• Thu. May 2nd, 2024

PLACE YOUR AD HERE AT LOWEST PRICE

ಕೋಲಾರ : ಜಗತ್ತಿನಲ್ಲಿ ತಾಯಿಗಿಂತ ದೊಡ್ಡವರು ಯಾರೂ ಇಲ್ಲ. ಒಂದು ಜನ್ಮಕೊಡುವ ತಾಯಿಯಂತೆಯೇ ಜೀವನ ಪೂರ್ತಿ ನಮನ್ನು ಕಾಯುವುದು ಭಾರತ ಸಂವಿಧಾನವೆoಬ ತಾಯಿ. ಬಾಬಾ ಸಾಹೇಬ್ ಬಿ.ಆರ್.ಅಂಬೇಡ್ಕರ್ ಬರೆದ ಭಾರತ ಸಂವಿಧಾನವನ್ನು ಹೋಲಿಕೆ ಮಾಡುತ್ತಿದ್ದೇನೆ ಎಂದರೆ ಅದು ತಾಯಿಯಂತೆ ನಮ್ಮನ್ನು ಕಾಯುತ್ತದೆ. ಇಡೀ ಜಗತ್ತಿಗೆ ಮಾದರಿಯಾಗಿರುವ ಭಾರತದ ಸಂವಿಧಾನ ಜಗತ್ತಿನ ಸರ್ವಶ್ರೇಷ್ಠ ಸಂವಿಧಾನ ಎಂದು ಕೊಂಡರಾಜನಹಳ್ಳಿ ಗಾಮ ಪಂಚಾಯ್ತಿ ಅಧ್ಯಕ್ಷ ವಿಜಯನಗರ ಮಂಜುನಾಥ್ ಅಭಿಪ್ರಾಯಪಟ್ಟರು.

ತಾಲ್ಲೂಕಿನ ಕೊಂಡರಾಜಹಳ್ಳಿಗೆ ಗುರುವಾರ ಆಗಮಿಸಿದ್ದ ಸಂವಿಧಾನ ಜಾಗೃತಿ ಜಾಥಾ ಉದ್ದೇಶಿಸಿ ಅವರು ಮಾತನಾಡಿದರು. ಭಾರತದ ಸಂವಿಧಾನ ಅಂಗೀಕರವಾಗಿ ೭೫ ವರ್ಷಗಳು ಕಳೆದ ರಾಜ್ಯ ಸರ್ಕಾರ ಜನವರಿ ೨೬ ರಂದು ಸಂವಿಧಾನ ಜಾಥಾಗೆ ಚಾಲನೆ ನೀಡಿತು. ಫೆ. ೨೫ರವರೆಗೆ ನಡೆಯಲಿದ್ದು ಗುರುವಾರ ಮದ್ಯಾಹ್ನ ತಾಲ್ಲೂಕಿನ ಕೊಂಡರಾಜನಹಳ್ಳಿ ಗ್ರಾಮಕ್ಕೆ ಆಗಮಿಸಿತು.

ಸಂವಿಧಾನ ಜಾಗೃತಿ ಜಾಥಾಗೆ ಗ್ರಾಮ ಪಂಚಾಯ್ತಿಯ ಜನತೆ ಪೂರ್ಣಕುಂಭ ಕಳಸ ಹೊತ್ತು ಮೆರವಣಿಗೆಯ ಮೂಲಕ ಆಹ್ವಾನಿಸಿದರೆ, ಸ್ಥಳೀಯ ಪ್ರೌಢಶಾಲೆ ಹಾಗೂ ಪ್ರಾಥಮಿಕ ಶಾಲಾ ಮಕ್ಕಳು ಸ್ವಾತಂತ್ರ ಹೋರಾಟಗಾರರ ವೇಷ ಭೂಷಣಗಳನ್ನು ಧರಿಸಿ ಡೋಲು, ವಾದ್ಯಗಳ ಮುಖಾಂತರ ಸಂವಿಧಾನ ಜಾಥಕ್ಕೆ ಅದ್ದೂರಿಯಾಗಿ ಸ್ವಾಗತಿಸಿದರು.

