ಕೆಜಿಎಫ್ ತಾಲ್ಲೂಕು ಬೇತಮಂಗಲದಲ್ಲಿನ ಸಾರ್ವಜನಿಕರು ಮತ್ತು ಸ್ವತಃ ಗ್ರಾಮ ಪಂಚಾಯತಿಯವರೂ ಸೇರಿ ಗೋಸಿನ ಕೆರೆಗೆ ಕಸ ಸುರಿದು ಸಾರ್ವಜನಿಕರಿಗೆ ತೊಂದರೆ ನೀಡುತ್ತಿರುವ ಘಟನೆ ನಡೆದಿದೆ.
ಕೆಜಿಎಫ್ ತಾಲೂಕು ಬೇತಮಂಗಲ ಹೋಬಳಿಯ ಬೇತಮಂಗಲ ಕೇಂದ್ರ ಸ್ಥಾನದಲ್ಲಿ, ಕೆಜಿಎಫ್ ಮುಖ್ಯ ರಸ್ತೆಯಲ್ಲಿರುವ ಗೋಸಿನ ಕೆರೆಗೆ ಸಾರ್ವಜನಿಕರು ಕಸ ಸುರಿಯುತ್ತಿದ್ದು ಈ ಬಗ್ಗೆ ಸಂಘ-ಸಂಸ್ಥೆಗಳು ಕಳೆದ ಎರಡು ಮೂರು ವರ್ಷಗಳಿಂದ ಆಕ್ಷೇಪ ವ್ಯಕ್ತಪಡಿಸುತ್ತಿದ್ದಾರೆ ಇದೀಗ ಗ್ರಾಮ ಪಂಚಾಯಿತಿಗೆ ಸರ್ಕಾರದಿಂದ ಮಂಜೂರಾಗಿದ್ದ ಕಸ ವಿಲೇವಾರಿ ಘಟಕ ಜಮೀನು ನೈಸ್ ರಸ್ತೆಗೆ ಹೋಗಿದ್ದು ಪರ್ಯಾಯ ಜಮೀನಿಲ್ಲದ ಕಾರಣ ಸಾರ್ವಜನಿಕರ ಜೊತೆ ಸೇರಿ ಗ್ರಾಮ ಪಂಚಾಯತಿಯವರೂ ಸಹ ಸಂಗ್ರಹ ಗೊಂಡ ಕಸವನ್ನು ಗೋಸಿನ ಕೆರೆಗೆ ಸುರಿಯುತ್ತಿರುವ ದುರಂತ ಘಟನೆ ನಡೆದಿದೆ.
ಈ ಬಗ್ಗೆ ಆರೋಪ ಮಾಡಿದ ದಲಿತ ಸಂಘರ್ಷ ಸಮಿತಿ ಅಣ್ಣಯ್ಯ ಬಣದ ಜಿಲ್ಲಾ ಮುಖಂಡ ರಾಧಾಕೃಷ್ಣ ಬೇತಮಂಗಲದ ಮಹತ್ತರ ಕೆರೆಯಾದ ಗೋಸಿನ ಕೆರೆಗೆ ಗ್ರಾಮ ಪಂಚಾಯತಿಯವರು ಸಾರ್ವಜನಿಕರ ಜೊತೆ ಸೇರಿ ಕಸವನ್ನು ಕೆರೆಯಲ್ಲಿ ಸುರಿಯುತ್ತಿದ್ದಾರೆ ಸ್ವಚ್ಛ ಭಾರತ್ ಮಾಡಬೇಕಾದ ಗ್ರಾಮ ಪಂಚಾಯತಿಯವರು ಸ್ವಚ್ಛ ಭಾರತ್ ಮಾಡುವಲ್ಲಿ ಸಂಪೂರ್ಣವಾಗಿ ವಿಫಲರಾಗಿದ್ದಾರೆ ಇವರು ಕಸ ಸುರಿಯುತ್ತಿರುವುದರ ಬಗ್ಗೆ ಮೇಲಧಿಕಾರಿಗಳು ಕ್ರಮ ಜರುಗಿಸುತ್ತಿಲ್ಲ ಗ್ರಾಮ ಪಂಚಾಯತಿಯ ಜನವಿರೋಧಿ ಧೋರಣೆ ಬಗ್ಗೆ ಈ ಕೂಡಲೇ ಕ್ರಮ ಜರುಗಿಸಬೇಕು ಸಂಸದರು ಮತ್ತು ಶಾಸಕರು ಸಹ ಈ ಬಗ್ಗೆ ಗಮನ ಹರಿಸದಿರುವುದು ದುಂತ ಎಂದು ಅಸಮದಾನ ವ್ಯಕ್ತಪಡಿಸಿದರು. ಈ ವೇಳೆ ಮುಖಂಡರಾದ ತಂಬಾರ್ಲಹಳ್ಳಿ ರಾಮಪ್ಪ, ಲಕ್ಷ್ಮಯ್ಯ, ಸುಬ್ಬು, ತಿಪ್ಪಣ್ಣ ಮೊದಲಾದವರಿದ್ದರು.
ಇದನ್ನೂ ಓದಿ – ದೇವಾಲಯಗಳಿಗೆ ಪ್ರವಾಸ ಹೊರಟ ಭಕ್ತರಿಗೆ ಬಸ್ ವ್ಯವಸ್ಥೆ ಮಾಡಿದ ಕೆಜಿಎಫ್ ಶಾಸಕಿ ಡಾ.ರೂಪಕಲಾ