• Tue. Apr 30th, 2024

PLACE YOUR AD HERE AT LOWEST PRICE

ಕೆಜಿಎಫ್:ನಗರದಲ್ಲಿ ಪ್ಲಾಸ್ಟಿಕ್ ಬಳಕೆ ಎಗ್ಗಿಲ್ಲದೆ ನಡೆಯುತ್ತಿರುವ ಹಿನ್ನಲೆಯಲ್ಲಿ ಸಾರ್ವಜನಿಕರಿಂದ ವ್ಯಾಪಕ ದೂರುಗಳು ಬಂದಿದ್ದರಿAದ ನಗರಸಭೆ ಅಧಿಕಾರಿಗಳು ಎಂ.ಜಿ.ಮಾರುಕಟ್ಟೆಯ ಪ್ಲಾಸ್ಟಿಕ್ ಅಂಗಡಿಗಳ ಮೇಲೆ ದಾಳಿ ನಡೆಸಿ ೪೦ ಕೆ.ಜಿ ಪ್ಲಾಸ್ಟಿಕ್‌ನ್ನು ವಶಪಡಿಸಿಕೊಂಡು ಅಂಗಡಿ ಮಾಲೀಕನಿಗೆ ೪ ಸಾವಿರ ರೂಗಳ ದಂಡವನ್ನು ವಿಧಿಸಿದ್ದಾರೆ.

ನಗರದಲ್ಲಿ ಏಕ ಬಳಕೆಯ ಪ್ಲಾಸ್ಟಿಕ್ ನಿಷೇಧಿಸಿ ವರ್ಷಗಳೇ ಕಳೆದರೂ ಸಂಪೂರ್ಣ ಮತ್ತು ಕಟ್ಟುನಿಟ್ಟಾಗಿ ಜಾರಿಗೆ ಬಂದಿಲ್ಲ. ಎಷ್ಟೇ ಎಚ್ಚರಿಕೆ ನಿಡಿದರೂ ಅಂಗಡಿ ಮಾಲೀಕರು ಕದ್ದು ಮುಚ್ಚಿ ಪ್ಲಾಸ್ಟಿಕ್ ಬ್ಯಾಗ್ ಮತ್ತು ಇತರೆ ಏಕ ಬಳಕೆಯ ಪ್ಲಾಸ್ಟಿಕ್ ಮಾರಾಟವನ್ನು ಮಾಡುತ್ತಿದ್ದರು. ಈ ಹಿನ್ನಲೆಯಲ್ಲಿ ಪೌರಾಯುಕ್ತ ಪವನ್‌ಕುಮಾರ್ ಆದೇಶದ ಮೇರೆಗೆ ಆರೋಗ್ಯ ನಿರೀಕ್ಷಕರು ಮತ್ತು ಅಧಿಕಾರಿಗಳು ಪ್ಲಾಸ್ಟಿಕ್ ಅಂಗಡಿಗಳ ಮೇಲೆ ದಾಳಿ ನಡೆಸಿ ಏಕ ಬಳಕೆಯ ಪ್ಲಾಸ್ಟಿಕ್‌ನ್ನು ವಶಪಡಿಸಿಕೊಂಡಿದ್ದಾರೆ.

ಈ ಸಂದರ್ಭದಲ್ಲಿ ಮಾತನಾಡಿದ ಪೌರಾಯುಕ್ತ ಪವನ್‌ಕುಮಾರ್, ನಗರಸಭೆ ವ್ಯಾಪ್ತಿಯಲ್ಲಿ ನಿಷೇಧಿತ ಪ್ಲಾಸ್ಟಿಕ್ ಬಳಕೆಯನ್ನು ನಿಷೇಧಿಸಿದ್ದು, ಪ್ಲಾಸ್ಟಿಕ್ ನೀರಿನ ಬಾಟಲ್‌ಗಳನ್ನು ಬಳಸುವಂತಿಲ್ಲ, ಬದಲಾಗಿ ಸ್ಟೀಲ್, ಗಾಜಿನ ಲೋಟ ಅಥವಾ ಬಾಟಲ್‌ಗಳನ್ನು ಬಳಕೆ ಮಾಡಬಹುದಾಗಿದೆ.

ಪ್ಲಾಸ್ಟಿಕ್ ಬ್ಯಾಗ್ ಮತ್ತು ಆಹಾರವನ್ನು ಪ್ಯಾಕಿಂಗ್ ಮಾಡಿದ ಪ್ಲಾಸ್ಟಿಕ್ ಪರಿಕರಗಳನ್ನು ಬಳಸುವಂತಿಲ್ಲ, ಬದಲಾಗಿ ಊಟದ ತಟ್ಟೆ, ಡಬ್ಬ ಅಥವಾ ಕ್ಯಾರಿಯರ್‌ಗಳ ಮೂಲಕ ಊಟ ತಿಂಡಿಗಳನ್ನು ತರಿಸುವ ವ್ಯವಸ್ಥೆ ಮಾಡಬಹುದಾಗಿದೆ ಎಂದರು.

