• Sat. Apr 27th, 2024

PLACE YOUR AD HERE AT LOWEST PRICE

ಕೆಜಿಎಫ್ ನಗರ ಕರ್ನಾಟಕದ್ದೇ ಆಗಿದ್ದರೂ ನಗರದಲ್ಲಿನ ಎಲ್ಲಾ ಜನ ಕನ್ನಡಿಗರಾಗಿರಲಿಲ್ಲ. ಕಾಲ ಬದಲಾದಂತೆ ಕೆಜಿಎಫ್ ನ ಇಡೀ ತಮಿಳರು ಕನ್ನಡ ಮಾತನಾಡುವುದನ್ನು ಕಲಿತಿದ್ದಾರೆ. ಕನ್ನಡ ಭಾಷೆಯ ಕಾರ್ಯಕ್ರಮಗಳಲ್ಲಿ ಬಾಗವಹಿಸುವುದಲ್ಲದೆ ಅವರೇ ಕನ್ನಡ ಕಾರ್ಯಕ್ರಮಗಳನ್ನು ಮಾಡಲು ಆರಂಭಿಸಿರುವುದು ಒಳ್ಳೆಯ ಬೆಳವಣಿಗೆ ಎಂದು ಜಿಲ್ಲಾ ಪಂಚಾಯಿತಿ ಮಾಜಿ ಸದಸ್ಯ ಬಿ.ವಿ.ಮಹೇಶ್ ಹೇಳಿದರು.

ಅವರು ತಾಲೂಕಿನ ಬೆಮೆಲ್ ನಗರದ ಆಲದ ಮರ ಬಳಿ ಇರುವ ಅಂಬೇಡ್ಕರ್ ವೃತ್ತದಲ್ಲಿ ಆಯೋಜಿಸಿದ್ದ ಕನ್ನಡ ರಾಜ್ಯೋತ್ಸವ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿ, ಚಿನ್ನದಗಣಿಯಲ್ಲಿ ದುಡಿಯುವ ಬಹುತೇಕ ಕಾರ್ಮಿಕರ ತಾಯಿ ಭಾಷೆ ತಮಿಳು. ಈ ಹಿಂದೆ ಅಲ್ಲಿ ಬಹುತೇಕರಿಗೆ ಕನ್ನಡ ಮಾತನಾಡಲು ಬರುತ್ತಿರಲಿಲ್ಲ. ಕಾಲ ಬದಲಾದಂತೆ ಅವರೂ ಕನ್ನಡ ಮಾತನಾಡುತ್ತಿರುವುದು ಉತ್ತಮ ಬೆಳವಣಿಗೆ ಎಂದರು.

ಕರ್ನಾಟಕ ರಾಜ್ಯ ವಿವಿಧತೆಯಲ್ಲಿ  ಏಕತೆಯನ್ನು ಹೊಂದಿರುವ ಸುಸಂಸ್ಕೃತ ರಾಜ್ಯವಾಗಿದೆ.  ನಮ್ಮ ರಾಜ್ಯದಲ್ಲಿ ಅನೇಕ ಧರ್ಮಗಳು, ಜಾತಿಗಳು ,ಹಾಗೂ ಭಾಷೆಗಳಲ್ಲಿ ಅನೇಕ  ಆಚಾರ ವಿಚಾರ ರೂಢಿ ಸಂಪ್ರದಾಯಗಳನ್ನು ಒಳಗೊಂಡಿದ್ದರೂ ಸಹ ಎಲ್ಲರನ್ನೂ ಒಗ್ಗೂಡಿಸಿಕೊಂಡು ಕನ್ನಡ ಭಾಷೆ ಸಾಮರಸ್ಯದ ಬೆಸುಗೆಗೆ ಅಮೃತ ದಂತೆ ಕಾರ್ಯನಿರ್ವಹಿಸುತ್ತಿದೆ ಎಂದು ತಿಳಿಸಿದರು. .