ರಾಜ್ಯ ಸರ್ಕಾರ ರಾಜ್ಯದ ಜನ ಸಾಮಾನ್ಯರಿಗೆ ಸಂವಿಧಾನದ ಮೂಲ ಆಶಯಗಳ ಕುರಿತು ಜಾಗೃತಿ ಮೂಡಿಸುವ ಸಲುವಾಗಿ ಜನವರಿ ೨೬ ರಿಂದ ರಾಜ್ಯದ ಎಲ್ಲಾ ಜಿಲ್ಲೆಗಳಲ್ಲೂ ಸಂವಿಧಾನ ಜಾಗೃತಿ ಜಾಥಾ ಹಮ್ಮಿಕೊಂಡಿದೆ. ಅದರಂತೆ ಪಂಚಾಯಿತಿಯ ಕೇಂದ್ರ ಸ್ಥಾನಗಳಲ್ಲಿ ಸಂವಿಧಾನ ಜಾಗೃತಿ ಜಾಥಾ ಸಂಚರಿಸಿ ಸಂವಿಧಾನದ ಮಹತ್ವ ಹಾಗೂ ಮೌಲ್ಯಗಳ ಕುರಿತು ಜಾಗೃತಿ ಮೂಡಿಸುವುದು ಮತ್ತು ರಾಷ್ಟ್ರೀಯ ಏಕತೆಯನ್ನು ಎತ್ತಿ ಹಿಡಯುವ ಉದ್ದೇಶದಿಂದ ಜಾಗೃತಿ ಜಾಥ ನಡೆಯುತ್ತಿದೆ ಎಂದು ತಿಳಿಸಿದರು.

ಗ್ರಾ.ಪಂ ಅಭಿವೃದ್ಧಿ ಅಧಿಕಾರಿ ರಾಮಕೃಷ್ಣ ಮಾತನಾಡಿ, ಸಂವಿಧಾನ ಇರುವುದರಿಂದ ನಾವೆಲ್ಲರು ನೆಮ್ಮದಿಯಿಂದ ಜೀವನ ಸಾಗಿಸುತ್ತಿದ್ದೇವೆ. ಹಾಗಾಗಿ ಸಂವಿಧಾನದ ನೀತಿ ನಿಯಮಗಳನ್ನು ನಾವೆಲ್ಲ ಪಾಲನೆ ಮಾಡಬೇಕು. ಸಂವಿಧಾನವನ್ನು ಉಳಿಸಿ ಬೆಳೆಸುವುದು ನಮ್ಮೆಲ್ಲರ ಕರ್ತವ್ಯ. ಇವತ್ತಿನ ಕಾರ್ಯಕ್ರಮಕ್ಕೆ ಗ್ರಾ.ಪಂ ಅಧ್ಯಕ್ಷ, ಉಪಾಧ್ಯಕ್ಷ, ಸದಸ್ಯರು ಹಾಗೂ ಗ್ರಾಮಸ್ಥರು ಸಹಕಾರ ನೀಡಿ ಈ ಕಾರ್ಯಕ್ರಮ ಯಶಸ್ವಿಗೊಳಿಸಿದ್ದಾರೆ ಎಂದರು.

ತಾಲ್ಲೂಕು ಸಮಾಜ ಕಲ್ಯಾಣ ಆಧಿಕಾರಿ ಚೆನ್ನಬಸಪ್ಪ ಸಂವಿಧಾನ ಪೀಠಿಕೆಯ ಪ್ರಮಾಣ ವಚನ ಭೋಧಿಸಿದರು. ಸಮಾಜ ಕಲ್ಯಾಣ ಇಲಾಖೆ ಜಂಟಿ ನಿರ್ದೇಶಕ ಶ್ರೀನಿವಾಸ್ ಹಾಗೂ ಹಿರಿಯ ದಲಿತ ಮುಖಂಡ ಟಿ.ವಿಜಯಕುಮಾರ್ ಮಾತನಾಡಿದರು. ಜಾನಪದ ಕಲಾವಿದರಾದ ದೊಡ್ಡಮಲೆ ರವಿ, ಮಾರುತಿ ಪ್ರಸಾದ್, ವಿ.ಯಲ್ಲಪ್ಪ, ಈನೆಲ ಈಜಲ ವೆಂಕಟಾಚಲಪತಿ, ಮುನಿಸ್ವಾಮಿ, ಜ್ಯೋತಿ ಅವರಿಂದ ಭಾರತ ಸಂವಿಧಾನ ಹಾಗೂ ಅದರ ಮಹತ್ವದ ಕುರಿತು ಜಾಗೃತಿ ಗೀತೆಗಳನ್ನು ಪ್ರಚುರಪಡಿಸಲಾಯಿತು.

