• Sat. Apr 27th, 2024

PLACE YOUR AD HERE AT LOWEST PRICE

ಕೋಲಾರ,ಅ.೦೭: ಸೌಹಾರ್ದಕ್ಕೆ ಹೆಸರಾದ ಕೋಲಾರ ಸರ್ವಜನಾಂಗೀಯ ತೋಟವಾಗಿದೆ. ರಾಜಕಾರಣಿಗಳು ತಮ್ಮ ತೆವಲುಗಳಿಗೆ ಜಾತಿ, ಧರ್ಮಗಳ ಬಗ್ಗೆ ಪ್ರಸ್ತಾಪಿಸಿ, ಯುವ ಜನತೆಯನ್ನು ಪ್ರಚೋದಿಸಿ ಜಿಲ್ಲೆಯಲ್ಲಿ ಕೋಮು ಸೌಹಾರ್ದತೆಗೆ ಧಕ್ಕೆ ತಂದು ಬಡ ಮಕ್ಕಳನ್ನು ಬಲಿಪಶುಗಳನ್ನಾಗಿ ಮಾಡಬಾರದು ಎಂದು ನಗರಸಭೆ ಮಾಜಿ ಅಧ್ಯಕ್ಷ ಅಫ್ರೋಜ್ ಪಾಷಾ ಮನವಿ ಮಾಡಿದರು.

ನಗರದ ಪತ್ರಕರ್ತರ ಭವನದಲ್ಲಿನ ಸುದ್ದಿಗೋಷ್ಠಿಯಲ್ಲಿ ಅವರು ಮಾತನಾಡಿ ರಾಜಕಾರಣಿಗಳ ಮೇಲಾಟಕ್ಕೆ ಯುವಜನತೆ ಬಲಿಯಾಗ ಬಾರದು ಇನ್ನು ೬-೮ ತಿಂಗಳಲ್ಲಿ ಬರಲಿರುವ ಚುನಾವಣೆಗಾಗಿ ನಾಲಿಗೆಯನ್ನು ಹಿಡಿತವಿಲ್ಲದೆ ಹರಿಬಿಡುವ ಮೂಲಕ ಸಾರ್ವಜನಿಕವಲಯದಲ್ಲಿ ಆತಂಕದ ವಾತವರಣ ಸೃಷ್ಠಿಸಲು ಪ್ರಯತ್ನಿಸುತ್ತಿರುವುದು ಜಿಲ್ಲೆಗೆ ಸಹಬಾಳ್ವೆಗೆ ಧಕ್ಕೆಯಾಗಲಿದೆ ಎಂದು ಅಭಿಪ್ರಾಯಪಟ್ಟರು,

ಸಂಸದ ಎಸ್.ಮುನಿಸ್ವಾಮಿರವರು ಸಭೆ-ಸಮಾರಂಭಗಳಲ್ಲಿ ಜಾತಿ-ಧರ್ಮಗಳ ಬಗ್ಗೆ ಪ್ರಸ್ತಾಪಿಸಿ ಶಾಂತಿ ಸೌಹಾರ್ದತೆಗೆ ಧಕ್ಕೆಯಾಗುವಂತ ಹೇಳಿಕೆಗಳನ್ನು ನೀಡಿ, ಯುವ ಜನತೆಯನ್ನು ಪ್ರಚೋದಿಸಿ ಕೋಲಾರವನ್ನು ಮತ್ತೊಂದು ಶಿವಮೊಗ್ಗ, ಮಂಗಳೂರು ಮಾಡಲು ಮುಂದಾಗಿರುವುದು ಅವರ ಘನತೆಗೆ ಸಮಂಜಸವಲ್ಲ ಎಂದರು.

ರಾಜಕಾರಣವನ್ನು ಚುನಾವಣೆಗೆ ಮಾತ್ರ ಮೀಸಲಿಟ್ಟು ಕ್ಷೇತ್ರದ ಅಭಿವೃದ್ದಿಯತ್ತ ಗಮನ ಹರಿಸಬೇಕಾದವರು, ಖಡ್ಗವನ್ನು ನೋಡಿ, ತ್ರಿಶೋಲ, ಭರ್ಜಿ, ಚಕ್ರ, ಗದೆ, ಕತ್ತಿ ಗುರಣಿಗಳು ರಕ್ತದಾಹಕ್ಕೆ ಕಾತರಿಸುತ್ತಿದೆ ಎಂಬಿತ್ಯಾದಿ ಹೇಳಿಕೆಗಳನ್ನು ಬಹಿರಂಗವಾಗಿ ನೀಡುವ ಮೂಲಕನಗರದಲ್ಲಿ ಶಾಂತಿ ಸೌಹಾರ್ದ ಸಹೋದರತ್ವದಿಂದ ಬಾಳ್ವೆ ನಡೆಸುತ್ತಿರುವವರಲ್ಲಿ ಒಡಕು ಮೂಡಿಸಿ, ಯುವಜನರನ್ನು ದಿಕ್ಕು ತಪ್ಪಿಸಿ, ಶಾಂತಿ ಸುವ್ಯವಸ್ಥೆಯನ್ನು ಕಾಪಾಡ ಬೇಕಾದ ಜನಪ್ರತಿನಿಧಿಗಳೇ ಭಂಗ ಉಂಟು ಮಾಡಲು ಪ್ರಯತ್ನಿಸುತ್ತಿರುವುದು ಖೇದಕರ ಬೆಳವಣಿಗೆ ಎಂದು ಕಳವಳ ವ್ಯಕ್ತ ಪಡಿಸಿದರು.

