ಕೆಜಿಎಫ್
ಕೋಲಾರ
ತಾಲ್ಲೂಕು ಸುದ್ದಿ
ನಮ್ಮ ಕೋಲಾರ
ಪ್ರಪಂಚ
ಬಂಗಾರಪೇಟೆ
ಮಕ್ಕಳ ಸುದ್ದಿ
ಮಾಲೂರು
ಮುಳಬಾಗಿಲು
ರಾಜಕೀಯ
ರಾಜ್ಯ ಸುದ್ದಿ
ಶ್ರೀನಿವಾಸಪುರ
PLACE YOUR AD HERE AT LOWEST PRICE
ಬೆಂಗಳೂರು ಮಾಜಿ ಮೇಯರ್ ವಿಜಯ ಕುಮಾರ್ ಪುತ್ರ ಕೆ.ವಿ.ಗೌತಮ್ ಅವರನ್ನು ಕಾಂಗ್ರೆಸ್ ಪಕ್ಷದ ಅಧಿಕೃತ ಅಭ್ಯರ್ಥಿ ಎಂದು ಎಐಸಿಸಿ ಪ್ರಧಾನ ಕಾರ್ಯದರ್ಶಿ ಕೆ.ಸಿ.ವೇಣುಗೋಪಾಲ್ ಪ್ರಕಟಿಸಿದ್ದಾರೆ.
ಕೋಲಾರದಲ್ಲಿ ಮಾಜಿ ಸ್ಪೀಕರ್ ರಮೇಶ್ ಕುಮಾರ್ ಹಾಗೂ ಸಚಿವ ಕೆ.ಹೆಚ್.ಮುನಿಯಪ್ಪ ಗುಂಪುಗಳ ನಡುವಿನ ಗುಂಪುಗಾರಿಕೆ ಕಾರಣ ಟಿಕೆಟ್ ಹಂಚಿಕೆ ಕಗ್ಗಂಟಾಗಿತ್ತು. ಇಬ್ಬರ ಜಗಳ ಮೂರನೇ ವ್ಯಕ್ತಿಗೆ ಲಾಭ ಎಂಬಂತೆ ಕೋಲಾರಕ್ಕೆ ಹೊರಗಿನ ಹೊಸ ಮುಖಕ್ಕೆ ಅವಕಾಶ ನೀಡಲಾಗಿದೆ.
ಗೌತಮ್ ಪರಿಶಿಷ್ಟ ಜಾತಿ ಎಡಗೈ ಸಮಾಜಕ್ಕೆ ಸೇರಿದವರಾಗಿದ್ದು, ರಾಜ್ಯದ ಐದು ಕ್ಷೇತ್ರಗಳಲ್ಲಿ ಈಗಾಗಲೇ ಬಲಗೈ ಸಮುದಾಯಕ್ಕೆ ಮೂರು ಸ್ಥಾನಗಳನ್ನು ನೀಡಲಾಗಿದೆ.
ಇನ್ನುಳಿದ ಎರಡು ಕ್ಷೇತ್ರಗಳು ಎಡಗೈ ಸಮಾಜಕ್ಕೆ ನೀಡಬೇಕು ಎಂಬ ಕೂಗು ಇತ್ತು. ಈಗ ಕೋಲಾರ ಕ್ಷೇತ್ರಕ್ಕೆ ಎಡಗೈ ಸಮಾಜಕ್ಕೆ ನೀಡಲಾಗಿದ್ದು ಎರಡು ಸ್ಥಾನಗಳನ್ನು ನೀಡಿದಂತಾಗುತ್ತದೆ.