• Fri. Oct 18th, 2024

PLACE YOUR AD HERE AT LOWEST PRICE

ಬೆರಳ ತುದಿಯಲ್ಲಿಯೆ ಎಲ್ಲಾ ಮಾಹಿತಿ ಸಿಗುವಂತಿದ್ದರು ಯುವ ಜನರಿಗೆ ಒಳ್ಳೆಯ ತಿಳುವಳಿಕೆ ತಿಳಿಯಲಡ್ಡಿಯಾಗಿವೆ ಆನ್ ಲೈನ್ ಗೇಮ್ ಗಳು, ಸಾಮಾಜಿಕ ಜಾಲತಾಣಗಳಲ್ಲಿನ ಫೋಟೋ ರೀಲ್ಸ್ ಗಳು. ಇಂತಹ ಸಂದರ್ಭದಲ್ಲಿ ನಾವು ದ್ರಾವಿಡರು ಎಂಬ ಅರಿವು ಮೂಡಿಸಲು ಕಂಡುಕೊಂಡ ಉಪಾಯವೆ ನಾವು Dravida ಕನ್ನಡಿಗರು ಚಳುವಳಿ.

ಮೊದಲಿಗೆ ಈ ಅರಿವು ಏಕೆ ಬೇಕು? ಅನ್ನುವವರಿಗೆ ಉತ್ತರವೇನೆಂದರೆ ಸಂಸ್ಕೃತ ಎಲ್ಲಾ ಭಾಷೆಗಳ ತಾಯಿ ಎಂಬ ವ್ಯವಸ್ಥಿತ ಪಿತೂರಿಯಿಂದ ಪಾರಾಗಲು ಮತ್ತು ನಮ್ಮ ನಿಜ ಮೂಲ ತಿಳಿಯಲು. ಇಲ್ಲಿ ನಮ್ಮ ಎಂಬುವುದು ಧಾರ್ಮಿಕ ಅಲ್ಪಸಂಖ್ಯಾತರು, ಒಕ್ಕಲಿಗರು, ಲಿಂಗಾಯತರು ಇತರೆ ಹಿಂದುಳಿದ ಜಾತಿಯವರು ಮತ್ತು ಎಸ್ಸೀ ಎಸ್ಟೀ ಎಲ್ಲರನ್ನೂ ಒಳಗೊಳ್ಳುತ್ತದೆ.

ಸಂಸ್ಕೃತದ ಮೂಲಕ ವರ್ಣಾಶ್ರಮ, ಮೇಲು ಕೀಳು, ಅಸ್ಪೃಶ್ಯತೆ ಅಸಮಾನತೆ ಎಲ್ಲವೂ ಬಂದು ಬಗೆ ಬಗೆಯಾಗಿ ನಮ್ಮನ್ನೆಲ್ಲ ಬೇರ್ಪಡಿಸಿ ಸಾವಿರಾರು ವರ್ಷಗಳಿಂದ ಅಮಾನವೀಯವಾಗಿ ಕಿತ್ತಾಡುತ್ತಿದ್ದೇವೆ ನಾವೇ ಬೇರೆ ನೀವೇ ಬೇರೆ ಅಂತೆಲ್ಲ ಜೊತೆಗೆ ಈ ಬಗೆಯ ಬದುಕು ರೂಡಿ ಕೂಡ ಆಗಿ ಹೋಗಿರುವುದರಿಂದ  ನಮ್ಮ ಮೂಲ ಒಂದೇ ಅದೇ ದ್ರಾವಿಡ ಎಂಬ ಅರಿವು ಇವೆಲ್ಲವನ್ನೂ ಮೀರಿ ಮಾನವೀಯ ಬದುಕ ಬದುಕಲು ದಾರಿ ಮಾಡಿಕೊಡುತ್ತದೆ.

