ಗ್ರಾಮ ಲೆಕ್ಕಿಗರು ಪಂಚಾಯಿತಿಗಳಲ್ಲೇ ಕುಳಿತು ಕಾರ್ಯನಿರ್ವಹಿಸಬೇಕು:ಸಿಎಂ ಸಿದ್ದು ಸೂಚನೆ.
ಗ್ರಾಮ ಲೆಕ್ಕಿಗರು ಜನರ ಕೈಗೇ ಸಿಗುತ್ತಿಲ್ಲ. ಅವರು ಎಲ್ಲಿರುತ್ತಾರೆ ಎಂದು ಹುಡುಕಿಕೊಂಡು ಹೋಗುವುದೇ ಜನರಿಗೆ ಒಂದು ತಲೆ ನೋವಾಗಿದೆ. ಗ್ರಾಮ ಲೆಕ್ಕಿಗರು ಇನ್ಮುಂದೆ ಗ್ರಾಮ ಪಂಚಾಯ್ತಿಗಳಲ್ಲೇ ಕುಳಿತು ಕೆಲಸ ಮಾಡುವಂತಾಗಬೇಕು ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಅಧಿಕಾರಿಗಳಿಗೆ ಸೂಚಿಸಿದರು. ವಿಧಾನಸೌಧದ ಸಮ್ಮೇಳನ ಸಭಾಂಗಣದಲ್ಲಿ…
ಕಾವೇರಿ, ರಾಜ್ಯಕ್ಕೆ ಮತ್ತೆ ಅನ್ಯಾಯ:ತಮಿಳುನಾಡಿಗೆ 15 ದಿನ ನೀರು ಹರಿಸಲು ಸಭೆ ಸೂಚನೆ.
ಕಾವೇರಿ ವಿಚಾರದಲ್ಲಿ ರಾಜ್ಯಕ್ಕೆ ಮತ್ತೆ ಅನ್ಯಾಯವಾಗಿದೆ. ಮುಂದಿನ 15 ದಿನಗಳವರೆಗೆ ಪ್ರತಿ ನಿತ್ಯ 5 ಸಾವಿರ ಕ್ಯೂಸೆಕ್ ನೀರನ್ನು ತಮಿಳುನಾಡಿಗೆ ಹರಿಸುವಂತೆ ಕಾವೇರಿ ನೀರು ನಿಯಂತ್ರಣ ಸಮಿತಿ ರಾಜ್ಯಕ್ಕೆ ಸೂಚನೆ ನೀಡಿದೆ. ಕರ್ನಾಟಕ ಮತ್ತು ತಮಿಳುನಾಡಿನ ನಡುವೆ ವಿವಾದಕ್ಕೆ ಕಾರಣವಾಗಿರುವ ಕಾವೇರಿ…
ವಸ್ತುನಿಷ್ಠ ಪಠ್ಯ ಪರಿಷ್ಕರಣೆ ಮಾಡಿದ್ದೆವು,ವಿವಾದ ಉಂಟುಮಾಡಿದ್ದರು:ಬರಗೂರು.
ಕೋಲಾರ:ಪಠ್ಯ ಪುಸ್ತಕಗಳ ಬಗ್ಗೆ ಸಾಕಷ್ಟು ಚರ್ಚೆಗಳು ನಡೆದಿವೆ. ಪಠ್ಯ ಪುಸ್ತಕಗಳು ಪಕ್ಷಗಳ ಪುಸ್ತಕಗಳಾಗಬಾರದು. ನಾವು ವಸ್ತುನಿಷ್ಠವಾಗಿ ಪಠ್ಯ ಪರಿಷ್ಕರಣೆ ಮಾಡಿದ್ದೆವು. ಆದರೆ, ಬಳಿಕ ಅನಗತ್ಯ ವಿವಾದ ಉಂಟು ಮಾಡಲಾಯಿತು ಎಂದು ಹಿರಿಯ ಸಾಹಿತಿ ಬರಗೂರು ರಾಮಚಂದ್ರಪ್ಪ ಹೇಳಿದ್ದಾರೆ. ಕೋಲಾರದಲ್ಲಿ ಕನ್ನಡ ಸಾಹಿತ್ಯ…
ಮರಗಳನ್ನು ಬೆಳೆಸಿದರೆ ಉತ್ತಮ ಮಳೆ, ಗಾಳಿ ಬರುತ್ತದೆ:ಶಾಸಕ ನಾರಾಯಣಸ್ವಾಮಿ.