ಈ ಸಂದರ್ಭದಲ್ಲಿ ಕೊಂಡರಾಜನಹಳ್ಳಿ ಗ್ರಾ.ಪಂ. ಉಪಾಧ್ಯಕ್ಷೆ ನಾರಾಯಣಮ್ಮ, ಸದಸ್ಯರುಗಳಾದ ಶ್ರೀನಿವಾಸ್ ಯಾದವ್, ರಾಮಕ್ಕ, ಪುಷ್ಪಮ್ಮ, ಎಂ.ರಾಜೇಶ್, ಎಂ.ಗೋವಿoದ್, ನಾಗರತ್ನ, ಎಲ್.ನಿರಂಜನ್, ಜಯಮ್ಮ, ಲಿಂಗಪ್ಪ, ಎಸ್.ಸುಜಾತ, ರಿಜ್ವಾನ್ ತಾಜ್, ಮುನಿಯಪ್ಪ, ವಿ.ವೆಂಕಟಾ ಚಲಪತಿ, ಪುಷ್ಪ, ಚೋತಿಮಾ, ಎನ್.ನಾಗೇಶ್, ವೆಂಕಟಮ್ಮ, ಎನ್.ಪ್ರಕಾಶ್, ಕಾಂಗ್ರೆಸ್ ಎಸ್ಸಿ ಘಟಕ ಮುಖಂಡ ಖಾದ್ರಿಪುರ ಬಾಬು, ಸ್ಥಳೀಯ ಶಾಲಾ ಶಿಕ್ಷಕ ಮುದುವಾಡಿ ನಾರಾಯಣಸ್ವಾಮಿ, ಗ್ರಂಥಾಲಯ ಮೇಲ್ವಿಚಾರಕಿ ಕೊಂಡರಾಜನಹಳ್ಳಿ ಮಂಜುಳಾ, ಪಂಚಾಯಿ ಸಿಬ್ಬಂದಿಗಳು, ಅಂಗನವಾಡಿ ಕಾರ್ಯಕರ್ತೆಯರು, ವಿದ್ಯಾರ್ಥಿಗಳು ಹಾಗೂ ಗ್ರಾಮಸ್ಥರು ಭಾಗವಹಿಸಿದ್ದರು.

Related Post

ಜೆಡಿಎಸ್‌ ಬಿಜೆಪಿ ಒಂದಾಗಿ ಸಂವಿಧಾನಕ್ಕೆ ಅಪಾಯ ಎಚ್ವತ್ತು ಕಾಂಗ್ರೆಸ್ ಬೆಂಬಲಿಸಿ: ಬೈರತಿ ಸುರೇಶ್
ವಚನ ಭ್ರಷ್ಟ ಬಿಜೆಪಿ ನೇತೃತ್ವದ ಎನ್.ಡಿ.ಎ. ಮೈತ್ರಿಕೂಟಕ್ಕೆ ಮತ ಕೇಳುವ ನೈತಿಕತೆ ಇಲ್ಲ-ಕೆ.ವಿ.ಗೌತಮ್
ಏಪ್ರಿಲ್ ೨೬ ರೊಳಗೆ ಎಕ್ಸಿಡಿ ಕಾರ್ಮಿಕರ ಬೇಡಿಕೆಗಳನ್ನು ಈಡೇರಿಸಲು ಆಗ್ರಹ ಇಲ್ಲವಾದಲ್ಲಿ ತೀವ್ರ ರೀತಿಯ ಹೋರಾಟ ನಡೆಸಲು ಕಾರ್ಮಿಕರ ಸಂಘಗಳ ಸಭೆಯಲ್ಲಿ ನಿರ್ಧಾರ

Leave a Reply

Your email address will not be published. Required fields are marked *

You missed

error: Content is protected !!