ನಾವೆಲ್ಲರೂ ದ್ರಾವಿಡರು ಎಂಬ ಅರಿವಾದ ಮೇಲೆ ಬೇರೆ ಅವರಿಗೆ ಅರಿವು ಮೂಡಿಸುತ್ತಾ ಸಾಗುವಾಗ ತಿಳಿದಿದ್ದು ಏನೆಂದರೆ ನಾವು ಒಕ್ಕೂಟ ವ್ಯವಸ್ಥೆಯೊಳಗಿದ್ದೇವೆ ಅದರಿಂದ ನಮ್ಮ ನುಡಿ ನಮ್ಮ ನಾಡನ್ನು ಅದುಮುತ್ತಿದ್ದಾರೆ ಸಂಸ್ಕೃತದ ಮತ್ತೊಂದು ರೂಪವಾದ ಹಿಂದಿಯಿಂದ ಹಿಂಬದಿಯಿಂದ ಎಂಬ ತಿಳಿವು. ಇದರ ಪರಿಣಾಮ ನಾವೆಲ್ಲರೂ ದ್ರಾವಿಡರು ಎಂಬ ಅರಿವು ಮೂಡಿಸುವುದರ ಜೊತೆಗೆ ಈ ಒಕ್ಕೂಟ ವ್ಯವಸ್ಥೆಯಲ್ಲಿ ನಮ್ಮ ರಾಜ್ಯಕ್ಕೆ ಸ್ವಾಯತ್ತತೆ ಕೂಡ ಪಡೆಯಬೇಕೆಂಬ ಎಚ್ಚರಿಕೆ.

ಈ ಎಚ್ಚರಿಕೆಯ ಆಲೋಚನೆ ಇನ್ನೂ ಬಲಿತು ಇದು ಒಂದು ರಾಜ್ಯದಿಂದ ಸಾಧ್ಯವಾಗುವುದಿಲ್ಲ ಆದ್ದರಿಂದ ಅಕ್ಕ ಪಕ್ಕದ ಇತರೆ ದ್ರಾವಿಡ ನುಡಿ ರಾಜ್ಯಗಳ ಜೊತೆ ನಡೆ ನುಡಿ ಇಡಬೇಕು ಎಂಬ ಉಪಾಯ. ಆಗ ಶುರುವಾಗಿದ್ದೆ Dravida City Movement ಒಂದು ಸಿಟಿ ಕಟ್ಟಬೇಕು ಅದು ದ್ರಾವಿಡ ಯುನಿವರ್ಸಿಟಿ ಸುತ್ತಲೂ ಇರಬೇಕು ಇಲ್ಲಿ ಸುಪ್ರೀಂ ಕೋರ್ಟ್, ಇಂಡಿಯಾ ಒಕ್ಕೂಟದ ಪಾರ್ಲಿಮೆಂಟ್ ಮತ್ತು ಒಕ್ಕೂಟ ವ್ಯವಸ್ಥೆಯ ಇತರೆ ಕಚೇರಿಗಳು ಈ ಸಿಟಿಯಲ್ಲಿ ಇರಬೇಕು ಇದಕ್ಕೆ ದ್ರಾವಿಡ ಸಿಟಿ ಅಂತ ಹೆಸರು ಇಡಬೇಕು ಎಂಬ ಮತ್ತೊಂದು ಉಪಾಯ.

ಈ ಉಪಾಯಗಳನ್ನು ಈಗಾಗಲೇ ಈ ವ್ಯವಸ್ಥೆಯಲ್ಲಿ ಲೂಟಿ ಹೊಡೆಯುತ್ತಿರುವವರು ಅಪಾಯವಾಗಿ ಕಾಣುತ್ತಿದೆ ಎಂದಾಗಲೆ ಇವು ಸರಿಯಾದ ಉಪಾಯಗಳು ಜನ ಸಾಮಾನ್ಯರಿಗೆ ಸಮಾನತೆ ತರುವ ಉಪಾಯಗಳು ಎಂಬುದು ಖಾತ್ರಿಯಾಯಿತು.

ಲಿಪಿ ಇರುವ 4 ಪ್ರಮುಖ ದ್ರಾವಿಡ ನುಡಿ ಮಂದಿಯನ್ನು ಒಂದು ಗುಂಪಾಗಿಸಿ ಪ್ರಜಾಪ್ರಭುತ್ವದ ಹಾದಿಯಲ್ಲಿಯೆ ಒಕ್ಕೂಟ ವ್ಯವಸ್ಥೆಯ ಮೇಲೆ ಒತ್ತಡ ಹೇರಲು ಪ್ರತಿ ವರ್ಷ ಜುಲೈ ಕಡೆಯ ಶನಿವಾರ, ಭಾನುವಾರ ದ್ರಾವಿಡ ಗೆಳೆತನ ದಿನವನ್ನು ದ್ರಾವಿಡ ಯುನಿವರ್ಸಿಟಿ ಬಳಿ ಆಚರಿಸುತ್ತಾ ಬರಲಾಗುತ್ತಿದೆ ಇದರ ಜೊತೆಗೆ ಸಾಧ್ಯವಾದಾಗಲೆಲ್ಲ ವಿಚಾರ ತಿಳಿಯಲು ಹಿಂದೇಟಾಕಿ ಮೊಬೈಲ್ ಅಲ್ಲಿ ಮುಳುಗಿರುವ ಯುವ ಜನರನ್ನು ಒನ್ ಡೇ ಟ್ರಿಪ್ ಎಂದು ಕರೆದುಕೊಂಡು ಬಂದು ಒಂದು ಸಾವಿರ ಎಕರೆಯಲ್ಲಿರುವ ಸುಂದರ ದ್ರಾವಿಡ ಯುನಿವರ್ಸಿಟಿ ಸುತ್ತಿಸುವುದು ಮತ್ತು ಕರ್ನಾಟಕ-ಆಂಧ್ರಪ್ರದೇಶ-ತಮಿಳುನಾಡು ಮೂರು ರಾಜ್ಯ ಸೇರುವ ಬೆಟ್ಟವನ್ನು ಚಾರಣ ಮಾಡಿಸಿ ನಾವು ದ್ರಾವಿಡರು ಎಂಬ ಅರಿವು ಪರಿಚಯಿಸಲಾಗುತ್ತಿದೆ.