ಬಂಗಾರಪೇಟೆ:ವಾತಾವರಣದಲ್ಲಿ ಉತ್ತಮ ಸಸಿಗಳನ್ನು ಬೆಳೆಸುವ ಮುಖಾಂತರ ಸಸ್ಯ ಶ್ಯಾಮಲಾವಾಗಿ ಮಾಡಿಮುಂದಿ ಪೀಳಿಗೆಗೆ ಮರಗಳನ್ನು ಬೆಳೆಸಿದಾಗ ಉತ್ತಮ ಮಳೆ, ಗಾಳಿ ಬರುತ್ತದೆ ಎಂದು ಶಾಸಕ ಎಸ್ಎನ್ ನಾರಾಯಣಸ್ವಾಮಿ ಹೇಳಿದರು. ತಾಲೂಕಿನ ಹುದುಕುಳ ಸರ್ಕಾರಿ ಕನ್ನಡ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಶಿಕ್ಷಣ ಇಲಾಖೆ ಮತ್ತು…
ಗೋವಾ: ರೈಲು ಪ್ರಯಾಣದ ವೇಳೆ ವಿಷಾಹಾರ ಸೇವನೆ ಮಾಡಿ 8 ಯುವಕರು ಅಸ್ವಸ್ಥ.
ಬೆಳಗಾವಿ:ರೈಲ್ವೆ ಪ್ರಯಾಣದ ವೇಳೆ ವಿಷಾಹಾರ ಸೇವನೆ ಮಾಡಿ 8 ಜನ ಯುವಕರು ಅಸ್ವಸ್ಥಗೊಂಡ ಘಟನೆ (ಸೆಪ್ಟೆಂಬರ್ 12) ತಡರಾತ್ರಿ ಗೋವಾದಲ್ಲಿ ನಡೆದಿದೆ. ವಾಸ್ಕೋ-ನಿಜಾಮುದ್ದೀನ್ ರೈಲಿನಲ್ಲಿ ಪ್ರಯಾಣಿಸುತ್ತಿದ್ದ ವೇಳೆ 8 ಜನ ಯುವಕರು ಹಸಿವು ತಾಳಲಾರದೇ ಗೋವಾದಲ್ಲಿ ಊಟ ಸೇವನೆ ಮಾಡಿ ಅಸ್ವಸ್ಥಗೊಂಡಿದ್ದಾರೆ.…
ಆಂದ್ರಪ್ರದೇಶ ಮಾಜಿ ಮುಖ್ಯಮಂತ್ರಿ ಚಂದ್ರಬಾಬು ನಾಯ್ಡು ಬೆಳ್ಳಂಬೆಳಿಗ್ಗೆ ಬಂಧನ.
‘ಸ್ಕಿಲ್ ಡೆವಲಪ್ಮೆಂಟ್ ಹಗರಣ’ದಲ್ಲಿ ಭಾಗಿಯಾದ ಆರೋಪದಲ್ಲಿ ತೆಲುಗು ದೇಶಂ ಪಕ್ಷದ (ಟಿಡಿಪಿ) ಅಧ್ಯಕ್ಷರಾಗಿರುವ ಆಂಧ್ರಪ್ರದೇಶದ ಮಾಜಿ ಮುಖ್ಯಮಂತ್ರಿ ಎನ್ ಚಂದ್ರಬಾಬು ನಾಯ್ಡು ಅವರನ್ನು ಇಂದು (ಸೆ.9 ಶನಿವಾರ) ಮುಂಜಾನೆ ಆಂದ್ರಪ್ರದೇಶದ ನಂದ್ಯಾಲ್ ಪೊಲೀಸರು ಬಂಧಿಸಿದ್ದಾರೆ. ಮಾಹಿತಿಯ ಪ್ರಕಾರ ‘ಸ್ಕಿಲ್ ಡೆವಲಪ್ಮೆಂಟ್ ಯೋಜನೆ’ಯಲ್ಲಿ…
ಗೃಹಲಕ್ಷ್ಮೀ ನಿರಂತರವಾಗಿ ನಡೆಯುವ ಯೋಜನೆ, ಸ್ಥಗಿತ ಎಂಬುದು ಸುಳ್ಳು:ಸಚಿವೆ.
