• Fri. Apr 26th, 2024

PLACE YOUR AD HERE AT LOWEST PRICE

ಕೋಲಾರ, ಏಪ್ರಿಲ್. ೧೯ : ಮಾಜಿ ಸಚಿವ ಆರ್. ವರ್ತೂರ್ ಪ್ರಕಶ್ ಕೋಲಾರ ವಿಧಾನಸಭಾ ಕ್ಷೇತ್ರಕ್ಕೆ ಬಿಜೆಪಿ ಅಭ್ಯರ್ಥಿಯಾಗಿ ಇಂದು ಸಾವಿರಾರು ಕಾರ್ಯಕರ್ತರೊಂದಿಗೆ ಮೆರವಣಿಗೆಯಲ್ಲಿ ಸಾಗಿ ನಾಮಪತ್ರ ಸಲ್ಲಿಸಿದರು.

ನಗರದ ಸಿ.ಬೈರೇಗೌಡ ಮೈದಾನದಲ್ಲಿ ಜಮಾವಣೆಗೊಂಡ ಕೋಲಾರ ವಿಧಾನಸಭೆ ಕ್ಷೇತ್ರ ವಿವಿಧ ಮೂಲೆಗಳಿಂದ ಆಗಮಿಸಿದ್ದ ಸುಮಾರು ೨೦ ಸಾವಿರಕ್ಕೂ ಅಧಿಕ ಸಂಖ್ಯೆಯ ಕಾರ್ಯಕರ್ತರೊಂದಿಗೆ ಸೇರಿ ತೆರದ ವಹನದಲ್ಲಿ ಮೆರೆವಣಿಗೆಯಲ್ಲಿ ತೆರಳಿ ಕೋಲಾರ ತಾಲ್ಲೂಕು ಕಚೇರಿಯಲ್ಲಿ ಚುನಾವಣಾಧಿಕಾರಿಗಳಿಗೆ ನಾಮಪತ್ರ ಸಲ್ಲಿಸಿದರು.


ಮೆರವಣಿಗೆಯಲ್ಲಿ ಭಾಗವಹಿಸಿದ್ದ ಕಾರ್ಯಕರ್ತರಿಗೆ ಉಚಿತ ಕೇಸರಿ ಶಾಲುಗಳು, ಟೋಪಿಗಳು, ಕುಡಿಯಲು ನೀರಿನ ಪ್ಯಾಕೇಟ್‌ಗಳು, ಮಜ್ಜಿಗೆ ಪ್ಯಾಕೇಟ್‌ಗಳು, ನೀಡಲಾಗಿತ್ತು. ಮೆರವಣಿಗೆ ಉದ್ದಕ್ಕೂ ಜೆಸಿಬಿಗಳಲ್ಲಿ ತುಂಬಿಸಿದ್ದ ಬಿಡಿ ಹೂಗಳನ್ನು ಜನರ ಮೇಲೆ ಹಾಗೂ ತೆರದ ವಾಹನಗಳ ಮೇಲೆ ತೆರಳುತ್ತಿದ್ದ ಮುಖಂಡರ ಮೇಲೆ ಚೆಲ್ಲಲಾಯಿತು.

ಇನ್ನೂ ಸುಮಾರು ಎರಡು ಕಿ.ಮೀ.ಗೂ ಹೆಚ್ಚು ದೂರ ಕಾಲ್ನಡಿಗೆಯಲ್ಲಿ ಭಾಗವಹಿಸಿದ್ದ ಸಾವಿರಾರು ಮಹಿಳೆಯರು ವೃದ್ದೆಯರು ಬಿಸಿಲಿನ ತಾಪಕ್ಕೆ ತತ್ತರಿಸಿ ಹೋದರು. ಬಿಸಿಲಿನ ಬಿಸಿಗೆ ತಡೆಯಲಾಗದೆ ದಾರಿಯುದ್ದಕ್ಕೂ ಮರಗಳ ಆಶ್ರಯ ಪಡೆಯಲು ಹೆಣಗಾಡಿದ ದೃಶ್ಯಗಳು ಸಾಮಾನ್ಯವಾಗಿತ್ತು.


ಮದ್ಯಾಹ್ನ ೧೨ ಗಂಟೆಯಿoದ ೨ ಗಂಟೆಯವರೆಗೂ ಮೆರವಣಿಗೆಯಲ್ಲಿ ಸಾಗಿದ ಮಾಜಿ ಸಚಿವ ವರ್ತೂರ್ ಪ್ರಕಾಶ್, ಸಚಿವ ಡಾ.ಕೆ.ಸುಧಾಕರ್, ಸಂಸದ ಎಸ್.ಮುನಿಸ್ವಾಮಿ, ಜಿಲ್ಲಾಧ್ಯಕ್ಷ ಡಾ.ವೇಣುಗೋಪಾಲ್, ಜಿಲ್ಲಾ ಪಂಚಾಯ್ತಿ ಸದಸ್ಯ ಸಿ.ಎಸ್.ವೆಂಕಟೇಶ್, ರೂಪಶ್ರೀ ಮಂಜುನಾಥ್, ತಾಲ್ಲೂಕು ಅಧ್ಯಕ್ಷ ಸಿ.ಡಿ.ರಾಮಚಂದ್ರಗೌಡ, ಮುಖಂಡ ಬಂಕ್ ಮಂಜುನಾಥ್ ರವರೊಂದಿಗೆ ಚುನಾವಣಾ ಕೇಂದ್ರಕ್ಕೆ ಹೋಗಿ ಬಿಜೆಪಿ ಪಕ್ಷದಿಂದ ನಾಮಪತ್ರ ಸಲ್ಲಿಸಿದರು.


