಿರ್ಮಾಪಕರ ವಲಯದಿಂದ ರಾಜೇಶ್ ಬ್ರಹ್ಮಾವರ್, ವಿತರಕ ವಲಯದಿಂದ ಕೆ ಪಾರ್ಥ ಸಾರಥಿ, ಖಜಾಂಚಿ ಸ್ಥಾನಕ್ಕೆ ದಯಾಳ್ ಪದ್ಮನಾಭನ್ ಸ್ಪರ್ಧಿಸಿದ್ದಾರೆ. ಇನ್ನು ಕಾರ್ಯದರ್ಶಿ ಸ್ಥಾನಕ್ಕೆ ಈಗಾಗಲೇ ನಟ ಸುಂದರ್ ರಾಜ್ ಅವಿರೋಧವಾಗಿ ಆಯ್ಕೆಯಾಗಿದ್ದಾರೆ.

ಹಾಲಿ ಅಧ್ಯಕ್ಷರಾದ ಭಾ. ಮಾ ಹರೀಶ್ ಸಹೋದರ ಭಾ. ಮಾ ಗಿರೀಶ್ ಈ ಬಾರಿ ನಿರ್ಮಾಪಕರ ವಲಯದಿಂದ ಕಾರ್ಯದರ್ಶಿ ಸ್ಥಾನಕ್ಕೆ ಸ್ಪರ್ಧೆ ನಡೆಸಿದ್ದಾರೆ. ಇದೇ ವಿಭಾಗದಲ್ಲಿ ಪತ್ರಕರ್ತ ಕೆ. ಎಂ ವೀರೇಶ್ ಕೂಡ ಕಣದಲ್ಲಿದ್ದಾರೆ. ವಾಣಿಜ್ಯ ಮಂಡಳಿ ಚುನಾವಣೆಯ ಫಲಿತಾಂಶ ರಾತ್ರಿ ವೇಳೆಗೆ ಲಭ್ಯವಾಗುವ ಸಾಧ್ಯತೆಯಿದೆ.

KFCC Election: Film Chamber of Commerce Election: Heavy competition for the post of President.

Related Post

ಜೆಡಿಎಸ್‌ ಬಿಜೆಪಿ ಒಂದಾಗಿ ಸಂವಿಧಾನಕ್ಕೆ ಅಪಾಯ ಎಚ್ವತ್ತು ಕಾಂಗ್ರೆಸ್ ಬೆಂಬಲಿಸಿ: ಬೈರತಿ ಸುರೇಶ್
ವಚನ ಭ್ರಷ್ಟ ಬಿಜೆಪಿ ನೇತೃತ್ವದ ಎನ್.ಡಿ.ಎ. ಮೈತ್ರಿಕೂಟಕ್ಕೆ ಮತ ಕೇಳುವ ನೈತಿಕತೆ ಇಲ್ಲ-ಕೆ.ವಿ.ಗೌತಮ್
ಏಪ್ರಿಲ್ ೨೬ ರೊಳಗೆ ಎಕ್ಸಿಡಿ ಕಾರ್ಮಿಕರ ಬೇಡಿಕೆಗಳನ್ನು ಈಡೇರಿಸಲು ಆಗ್ರಹ ಇಲ್ಲವಾದಲ್ಲಿ ತೀವ್ರ ರೀತಿಯ ಹೋರಾಟ ನಡೆಸಲು ಕಾರ್ಮಿಕರ ಸಂಘಗಳ ಸಭೆಯಲ್ಲಿ ನಿರ್ಧಾರ

Leave a Reply

Your email address will not be published. Required fields are marked *

You missed

error: Content is protected !!