• Sun. Apr 28th, 2024

PLACE YOUR AD HERE AT LOWEST PRICE

ಕೆಜಿಎಫ್:ತಾಲ್ಲೂಕಿನ ಎಲ್ಲಾ16 ಗ್ರಾಮ ಪಂಚಾಯಿತಿಗಳಲ್ಲಿ 2ನೇ ಅವಧಿಗೆ ಅದ್ಯಕ್ಷ ಉಪಾದ್ಯಕ್ಷ ಸ್ಥಾನಗಳ ಮೀಸಲಾತಿ ಇಂದು ನಿಗದಿಗೊಂಡಿದೆ. ತಾಲ್ಲೂಕಿನ ಗ್ರಾಮ ಪಂಚಾಯಿತಿ ಅದ್ಯಕ್ಷ ಸ್ಥಾನ ಯಾವ ಕ್ಯಾಟಗಿರಿ ಬರಲಿದೆ ಎಂಬ ಬಗ್ಗೆ ಬಂಗಾರಪೇಟೆ ಟಿಎಪಿಸಿಎಂಎಸ್ ಅದ್ಯಕ್ಷ ದಿನ್ನೆಕೊತ್ತೂರು ರಾಜಾರೆಡ್ಡಿ ದಿನಾಂಕ:6-1-2-23 ರಂದೇ ಹಾಕಿದ್ದ ಲೆಕ್ಕಾಚಾರ ಶೇ 100ರಷ್ಟು ನಿಜವಾಗಿದೆ.

ದಿನ್ನೇಕೊತ್ತೂರು ರಾಜಾರೆಡ್ಡಿರವರು ಅವಿಭಜಿತ ಬಂಗಾರಪೇಟೆ(ಕೆಜಿಎಫ್ ತಾಲ್ಲೂಕು ಸೇರಿ) ತಾಲ್ಲೂಕಿನಲ್ಲಿ ಗ್ರಾಮ ಪಂಚಾಯಿತಿಗಳ ಅದ್ಯಕ್ಷ ಉಪಾದ್ಯಕ್ಷ ಮೀಸಲು ಸ್ಥಾನಗಳ ಬಗ್ಗೆ ಕಳೆದ 20 ವರ್ಷಗಳಿಂದ  ಸರ್ಕಾರ ನಿಗದಿಗೊಳಿಸುವುದಕ್ಕೂ 10-20ದಿನ ಮುಂಚಿತವಾಗಿ ಅಂದಾಜು ಲೆಕ್ಕಾಚಾರ ಮಾಡುತ್ತಾ ಬರುತ್ತಿದ್ದು, ಅದು ಶೇ 95 ನಿಜವಾಗುತ್ತಿತ್ತು. ಈ ಬಾರಿ ಕೆಜಿಎಫ್ ತಾಲ್ಲೂಕಿನ ಗ್ರಾಮ ಪಂಚಾಯಿತಿಗಳ ಅದ್ಯಕ್ಷ ಸ್ಥಾನ ಮೀಸಲು ಬಗ್ಗೆ ಅವರ ಲೆಕ್ಕಾಚಾರ ಶೇ100 ನಿಜನವಾಗಿದೆ.

ತಾಲ್ಲೂಕಿನ 16 ಗ್ರಾಮ ಪಂಚಾಯಿತಿ ಅದ್ಯಕ್ಷ ಉಪಾದ್ಯಕ್ಷ ಸ್ಥಾನಗಳ ಮೀಸಲಾತಿ ಇಂದು ಪ್ರಕಟಗೊಂಡಿದೆ. ಪರಿಶಿಷ್ಟ ಜಾತಿ ಮಹಿಳಾ ಮೀಸಲು ಸ್ಥಾನವು ಸುಂದರಪಾಳ್ಯ, ಘಟ್ಟಕಾಮದೇನಹಳ್ಳಿ, ಘಟ್ಟಮಾದಮಂಗಲ, ಜಕ್ಕರಸನಕುಪ್ಪ. ಪರಿಶಿಷ್ಟ ಜಾತಿ ಮೀಸಲು ಟಿ.ಗೊಲ್ಲಹಳ್ಳಿ, ರಾಮಸಾಗರ, ಪಾರಂಡಹಳ್ಳಿ.