ಕನ್ನಡ ಭಾಷೆ ಕಲೆ, ಸಾಹಿತ್ಯ, ಸಂಸ್ಕೃತಿ, ವಿಜ್ಞಾನ ಮತ್ತು ತಂತ್ರಜ್ಞಾನ ಕ್ಷೇತ್ರಗಳಲ್ಲಿ ಇತಿಹಾಸ ಪುಟಗಳಲ್ಲಿ ಅಜರಾಮರವಾಗಿದೆ .ಹಲ್ಮಿಡಿ ಶಾಸನದಿಂದ ಪ್ರಾರಂಭವಾದ ಕನ್ನಡ ಸಾಹಿತ್ಯ ಕವಿರಾಜಮಾರ್ಗ ,ವಡ್ಡಾರಾಧನೆ ಹಾದಿಯಲ್ಲಿ ಸಾಗಿ ರಾಮಾಯಣ ದರ್ಶನಂ ನಿಂದ ಇಂದಿನವರೆಗೂ ತನ್ನದೇ ಆದ ಅಧಿಪತ್ಯವನ್ನು ಸ್ಥಾಪಿಸಿದೆ .

ಇದರೊಟ್ಟಿಗೆ ಭಾರತೀಯ ಸಾಹಿತ್ಯ ಪರಂಪರೆಯಲ್ಲಿ ಎಂಟು ಕನ್ನಡ ಜ್ಞಾನಪೀಠ ಪ್ರಶಸ್ತಿಗಳು,  ,ಚಲನಚಿತ್ರ ಕ್ಷೇತ್ರದಲ್ಲಿ 71ಕ್ಕೂ  ಹೆಚ್ಚು ರಾಷ್ಟ್ರ ಪ್ರಶಸ್ತಿಗಳನ್ನು ಪಡೆದಿರುವುದು ಹೆಮ್ಮೆಯ ವಿಚಾರ. ವಿಜ್ಞಾನ ಮತ್ತು ತಂತ್ರಜ್ಞಾನ ಕ್ಷೇತ್ರಗಳಲ್ಲಿ ಕರ್ನಾಟಕ ವಿಶ್ವದಲ್ಲಿಯೇ ಅಗ್ರಮಾನ್ಯ ಸ್ಥಾನದಲ್ಲಿರುವುದು ಕನ್ನಡದ ಗೌರವ ಮತ್ತು ಪ್ರತೀಕದ ಸಂಕೇತವಾಗಿದೆ ಎಂದರು.

ರಾಜಕಾರಣ ತತ್ವ ಸಿದ್ಧಾಂತಗಳಿಗೆ ಸೀಮಿತವಾಗಿದೆಯೇ ಹೊರತು ನಾಡ ಹಬ್ಬದ ಆಚರಣೆಗೆ ಅಲ್ಲ. ಕೆಲವು ಪಟ್ಟ ಭದ್ರ ಹಿತಾಸಕ್ತಿಗಳು ಆಲದ ಮರದ ಬಳಿ ಇರುವ ಡಾ.ಬಿ.ಆರ್.ಅಂಬೇಡ್ಕರ್ ವೃತ್ತವನ್ನು ಬಿಜೆಪಿ ವೃತ್ತವೆಂದು ಪ್ರತಿಬಿಂಬಿಸಲು  ಹೊರಟಿರುವುದು ಸರಿಯಲ್ಲ.

ಈ ವೃತ್ತದಲ್ಲಿ ಇಂದು ಆಚರಿಸುತ್ತಿರುವ ಕನ್ನಡ ರಾಜ್ಯೋತ್ಸವ ರಾಜಕೀಯೇತರವಾಗಿ ಎಲ್ಲಾ ರಾಜಕೀಯ ಪಕ್ಷಗಳ ಮುಖಂಡರುಗಳು ಮತ್ತು ಕಾರ್ಯಕರ್ತರು ಒಟ್ಟಿಗೆ ಸೇರಿ ಒಮ್ಮತದೊಂದಿಗೆ ಆಚರಿಸಲಾಗುತ್ತಿದೆ. ಈ ವೃತ್ತದಲ್ಲಿ ಎಲ್ಲಾ ದಿನಾಚರಣೆಗಳನ್ನು ಪಕ್ಷಾತೀತವಾಗಿ ಆಚರಿಸಿಕೊಂಡು ಬರುತ್ತಿರುವ ಡಾ.ಬಿ.ಆರ್.ಅಂಬೇಡ್ಕರ್ ಪ್ರಚಾರ ಸಮಿತಿಗೆ ಅಭಿನಂದನೆ ಸಲ್ಲಿಸುವುದಾಗಿ ತಿಳಿಸಿದರು.