ದಲಿತ ಮುಖಂಡ ವಕ್ಕಲೇರಿ ರಾಜಪ್ಪ ಮಾತನಾಡಿ ಸಮಾಜದಲ್ಲಿ ಶಾಂತಿ ಸೌಹಾರ್ದತೆಯನ್ನು ಕಾಪಾಡ ಬೇಕಾಗಿರುವುದು ಪ್ರತಿಯೊಬ್ಬ ನಾಗರೀಕನ ಜವಾಬ್ದಾರಿಯಾಗಿದೆ. ಎಲ್ಲೋ ನಡೆದಿರುವ ಅಹಿತಕರ ಘಟನೆಗಳನ್ನು ವೈಭವೀಕರಿಸಿ ಹೇಳುವುದು ಸಮಂಜಸವಲ್ಲ. ಕೆಟ್ಟದ್ದನ್ನು ಚಿಗುರಿನಲ್ಲೇ ಚಿವುಟಿ ಹಾಕಬೇಕು.

ಶಾಂತಿ ಸುವ್ಯವಸ್ಥೆಯಿಂದ ಸಹಬಾಳ್ವೆ ನಡೆಸ ಬೇಕು, ಸಾರ್ವಜನಿಕವಾಗಿ ಶಾಂತಿ ಸುವ್ಯವಸ್ಥೆಗೆ ಭಂಗವುOಟು ಮಾಡುವಂತ ಭಾಷಣಗಳು ಬೇಡ. ತಮ್ಮ ಪಕ್ಷದ ಕಛೇರಿಗಳಲ್ಲಿ ಭಾಷಣ ಮಾಡಿಕೊಳ್ಳಲಿ. ಪಕ್ಷದ ಕಚೇರಿಗಳಲ್ಲಿ ಮಾತ್ರ ರಾಜಕಾರಣ ಮಾಡಿಕೊಳ್ಳಲಿ ಹೊರಗೆ ಎಲ್ಲರೂ ಒಂದೇ ಭಾವನೆಯಲ್ಲಿ ಆಡಳಿತ ನಡೆಸಬೇಕೆಂದು ಮನವಿ ಮಾಡಿದರು.

ಭವಿಷ್ಯದಲ್ಲಿ ಒಳ್ಳೆಯ ಭಿತ್ತನೆಗಳನ್ನು ಮಾಡಿ ನಮ್ಮ ಮಕ್ಕಳಿಂದ ಉತ್ತಮ ಸಮಾಜ ನಿರ್ಮಾಣದ ಕನಸನ್ನು ಕಾಣುವಂತಾಗಬೇಕು. ಅಭಿವೃದ್ದಿಯೇ ಜನಪ್ರತಿನಿಧಿಗಳ ಮೂಲ ಮಂತ್ರವಾಗಬೇಕೆ ಹೊರತು ತಮ್ಮ ರಾಜಕಾರಣದ ಲಾಭಕ್ಕಾಗಿ, ಸ್ವಾರ್ಥಕ್ಕಾಗಿ ಸಮಾಜದಲ್ಲಿ ಜಾತಿ ಧರ್ಮಗಳನ್ನು ವೈಭವೀಕರಿಸಿ, ವಿಭಜಿಸುವ ಮೂಲಕ ಶಾಂತಿ ಸುವ್ಯವಸ್ಥೆಗಳಿಗೆ ಭಂಗ ಉಂಟು ಮಾಡಿದಲ್ಲಿ ಮುಂದಿನ ಪರಿಣಾಮ ನೆಟ್ಟಗಿರುವುದಿಲ್ಲ. ನಾವು ಯಾವದೇ ಹೋರಾಟಕ್ಕೆ ಹಿಂಜರಿಯುವುದಿಲ್ಲ ಎಂದು ಎಚ್ಚರಿಸಿದರು.

