• Fri. Oct 18th, 2024

PLACE YOUR AD HERE AT LOWEST PRICE

ಕೋಲಾರ, ಅಕ್ಟೋಬರ್.05 : ಹಲವು ವರ್ಷಗಳಿಂದ ವಿವಾದಕ್ಕೆ ಒಳಗಾಗಿದ್ದ ಚಲುವನಹಳ್ಳಿ ಗ್ರಾಮದ ದಲಿತರ ನಿವೇಶನಗಳ ಜಾಗವನ್ನು ಪಂಚಾಯತ್ ರಾಜ್ ಇಲಾಖೆ ಇಂಜಿನಿಯರ್ ಗಳು ಅಳತೆ ಮಾಡಿ ಗುರುತಿಸಿ ಕೊಟ್ಟಿದ್ದಾರೆ.

ತಾಲ್ಲೂಕಿನ ಚಲುವನಹಳ್ಳಿ ಗ್ರಾಮದ ನಿವೇಶನ ರಹಿತ 20 ದಲಿತ ಕುಟುಂಬಗಳಿಗೆ 1976ರಲ್ಲಿ ಆಗಿನ ವಿಭಾಗೀಯ ಕಂದಾಯ ಅಧಿಕಾರಿ ಹಾಗೂ ಉಪವಿಭಾಗಾಧಿಕಾರಿ ಚಲುವನಹಳ್ಳಿಯ ಸರ್ವೆ ನಂಬರ್ 4ರಲ್ಲಿ ಒಂದು ಎಕರೆ ಭೂಮಿಯನ್ನು ಗ್ರಾಮಸ್ಥರಿಂದಲೇ ಕೊಂಡುಕೊಳ್ಳುವ ಮೂಲಕ ಪ್ರತಿ ಫಲಾನುಭವಿಗೆ 1200 ಚದರ ಅಡಿ ವಿಸ್ತೀರ್ಣದಲ್ಲಿ ನಿವೇಶನ ಹಂಚಿಕೆ ಮಾಡಲು ತೀರ್ಮಾನಿಸಿತ್ತು. ಅದರಂತೆ 25/08/1988 ರಂದು ಎಲ್ಲಾ ಫಲಾನುಭವಿಗಳಿಗೆ ಹಕ್ಕುಪತ್ರ ವಿತರಣೆ ಮಾಡಲಾಯಿತು. ಆದರೆ, ಪಲಾನುಭವಿಗಳು ತಮ್ಮ ತಮ್ಮ ನಿವೇಶನಗಳಲ್ಲಿ ಸ್ವಾಧೀನಾನುಭವಕ್ಕೆ ಹೋಗುವ ಮೊದಲೇ ಅದೇ ಗ್ರಾಮದ ದೊಡ್ಡ ಬೈಚಪ್ಪ ಎಂಬುವವರು ನ್ಯಾಯಾಲಯದ ಮೆಟ್ಟಿಲು ಹತ್ತಿ ಯಾರೊಬ್ಬರೂ ಸ್ವಾಧೀನ ಹೊಂದಲು ಬಿಡದೆ ತಡೆದಿದ್ದರು.

ಸದರಿ ಪ್ರಕರಣ ತಾಲ್ಲೂಕು ನ್ಯಾಯಾಲಯ, ಜಿಲ್ಲಾ ನ್ಯಾಯಾಲಯ, ಹೈಕೋರ್ಟ್ ಸೇರಿದಂತೆ ಒಟ್ಟು ಆರು ನ್ಯಾಯಾಲಯಗಳಲ್ಲಿ ವಾದ ವಿವಾದಗಳು ನಡೆದು ಅಂತಿಮವಾಗಿ 2019ರಲ್ಲಿ ಹೈಕೋರ್ಟ್ ಅಂತಿಮ ತೀರ್ಪು ಫಲಾನುಭವಿಗಳ ಪರವಾಗಿ ನೀಡಿತು. ಈ ಹಿನ್ನೆಲೆಯಲ್ಲಿ ತಾಲ್ಲೂಕು ಆಡಳಿತ ಫಲಾನುಭವಿಗಳು ತಮ್ಮ ನಿವೇಶನಗಳಿಗೆ ಪ್ರವೇಶ ಮಾಡಲು, ಪಂಚಾಯತ್ ರಾಜ್ ಇಲಾಖೆ ಇಂಜಿನಿಯರ್ ನಾಗರಾಜ್ ಅವರನ್ನು ಅಳತೆ ಮಾಡಿ ಮಾರ್ಕ್ ಮಾಡಲು ನಿಯೋಜನೆ ಮಾಡಿತ್ತು. ಅದರಂತೆಯೇ ಶನಿವಾರ ಬೆಳಗ್ಗೆ ವಿವಾದಿತ ನಿವೇಶನಗಳ ಜಾಗವನ್ನು ಗ್ರಾಮಸ್ಥರ ಸಮ್ಮುಖದಲ್ಲಿ ಅಳತೆ ಮಾಡಿಸಿ 20 ನಿವೇಶನಗಳನ್ನು ಗುರುತಿಸಿ ಕೊಟ್ಟಿದ್ದಾರೆ.