ಡಾ,ಬಿ.ಆರ್.ಅಂಬೇಡ್ಕರ್  ಪ್ರಚಾರ ಸಮಿತಿ ಅಧ್ಯಕ್ಷ ಎನ್.ಬಾಬು ಮಾತನಾಡಿ ಕನ್ನಡ ಭಾಷೆಗೆ 2500ಕ್ಕೂ ಹೆಚ್ಚು ವರ್ಷಗಳ  ಸುಧೀರ್ಘ ಇತಿಹಾಸವಿದೆ .ಕನ್ನಡ ಕೇವಲ ಭಾಷೆಯಲ್ಲ ಅದು ರಾಜ್ಯದ ಸಾಹಿತ್ಯ ಸಂಸ್ಕೃತಿ ಆಚಾರ ವಿಚಾರ ಸಂಪ್ರದಾಯಗಳ ಕ್ರೂಡೀಕರಣದ ಕಣಜ ವಿದ್ದಂತೆ ಎಂದು ಅಭಿಪ್ರಾಯಪಟ್ಟರು.

ಅನೇಕ ತ್ಯಾಗ, ಬಲಿದಾನ ,ಹೋರಾಟಗಳಿಂದ   ಕರ್ನಾಟಕ ರಾಜ್ಯ ಏಕೀಕರಣಗೊಂಡಿದೆ .ಕನ್ನಡಿಗರು ಈ ಹಿಂದೆ ರಾಜ್ಯ ಪ್ರಭುತ್ವಗಳ ಆಳ್ವಿಕೆಗಳಾದ ಮದ್ರಾಸ್ ಪ್ರಾಂತ್ಯ, ಬಾಂಬೆ ಪ್ರಾಂತ್ಯ, ಹೈದರಾಬಾದ್ ಪ್ರಾಂತ್ಯಗಳಲ್ಲಿ ಹರಿದು ಹಂಚಿ ಹೋಗಿದ್ದರು. .ಇಂತಹ ಸಂದರ್ಭದಲ್ಲಿ ಕನ್ನಡಿಗರನ್ನು ಒಂದು ಗೂಡಿಸುವ ನಿಟ್ಟಿನಲ್ಲಿ  ದೇಶಪಾಂಡೆ  ಮತ್ತು ಬೆನಗಲ್ ರಾಮರಾಯರು, ಕರ್ನಾಟಕದ ಏಕೀಕರಣಕ್ಕೆ ಮುನ್ನುಡಿಯನ್ನು ಬರೆದರು.

ನಂತರ ಎನ್.ಎಸ್ ಹರ್ಡೆಕರ್ ಮಂಜಪ್ಪ ,ರಂಗನಾಥ್, ದಿವಾಕರ್, ಆಲೂರು ವೆಂಕಟರಾಯರು ಮೊದಲಾದವರ ನಿರಂತರ ಹೋರಾಟದಿಂದ ಕನ್ನಡ ಮಾತಾಡುವ ಪ್ರದೇಶಗಳನ್ನು  ಒಟ್ಟುಗೂಡಿಸಿ ನವಂಬರ್ -01- 1956ರಲ್ಲಿ ಮೈಸೂರು ಪ್ರಾಂತ್ಯವಾಗಿ ರಚಿಸಲ್ಪಟ್ಟು ತದನಂತರ 1973ರಲ್ಲಿ  ದೇವರಾಜ್ ಅರಸು ರವರು ಮುಖ್ಯಮಂತ್ರಿಗಳಾಗಿದ್ದಾಗ   ಮೈಸೂರು ರಾಜ್ಯವನ್ನು ಕರ್ನಾಟಕ ರಾಜ್ಯ ಎಂದು ಮರುನಾಮಕರಣ ಮಾಡಿದರು ಎಂದರು.

