ಕೆಜಿಎಫ್
ಕೋಲಾರ
ತಾಲ್ಲೂಕು ಸುದ್ದಿ
ದೇಶ
ನಮ್ಮ ಕೋಲಾರ
ಬಂಗಾರಪೇಟೆ
ಮಾಲೂರು
ಮುಳಬಾಗಿಲು
ರಾಜಕೀಯ
ರಾಜ್ಯ ಸುದ್ದಿ
ಶ್ರೀನಿವಾಸಪುರ
PLACE YOUR AD HERE AT LOWEST PRICE
ಕೆಜಿಎಫ್:ಬೀಜಾಪುರದಲ್ಲಿ ಇಇ ಆಗಿ ಕರ್ತವ್ಯ ನಿರ್ವಹಿಸುತ್ತಿರುವ ಮಹದೇವಪುರ ಗ್ರಾಮದ ನಿವಾಸಿ ತಿಮ್ಮರಾಜಪ್ಪ ಅವರ ಮನೆಯ ಮೇಲೆ ಲೋಕಾಯುಕ್ತ ಅಧಿಕಾರಿಗಳು ದಾಳಿ ನಡೆಸಿ ಪರಿಶೀಲನೆ ನಡೆಸಿದ್ದಾರೆ.
ತಾಲ್ಲೂಕಿನ ರಾಮಸಾಗರ ಗ್ರಾಪಂಯ ಮಹದೇವಪುರ ಗ್ರಾಮದ ನಿವಾಸಿ ಇಇ ತಿಮ್ಮರಾಜಪ್ಪ ರವರ ಮನೆ ಹಾಗೂ ಸಂಬಂಧಿಕರ ಮನೆಗಳ ಮೇಲೆ ಲೋಕಾಯುಕ್ತ ಅಧಿಕಾರಿಗಳ ತಂಡ ಏಕ ಕಾಲದಲ್ಲಿ ದಾಳಿ ನಡೆಸಿದ್ದಾರೆ.
ಬೇತಮಂಗಲ ಹೋಬಳಿ ರಾಮಸಾಗರ ಗ್ರಾಮ ಪಂಚಾಯ್ತಿವ್ಯಾಪ್ತಿಯ ಮಹದೇವಪುರ ಗ್ರಾಮದ ಮುಖ್ಯ ರಸ್ತೆಯಲ್ಲಿರುವ ಮನೆ ಹಾಗೂ ಗ್ರಾಮದ ಒಳಗೆ ಇರುವ ಮತ್ತೋಂದು ಮನೆ ಮೇಲೆ ಸೋಮವಾರ ರಾತ್ರಿ ದಾಳಿ ನಡೆಸಿದ್ದು ಮಂಗಳವಾರ ಸಂಜೆಯ ವರೆಗೂ ಪರಿಶೀಲನೆ ಮಾಡಿದ್ದಾರೆ. ದಾಳಿಯಲ್ಲಿ ಏನು ಸಿಕ್ಕಿದೆ, ಏನು ವಶಕ್ಕೆ ಪಡೆದಿದ್ದೇವೆ ಎಂಬ ಮಾಹಿತಿಯನ್ನು ನಂತರ ತಿಳಿಸುವುದಾಗಿ ಅಧಿಕಾರಿಗಳು ಹೇಳಿದ್ದಾರೆ.