• Fri. Oct 18th, 2024

PLACE YOUR AD HERE AT LOWEST PRICE

ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಅವರು ಮಂಗಳವಾರ (ಜುಲೈ 23)ರಂದು ಲೋಕಸಭೆಯಲ್ಲಿ 2024-25ನೇ ಸಾಲಿನ ಬಜೆಟ್‌ ಮಂಡಿಸಿದ್ದಾರೆ. ನಿರೀಕ್ಷೆಯಂತೆ ತಮ್ಮ ಎನ್‌ಡಿಎ ಸರ್ಕಾರದ ಕಿಂಗ್‌ಮೇಕರ್‌ಗಳಾಗಿರುವ ನಿತೀಶ್ ಕುಮಾರ್ ಮತ್ತು ಎನ್‌ ಚಂದ್ರಬಾಬು ನಾಯ್ಡು ಅವರ ಬಿಹಾರ ಮತ್ತು ಆಂಧ್ರಪ್ರದೇಶಕ್ಕೆ ಹೆಚ್ಚಿನ ಒತ್ತು ಕೊಡಲಾಗಿದೆ. ಕರ್ನಾಟಕಕ್ಕೆ ಯಾವುದೇ ರೀತಿಯ ವಿಶೇಷ ಪ್ಯಾಕೇಜ್ ಲಭ್ಯವಾಗಿಲ್ಲ ಎಂಬುದು ಗಮನಾರ್ಹ. ಬಜೆಟ್‌ ಪ್ರಮುಖ ಅಂಶಗಳು ಇಲ್ಲಿವೆ;

