• Mon. Apr 29th, 2024

PLACE YOUR AD HERE AT LOWEST PRICE

ಬೆಂಗಳೂರು, ಮಾರ್ಚ್ 30, 2024: ಇಂದಿನ ಹೈಪರ್-ಕನೆಕ್ಟೆಡ್ ಜಗತ್ತಿನಲ್ಲಿ, ಡೇಟಾ ಅತೀ ಪ್ರಮುಖ ವಿಷಯವಾಗಿದೆ. ನಮ್ಮ ಜೀವನವು ತಂತ್ರಜ್ಞಾನದ ಮೇಲೆ ಹೆಚ್ಚು ಅವಲಂಬಿತವಾಗುತ್ತಿದ್ದಂತೆ, ನಮ್ಮ ಅಮೂಲ್ಯ ಡಿಜಿಟಲ್ ಸ್ವತ್ತುಗಳನ್ನು ರಕ್ಷಿಸುವ ಮಹತ್ವವನ್ನು ನಾವು ತಿಳಿದುಕೊಳ್ಳಬೇಕಿದೆ. ಮಾರ್ಚ್ 31 ರ ವಿಶ್ವ ಬ್ಯಾಕಪ್ ದಿನ ಇದರ ಮಹತ್ವವನ್ನು ಜ್ಞಾಪಿಸುತ್ತದೆ.

ಹಾರ್ಡ್‌ವೇರ್ ವೈಫಲ್ಯ, ಮಾಲ್‌ವೇರ್ ದಾಳಿಗಳು, ಆಕಸ್ಮಿಕ ಅಳಿಸುವಿಕೆ ಅಥವಾ ಇನ್ನಿತರ ಕಾರಣಗಳಿಂದ ಡೇಟಾ ನಷ್ಟವನ್ನು ತಡೆಗಟ್ಟಲು ನಿಯಮಿತವಾಗಿ ಡೇಟಾವನ್ನು ಬ್ಯಾಕಪ್ ಮಾಡುವ ಮಹತ್ವವನ್ನು ಒತ್ತಿಹೇಳುವುದು ವಿಶ್ವ ಬ್ಯಾಕಪ್ ದಿನದ ಪ್ರಾಥಮಿಕ ಗುರಿಯಾಗಿದೆ.

ಡೇಟಾ ಬ್ಯಾಕ್‌ ಅಪ್‌ನ ಪ್ರಾಮುಖ್ಯತೆಯನ್ನು ಉತ್ತೇಜಿಸಲು ಬಯಸಿದ ರೆಡ್ಡಿಟ್ (ರೆಡ್ಡಿಟ್ ಒಂದು ಸಾಮಾಜಿಕ ಸುದ್ದಿ ಸಂಗ್ರಹ, ವೆಬ್ ಕಂಟೆಂಟ್ ರೇಟಿಂಗ್ ಮತ್ತು ಚರ್ಚಾ ವೆಬ್‌ಸೈಟ್) ಬಳಕೆದಾರರಿಂದ 2011 ರಲ್ಲಿ ಈ ದಿನವನ್ನು ಮೊದಲ ಬಾರಿಗೆ ಆಚರಿಸಲಾಯಿತು. ಅಂದಿನಿಂದ, ಇದು ವಿಶ್ವಾದ್ಯಂತ ವ್ಯಕ್ತಿಗಳು, ವ್ಯವಹಾರಗಳು ಮತ್ತು ಸಂಸ್ಥೆಗಳಿಂದ ಮನ್ನಣೆ ಮತ್ತು ಬೆಂಬಲವನ್ನು ಗಳಿಸಿದೆ.

ಕುಟುಂಬದೊಂದಿಗೆ ಕಳೆದ ಸವಿನೆನಪುಗಳ ಫೋಟೋಗಳಿಂದ ಹಿಡಿದು ಕೆಲವು ಪ್ರಮುಖ ಬ್ಯುಸಿನೆಸ್ ದಾಖಲೆಗಳವರೆಗೆ  ಡಿಜಿಟಲ್ ಡೇಟಾದ ಮೇಲಿನ ಅವಲಂಬನೆಯು ಹೆಚ್ಚುತ್ತಲೇ ಇದೆ. ಈ ವರ್ಷ, ನಾವು ವಿಶ್ವ ಬ್ಯಾಕಪ್ ದಿನವನ್ನು ಆಚರಿಸುತ್ತಿರುವಾಗ, ‘ಸೆಕ್ಯೂರ್ ಐಸ್,ಸೈಬರ್‌ ಸುರಕ್ಷತೆ ಸಲಹಾ ಸೇವೆಗಳು ಮತ್ತು ಸೈಬರ್‌ ಸುರಕ್ಷತೆ ತರಬೇತಿ ಮತ್ತು ಶಿಕ್ಷಣವನ್ನು ಒದಗಿಸುವ ಉತ್ಪನ್ನಗಳ ಕಂಪನಿ   ಜನರು ತಮ್ಮ ಡೇಟಾವನ್ನು ಬ್ಯಾಕಪ್ ಮಾಡುವ ಪ್ರಾಮುಖ್ಯತೆಯನ್ನು ಅರ್ಥಮಾಡಿಕೊಳ್ಳಲು ಸಲಹೆ ನೀಡುತ್ತಿದೆ. ಇದು ಸಂಭಾವ್ಯ ಆಪತ್ತಿನಿಂದ ಬಳಕೆದಾರರನ್ನು ರಕ್ಷಿಸುವ ಗುರಿ ಹೊಂದಿದೆ.

