• Sat. Apr 27th, 2024

PLACE YOUR AD HERE AT LOWEST PRICE

ಕೋಲಾರ: ಅನ್ನಭಾಗ್ಯದ ಮೂಲಕ ಹಸಿವು ಮುಕ್ತ ಕರ್ನಾಟಕದ ಸಂಕಲ್ಪ ಮಾಡಿರುವ ಮುಖ್ಯಮಂತ್ರಿಗಳು ಅಕ್ಕಿ ಬದಲಿಗೆ ಹಣ ನಿಡದೇ ಪರ್ಯಾಯವಾಗಿ ನಮ್ಮ ರೈತರು ಬೆಳೆದ ರಾಗಿ,ಜೋಳ,ತೊಗರಿ,ಸಕ್ಕರೆ ನೀಡುವ ಆಲೋಚನೆ ಮಾಡಬೇಕು ಎಂದು ವಿಧಾನಸಭೆಯಲ್ಲಿ ಕೆಜಿಎಫ್ ಶಾಸಕಿ ರೂಪಕಲಾ ಎಂ.ಶಶಿಧರ್ ಮನವಿ ಮಾಡಿದರು.

ಸದನದಲ್ಲಿ ಮಂಗಳವಾರ ಸರ್ಕಾರದ ಗ್ಯಾರೆಂಟಿಗಳ ಜಾರಿಯನ್ನು ಸ್ವಾಗತಿಸಿ ಮಾತನಾಡಿದ ಅವರು, ಕೇಂದ್ರ ಸರ್ಕಾರ ಅಕ್ಕಿ ನೀಡಲಿಲ್ಲ ಎಂದು ರಾಜ್ಯದ ೪.೪೨ ಕೋಟಿ ಜನತೆಗೆ ಅನ್ನಭಾಗ್ಯದಡಿ ಹಣ ಹಾಕುವ ಆಲೋಚನೆ ಮಾಡಿರುವ ಸರ್ಕಾರ ನಮ್ಮ ರೈತರ ಕೃಷಿ ಉತ್ಪನ್ನಗಳಿಗೂ ಬೆಲೆ ಸಿಗುವಂತೆ ಮಾಡಿ ಅಕ್ಕಿಗೆ ಪರ್ಯಾಯವಾಗಿ ರಾಗಿ,ಜೋಳ,ತೊಗರಿ, ಶೇಂಗಾ ಮತ್ತಿತರ ಉತ್ಪನ್ನಗಳನ್ನು ಏಕೆ ನಿಡಬಾರದು ಎಂದು ಆಲೋಚನೆ ಮಾಡಲಿ ಎಂದರು.

ರಾಜ್ಯದಲ್ಲಿ ಶೇ.೪೦ ರಷ್ಟು ಯುವಕರೇ ಇದ್ದಾರೆ, ಅವರಿಗೆ ಯುವ ಶಕ್ತಿಯ ಮೂಲಕ ನೆರವಾಗಿರುವ ಸರ್ಕಾರ ಅವರ ಬದುಕಿಗೆ ಆತ್ಮಸ್ಥೈರ್ಯ ತುಂಬಿದೆ, ಯುವಕರ ಭವಿಷ್ಯ ಉತ್ತಮಪಡಿಸುವ ನಿಟ್ಟಿನಲ್ಲಿ ಯುವಶಕ್ತಿಯ ಮೂಲಕ ದಿಟ್ಟ ಹೆಜ್ಜೆ ಇಟ್ಟಿದ ಎಂದು ತಿಳಿಸಿದರು.

ನನ್ನ ಕ್ಷೇತ್ರವಾದ ಕೆಜಿಎಫ್‌ನಲ್ಲಿ ನೆನೆಗುದಿಗೆ ಬಿದ್ದಿದ್ದ ೯೭೩ ಎಕರೆ ಜಾಗದಲ್ಲಿ ಕೈಗಾರಿಕಾ ಟೌನ್‌ಷಿಫ್ ಮಾಡುವ ಘೋಷಣೆ ಮಾಡಿರುವ ಮುಖ್ಯಮಂತ್ರಿಗಳು, ಕೆಜಿಎಫ್‌ಗೆ ಕಳೆದ ೨೫ ವರ್ಷಗಳ ಹಿಂದೆ ವೈಭವ ಮತ್ತೆ ಮರುಕಳಿಸುವಂತೆ ಮಾಡಿದ್ದಾರೆ ಎಂದರು.

ಕೆಜಿಎಫ್‌ನಿoದ ಸುಮಾರು ೨೫ ಸಾವಿರ ಕುಟುಂಬಗಳು ಜೀವನ ನಿರ್ವಹಣೆಗಾಗಿ ಬಸ್ಸು,ರೈಲುಗಳ ಮೂಲಕ ಪ್ರಯಾಣ ಮಾಡಿ ಉದ್ಯೋಗ ಹುಡುಕಿಕೊಂಡು ಕಷ್ಟಕ್ಕೀಡಾಗಿದ್ದರು. ಇದೀಗ ಈ ಎಲ್ಲಾ ನಿರುದ್ಯೋಗಿಗಳ ಪಾಲಿಗೆ ಕೈಗಾರಿಕಾ ಟೌನ್‌ಷಿಫ್ ಆಧಾರವಾಗಲಿದೆ ಎಂದು ತಿಳಿಸಿದರು.