  1. ಶಿಕ್ಷಣ, ಉದ್ಯೋಗ, ಕೌಶಲ್ಯಾಭಿವೃದ್ಧಿಗಾಗಿ48 ಲಕ್ಷ ಕೋಟಿ
  2. 5 ವರ್ಷಗಳಲ್ಲಿ1 ಕೋಟಿ ಯುವಕರಿಗೆ ಉದ್ಯೋಗ
  3. ವರ್ಷದಲ್ಲಿ 1 ಕೋಟಿ ರೈತರು ನೈಸರ್ಗಿಕ ಕೃಷಿ ವ್ಯಾಪ್ತಿಗೆ
  4. ಕೃಷಿ ಕ್ಷೇತ್ರಕ್ಕೆ5 ಲಕ್ಷ ಕೋಟಿ ರೂ. ಘೋಷಣೆ
  5. ಮೊದಲ ಬಾರಿಗೆ ಉದ್ಯೋಗ ಆರಂಭಿಸುವವರಿಗೆ ಸರ್ಕಾರದಿಂದ ಒಂದು ತಿಂಗಳ ವೇತನ (ಇಪಿಎಫ್ಒನಲ್ಲಿ ನೋಂದಣಿಯಾಗಿರಬೇಕು – ಗರಿಷ್ಠ 15 ಸಾವಿರ ರೂ.)
  6. ಉನ್ನತ ಶಿಕ್ಷಣಕ್ಕೆ ಸರ್ಕಾರದಿಂದ 10 ಲಕ್ಷ ರೂ. ವರೆಗೆ ಸಾಲ ಸೌಲಭ್ಯ
  7. ವಿಶಾಖಪಟ್ಟಣ ಚೆನ್ನೈ ಕೈಗಾರಿಕಾ ಕಾರಿಡಾರ್, ಹೈದರಾಬಾದ್ ಬೆಂಗಳೂರು ಕೈಗಾರಿಕಾ ಕಾರಿಡಾರ್
    26 ಸಾವಿರ ಕೋಟಿ ವೆಚ್ಚದಲ್ಲಿ ರೈಲು ಯೋಜನೆಗಳು (ಅಭಿವೃದ್ಧಿ-ವಿಸ್ತರಣೆ)
  8. ಬಿಹಾರದಲ್ಲಿ ನೂತನ ವಿಮಾನ ನಿಲ್ದಾಣ, ವೈದ್ಯಕೀಯ ಕಾಲೇಜು ನಿರ್ಮಾಣ, 26,000 ಕೋಟಿ ರೂ. ವೆಚ್ಚದಲ್ಲಿ ರಸ್ತೆ ಕಾಮಗಾರಿ, ಗಯಾದಲ್ಲಿ ಕೈಗಾರಿಕಾ ಅಭಿವೃದ್ಧಿ.
  9. ಆಂಧ್ರಪ್ರದೇಶಕ್ಕೆ 15,000 ಕೋಟಿ ರೂಪಾಯಿ ಆರ್ಥಿಕ ನೆರವು, ಪೋಲಾವರಂ ಪ್ರಾಜೆಕ್ಟ್ಗೆ ಕೇಂದ್ರ ಸರ್ಕಾರದಿಂದ ಅನುದಾನ
  10. ಬಿಹಾರ, ಜಾರ್ಖಂಡ್, ಪಶ್ಚಿಮ ಬಂಗಾಳ, ಒಡಿಶಾ ಮತ್ತು ಆಂಧ್ರಪ್ರದೇಶಗಳ ಸರ್ವತೋಮುಖ ಅಭಿವೃದ್ಧಿಗಾಗಿ ಪೂರ್ವೋದಯ ಯೋಜನೆ
  11. ಐದು ವರ್ಷಗಳಲ್ಲಿ ಟಾಪ್-500 ಕಂಪನಿಗಳಲ್ಲಿ ಒಂದು ಕೋಟಿ ಯುವಕರಿಗೆ 12 ತಿಂಗಳು ಇಂಟರ್ನ್‌ಶಿಪ್ (5,000ರಿಂದ 6,000 ರೂ. ಸಹಾಯಧನ)
  12. ಕುಟುಂಬ ಪಿಂಚಣಿ ಮೇಲಿನ ವಿನಾಯಿತಿ ಮಿತಿಯನ್ನು 15 ಸಾವಿರದಿಂದ 25 ಸಾವಿರಕ್ಕೆ ಹೆಚ್ಚಳ
  13. ಪಿಎಂ ಆವಾಸ್ ಯೋಜನೆಯಡಿ 3 ಕೋಟಿ ಮನೆಗಳ ನಿರ್ಮಾಣ ಗುರಿ
  14. ಮಹಿಳೆಯರು ಮತ್ತು ಹೆಣ್ಣುಮಕ್ಕಳ ಪರವಾದ ಯೋಜನೆಗಳಿಗೆ ಸರ್ಕಾರ 3 ಲಕ್ಷ ಕೋಟಿ ರೂ. ಅನುದಾನ
  15. ದೇಶದಲ್ಲಿ 12 ಹೊಸ ಇಂಡಸ್ಟ್ರಿಯಲ್ ಪಾರ್ಕ್ಗಳ ನಿರ್ಮಾಣ
  16. ಮುದ್ರಾ ಯೋಜನೆಯಡಿ ಸಾಲ 10 ಲಕ್ಷ ರೂ.ನಿಂದ 20 ಲಕ್ಷ ರೂ.ಗೆ ಏರಿಕೆ
  17. ಗ್ರಾಮೀಣಾವೃದ್ಧಿ ಪ್ರದೇಶದ ಅಭಿವೃದ್ಧಿಗೆ66 ಲಕ್ಷ ಕೋಟಿ ರೂ. ಅನುದಾನ
  18. ಪ್ರಧಾನ ಮಂತ್ರಿ ಸೂರ್ಯಘರ್ ಉಚಿತ ವಿದ್ಯುತ್ ಯೋಜನೆ’ಯನ್ನು ಪ್ರಾರಂಭ – 1 ಕೋಟಿ ಕುಟುಂಬಗಳು 300 ಯೂನಿಟ್ ವಿದ್ಯುತ್ ಪಡೆಯುವಂತೆ ಕ್ರಮ