ರೈತ ಮುಖಂಡ ಕೆ.ಶ್ರೀನಿವಾಸಗೌಡ ಮಾತನಾಡಿ, ಜಾತಿ ಮತ್ತು ಧರ್ಮಗಳ ಸಮರದಲ್ಲಿ ಬಲಿಯಾಗುವವರು ಬಡವರ ಮಕ್ಕಳೇ ಹೊರತು ಶ್ರೀಮಂತರ ಮಕ್ಕಳಲ್ಲ, ರಾಜಕಾರಣಿಗಳ ಮಕ್ಕಳಲ್ಲ ಕೋಲಾರವು ಓಬಿರಾಯನ ಕಾಲದ ಹಂದಿಯ ಗೊಡಿನಂತೆ ಇದ್ದರೂ ಈವರೆಗೂ ಅಭಿವೃದ್ದಿಯೆಂಬುವುದು ಇಲ್ಲ. ಕೇವಲ ಜಾತಿ ಧರ್ಮಗಳ ಮೇಲೆ ರಾಜಕಾರಣ ಮಾಡುತ್ತಾ ಕಳೆದ ೪ ವರ್ಷಗಳಿಂದ ಒಂದು ರಸ್ತೆ ಅಭಿವೃದ್ದಿ ಮಾಡಿದ್ದು ಕಂಡಿಲ್ಲ. ಪತ್ರಿಕಾ ಹೇಳಿಕೆಗಳಿಗೆ ಮಾತ್ರ ಕೊರತೆಯಿಲ್ಲ ಎಂದು ಟೀಕಿಸಿದರು.

ಜಿಲ್ಲಾಧಿಕಾರಿಗಳನ್ನು ನವಾಜ್ ಷರಿಫ್‌ನ ತಮ್ಮನಾ ಎಂದು ವ್ಯಂಗವಾಡಿರುವುದು ಇಡೀ ಜಿಲ್ಲೆಗೆ ಮಾಡಿದ ಅಪಮಾನವಾಗಿದೆ. ಈ ರೀತಿ ಓರ್ವ ಜಿಲ್ಲಾ ನ್ಯಾಯಾಧಿಕಾರಿಯನ್ನು ಬಹಿರಂಗವಾಗಿ ಅಪಮಾನ ಮಾಡುವ ವಿರುದ್ದ ಜಿಲ್ಲಾ ಪೊಲೀಸ್ ಅಧಿಕಾರಿಗಳು ಪ್ರಕರಣ ದಾಖಲು ಮಾಡದೆ ತಟಸ್ಥ ಧೋರಣೆ ಸಮಂಜಸವಲ್ಲ, ಅದರೆ ಈ ರೀತಿ ಓರ್ವ ಸಮಾನ್ಯ ಪ್ರಜೆ ಟೀಕಿಸಿದ್ದರೆ ಸುಮ್ಮನಿರುತ್ತಿದ್ದರಾ ಎಂದು ಪ್ರಶ್ನಿಸಿದರು,

ನಗರಸಭೆ ಮಾಜಿ ಸದಸ್ಯ ಚಂದ್ರಮೌಳಿ ಮಾತನಾಡಿ ಜಿಲ್ಲಾಧಿಕಾರಿಗಳನ್ನು, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳನ್ನು ಸಾರ್ವಜನಿಕವಾಗಿ ಏಕವಚನದಲ್ಲಿ ಮಾತನಾಡುವ ಮೂಲಕ ಅಗೌರವಿಸಿದ್ದು ಖಂಡನೀಯ, ಅಂದು ಜಿಲ್ಲಾ ಪೊಲೀಸ್ ವರೀಷ್ಠಾಧಿಕಾರಿಗಳು ತಮ್ಮ ಶಕ್ತಿಮೀರಿ ನಿಯಂತ್ರಿಸಿದ ಹಿನ್ನಲೆಯಲ್ಲಿ ಹೆಚ್ಚಿನ ಅನಾಹುತಗಳು ತಪ್ಪಿದಂತಾಗಿದೆ. ಇಂಥಹ ಪ್ರಮಾಣಿಕ ಅಧಿಕಾರಿಗಳನ್ನು ಉಳಿಸಿ ಕೊಳ್ಳಬೇಕು ಎಂದರು.