‘ಗೃಹಲಕ್ಷ್ಮೀ’ ಯೋಜನೆಯ ನೋಂದಣಿ ಕಾರ್ಯ ಸ್ಥಗಿತ ಆಗಿದೆ ಅಂತಾ ಕೇಳಿ ನನಗೆ ಆಶ್ಚರ್ಯ ಆಗಿದೆ. ತಕ್ಷಣ ಇಲಾಖೆ ಕಾರ್ಯದರ್ಶಿ, ನಿರ್ದೇಶಕರ ಕರೆದು ಮಾತನಾಡಿದ್ದು, ಅತಾಚುರ್ಯದಿಂದ ನಮ್ಮ ಇಲಾಖೆಯಿಂದ ಟ್ವೀಟ್ ಮಾಡಲಾಗಿದೆ ಎಂದು ಮಹಿಳಾ ಮತ್ತು ಮಕ್ಕಳ ಕಲ್ಯಾಣ ಸಚಿವೆ ಲಕ್ಷ್ಮಿ ಹೆಬ್ಬಾಳ್ಕರ್…
ಕಾಂಗ್ರೇಸ್ ಸರ್ಕಾರದ ವೈಫಲ್ಯ ವಿರುದ್ಧ ರಾಜ್ಯಾದ್ಯಂತ ಪರತಿಭಟನೆ:ಬಿ.ಎಸ್.ವೈ
ದ ವಿರುದ್ಧ ರಾಜ್ಯಾದ್ಯಂತ :ಬಿ.ಎಸ್.ವೈ ಸರ್ಕಾರ ಭ್ರಷ್ಟಾಚಾರದಲ್ಲಿ ಮುಳುಗಿ ಅಭಿವೃದ್ಧಿಯನ್ನು ಕಡೆಗಣಿಸಿದೆ. ಬರಗಾಲ ಘೋಷಣೆಗೆ ಹಿಂದೆ ಮುಂದೆ ನೋಡುತ್ತಿದೆ. ಕಾಂಗ್ರೆಸ್ ಸರ್ಕಾರದ ವೈಫಲ್ಯ ವಿರುದ್ಧ ರಾಜ್ಯಾದ್ಯಂತ ಪ್ರತಿಭಟನೆ ನಡೆಸಲಾಗುವುದು ಎಂದು ಮಾಜಿ ಸಿಎಂ ಬಿ ಎಸ್ ಯಡಿಯೂರಪ್ಪ ತಿಳಿಸಿದರು. ಬೆಂಗಳೂರಿನಲ್ಲಿ ಸುದ್ದಿಗಾರರ…
ಜೀವನದಲ್ಲಿ ಗುರಿ ಮುಟ್ಟಬೇಕಾದರೆ ಆತ್ಮವಿಶ್ವಾಸವಿರಬೇಕು:ಡಿ.ಡಿ ರಾಮಚಂದ್ರಪ್ಪ.
ಬಂಗಾರಪೇಟೆ:ಕ್ರೀಡಾಕೂಟದಲ್ಲಿ ಸೋಲು-ಗೆಲುವು ಮುಖ್ಯವಲ್ಲ, ಭಾಗವಹಿಸುವುದು ಮುಖ್ಯ, ಜೀವನದಲ್ಲಿ ಗುರಿ ಮುಟ್ಟಬೇಕಾದರೆ ಆತ್ಮವಿಶ್ವಾಸದಿಂದ ಮಾತ್ರ ಸಾಧ್ಯ ಎಂದು ಪದವಿ ಪೂರ್ವ ಶಿಕ್ಷಣ ಇಲಾಖೆಯ ಉಪನಿರ್ದೇಶಕರಾದ ರಾಮಚಂದ್ರಪ್ಪ ಹೇಳಿದರು. ಪಟ್ಟಣದ ಜೂನಿಯರ್ ಕಾಲೇಜ್ ಮೈದಾನದಲ್ಲಿ ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಇಲಾಖೆ ಪದವಿ ಪೂರ್ವ…
ಸನಾತನ ಹೇಳಿಕೆ ವಿವಾದ:ಪ್ರಧಾನಿ ಮೋದಿ ಕರೆ ಸಂವಿಧಾನ ವಿರೋಧಿ:ಸಿಎಂ ಸಿದ್ದು ಕಿಡಿ.
‘‘ಸನಾತನ ಧರ್ಮದ ಬಗೆಗಿನ ತಮಿಳುನಾಡು ಸಚಿವ ಉದಯನಿಧಿ ಸ್ಟಾಲಿನ್ ಹೇಳಿಕೆಗೆ ತಕ್ಕ ಪ್ರತ್ಯುತ್ತರ ನೀಡಿ’’ ಎಂಬ ಪ್ರಧಾನಿ ನರೇಂದ್ರ ಮೋದಿ ಕರೆ ಅತ್ಯಂತ ಪ್ರಚೋದನಕಾರಿಯಾದುದು ಮಾತ್ರವಲ್ಲ ಸಂವಿಧಾನ ವಿರೋಧಿಯಾದುದು. ಈ ಪ್ರಚೋದನಕಾರಿ ಹೇಳಿಕೆಯನ್ನು ಹಿಂದಕ್ಕೆ ಪಡೆಯಬೇಕು ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಆಗ್ರಹಿಸಿದ್ದಾರೆ.…