ಈ ಸಂದರ್ಭದಲ್ಲಿ ಡಿ.ಕೆ.ಹಳ್ಳಿ ಗ್ರಾ. ಪಂ. ಅಧ್ಯಕ್ಷ  ಲಯನ್ ಸುರೇಶ್ , ಡಾ.ಬಿ.ಆರ್.ಅಂಬೇಡ್ಕರ್ ಪ್ರಚಾರ ಸಮಿತಿ ಮುಖಂಡರಾದ ಕರುಣಾಮೂರ್ತಿ, ಎಸ್.ಕೆ.ಎಂಟರ್ಪ್ರೈಸಸ್ ಬಾಬು,  ಬೆಮೆಲ್ ಕಾರ್ಮಿಕ ಮುಖಂಡ ಡಿ.ಸಿ.ಚಂದ್ರಶೇಖರ್ ಮೊದಲಾದವರು ಮಾತನಾಡಿದರು.

ಮುಖಂಡರಾದ ವೆಂಕಟೇಶಮೂರ್ತಿ, ಬೋಸ್ಲೆ, ಅನ್ಬು, ವೆಂಕಟಸ್ವಾಮಿ, ರಾಜಕುಮಾರ್, ಶೋಬಿನ್, ಕೆಂಪಣ್ಣ, ಸುದರ್ಶನ್, ಗಿರೀಶ್, ಮೋಹನ್, ವೆಂಕಟಾಚಲಪತಿ ಗ್ರಾಪಂ ಸದಸ್ಯರಾದ ರಾದಮ್, ಸವಿತಾಬಾಭು, ಸುಧಾಗೌಡ, ರಾನಿಗೋವಿಂದರಾಜ್, ವಿಕ್ಟೋರಿಯಾ ಪುಣ್ಯಮೂರ್ತಿ, ಶೈಲಾವತಿವೆಂಕಟೇಶ್, ಗಿರೀಶ್, ಮಾಟಣ್ಣ ,ಚಂದ್ರಶೇಖರ್, ರಾಜರತ್ನಂ, ಸುರೇಂದ್ರ ಮೊದಲಾದವರಿದ್ದರು.

Related Post

ಜೆಡಿಎಸ್‌ ಬಿಜೆಪಿ ಒಂದಾಗಿ ಸಂವಿಧಾನಕ್ಕೆ ಅಪಾಯ ಎಚ್ವತ್ತು ಕಾಂಗ್ರೆಸ್ ಬೆಂಬಲಿಸಿ: ಬೈರತಿ ಸುರೇಶ್
ವಚನ ಭ್ರಷ್ಟ ಬಿಜೆಪಿ ನೇತೃತ್ವದ ಎನ್.ಡಿ.ಎ. ಮೈತ್ರಿಕೂಟಕ್ಕೆ ಮತ ಕೇಳುವ ನೈತಿಕತೆ ಇಲ್ಲ-ಕೆ.ವಿ.ಗೌತಮ್
ಏಪ್ರಿಲ್ ೨೬ ರೊಳಗೆ ಎಕ್ಸಿಡಿ ಕಾರ್ಮಿಕರ ಬೇಡಿಕೆಗಳನ್ನು ಈಡೇರಿಸಲು ಆಗ್ರಹ ಇಲ್ಲವಾದಲ್ಲಿ ತೀವ್ರ ರೀತಿಯ ಹೋರಾಟ ನಡೆಸಲು ಕಾರ್ಮಿಕರ ಸಂಘಗಳ ಸಭೆಯಲ್ಲಿ ನಿರ್ಧಾರ

Leave a Reply

Your email address will not be published. Required fields are marked *

You missed

error: Content is protected !!