ಜಿಲ್ಲೆಯಲ್ಲಿ ಕಾನೂನು ಸುವ್ಯವಸ್ಥೆ ಕಾಪಾಡಲು ರಾಜಕಾರಣದ ಒತ್ತಡಗಳಿಂದ ಅಡ್ಡಿಯಾಗುತ್ತಿರುವ ಹಿನ್ನಲೆಯಲ್ಲಿ ಅಕ್ರಮ ಚಟುವಟಿಕೆಗಳಿಗೆ ಅವಕಾಶ ಉಂಟಾಗಿದೆ. ಕೋಲಾರವು ಚಿನ್ನ, ರೇಷ್ಮೆ ಹಾಗೂ ಹಾಲಿಗೆ ಖ್ಯಾತಿ ಪಡೆದಿದೆ. ಕೋಲಾರ ರಾಜ್ಯಕ್ಕೆ ಮಾದರಿಯಾಗಿದೆ. ಕೋಲಾರಕ್ಕೆ ಕೋಲಾರವೇ ಸಾಟಿ ಹೊರತಾಗಿ ಕೋಲಾವರನ್ನು ಶಿವಮೊಗ್ಗೆಗೆ ಅಥವಾ ಮಂಗಳೂರಿಗೆ ಹೋಲಿಕೆ ಸಮಂಜಸವಲ್ಲ. ಶಾಂತಿ ಸುವ್ಯವಸ್ಥೆತನ್ನು ಕಡೆಗಣಿಸಿದರೆ ಬೀದಗೆಗೆ ಇಳಿಯುವಂತ ಸಂದರ್ಭಕ್ಕೆ ಅವಕಾಶ ನೀಡದೆ. ಶಾಂತಿ ಸುವ್ಯವಸ್ಥೆಗಡೆ ಸಹಕಾರ ನೀಡಿ ಎಂದು ಮನವಿ ಮಾಡಿದರು,

ಅರಣ್ಯ ಇಲಾಖೆಯು ಕೇಂದ್ರ ವ್ಯಾಪ್ತಿಗೆ ಒಳಪಟ್ಟಿದ್ದು ಅದನ್ನು ಸಂಸದರು ಕೇಂದ್ರೆದ ಮಟ್ಟದಲ್ಲಿ ಒತ್ತಡ ಹೇರಿ ರೈತರ ಜಮೀನುಗಳನ್ನು ವಾಪಾಸ ಮಾಡಿಸುವಂತಾಗಲಿ. ಕಂಕುಳಲ್ಲಿ ಮಗು ಇಟ್ಟು ಕೊಂಡು ಊರೆಲ್ಲಾ ಹುಡುಕಾಡಿದಂತೆ ರಾಜ್ಯ ಸರ್ಕಾರದ ಅಧಿಕಾರಿಗಳ ಮೇಲೆ ಒತ್ತಡ ಹೇರಿದರೆ ಪ್ರಯೋಜನಾವೇನು? ಎಂದು ಪ್ರಶ್ನಿಸಿದರು. ಅವರಿಗೆ ರೈತರ ಬಗ್ಗೆ ನೈಜ ಕಾಳಜಿ ಇದ್ದರೆ. ಈ ಹೋರಾಟಕ್ಕೆ ನಮ್ಮ ಬೆಂಬಲವು ಸಿಗುತ್ತದೆ ಅದರೆ ಇದನ್ನು ರಾಜಕಾರಣಕ್ಕಾಗಿ ಬಂಡವಾಳ ಮಾಡಿ ಕೊಳ್ಳಲು ಮುಂದಾಗುವುದು ಸ್ವಾರ್ಥದ ಪರಮಾವಧಿಯಾಗುತ್ತದೆ ಎಂದರು.

ಈ ಸಂದರ್ಭದಲ್ಲಿ ದಲಿತ ಮುಖಂಡರಾದ ವರದೇನಹಳ್ಳಿ ವೆಂಕಟೇಶ್, ಗಂಗಮ್ಮನಪಾಳ್ಯ ರಾಮಯ್ಯ, ಅಯ್ಯೂಬ್ ಇದ್ದರು.

Related Post

ಜೆಡಿಎಸ್‌ ಬಿಜೆಪಿ ಒಂದಾಗಿ ಸಂವಿಧಾನಕ್ಕೆ ಅಪಾಯ ಎಚ್ವತ್ತು ಕಾಂಗ್ರೆಸ್ ಬೆಂಬಲಿಸಿ: ಬೈರತಿ ಸುರೇಶ್
ವಚನ ಭ್ರಷ್ಟ ಬಿಜೆಪಿ ನೇತೃತ್ವದ ಎನ್.ಡಿ.ಎ. ಮೈತ್ರಿಕೂಟಕ್ಕೆ ಮತ ಕೇಳುವ ನೈತಿಕತೆ ಇಲ್ಲ-ಕೆ.ವಿ.ಗೌತಮ್
ಏಪ್ರಿಲ್ ೨೬ ರೊಳಗೆ ಎಕ್ಸಿಡಿ ಕಾರ್ಮಿಕರ ಬೇಡಿಕೆಗಳನ್ನು ಈಡೇರಿಸಲು ಆಗ್ರಹ ಇಲ್ಲವಾದಲ್ಲಿ ತೀವ್ರ ರೀತಿಯ ಹೋರಾಟ ನಡೆಸಲು ಕಾರ್ಮಿಕರ ಸಂಘಗಳ ಸಭೆಯಲ್ಲಿ ನಿರ್ಧಾರ

Leave a Reply

Your email address will not be published. Required fields are marked *

You missed

error: Content is protected !!