ಈ ವರ್ಷ ಇದೇ ಜುಲೈ 27-28 ರಂದು ದ್ರಾವಿಡ ಗೆಳೆತನವಿದೆ ನೀವು ಬನ್ನಿ. 4 ನುಡಿಯವರು 6 ರಾಜ್ಯದವರು ಅಂದರೆ ಕರ್ನಾಟಕ, ಆಂಧ್ರಪ್ರದೇಶ, ತಮಿಳುನಾಡು, ಕೇರಳ, ತೆಲಂಗಾಣ, ಪುದುಚೇರಿ ರಾಜ್ಯದವರೊಂದಿಗೆ ಗೆಳೆತನ ಬೆಳೆಸಿಕೊಳ್ಳಿ, ಕನ್ನಡನಾಡು ನುಡಿ ಮತ್ತು ಎಲ್ಲಾ ರೀತಿಯ ಸಮಾನತೆ ಬೆಳೆಸಲು ಕಾರಣಕರ್ತರಾಗಿ.

ನಾವು Dravida ಕನ್ನಡಿಗರು ಚಳುವಳಿ ಹೆಸರಿನಲ್ಲಿ ಕರ್ನಾಟಕದಲ್ಲಿ ಮತ್ತು Dravida City Movement ಹೆಸರಿನಲ್ಲಿ ತೆಂಕಣ ಇಂಡಿಯಾ ಪೂರ್ತಿ ನಾವು ಮಾಡುತ್ತಿರೋದು ಇಷ್ಟೇ…..

1)ನಾವು Dravida ರು ಎಂಬ ಅರಿವು ಮೂಡಿಸುವುದು.

2)ಪ್ರಜಾಪ್ರಭುತ್ವದ ಹಾದಿಯಲ್ಲಿ Dravida ನುಡಿ ಆಧಾರಿತ ರಾಜ್ಯಗಳ ಸ್ವಾಯತ್ತತೆಗೆ ಕೆಲಸ ಮಾಡುವುದು.

3)ಎಲ್ಲಾ ರೀತಿಯ ಸಮಾನತೆಗೆ ಕೆಲಸ ಮಾಡುವುದು.

ಅಬಿ ಒಕ್ಕಲಿಗ.

ಚಳುವಳಿಯ ಮುಂದಾಳು

ph-9482133984

Related Post

ನ್ಯಾಯಾಲಯದ ಆದೇಶ ಧಿಕ್ಕರಿಸಿ ಡಿಸಿ ಅಕ್ರಂಪಾಷಾರಿoದ ಸ್ವಜನಪಕ್ಷಪಾತ – ವಾಲ್ಮೀಕಿ ನಾಯಕ ಸಂಘಟನೆಗಳ ಆರೋಪ
ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷರ ರಾಜೀನಾಮೆ ಕೇಳಲು ಗುತ್ತಿಗೆದಾರರಿಗೆ ನೈತಿಕತೆ ಇಲ್ಲ – ಎಂ.ಎಸ್.ನಾರಾಯಣಸ್ವಾಮಿ
ಗಾಂಧೀವನದಲ್ಲೇ ಕನ್ನಡ ರಾಜ್ಯೋತ್ಸವ ಅದ್ದೂರಿ ಆಚರಣೆಗೆ ಕನ್ನಡ ಪರ ಸಂಘನೆಗಳ ಒಕ್ಕೂರಲಿನ ತೀರ್ಮಾನ

Leave a Reply

Your email address will not be published. Required fields are marked *

You missed

error: Content is protected !!