• Fri. Oct 11th, 2024

PLACE YOUR AD HERE AT LOWEST PRICE

 

ಕೋಲಾರ,ಜ.೨೬ : ಭಾರತ ಸಂವಿಧಾನವನ್ನು ವಿವಿಧ ರಾಷ್ಟçಗಳಲ್ಲಿನ ಅತ್ಯುತ್ತಮ ಅಂಶಗಳನ್ನು ಆಯ್ದುಕೊಂಡು ರಚಿಸಲಾಗಿದೆ. ಇಲ್ಲಿ ಸರ್ವರಿಗೂ ಸಮಬಾಳು-ಸಮಪಾಲು ಪರಿಕಲ್ಪನೆಯನ್ನು ಹೊಂದಿದ್ದು ಸಮಸಮಾಜದ ಗುರಿ ಹೊಂದಿದೆ ಮಾನವರೆಲ್ಲರೂ ಸಮಾನರು ಎಂಬ ಭಾವನೆ ಮೂಡಿಸುವುದು ಇಂದಿನ ತುರ್ತಾಗಿದೆ ಎಂದು ನಗರಾಭಿವೃದ್ಧಿ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಬೈರತಿ ಸುರೇಶ್ ಆಭಿಪ್ರಾಯಪಟ್ಟರು.

ನಗರದ ಸರ್.ಎಂ. ವಿಶ್ವೇಶ್ವರಯ್ಯ ಜಿಲ್ಲಾ ಕ್ರೀಡಾಂಗಣದಲ್ಲಿ ಭಾರತದ ೭೫ನೇ ಗಣರಾಜ್ಯೋತ್ಸವ ದಿನಾಚರಣೆಯ ಧ್ವಜಾರೋಹಣ ನೆರವೇರಿಸಿ ಅವರು ಮಾತನಾಡಿದರು. ಭಾರತ ಪ್ರಜಾಪ್ರಭುತ್ವದ ದೊಡ್ಡ ಹಬ್ಬ ಎಂದೇ ಆಚರಿಸುವ ಈ ಪವಿತ್ರ ದಿನ ದೇಶದ ನಮ್ಮ ಸಂವಿಧಾನವನ್ನು ಅನುಷ್ಠಾನಕ್ಕೆ ತಂದು ಕಾನೂನು ಚೌಕಟ್ಟನ್ನು ರೂಪಿಸಿದ ಈ ದಿನ ಐತಿಹಾಸಿಕವಾಗಿದೆ ಎಂದರು.

ಇoದು ದೇಶದಲ್ಲಿ ಸಂವಿಧಾನದ ಬಗ್ಗೆ ಹಾಗೂ ಜಾತ್ಯಾತೀತತೆ ಬಗ್ಗೆ ಹೆಚ್ಚು ಚರ್ಚೆಗಳಾಗುತ್ತಿದೆ. ಸಂವಿಧಾನ ಎಲ್ಲಾ ಧರ್ಮಗಳಿಗೂ ಸಮಾನ ಆದ್ಯತೆ ನೀಡಿದೆ. ಆದರೆ ಜಾತ್ಯಾತೀತೆಯನ್ನು ದುರ್ಬಲಗೊಳಿಸಲಾಗುತ್ತಿದ್ದು ಏಕ ಸಂಸ್ಕೃತಿ ಪರಂಪರೆ ಬೆಳೆಸುವ ಸಂಪ್ರದಾಯತ್ತ ಸಾಗಿದೆ. ಆದುದ್ದರಿಂದ ಧರ್ಮ ನಿರಪೇಕ್ಷತೆಗೆ ಒತ್ತು ನೀಡಿ ಸಮಾನತೆಯೆಡೆಗೆ ಸಾಗಲು ಸಂವಿಧಾನದ ಬಗ್ಗೆ ಜನ ಜಾಗೃತಿ ಮೂಡಿಸಬೇಕಾಗಿದೆ ಎಂದು ಹೇಳಿದರು.

