• Mon. Jul 1st, 2024

PLACE YOUR AD HERE AT LOWEST PRICE

ಬಂಗಾರಪೇಟೆ:ದಾನ ಮಾಡುವ ಗುಣ ಎಲ್ಲರಿಗೂ ಬರುವುದಿಲ್ಲ, ಓದಿದ ಶಾಲೆಯನ್ನು ಗುರ್ತಿಸಿ ದಾನಮಾಡುತ್ತಿರುವ ಹಳೆಯ ವಿಧ್ಯಾರ್ಥಿಗಳ ಸೇವೆ ಶ್ಲಾಘನೀಯ, ದಾನ ಮಾಡುವುದರಿಂದ ನಮ್ಮ ಶಾಪ ವಿಮೋಚನೆಯಾಗುತ್ತದೆ ಎಂದು ಕ್ಷೇತ್ರಶಿಕ್ಷಣಾಧಿಕಾರಿ ಡಿ.ಎನ್.ಸುಕನ್ಯ ಹೇಳಿದರು.

 ತಾಲ್ಲೂಕಿನ ಕೀಲುಕೊಪ್ಪ ಶ್ರೀ ಶನೇಶ್ವರ ಕನ್ನಡ ಹಿರಿಯ ಪ್ರಾಥಮಿಕ ಅನುದಾನಿತ ಶಾಲೆಯಲ್ಲಿ ಹಳೆಯ ವಿಧ್ಯಾರ್ಥಿಗಳ ಕುಟುಂಭದಿAದ ೧ ರಿಂದ ೭ನೇ ತರಗತಿಯ ಎಲ್ಲಾ ವಿಧ್ಯಾರ್ಥಿಗಳಿಗೆ ಶೂ, ಸಾಕ್ಸ್, ಬೆಲ್ಟ್, ಟೈ, ವಿತರಿಸಿ ಮಾತನಾಡಿದ ಅವರು ಉಚಿತವಾಗಿ ಶಿಕ್ಷಣ ನೀಡುತ್ತಿರುವ ಅನುದಾನಿತ ಶಾಲೆಯಲ್ಲಿ ದಾನಿಗಳ ಸಹಕಾರದಿಂದ ಹಳೆಯ ವಿಧ್ಯಾರ್ಥಿಗಳಿಂದ ಶೂ, ಸಾಕ್ಸ್ ಇತರೆ ಪರಿಕರಗಳನ್ನು ವಿತರಿಸುತ್ತಿರುವುದು ಶ್ಲಾಘನೀಯ, ಇಲಾಖೆ ದಾನಿಗಳಾದ ಹಳೆಯ ವಿಧ್ಯಾರ್ಥಿಗಳ ಕುಟುಂಬಕ್ಕೆ ಅಭಿನಂದನೆ ಸಲ್ಲಿಸುತ್ತದೆ ಎಂದರು.

ದಾನ ಮಾಡುವ ಗುಣ ಎಲ್ಲರಿಗೂ ಬರುವುದಿಲ್ಲ, ನೀವು ಉತ್ತಮವಾಗಿ ವ್ಯಾಸಂಗ ಮಾಡಿ ನೀವು ದಾನ ಮಾಡುವ ಗುಣ ಬೆಳೆಸಿಕೊಳ್ಳಿ, ದೇಶ ಕಾಪಾಡುವ ಕೆಲಸ ಮಾಡಿ, ಜೀವನದಲ್ಲಿ ಗುರಿ ಇರಲಿ, ಶಿಕ್ಷಕರ ಗುರುಗಳ ಸಂಭAದ ಪವಿತ್ರವಾದದ್ದು, ಗುರು ಹಿರಿಯರನ್ನು ಗೌರವಿಸಿ, ಅಕ್ಷರ ಕಲಿಸಿದ ಗುರುಗಳನ್ನು ಮರೆಯಲು ಸಾಧ್ಯವೇ ಇಲ್ಲ ಎಂದರು, ಇದೇ ಶಾಲೆಯಲ್ಲಿ ೧ರಿಂದ ೭ನೇ ತರಗತಿ ವರೆಗೂ ವ್ಯಾಸಂಗ ಮಾಡಿ ಬೆಂಗಳೂರಿನಲ್ಲಿ ಕಂಪನಿಯಲ್ಲಿ ಕೆಲಸ ಮಾಡುತ್ತಿರುವ ರಘುನಾಥ್ ಸಿಂಗ್ ಮತ್ತು ಇತರೆ ದಾನಿಗಳ  ಸೇವೆ ಶ್ಲಾಘನೀಯ ಅವರ ಕುಟುಂಬಕ್ಕೆ ದೇವರು ಒಳ್ಳೆಯದು ಮಾಡಲಿ ಎಂದರು. ಗುಣಮಟ್ಟದ ಶಿಕ್ಷಣ ಪಡೆದು ದೇಶದ ಉತ್ತಮ ಪ್ರಜೆಗಳಾಗಬೇಕೆಂದರು.