  19. ಎನ್‌ಟಿಪಿಸಿ ಮತ್ತು ಬಿಎಚ್‌ಇಎಲ್ ನಡುವಿನ ಜಂಟಿ ಉದ್ಯಮದ ಮೂಲಕತಂತ್ರಜ್ಞಾನ ಬಳಸಿಕೊಂಡು 100 MW ವಾಣಿಜ್ಯ ಉಷ್ಣ ವಿದ್ಯುತ್ ಸ್ಥಾವರ ಸ್ಥಾಪನೆ
  20. ಮೊಬೈಲ್ ಹಾಗೂ ಚಾರ್ಜರ್ಗಳ ಮೇಲಿನ ತೆರಿಗೆ ಇಳಿಕೆ
  21. ಚಿನ್ನ, ಬೆಳ್ಳಿ ಮೇಲಿನ ಕಸ್ಟಮ್ಸ್ ತೆರಿಗೆ ಶೇ 6ರಷ್ಟು ಕಡಿತ
  22. ಕ್ಯಾನ್ಸರ್ ಔಷಧಗಳಾದ ಎಕ್ಸ್-ರೇ ಟ್ಯೂಬ್ ಮತ್ತು ಫ್ಲಾಟ್ ಪ್ಯಾನಲ್ ಡಿಟೆಕ್ಟರ್‌ಗಳ ಮೇಲಿನ ಕಸ್ಟಮ್ಸ್ ಸುಂಕ ಶೇ.6 ರಷ್ಟು ಮತ್ತು ಪ್ಲಾಟಿನಂ ಮೇಲೆ ಶೇ.6.4ರಷ್ಟು ಕಡಿತ
  23. ವಿದೇಶಿ ಕಂಪನಿಗಳ ಮೇಲಿನ ಕಾರ್ಪೊರೇಟ್ ತೆರಿಗೆ ದರವನ್ನು 40% ರಿಂದ 35%ಗೆ ಇಳಿಕೆ
  24. ನೈಸರ್ಗಿಕ ವಿಕೋಪದಿಂದ ಬಳಲುತ್ತಿರುವ ಉತ್ತರಾಖಂಡ, ಸಿಕ್ಕಿಂ, ಹಿಮಾಚಲ ಪ್ರದೇಶಕ್ಕೆ ಕೇಂದ್ರದಿಂದ ನೆರವು
  25. ಮೂಲಭೂತ ಅಭಿವೃದ್ಧಿಗೆ ರಾಜ್ಯಗಳನ್ನು ಬೆಂಬಲಿಸಲು5 ಲಕ್ಷ ಕೋಟಿ ದೀರ್ಘಾವಧಿಯ ಬಡ್ಡಿ ರಹಿತ ಸಾಲ
  26. 100 ನಗರಗಳಲ್ಲಿ ಕೈಗಾರಿಕಾ ಪಾರ್ಕ್ಗಳ ಉತ್ತೇಜನ
  27. NPS (ಪಿಂಚಣಿ ಯೋಜನೆ)ಗೆ ಉದ್ಯೋಗದಾತರ ಕೊಡುಗೆ ಮಿತಿ 10%ನಿಂದ 14%ಗೆ ಏರಿಕೆ
  28. ಆದಾಯ ತೆರಿಗೆ: 0-3 ಲಕ್ಷ ರೂ.ವರೆಗೆ ತೆರಿಗೆ ವಿನಾಯತಿ, 3 ರಿಂದ 7 ಲಕ್ಷ ರೂ.ವರೆಗೆ 5% ತೆರಿಗೆ, 7 ರಿಂದ 10 ಲಕ್ಷ ರೂ. ವರೆಗೆ 10% ತೆರಿಗೆ, 10-12 ಲಕ್ಷ ರೂ.ವರೆಗೆ 15% ತೆರಿಗೆ, 12-15 ಲಕ್ಷ ರೂ.ವರೆಗೆ 20%, 15 ಲಕ್ಷ ರೂ. ಮೇಲ್ಪಟ್ಟು 30% ತೆರಿಗೆ.

Related Post

ನ್ಯಾಯಾಲಯದ ಆದೇಶ ಧಿಕ್ಕರಿಸಿ ಡಿಸಿ ಅಕ್ರಂಪಾಷಾರಿoದ ಸ್ವಜನಪಕ್ಷಪಾತ – ವಾಲ್ಮೀಕಿ ನಾಯಕ ಸಂಘಟನೆಗಳ ಆರೋಪ
ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷರ ರಾಜೀನಾಮೆ ಕೇಳಲು ಗುತ್ತಿಗೆದಾರರಿಗೆ ನೈತಿಕತೆ ಇಲ್ಲ – ಎಂ.ಎಸ್.ನಾರಾಯಣಸ್ವಾಮಿ
ಗಾಂಧೀವನದಲ್ಲೇ ಕನ್ನಡ ರಾಜ್ಯೋತ್ಸವ ಅದ್ದೂರಿ ಆಚರಣೆಗೆ ಕನ್ನಡ ಪರ ಸಂಘನೆಗಳ ಒಕ್ಕೂರಲಿನ ತೀರ್ಮಾನ

Leave a Reply

Your email address will not be published. Required fields are marked *

You missed

error: Content is protected !!