ದೇಶ ಪ್ರಗತಿಪಥದಲ್ಲಿ ಸಾಗಬೇಕಾದರೆ ಅದರ ಸರ್ವತೋಮುಖ ಅಭಿವೃದ್ಧಿ ಅಅತ್ಯಗತ್ಯ. ಆರ್ಥಿಕ ಸಬಲತೆ, ಸಾಮಾಜಿಕ ಕಳಕಳಿ ಸಮೃದ್ಧ ಸಂಪನ್ಮೂಲದ ಜೊತೆಜೊತೆಗೆ ಆರೋಗ್ಯಕರ ಸಮಾಜವೂ ಅತಿ ಮುಖ್ಯವಾಗಿದೆ. ನಮ್ಮ ಗಣತಂತ್ರ ವ್ಯವಸ್ಥೆಯನ್ನು ಸುಭದ್ರವಾಗಿರಿಸಲು ನಮ್ಮ ಗಡಿಯಲ್ಲಿ ಕಾಯುವ ಯೋಧರ ತ್ಯಾಗ ಬಲಿದಾನಗಳನ್ನು ನಾವು ಗೌರವಿಸಬೇಕು. ನಮ್ಮ ಯೋಧರ ಧೈರ್ಯ ಮತ್ತು ನಮ್ಮ ಅನ್ನದಾತರ ಸಂಯಮ ನಮಗಿಂದು ಆದರ್ಶಗಳಾಗಬೇಕಿದೆ. ನಮ್ಮ ದೇಶದಲ್ಲಿರುವ ವಿವಿಧತೆಯಲ್ಲಿ ಏಕತೆಯನ್ನು ಕಾಪಾಡಿಕೊಂಡು, ಸ್ನೇಹ, ಬ್ರಾತ್ಥತ್ವ ಹಾಗೂ ಮಾನಮ ಮೌಲ್ಯಗಳೊಂದಿಗೆ ಒಗ್ಗಟ್ಟಿನಿಂದ ಮುನ್ನಡೆಯೋಣ, ಉತ್ತಮ ಸಮಾಜವನ್ನು ಕಟ್ಟೋಣ ಎಂದು ಕರೆ ನೀಡಿದರು.

ನಂತರ ಜಿಲ್ಲಾ ಸಶಸ್ತç ಪೊಲೀಸ್ ವಿಭಾಗ, ನಾಗರೀಕ ಪೊಲೀಸ್ ವಿಭಾಗ, ಗೃಹರಕ್ಷಕ ದಳ, ಎನ್.ಸಿ.ಸಿ. ಹಾಗೂ ವಿವಿಧ ಶಾಲಾ ಕಾಲೇಜುಗಳ ವಿದ್ಯಾರ್ಥಿಗಳಿಂದ ಆಕರ್ಷಕ ಪಥಸಂಚಲನ ನಡೆಯಿತು. ತರುವಾಯ ಶಾಲಾ ಮಕ್ಕಳಿಂದ ಸಾಂಸ್ಕೃತಿಕ ಕಾರ್ಯಕ್ರಮಗಳು ನೆರವೇರಿತು.

ಈ ಸಂಧರ್ಭದಲ್ಲಿ ವಿಧಾನ ಸಭಾ ಸದಸ್ಯರಾದ ಕೊತ್ತೂರು ಜಿ. ಮಂಜುನಾಥ್, ವಿಧಾನ ಪರಿಷತ್ ಸದಸ್ಯ ಇಂಚರ ಗೋವಿಂದರಾಜು, ಜಿಲ್ಲಾಧಿಕಾರಿ ಅಕ್ರಂ ಪಾಷ, ಸಿಇಒ ಪದ್ಮಾ ಬಸಂತಪ್ಪ, ಜಿಲ್ಲಾ ಪೊಲೀಸ್ ವರಿಷ್ಠಾದಿಕಾರಿ ಎಂ.ನಾರಾಯಣ್ ಸೇರಿದಂತೆ ವಿವಿಧ ಇಲಾಖೆಗಳ ಜಿಲ್ಲಾ ಹಾಗೂ ತಾಲ್ಲೂಕು ಮಟ್ಟದ ಅಧಿಕಾರಿಗಳು ಭಾಗವಹಿಸಿದ್ದರು.

Related Post

ಗಾಂಧೀವನದಲ್ಲೇ ಕನ್ನಡ ರಾಜ್ಯೋತ್ಸವ ಅದ್ದೂರಿ ಆಚರಣೆಗೆ ಕನ್ನಡ ಪರ ಸಂಘನೆಗಳ ಒಕ್ಕೂರಲಿನ ತೀರ್ಮಾನ
ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ದಿ ಯೋಜನೆ ಬಿಸಿ ಟ್ರಸ್ಟ್ ವತಿಯಿಂದ ಹತ್ತು ಲಕ್ಷ ಸಸಿ ನೆಡುವ ಯೋಜನೆ : ಸಿದ್ದಗಂಗಯ್ಯ
ಗ್ರಾಮ ಪಂಚಾಯಿತಿ ಅಧಿಕಾರಿಗಳ ಮತ್ತು ಸಿಬ್ಬಂದಿಗಳ ವಿವಿಧ  ನ್ಯಾಯಯುತ ಬೇಡಿಕೆಗಳನ್ನು  ಈಡೇರಿಸುವಂತೆ  ಒತ್ತಾಯಿಸಿ, ನಗರದ ಜಿಲ್ಲಾ ಪಂಚಾಯತಿ ಕಚೇರಿ ಮುಂದೆ ಜಿಲ್ಲಾ ಪಿಡಿಒ ಹಾಗೂ ಸಿಬ್ಬಂದಿಗಳ  ವೃಂದ ಸಂಘಟನೆಗಳ ವತಿಯಿಂದ ಅನಿರ್ದಿಷ್ಟವಾಧಿ ಪ್ರತಿಭಟನೆ

Leave a Reply

Your email address will not be published. Required fields are marked *

You missed

error: Content is protected !!