ಅಸಭ್ಯ ನಡವಳಿಕೆ ಹಿನ್ನೆಲೆಯಲ್ಲಿ ಬಿಜೆಪಿಯ ೧೦ ಶಾಸಕರನ್ನು ಅಧಿವೇಶನ ಮುಗಿಯುವವರೆಗೂ ಭಾಗವಹಿಸದಂತೆ ಅಮಾನತು ಮಾಡಿದ ವಿಧಾನಸಭಾಧ್ಯಕ್ಷ ಯು.ಟಿ.ಖಾದರ್
ಸದನದ ಬಾವಿಯಲ್ಲಿ ಧರಣಿ ನಡೆಸಿ, ಉಪ ಸಭಾಧ್ಯಕ್ಷ ರುದ್ರಪ್ಪ ಲಮಾಣಿ ಮೇಲೆ ವಿಧೇಯಕ ಪ್ರತಿಗಳನ್ನು ಹರಿದು ಪೀಠಕ್ಕೆ ಎಸೆದ ಹಿನ್ನೆಲೆಯಲ್ಲಿ ಬಿಜೆಪಿಯ ೧೦ ಶಾಸಕರನ್ನು ಅಮಾನತು ಮಾಡಿ ವಿಧಾನ ಸಭಾಧ್ಯಕ್ಷ ಯು.ಟಿ. ಖಾದರ್ ಆದೇಶಿಸಿದ್ದಾರೆ. ಸದನದಲ್ಲಿ ಅಗೌರವ ತೋರಿದ ಬಿಜೆಪಿ ಶಾಸಕರಾದ…
ಉಗ್ರರ ವಿರುದ್ಧ ಕೇಸ್ ಎನ್.ಐ.ಎ ತನಿಖೆಗೆ ವಹಿಸಿ:ಬಸವರಾಜ ಬೊಮ್ಮಾಯಿ ಆಗ್ರಹ.
ಉಗ್ರರ ವಿರುದ್ಧದ ಕೇಸ್‌ಗಳನ್ನು ಕೂಡಲೇ ಎನ್‌ಐಎ ತನಿಖೆಗೆ ಕೊಡಬೇಕು ಎಂದು ಮಾಜಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಆಗ್ರಹಿಸಿದರು. ಬುಧವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ರಾಜಧಾನಿ ಬೆಂಗಳೂರು ಉಗ್ರರ ಸುರಕ್ಷಿತ ತಾಣವಾಗಿ ಪರಿವರ್ತನೆಯಾಗುತ್ತಿದೆ. ಬೆಂಗಳೂರು ಸುರಕ್ಷತೆ ಬಗ್ಗೆ ಅಧಿಕಾರಿಗಳು ಫೀಲ್ಡ್ ಗೆ ಇಳಿಯಬೇಕು.…
ಬೆಂಗಳೂರಿನಲ್ಲಿ ಸ್ಪೋಟ ನಡೆಸಲು ಸಂಚು:ಐವರು ಶಂಕಿತ ಉಗ್ರರ ಬಂಧನ.
ರಾಜಧಾನಿ ಬೆಂಗಳೂರಿನ 10 ಕಡೆಗಳಲ್ಲಿ ಸ್ಫೋಟ ನಡೆಸಲು ಸಂಚು ರೂಪಿಸಿದ್ದ ಆರೋಪದ ಮೇಲೆ ಐವರು ಶಂಕಿತ ಉಗ್ರರನ್ನು ಕೇಂದ್ರ ಅಪರಾಧ ವಿಭಾಗ (ಸಿಸಿಬಿ) ಪೊಲೀಸರು ಬಂಧಿಸಿದ್ದಾರೆ. 2017ರಲ್ಲಿ ಆರ್.ಟಿ. ನಗರದಲ್ಲಿ ನಡೆದಿದ್ದ ಕೊಲೆ ಪ್ರಕರಣದಲ್ಲಿ 21 ಜನ ಜೈಲು ಸೇರಿದ್ದರು. ಶಂಕಿತ…
ಅನ್ನಭಾಗ್ಯದ ಮೂಲಕ ಹಸಿವು ಮುಕ್ತ ಕರ್ನಾಟಕ ನಿರ್ಮಾಣವೇ ಸಿಎಂ ಗುರಿ ಅಕ್ಕಿ ಬದಲಿಗೆ ರಾಗಿ, ಜೋಳ, ತೊಗರಿ,ಶೇಂಗಾ ನೀಡಲು ಸದನದಲ್ಲಿ ರೂಪಕಲಾ ಮನವಿ
ಕೋಲಾರ: ಅನ್ನಭಾಗ್ಯದ ಮೂಲಕ ಹಸಿವು ಮುಕ್ತ ಕರ್ನಾಟಕದ ಸಂಕಲ್ಪ ಮಾಡಿರುವ ಮುಖ್ಯಮಂತ್ರಿಗಳು ಅಕ್ಕಿ ಬದಲಿಗೆ ಹಣ ನಿಡದೇ ಪರ್ಯಾಯವಾಗಿ ನಮ್ಮ ರೈತರು ಬೆಳೆದ ರಾಗಿ,ಜೋಳ,ತೊಗರಿ,ಸಕ್ಕರೆ ನೀಡುವ ಆಲೋಚನೆ ಮಾಡಬೇಕು ಎಂದು ವಿಧಾನಸಭೆಯಲ್ಲಿ ಕೆಜಿಎಫ್ ಶಾಸಕಿ ರೂಪಕಲಾ ಎಂ.ಶಶಿಧರ್ ಮನವಿ ಮಾಡಿದರು. ಸದನದಲ್ಲಿ…
ಇಂಡಿಯಾ vs ಎನ್ ಡಿ ಎ:26 ವಿರೋಧ ಪಕ್ಷಗಳ ಒಕ್ಕೂಟ “ಇಂಡಿಯಾ”ಹೆಸರು ಅಂತಿಮ.