ಬ್ಯಾಕ್‌ಅಪ್‌ನ ಪ್ರಾಮುಖ್ಯತೆಯನ್ನು ಒತ್ತಿಹೇಳುತ್ತಾ, ‘ಸೆಕ್ಯೂರ್ ಐಸ್ ನ ಸಿಇಒ ಕರ್ಮೇಂದ್ರ ಕೊಹ್ಲಿ, “ಇಂದು ಯಾವುದೇ ಡೇಟಾ ಹಿಂದೆಂದಿಗಿಂತಲೂ ಹೆಚ್ಚು ದುರ್ಬಲವಾಗಿದೆ. ದೃಢವಾದ ಬ್ಯಾಕಪ್ ತಂತ್ರಗಳನ್ನು ಅಳವಡಿಸುವುದು ಸೈಬರ್ ಬೆದರಿಕೆಗಳಿಂದ ಡೇಟಾ ನಷ್ಟವನ್ನು ರಕ್ಷಿಸಿಕೊಳ್ಳಲು ಇರುವ ಪ್ರಮುಖ ಕ್ರಮವಾಗಿ ಕಾರ್ಯನಿರ್ವಹಿಸುತ್ತದೆ ಎಂದಿದ್ದಾರೆ. 

ಸೆಕ್ಯೂರ್ ಐಸ್ ನ ಸಿಟಿಒ, ಸೀಮಂತ ಪಟ್ನಾಯಕ್  ಮಾತನಾಡಿ, “ವಿಶ್ವ ಬ್ಯಾಕಪ್ ದಿನವು ಡೇಟಾ ರಕ್ಷಣೆ, ಡೇಟಾ ಸುರಕ್ಷತೆ ಮತ್ತು ಡೇಟಾ ಸ್ಥಿತಿಸ್ಥಾಪಕತ್ವಕ್ಕೆ ಆದ್ಯತೆ ನೀಡಲು ವೇಗವರ್ಧಕವಾಗಿ ಕಾರ್ಯನಿರ್ವಹಿಸುತ್ತದೆ ಎಂದು ನಾನು ಭಾವಿಸುತ್ತೇನೆ. ಅಪಾಯಗಳನ್ನು ಕಡಿಮೆ ಮಾಡಲು ಮತ್ತು ಅಡೆತಡೆಯಿಲ್ಲದ ಕಾರ್ಯಾಚರಣೆಗಳನ್ನು ಖಚಿತಪಡಿಸಿಕೊಳ್ಳಲು ನಿಯಮಿತ ಬ್ಯಾಕ್ ಅಪ್‌ಗಳನ್ನು ಅಭ್ಯಾಸ ಮಾಡುವುದು ಮುಖ್ಯವಾಗಿದೆ ಎಂದು ಹೇಳಿದ್ದಾರೆ.

Related Post

ಜೆಡಿಎಸ್‌ ಬಿಜೆಪಿ ಒಂದಾಗಿ ಸಂವಿಧಾನಕ್ಕೆ ಅಪಾಯ ಎಚ್ವತ್ತು ಕಾಂಗ್ರೆಸ್ ಬೆಂಬಲಿಸಿ: ಬೈರತಿ ಸುರೇಶ್
ವಚನ ಭ್ರಷ್ಟ ಬಿಜೆಪಿ ನೇತೃತ್ವದ ಎನ್.ಡಿ.ಎ. ಮೈತ್ರಿಕೂಟಕ್ಕೆ ಮತ ಕೇಳುವ ನೈತಿಕತೆ ಇಲ್ಲ-ಕೆ.ವಿ.ಗೌತಮ್
ಏಪ್ರಿಲ್ ೨೬ ರೊಳಗೆ ಎಕ್ಸಿಡಿ ಕಾರ್ಮಿಕರ ಬೇಡಿಕೆಗಳನ್ನು ಈಡೇರಿಸಲು ಆಗ್ರಹ ಇಲ್ಲವಾದಲ್ಲಿ ತೀವ್ರ ರೀತಿಯ ಹೋರಾಟ ನಡೆಸಲು ಕಾರ್ಮಿಕರ ಸಂಘಗಳ ಸಭೆಯಲ್ಲಿ ನಿರ್ಧಾರ

Leave a Reply

Your email address will not be published. Required fields are marked *

You missed

error: Content is protected !!