ಸಭೆ ಸಮಾರಂಭಗಳನ್ನು ಹಮ್ಮಿಕೊಂಡಾಗ ಪ್ಲಾಸ್ಟಿಕ್ ತಟ್ಟೆ, ಲೋಟ ಚಮಚ ಮತ್ತು ಇತರೆ ವಸ್ತುಗಳನ್ನು ಬಳಸುವಂತಿಲ್ಲ, ಬದಲಾಗಿ ಸ್ಟೀಲ್ ಕಟ್‌ಲೆರಿ ಬ್ಯಾಂಕ್ ತೆರದು ಅವಶ್ಯಕ ಸಾಮಾನುಗಳನ್ನು ಖರೀದಿಸಿ ಬಳಸಬೇಕು ಎಂದು ಸಾರ್ವಜನಿಕರಿಗೆ ಸೂಚನೆ ನಿಡಿದರು.

ಕಚೇರಿಗಳಲ್ಲಿ ಇತರೆ ನಿಷೇದಿತ ಏಕ ಬಳಕೆ ಪ್ಲಾಸ್ಟಿಕ್ ವಸ್ತುಗಳಾದ ಪ್ಲಾಸ್ಟಿಕ್ ಹೊಂದಿರುವ ಇಯರ್ ಬಡ್, ಬಲೂನ್‌ಗಳಿಗೆ ಪ್ಲಾಸ್ಟಿಕ್ ಸ್ಟಿಕ್‌ಗಳು, ಕ್ಯಾಂಡಿ ಸ್ಟಿಕ್‌ಗಳು, ಐಸ್ ಕ್ರೀಂ, ಪ್ಲಾಸ್ಟಿಕ್ ಸ್ಟಿಕ್‌ಗಳು, ಅಲಂಕಾರಿಕ ಕಾರ್ಯಗಳಿಗೆ ಬಳಸುವ ಥರ್ಮೋಕೋಲ್‌ಗಳನ್ನು ಉಪಯೊಗಿಸುವಂತಿಲ್ಲ ಎಂದರು.

ಸಭೆ ಸಮಾರಂಭಗಳಿಗೆ ಉಪಯೋಗಿಸಬಹುದಾದ ಪ್ಯಾಕಿಂಗ್ ಪ್ಲಾಸ್ಟಿಕ್, ಅದರಲ್ಲೂ ಸ್ವೀಟ್ ಬಾಕ್ಸ್ ಮತ್ತು ಆಹ್ವಾನ ಪತ್ರಿಕೆಗಳ ಮೇಲೆ, ಸಿಗರೇಟ್ ಪ್ಯಾಕ್‌ಗಳ ಮೇಲೆ ಬಳಸುವ ತೆಳುವಾದ ಪ್ಲಾಸ್ಟಿಕ್ ಹಾಳೆಗಳನ್ನು ಬಳಸುವಂತಿಲ್ಲ.

ಪ್ಲಾಸ್ಟಿಕ್ ಕ್ಯಾರಿ ಬ್ಯಾಗ್‌ಗಳು ಮತ್ತು ಥರ್ಮೋಕೋಲ್‌ನಿಂದ ಉತ್ಪತ್ತಿಯಾಗುವ ಮತ್ತು ಬಳಸುವ ವಸ್ತುಗಳ ಬಟ್ಟೆ ಚೀಲಗಳು ಮತ್ತು ಬಟ್ಟೆ ಬ್ಯಾನರ್‌ಗಳನ್ನು ಬಳಸಬಹುದಾಗಿದೆ ಎಂದರು. ಆರೋಗ್ಯ ನಿರೀಕ್ಷಕಿ ಗೌರಿ ಹಾಗೂ ನಗರಸಭೆ ಸಿಬ್ಬಂದಿ ದಾಳಿಯಲ್ಲಿ ಭಾಗವಹಿಸಿದ್ದರು.

Related Post

ಜೆಡಿಎಸ್‌ ಬಿಜೆಪಿ ಒಂದಾಗಿ ಸಂವಿಧಾನಕ್ಕೆ ಅಪಾಯ ಎಚ್ವತ್ತು ಕಾಂಗ್ರೆಸ್ ಬೆಂಬಲಿಸಿ: ಬೈರತಿ ಸುರೇಶ್
ವಚನ ಭ್ರಷ್ಟ ಬಿಜೆಪಿ ನೇತೃತ್ವದ ಎನ್.ಡಿ.ಎ. ಮೈತ್ರಿಕೂಟಕ್ಕೆ ಮತ ಕೇಳುವ ನೈತಿಕತೆ ಇಲ್ಲ-ಕೆ.ವಿ.ಗೌತಮ್
ಏಪ್ರಿಲ್ ೨೬ ರೊಳಗೆ ಎಕ್ಸಿಡಿ ಕಾರ್ಮಿಕರ ಬೇಡಿಕೆಗಳನ್ನು ಈಡೇರಿಸಲು ಆಗ್ರಹ ಇಲ್ಲವಾದಲ್ಲಿ ತೀವ್ರ ರೀತಿಯ ಹೋರಾಟ ನಡೆಸಲು ಕಾರ್ಮಿಕರ ಸಂಘಗಳ ಸಭೆಯಲ್ಲಿ ನಿರ್ಧಾರ

Leave a Reply

Your email address will not be published. Required fields are marked *

You missed

error: Content is protected !!