2024ರ ಲೋಕಸಭೆ ಚುನಾವಣೆಗೆ ಮುಂಚಿತವಾಗಿ ಬಿಜೆಪಿಯನ್ನು ಎದುರಿಸುವ ಸಲುವಾಗಿ ಕಾರ್ಯತಂತ್ರವನ್ನು ರೂಪಿಸಲು ಇಂದು ಬೆಂಗಳೂರಿನಲ್ಲಿ ಸಭೆ ಸೇರಿರುವ 26 ವಿರೋಧ ಪಕ್ಷಗಳ ಒಕ್ಕೂಟಕ್ಕೆ “ಇಂಡಿಯಾ” ಎಂಬ ಹೆಸರನ್ನು ಅಂತಿಮಗೊಳಿಸಲಾಗಿದೆ. ಬೆಂಗಳೂರಿನಲ್ಲಿ ನಡೆಯುತ್ತಿರುವ ಸಭೆಯಲ್ಲಿ, ಇಂಡಿಯಾ ಅಥವಾ ಇಂಡಿಯನ್ ನ್ಯಾಷನಲ್ ಡೆವಲಪ್‌ಮೆಂಟಲ್ ಇನ್‌ಕ್ಲೂಸಿವ್ ಅಲಯನ್ಸ್(ಸರ್ವರನ್ನೂ…
ಚುನಾವಣಾ ಪೂರ್ವ ವಾಗ್ದಾನದಂತೆ ರಾಜ್ಯ ಕಾಂಗ್ರೆಸ್ ಸರ್ಕಾರ ನ್ಯಾ. ಎ.ಜೆ.ಸದಾಶಿವ ಆಯೋಗದ ವೈಜ್ಞಾನಿಕ ವರಧಿ ಜಾರಿಗೊಳಿಸಬೇಕು-ಬಸವರಾಜ್ ಕೌತಾಳ್
ಮುಖ್ಯ ಮಂತ್ರಿ ಸಿದ್ದರಾಮಯ್ಯನವರ ನೇತೃತ್ವದ ರಾಜ್ಯ ಸರ್ಕಾರ ಚುನಾವಣಾ ಪೂರ್ವದಲ್ಲಿ ಚಿತ್ರದುರ್ಗದಲ್ಲಿ ನಡೆದ ಎಸ್.ಸಿ. ಸಮಾವೇಶದಲ್ಲಿ ನೀಡಿದ ವಾಗ್ದಾನದಂತೆ ನ್ಯಾಯಮೂರ್ತಿ ಎ.ಜಿ.ಸದಾಶಿವ ಆಯೋಗದ ವರದಿಯನ್ನು ಯಥಾವತ್ತಾಗಿ ಈಗ ನಡೆಯುತ್ತಿರುವ ವಿಧಾನಸಭೆ ಹಾಗೂ ವಿಧಾನ ಪರಿಷತ್ ಅಧಿವೇಶನದಲ್ಲಿ ಮಂಡಿಸಿ ಅನುಮೋದನೆ ಪಡೆದು ಕೇಂದ್ರಕ್ಕೆ…
ಮಗನ ಕಾಲೇಜು ಶುಲ್ಕ ಕಟ್ಟಲು ಬಸ್ಸಿನ ಮುಂದೆ ಜಿಗಿದು ಪ್ರಾಣ ತೆತ್ತ ತಾಯಿ.