ದಾನಿ ಹಾಗೂ ಹಳೆಯ ವಿಧ್ಯಾರ್ಥಿ ಸಿ.ರಘುನಾಥ್ ಸಿಂಗ್ ಮಾತನಾಡಿ ನಾವು ಓದುವಾಗ ಸೌಲಭ್ಯಗಳು ಇರಲಿಲ್ಲ, ನಿಮಗೆ ಸಿಗುತ್ತಿದೆ ಸದುಪಯೋಗ ಮಾಡಿಕೊಂಡು ಮುಂದೆ ಬರಬೇಕೆಂದರು, ನೀವು ಸಹ ಸಹಾಯ ಮಾಡುವ ಗುಣ ಬೆಳೆಸಿಕೊಳ್ಳಿ, ಈ ಶಾಲೆ ನಮಗೆ ಸಂಸ್ಕಾರ ಕಲಿಸಿದೆ, ನೀವು ಸಹ ಉತ್ತಮ ಸಂಸ್ಕಾರವAತರಾಗಬೇಕೆAದರು, ಇಲ್ಲಿಗೆ ಬಂದರೆ ಭಾಲ್ಯದ  ನೆನಪುಗಳು ಕಣ್ಣ ಮುಂದೆ  ಬರುತ್ತದೆ ಎಂದರು.

ದಾನಿಗಳಾದ ಸುಮಿತ್ರಭಾಯಿ  ಮಾತನಾಡಿ ಚನ್ನಾಗಿ ಓದಿ ಒಳ್ಳೆಯ ಕೆಲಸಕ್ಕೆ ಹೋಗಿ ತಂದೆ ತಾಯಿ ಓದಿದ ಶಾಲೆಯನ್ನು ಮರೆಯಬೇಡಿ ಎಂದು ಶುಭ ಕೋರಿದರು.

ವೇದಿಕೆಯಲ್ಲಿ ದಾನಿಗಳಾದ ಕೃಷ್ಣಾಭಾಯಿ, ರಮೇಶ್ ಸಿಂಗ್, ಈಶಸಿಂಗ್, ತೇಜಸ್ವಿನಿ, ನಿತಿನ್‌ಸಿಂಗ್, ಕೆಸರನಹಳ್ಳಿ ರವಿಕುಮಾರ್, ರಾಕೇಶ್, ಹೊಸಕೋಟೆ ಮಂಜುನಾಥ್, ಕೆಸರನಹಳ್ಳಿ ಪೋಲೀಸ್ ಕೆ.ವಿ.ಪ್ರಭಾಕರ್, ಕೋಲಾರದ ಚೈತ್ರ, ಮುಖ್ಯಶಿಕ್ಷಕ ಎಚ್.ಎಲ್.ಆನಂದ್, ಶಿಕ್ಷಕ ವೃಂದದವರಾದ ರಂಗಣ್ಣ, ಎಸ್.ಗಿರಿಜಮ್ಮ, ಉಷಾರಾಣಿ, ಕಾವ್ಯಶ್ರೀ ಹಾಜರಿದ್ದರು.

Leave a Reply

Your email address will not be published. Required fields are marked *

You missed

error: Content is protected !!