ನರಸಾಪುರ,ವೇಮಗಲ್ ಸುತ್ತ ನೂರಾರು ಕೈಗಾರಿಕೆಗಳು ಬಂದಿರುವುದರಿoದ ಇಂದು ಸಹಸ್ರಾರು ಮಂದಿಗೆ ಉದ್ಯೋಗ ಸಿಕ್ಕಿದೆ, ವಿಸ್ಟ್ರಾನ್ ಒಂದರಿoದಲೇ  ೯ ಸಾವಿರ ಮಂದಿ ಬದುಕು ಕಟ್ಟಿಕೊಂಡಿದ್ದಾರೆ, ಕೆಜಿಎಫ್‌ಗೆ ಕೈಗಾರಿಕಾ ಟೌನ್‌ಷಿಫ್ ಕೊಟ್ಟ ಸಿಎಂಗೆ ನಾನು ಧನ್ಯವಾದ ಸಲ್ಲಿಸುವೆ ಎಂದರು.

ಬರಪೀಡಿತ ಹಣೆಪಟ್ಟಿ ಕಟ್ಟಿಕೊಂಡಿದ್ದ ಕೋಲಾರ ಜಿಲ್ಲೆಗೆ ಕೆಸಿ ವ್ಯಾಲಿ ಮೂಲಕ ಹಿಂದೆಯೇ ನೀರು ತಂದು ೧೩೦ ಕೆರೆ ತುಂಬಿಸಿ ಭಗೀರಥರಾದ ಸಿದ್ದರಾಮಯ್ಯ ಇದೀಗ ಮತ್ತೆ ಆಯೋಜನೆ ಪ್ರಗತಿಗೆ ಕ್ರಮ ಕೈಗೊಂಡಿದ್ದಾರೆ, ಪಾರಂಪರಿಕ ಕೃಷಿ ಅವಲಂಬಿತ ಜಿಲ್ಲೆಯಾದ ಕೋಲಾರದ ರೈತರ ಬೆಳೆಗಳಿಗೆ ಉತ್ತಮ ಬೆಲೆ ಸಿಗುವಂತೆ ಮಾಡಬೇಕು ಎಂದರು.

ಕೋವಿಡ್ ಸಂದರ್ಭದಲ್ಲಿ ಹಿಂದಿನ ಸರ್ಕಾರ ಅವ್ಯವಹಾರ ನಡೆಸಿದೆ ಎಂದು ಸಾರ್ವಜನಿಕ ಲೆಕ್ಕಪತ್ರ ಸಮಿತಿಯೇ ಆರೋಪಿಸಿ ವರದಿ ನೀಡಿದೆ, ದೂರದೃಷ್ಟಿಯಿಲ್ಲದ ಕ್ರಮದಿಂದ ಕೋವಿಡ್ ಔಷಧಿ ಖರೀದಿಯಲ್ಲಿ ಭಾರಿ ಭ್ರಷ್ಟಾಚಾರ ನಡೆದಿದೆ ಎಂಬುದನ್ನು ಪತ್ರಿಕೆಗಳು ವರದಿ ಮಾಡಿವೆ ಎಂದರು.

ಇoದಿರಾ ಗಾಂಧಿ ನಂತರ ೬೦ ವರ್ಷ ಮೇಲ್ಪಟ್ಟ ಮಹಿಳೆಯರು ಅವಲಂಬಿತರಾಗದೇ ಸ್ವಾವಲಂಬಿ ಬದುಕು ಕಟ್ಟಿಕೊಳ್ಳಲು ಮನೆ ಯಜಮಾನಿಗೆ ೨ ಸಾವಿರ ನೀಡುವ ಸಿಎಂ ಆಲೊಚನೆಯಿಂದ ಅನೇಕರಿಗೆ ಅಣ್ಣನಾಗಿ,ತಂದೆಯಾಗಿ ಸಿಎಂ ಕಾಣಿಸಕೊಂಡಿದ್ದಾರೆ ಎಂದರು.

ದಯವೇ ಧರ್ಮದ ಮೂಲವಯ್ಯ ಎಂಬ ಬಸವಣ್ಣನವರ ವಚನದಂತೆ ಬಡ ಮಹಿಳೆಯರಿಗೆ ಅನ್ನಭಾಗ್ಯ, ಗೃಹಶಕ್ತಿಯ ಮೂಲಕ ನೆರವಾಗಿರುವ ಸಿದ್ದರಾಮಯ್ಯ ಲಕ್ಷಾಂತರ ಕುಟುಂಬಗಳಲ್ಲಿ ಭರವಸೆ ಮೂಡಿಸಿದ್ದಾರೆ ಎಂದರು.

 

Related Post

ಜೆಡಿಎಸ್‌ ಬಿಜೆಪಿ ಒಂದಾಗಿ ಸಂವಿಧಾನಕ್ಕೆ ಅಪಾಯ ಎಚ್ವತ್ತು ಕಾಂಗ್ರೆಸ್ ಬೆಂಬಲಿಸಿ: ಬೈರತಿ ಸುರೇಶ್
ವಚನ ಭ್ರಷ್ಟ ಬಿಜೆಪಿ ನೇತೃತ್ವದ ಎನ್.ಡಿ.ಎ. ಮೈತ್ರಿಕೂಟಕ್ಕೆ ಮತ ಕೇಳುವ ನೈತಿಕತೆ ಇಲ್ಲ-ಕೆ.ವಿ.ಗೌತಮ್
ಏಪ್ರಿಲ್ ೨೬ ರೊಳಗೆ ಎಕ್ಸಿಡಿ ಕಾರ್ಮಿಕರ ಬೇಡಿಕೆಗಳನ್ನು ಈಡೇರಿಸಲು ಆಗ್ರಹ ಇಲ್ಲವಾದಲ್ಲಿ ತೀವ್ರ ರೀತಿಯ ಹೋರಾಟ ನಡೆಸಲು ಕಾರ್ಮಿಕರ ಸಂಘಗಳ ಸಭೆಯಲ್ಲಿ ನಿರ್ಧಾರ

Leave a Reply

Your email address will not be published. Required fields are marked *

You missed

error: Content is protected !!