ಈ 20 ನಿವೇಶನಗಳ ಪ್ರಕರಣ ನ್ಯಾಯಾಲಯದಲ್ಲಿ ಇದ್ದಾಗ ಕೆಲವರು ಜಮೀನಿನಲ್ಲಿ ಅತಿಕ್ರಮ ಪ್ರವೇಶ ಮಾಡಲು ಪ್ರಯತ್ನಿಸಿದಾಗ,  ಹೈಕೋರ್ಟ್ ಅಂತಿಮ ತೀರ್ಪು ಪ್ರಕಟ ಮಾಡುವ ತನಕ ದಲಿತ ‌ಸಂಘರ್ಷ ಸಮಿತಿ, ಮಾದಿಗ ದಂಡೋರ ಸಂಘಟನೆಗಳು ನಿವೇಶನ ರಹಿತ ದಲಿತ ಕುಟುಂಬಗಳ ಪರವಾಗಿ ಹೋರಾಟ ನಡೆಸುವ ಮೂಲಕ ಸದರಿ ಭೂಮಿಯನ್ನು ರಕ್ಷಣೆ ಮಾಡಿಕೊಳ್ಳುವಲ್ಲಿ ಯಶಸ್ಸು ಸಾಧಿಸಿದ್ದಾರೆ.

ಮೊದಲಿಗೆ ಈ ಹೋರಾಟವನ್ನು ದಸಂಸ ಮುಖಂಡ ವಕ್ಕಲೇರಿ ರಾಜಪ್ಪ, ಹಾರೋಹಳ್ಳಿ ರವಿ, ವರದೇನಹಳ್ಳಿ ವೆಂಕಟೇಶ್, ಸಿ‌.ವಿ.ನಾಗರಾಜ್, ಬೀರಮಾನಹಳ್ಳಿ ವಿಜಯಕುಮಾರ್, ಆಂಜಿನಪ್ಪ, ಲಕ್ಷ್ಮಿಸಾಗರ ರಾಜಣ್ಣ‌ ಮೊದಲಾದವರು ಒಂದು ತಾರ್ಕಿಕ ಅಂತ್ಯ ಕಾಣುವ ವರೆಗೆ ಹೋರಾಟ ನಡೆಸಿತು, ತದನಂತರ ಈ ಹೋರಾಟಕ್ಕೆ ಮಾದಿಗ ದಂಡೋರ ಜಿಲ್ಲಾ ಅಧ್ಯಕ್ಷ ಆಲೇರಿ ಮುನಿರಾಜು, ಹಾರೋಹಳ್ಳಿ ರವಿಕುಮಾರ್ (ದೇವುಡು), ಡಿ.ಎನ್.ಆಂಜಿನಪ್ಪ, ಎಸ್.ಪಿಳ್ಳಪ್ಪ  ದ.ಸಂ.ಸ. ದ  ಹೂಹಳ್ಳಿ ನಾಗೇಶ್ ಹೋರಾಟದ ಅಂಗಳಕ್ಕೆ ಪ್ರವೇಶ ಮಾಡಿದರು. ಒಟ್ಟಾರೆ ಹೋರಾಟದಲ್ಲಿ ನಿವೇಶನ ರಹಿತ ದಲಿತ ಕುಟುಂಬಗಳಿಗೆ ನ್ಯಾಯಾಲಯದಲ್ಲಿ ಜಯ ಲಭಿಸಿತು. 
ನಿವೇಶನಗಳ ಗುರುತು ಮಾಡುವ ಸಂದರ್ಭದಲ್ಲಿ ಚಲುವನಹಳ್ಳಿ ಗ್ರಾಮದ ಮುಖಂಡರಾದ ಮುನಿಯಪ್ಪ, ತಿಪ್ಪರಾಜು, ಮುನಿಯಪ್ಪ, ಚಂದ್ರಶೇಖರ್, ತಿಮ್ಮರಾಜು ಮುಂತಾದವರು ಉಪಸ್ಥಿತರಿದ್ದರು

Related Post

ನ್ಯಾಯಾಲಯದ ಆದೇಶ ಧಿಕ್ಕರಿಸಿ ಡಿಸಿ ಅಕ್ರಂಪಾಷಾರಿoದ ಸ್ವಜನಪಕ್ಷಪಾತ – ವಾಲ್ಮೀಕಿ ನಾಯಕ ಸಂಘಟನೆಗಳ ಆರೋಪ
ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷರ ರಾಜೀನಾಮೆ ಕೇಳಲು ಗುತ್ತಿಗೆದಾರರಿಗೆ ನೈತಿಕತೆ ಇಲ್ಲ – ಎಂ.ಎಸ್.ನಾರಾಯಣಸ್ವಾಮಿ
ಗಾಂಧೀವನದಲ್ಲೇ ಕನ್ನಡ ರಾಜ್ಯೋತ್ಸವ ಅದ್ದೂರಿ ಆಚರಣೆಗೆ ಕನ್ನಡ ಪರ ಸಂಘನೆಗಳ ಒಕ್ಕೂರಲಿನ ತೀರ್ಮಾನ

Leave a Reply

Your email address will not be published. Required fields are marked *

You missed

error: Content is protected !!