ನಿಯಮ ಉಲ್ಲಂಘಿಸಿದ ನಾಯಕರು:

ಮೆರವಣಿಗೆ ಮೆಕ್ಕೆ ವೃತ್ತದಲ್ಲಿ ಮುಕ್ತಾಯಗೊಂಡ ಮೇಲೆ, ಸಚಿವ ಡಾ.ಕೆ.ಸುಧಾಕರ್, ಸಂಸದ ಎಸ್.ಮುನಿಸ್ವಾಮಿ, ರವರೊಂದಿಗೆ ಚುನಾವಣಾ ಕೇಂದ್ರಕ್ಕೆ ಅಭ್ಯರ್ಥಿ ಸೇರಿ ಒಟ್ಟು ೮ ಜನ ನಿಯಮ ಮೀರಿ ಒಳ ಪ್ರವೇಶ ಮಾಡಿದರು. ಚುನಾವಣಾ ಕೇಂದ್ರಕ್ಕೆ ಇಲ್ಲಿಯ ತನಕ ಕೇವಲ ಐದು ಜನ ಮಾತ್ರ ಪ್ರವೇಶ ಮಾಡಲು ಅನುಮತಿಸಲಾಗಿತ್ತು.

ಪಕ್ಷೇತರ ಅಭ್ಯರ್ಥಿಗಳು ಸೇರಿದಂತೆ ಬಹುತೇಕ ರಾಜಕೀಯ ಪಕ್ಷಗಳ ಅಭ್ಯರ್ಥಿಗಳು ನಾಮಪತ್ರ ಸಲ್ಲಿಸಿದಾಗಲೂ ಕಟ್ಟುನಿಟ್ಟಿನ ನಿಯಮ ಪಾಲಿಸಿದ ಪೊಲೀಸರು ಹಾಗೂ ಅಧಿಕಾರಿಗಳು ಇಂದು ವರ್ತೂರ್ ಪ್ರಕಾಶ್ ರವರು ನಾಮಪತ್ರ ಸಲ್ಲಿಸಿದಾಗ ಮಾತ್ರ ನಿಯಮಗಳಲ್ಲಿ ಸಡಿಲಿಕೆ ಮಾಡಿಕೊಂಡಿದ್ದು ಅಲ್ಲಿ ನೆರೆದಿದ್ದವರಲ್ಲಿ ಚರ್ಚೆಗೆ ಗ್ರಾಸವಾಗಿತ್ತು. ನಿಯಮಗಳನ್ನು ಪಾಲಿಸಬೇಕಾದವರೇ ನಿಯಮಗಳನ್ನು ಮೀರಿದ್ದು ಎಷ್ಟು ಸರಿ ಎಂಬ ಪ್ರಶ್ನೆ ನಿರುತ್ತರವಾಗಿ ಉಳಿಯಬೇಕಾಯಿತು. 

Related Post

ಜೆಡಿಎಸ್‌ ಬಿಜೆಪಿ ಒಂದಾಗಿ ಸಂವಿಧಾನಕ್ಕೆ ಅಪಾಯ ಎಚ್ವತ್ತು ಕಾಂಗ್ರೆಸ್ ಬೆಂಬಲಿಸಿ: ಬೈರತಿ ಸುರೇಶ್
ವಚನ ಭ್ರಷ್ಟ ಬಿಜೆಪಿ ನೇತೃತ್ವದ ಎನ್.ಡಿ.ಎ. ಮೈತ್ರಿಕೂಟಕ್ಕೆ ಮತ ಕೇಳುವ ನೈತಿಕತೆ ಇಲ್ಲ-ಕೆ.ವಿ.ಗೌತಮ್
ಏಪ್ರಿಲ್ ೨೬ ರೊಳಗೆ ಎಕ್ಸಿಡಿ ಕಾರ್ಮಿಕರ ಬೇಡಿಕೆಗಳನ್ನು ಈಡೇರಿಸಲು ಆಗ್ರಹ ಇಲ್ಲವಾದಲ್ಲಿ ತೀವ್ರ ರೀತಿಯ ಹೋರಾಟ ನಡೆಸಲು ಕಾರ್ಮಿಕರ ಸಂಘಗಳ ಸಭೆಯಲ್ಲಿ ನಿರ್ಧಾರ

Leave a Reply

Your email address will not be published. Required fields are marked *

You missed

error: Content is protected !!