• Fri. Oct 18th, 2024

ಬಂಗಾರಪೇಟೆ ಕೃಷಿಕ ಸಮಾಜ ಇತರೆ ತಾಲೂಕುಗಳಿಗೆ ಅನುಕರಣಿಯ: ಡಿ.ಎಲ್.ನಾಗರಾಜ್.

PLACE YOUR AD HERE AT LOWEST PRICE

ಬಂಗಾರಪೇಟೆ.ರಾಜ್ಯದಲ್ಲಿ ಉತ್ತಮ ಕೃಷಿಕ ಸಮಾಜವಾಗಿ ಹೊರಹೊಮ್ಮಿರುವ ಬಂಗಾರಪೇಟೆ ಕೃಷಿಕ ಸಮಾಜದ ಕಾರ‍್ಯವೈಕರಿಗಳು  ಇತರೆ ತಾಲೂಕು ಕೃಷಿಕ ಸಮಾಜಗಳಿಗೆ ಅನುಕರಣಿಯವಾಗಿದೆ ಎಂದು ಜಿಲ್ಲಾ ಕೃಷಿಕ ಸಮಾಜದ ಅಧ್ಯಕ್ಷ ಡಿ.ಎಲ್.ನಾಗರಾಜ್ ಅಭಿಪ್ರಾಯಪಟ್ಟರು.

ಪಟ್ಟಣದಲ್ಲಿ ನಿರ್ಮಾಣ ಮಾಡಿರುವ ಕೃಷಿಕ ಸಮಾಜದ ಕಟ್ಟಡವನ್ನು ಕೃಷಿಕ ಸಮಾಜದ ರಾಜ್ಯಧ್ಯಕ್ಷರಾದ ಪಾಪಣ್ಣ ನವರೊಂದಿಗೆ ಭೇಟಿ ನೀಡಿ ಪರಿಶೀಲಿಸಿದ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಅವರು ಈಗಾಗಲೇ ತಾಲೂಕು ಕೃಷಿಕ ಸಮಾಜದ ಉತ್ತಮ ಕೃಷಿಕ ಸಮಾಜ ಸಂಘ ಪ್ರಶಸ್ತಿತನ್ನು ಪಡೆದುಕೊಂಡಿದೆ ಎಂದರು.

ಈಗ ಜಿಲ್ಲೆಯಲ್ಲಿ ಎರಡನೇ ಉತ್ತಮ ಸಂಘವಾಗಿ ಪ್ರಶಸ್ತಿ ಪಡೆದುಕೊಂಡಿದೆ. ಸಂಘಕ್ಕೆ ದಿನ್ನೆಕೊತ್ತೂರು ರಾಜಾರೆಡ್ಡಿ ಅಧ್ಯಕ್ಷರಾದ ಬಳಿಕ ರೈತರಿಗೆ ಅನುಕೂಲವಾಗುವಂತ ಚಟುವಟಿಕೆಗಳನ್ನು ಕೈಗೊಂಡು ಸೈ ಎನಿಸಿಕೊಂಡಿದೆ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.

ಕ್ಷೇತ್ರೋತ್ಸವ ಜೊತೆಗೆ ಪ್ರಗತಿ ಪರ ರೈತರನ್ನು ಗುರುತಿಸಿ ಪ್ರೋತ್ಸಾಹಿ ಸಮಾಜಕ್ಕೆ ಪರಿಚಯಿಸುವುದು, ರೈತರಿಗೆ ಬೆಳೆ ಬಿತ್ತನೆ ಬಗ್ಗೆ ತಿಳುವಳಿಕೆ ಮೂಡಿಸುವುದು ಸೇರಿದಂತೆ ಬರೀ ರೈತರಿಗಾಗಿ ಮಾತ್ರ ಕೃಷಿಕ ಸಮಾಜ ಶ್ರಮಿಸದೆ ತಾಲೂಕಿನ ಗಡಿ ಭಾಗದಲ್ಲಿ ಕಾಡಾನೆಗಳ ಹಾವಳಿ ಮಿತಿಮೀರಿದ್ದು ಆನೆ ತುಳಿತಕ್ಕೆ ತುತ್ತಾಗಿ ಪ್ರಾಣ ಕಳೆದುಕೊಂಡಿರುವ ರೈತರಿಗೂ ತಲಾ ೨೫ಸಾವಿರ ರೂಗಳನ್ನು ನೀಡಿ ಮಾನವೀಯತೆಯನ್ನು ಮೆರೆದಿದೆ.

ಇದರ ಜೊತೆಗೆ ಪ್ರತಿಭಾವಂತ ವಿದ್ಯಾರ್ಥಿಗಳನ್ನು ಪ್ರೋತ್ಸಾಹಿಸಲು ಪ್ರತಿಭಾ ಪುರಸ್ಕಾರ ಸಹ ಮಾಡುತ್ತಿದೆ. ಮುಂದಿನ ದಿನಗಳಲ್ಲಿ ಪ್ರತಿಭಾ ಪುರಸ್ಕಾರವನ್ನು ಬಂಗಾರಪೇಟೆ ರೀತಿಯಲ್ಲಿ ಎಲ್ಲಾ ತಾಲೂಕುಗಳಿಗೆ ವಿಸ್ತರಿಸಲು ಚಿಂತನೆ ಮಾಡಲಾಗಿದೆ ಎಂದರು.