ಮಗನ ಕಾಲೇಜು ಶುಲ್ಕ ಕಟ್ಟಲು ಕಷ್ಟಪಡುತ್ತಿದ್ದ ತಾಯಿಯೋರ್ವಳು, ಅಪಘಾತದಿಂದ ಪ್ರಾಣ ಕಳೆದುಕೊಂಡರೆ ಸರ್ಕಾರದಿಂದ ಆರ್ಥಿಕ ನೆರವು ಸಿಗುತ್ತದೆ ಎಂಬ ತಪ್ಪು ಮಾಹಿತಿ ಪಡೆದುಕೊಂಡು ಬಸ್ಸಿನ ಮುಂದೆ ಜಿಗಿದು ಪ್ರಾಣತೆತ್ತ ಹೃದಯ ವಿದ್ರಾವಕ ಘಟನೆ ತಮಿಳುನಾಡಿನಲ್ಲಿ ನಡೆದಿದೆ. ಕಳೆದ ಜೂನ್ 28ರಂದು ತಮಿಳುನಾಡಿನ…
ಮಹಾ ಘಟಬಂದನ್ ಅನ್ನು ಭ್ರಷ್ಟಾಚಾರಿಗಳ ಸಮ್ಮೇಳನ ಎಂದ ಪ್ರಧಾನಿ ಮೋದಿ.
ಬೆಂಗಳೂರಿನಲ್ಲಿ ನಡೆಯುತ್ತಿರುವ ವಿರೋಧ ಪಕ್ಷಗಳ ಮಹಾಘಟಬಂಧನ್ ಸಭೆಯನ್ನು ‘ಕಟ್ಟರ್ ಭ್ರಷ್ಟಾಚಾರಿಗಳ ಸಮ್ಮೇಳನ’ ಎಂದು ಪ್ರಧಾನಿ ಮೋದಿ ವ್ಯಂಗ್ಯವಾಡಿದ್ದಾರೆ. ಅಂಡಮಾನ್ ಮತ್ತು ನಿಕೋಬಾರ್ ನ ಪೋರ್ಟ್ ಬ್ಲೇರ್‍ನಲ್ಲಿರುವ ಸಾವರ್ಕರ್ ವಿಮಾನ ನಿಲ್ದಾಣದಲ್ಲಿನ ಹೊಸ ಟರ್ಮಿನಲ್ ಅನ್ನು ವರ್ಚುವಲ್ ಮೂಲಕ ಉದ್ಘಾಟಿಸಿದ ಸಂದರ್ಭ ಈ…
ಕಾಂಗ್ರೆಸ್ ಪಕ್ಷ ಪ್ರಧಾನಿ ಹುದ್ದೆಯ ಬಗ್ಗೆ ಆಸಕ್ತಿ ಹೊಂದಿಲ್ಲ:ಮಲ್ಲಿಕಾರ್ಜುನ ಖರ್ಗೆ.
ಕಾಂಗ್ರೆಸ್ ಪಕ್ಷ ಅಧಿಕಾರ ಹೊಂದಲು ಅಥವಾ ಪ್ರಧಾನಿ ಹುದ್ದೆಯ ಬಗ್ಗೆ ಆಸಕ್ತಿ ಹೊಂದಿಲ್ಲ. ನಮ್ಮ ಉದ್ದೇಶ ನಮಗಾಗಿ ಅಧಿಕಾರ ಗಳಿಸುವುದಲ್ಲ. ನಮ್ಮ ಸಂವಿಧಾನ, ಪ್ರಜಾಪ್ರಭುತ್ವ, ಜಾತ್ಯತೀತತೆ ಮತ್ತು ಸಾಮಾಜಿಕ ನ್ಯಾಯವನ್ನು ರಕ್ಷಿಸುವುದು” ಎಂದು ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಹೇಳಿದರು. ವಿಪಕ್ಷಗಳ ಮಹಾ ಸಭೆಯಲ್ಲಿ…
ಮಾಲೂರಿನಲ್ಲಿ ಅನ್ನಭ್ಯಾಗ ಯೋಜನೆಯಡಿಯಲ್ಲಿ ನೇರ ನಗದು ಸಂದಾಯವಾದ ಪಲಾನುಭವಾಯಿಗಳ ಸಮಾವೇಶ
ಮಾಲೂರು,ಜು.೧೬ : ಬಡವರಿಗೆ ಹಸಿವು ನೀಗಿಸಲು ಯುಪಿಐ ಸರ್ಕಾರವಿದ್ದಾಗ ಮನಮೋಹನ್ ಸಿಂಗ್ ರವರು ಎಲ್ಲ ರಾಜ್ಯಗಳಿಗೂ ಐದು ಕೆಜಿ ಅಕ್ಕಿ ನೀಡಿದ್ರು, ಆದ್ರೆ ಬಿಜೆಪಿ ಕೇಂದ್ರ ಸರ್ಕಾರ ಮೋದಿಯವರು ಬಡವರ ಅಕ್ಕಿ ರಾಜಕೀಯ ಮಾಡುತ್ತಿದ್ದಾರೆ ಎಂದು ಆಹಾರ ಸಚಿವ ಕೆ.ಹೆಚ್. ಮುನಿಯಪ್ಪ…