ಪರಿಶಿಷ್ಟ ಪಂಗಡ ಮಹಿಳಾ ಮೀಸಲು ಕಮ್ಮಸಂದ್ರ. ಸಾಮಾನ್ಯ ಮಹಿಳಾ ಮೀಸಲು ಎನ್.ಜಿ.ಹುಲ್ಕೂರು, ವೆಂಗಸಂದ್ರ, ಶ್ರೀನಿವಾಸಸಂದ್ರ. ಸಾಮಾನ್ಯ ಹುಲ್ಕೂರು, ಬೇತಮಂಗಲ, ಕಂಗಾಂಡ್ಲಹಳ್ಳಿ, ಕ್ಯಾಸಂಬಳ್ಳಿ, ಮಾರಿಕುಪ್ಪ.

ದಿನ್ನೇಕೊತ್ತೂರು ರಾಜಾರೆಡ್ಡಿರವರ ಅದ್ಯಕ್ಷ ಸ್ಥಾನದ ಮೀಸಲು ಲೆಕ್ಕಾಚಾರ ಈ ರೀತಿ ಇತ್ತು: ತಾಲ್ಲೂಕಿನ ಗ್ರಾಪಂ ಅದ್ಯಕ್ಷರ ಸಂಭವನೀಯ ಮೀಸಲು ಪಟ್ಟಿ ತಯಾರಿಸಿದ ರಾಜಾರೆಡ್ಡಿ. (nammasuddi.net)

16 ಗ್ರಾಮ ಪಂಚಾಯಿತಿಗಳ ಉಪಾದ್ಯಕ್ಷ ಸ್ಥಾನಗಳ ಮೀಸಲು ಈ ರೀತಿ ನಿಗಧಿಗೊಂಡೊದೆ. ಪರಿಶಿಷ್ಟ ಜಾತಿ ಮಹಿಳಾ ,ಮೀಸಲು ಹುಲ್ಕೂರು, ಕಂಗಾಂಡ್ಲಹಳ್ಳಿ, ಕ್ಯಾಸಂಬಳ್ಳಿ, ಮಾರಿಕುಪ್ಪ. ಪರಿಶಿಷ್ಟ ಜಾತಿ ಮೀಸಲು ಎನ್.ಜಿ.ಹುಲ್ಕೂರು, ವೆಂಗಸಂದ್ರ, ಶ್ರೀನಿವಾಸಸಂದ್ರ.

ಪರಿಶಿಷ್ಟ ಪಂಗಡ ಮಹಿಳಾ ಮೀಸಲು ಬೇತಮಂಗಲ. ಸಾಮಾನ್ಯ ಮಹಿಳಾ ಮೀಸಲು ಟಿ.ಗೊಲ್ಲಹಳ್ಳಿ, ರಾಮಸಾಗರ, ಪಾರಾಂಡಹಳ್ಳಿ. ಸಾಮಾನ್ಯ ಸುಂದರಪಾಳ್ಯ, ಕಮ್ಮಸಂದ್ರ, ಘಟ್ಟಕಾಮದೇನಹಳ್ಳಿ, ಜಕ್ಕರಸನಕುಪ್ಪ, ಘಟ್ಟಮಾದಮಂಗಲ.

Related Post

ಜೆಡಿಎಸ್‌ ಬಿಜೆಪಿ ಒಂದಾಗಿ ಸಂವಿಧಾನಕ್ಕೆ ಅಪಾಯ ಎಚ್ವತ್ತು ಕಾಂಗ್ರೆಸ್ ಬೆಂಬಲಿಸಿ: ಬೈರತಿ ಸುರೇಶ್
ವಚನ ಭ್ರಷ್ಟ ಬಿಜೆಪಿ ನೇತೃತ್ವದ ಎನ್.ಡಿ.ಎ. ಮೈತ್ರಿಕೂಟಕ್ಕೆ ಮತ ಕೇಳುವ ನೈತಿಕತೆ ಇಲ್ಲ-ಕೆ.ವಿ.ಗೌತಮ್
ಏಪ್ರಿಲ್ ೨೬ ರೊಳಗೆ ಎಕ್ಸಿಡಿ ಕಾರ್ಮಿಕರ ಬೇಡಿಕೆಗಳನ್ನು ಈಡೇರಿಸಲು ಆಗ್ರಹ ಇಲ್ಲವಾದಲ್ಲಿ ತೀವ್ರ ರೀತಿಯ ಹೋರಾಟ ನಡೆಸಲು ಕಾರ್ಮಿಕರ ಸಂಘಗಳ ಸಭೆಯಲ್ಲಿ ನಿರ್ಧಾರ

Leave a Reply

Your email address will not be published. Required fields are marked *

You missed

error: Content is protected !!