ರಾಜ್ಯ ಕೃಷಿಕ ಸಮಾಜದ ಅಧ್ಯಕ್ಷ ಪಾಪಣ್ಣಸ್ವಾಮಿ ಮಾತನಾಡಿ ೧೫ಜಿಲ್ಲೆಗಳಲ್ಲಿ ಪ್ರವಾಸ ಮಾಡಿ ಕೃಷಿಕ ಸಮಾಜದ ಕಾರ‍್ಯಚಟಿವಟಿಕೆಗಳನ್ನು ಪರಿಶೀಲಿಸಲಾಗುತ್ತಿದ್ದು, ಕೋಲಾರ ಜಿಲ್ಲೆಯಲ್ಲಿ ಕೃಷಿಕ ಸಮಾಜದ ಚಟುವಟಿಕೆಗಳು ಮಾದರಿಯಾಗಿದೆ ಎಂದು ಶ್ಲಾಘಿಸಿದರು.

ರೈತರ ಆರ್ಥಿಕಾಭಿವೃದ್ದಿಗೆ ಕೃಷಿ ಸಚಿವರೂ ಸಹ ಹೆಚ್ಚಿನ ಉತ್ತೇಜನ ನೀಡಿ ರೈತರ ಸಮಸ್ಯೆಗಳಿಗೆ ತ್ವರಿತವಾಗಿ ಪರಿಹಾರ ಸಿಗಲು ಮುಂದಾಗಿರುವುದರಿಂದ ರೈತರಿಗೆ ಕೃಷಿಯತ್ತ ಮುಖ ಮಾಡಲು ಶಕ್ತಿ ಬಂದಿದೆ ಎಂದರಲ್ಲದೆ ಕೃಷಿಕ ಸಮಾಜದ ಎಲ್ಲಾ ಜಿಲ್ಲೆಗಳಲ್ಲಿ ರೈತರ ಪರವಾಗಿ ಧ್ವನಿಯಾಗಿ ಇನ್ನೂ ಉತ್ತಮ ಕೆಲಸಗಳನ್ನು ಮಾಡಲು ಮುಂದಾಗಿದೆ ಎಂದರು.

ಈ ವೇಳೆ ಕೃಷಿಕ ಸಮಾಜದ ಮಾಜಿ ರಾಜ್ಯಾದ್ಯಕ್ಷರು ಹಾಗೂ ಕಟ್ಟಡ ಉಪ ಸಮಿತಿ ಅಧ್ಯಕ್ಷರಾದ ಬಿ.ಕೆ.ಮಂಜುನಾಥಗೌಡ, ತಾಲೂಕು ಕೃಷಿಕ ಸಮಾಜದ ಅಧ್ಯಕ್ಷರಾದ ದಿನ್ನೆಕೊತ್ತೂರು ರಾಜಾರೆಡ್ಡಿ, ಗೌರವಾಧ್ಯಕ್ಷರಾದ  ಕೆ.ಚಂದ್ರಾರೆಡ್ಡಿ, ಕೃಷಿ ಇಲಾಖೆಯ ಉಪ ನಿರ್ದೇಶಕರಾದ ಭವ್ಯರಾಣಿ, ಸಿ.ನಾಗರಾಜ್, ಸಹಾಯಕ ಕೃಷಿ ನಿರ್ಧೇಶಕರಾದ ಎಸ್.ಪ್ರತಿಭಾ, ಕೃಷಿಕ ಸಮಾಜದ ಉಪಾದ್ಯಕ್ಷರಾದ ಕೃಷ್ಣಪ್ಪ, ಖಜಾಮಚಿ ಪಾರ್ಥಸಾರಥಿ, ನಿರ್ಧೇಶಕರಾದ ಅಮರೇಶ್, ಬಿ.ವಿ.ಮುನಿಸ್ವಾಮಿ, ಅಶ್ವತಪ್ಪ, ಆರ್.ಜಯ ರಾಮರೆಡ್ಡಿ,ಬಿ.ಎಂ.ಶ್ರೀನಿವಾಸನಾಯ್ಡು, ಗೋವಿಂದಪ್ಪ, ಆರ್.ವಿಜಯ್, ಜಿ.ವೆಂಕಟೇಶಪ್ಪ, ಅನಿಲ್ ಕುಮಾರ್, ರವೀಂದ್ರ, ಮೊದಲಾದವರಿದ್ದರು.

Related Post

ನ್ಯಾಯಾಲಯದ ಆದೇಶ ಧಿಕ್ಕರಿಸಿ ಡಿಸಿ ಅಕ್ರಂಪಾಷಾರಿoದ ಸ್ವಜನಪಕ್ಷಪಾತ – ವಾಲ್ಮೀಕಿ ನಾಯಕ ಸಂಘಟನೆಗಳ ಆರೋಪ
ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷರ ರಾಜೀನಾಮೆ ಕೇಳಲು ಗುತ್ತಿಗೆದಾರರಿಗೆ ನೈತಿಕತೆ ಇಲ್ಲ – ಎಂ.ಎಸ್.ನಾರಾಯಣಸ್ವಾಮಿ
ಗಾಂಧೀವನದಲ್ಲೇ ಕನ್ನಡ ರಾಜ್ಯೋತ್ಸವ ಅದ್ದೂರಿ ಆಚರಣೆಗೆ ಕನ್ನಡ ಪರ ಸಂಘನೆಗಳ ಒಕ್ಕೂರಲಿನ ತೀರ್ಮಾನ

Leave a Reply

Your email address will not be published. Required fields are marked *

You missed

error: Content is protected !!