• Wed. Jun 26th, 2024

PLACE YOUR AD HERE AT LOWEST PRICE

ಕೋಲಾರ ನೆಲದಲ್ಲಿ “ಮನಂ ಮೂವಿ ಮೇಕರ್ಸ್” ಪ್ರಸ್ತುತ ಪಡಿಸುತ್ತಿರುವ, ಪಶ್ವಿಮ ಬಂಗಾಲದ ಗುಡ್ಡಗಾಡು ನಿರಾಶ್ರಿತರನ್ನು ಅಲ್ಲಿನ ಪ್ರಭುತ್ವ ಅರಣ್ಯ ಪ್ರದೇಶದಿಂದ ಒಕ್ಕಲೆಬ್ಬಿಸುವ “ಸುಂದರ್ ಬಾನ್ ಹೋರಾಟದ “ ನೈಜ ಘಟನೆಯನ್ನು ಆಧರಿಸಿದ ಚಲನಚಿತ್ರದ ಅಂತಿಮ ಹಂತದ ಚಿತ್ರೀಕರಣ ಜಿಲ್ಲೆಯ ಬಂಗಾರಪೇಟೆ ಗಡಿಯಲ್ಲಿರುವ ಯರಗೋಳ್ ಗ್ರಾಮದ ಖಾಸಗೀ ಜಮೀನಿನಲ್ಲಿ ನಡೆಯಿತು.

ಪಶ್ಚಿಮ ಬಂಗಾಲದ ಒಂದು ಬುಡಕಟ್ಟು ಸಮುದಾಯ ನಿರಾಶ್ರಿತಗೊಂಡ ಬಳಿಕ ಅಲ್ಲಿನ ಅರಣ್ಯ ಪ್ರದೇಶದಲ್ಲಿ ಗುಡಿಸಲು ಹಾಕಿಕೊಂಡು ಬದುಕಲು ಮುಂದಾದಾಗ ಅಲ್ಲಿನ ಪ್ರಭುತ್ವ ಅವರನ್ನು ಬಲವಂತವಾಗಿ ಒಕ್ಕಲೆಬ್ಬಿಸಲು ಪ್ರಯತ್ನಿಸುತ್ತದೆ. ಆ ದಟ್ಟ ಅರಣ್ಯದಲ್ಲಿ ಪ್ರತಿರೋಧ ವ್ಯಕ್ತಪಡಿಸಿದ ಅಲ್ಲಿನ ಸಮುದಾಯ ಹೋರಾಟಗಾರರ ಮೇಲೆ ಲಾಠಿ ಪ್ರಹಾರ ಹಾಗೂ ಗೋಲಿಬಾರ್ ನಡೆಸುವ ಭಯಂಕರ ಯುದ್ಧಭೂಮಿಯ ಚಿತ್ರೀಕರಣವನ್ನು ಯರಗೋಳ್ ಸಮೀಪದ ಅರಣ್ಯಕ್ಕೆ ಹೊಂದಿಕೊoಡಿರುವ ಖಾಸಗೀ ಜಮೀನಿನಲ್ಲಿ ನಡೆಯಿತು. ಪ್ರತಿಯೊಬ್ಬ ಮನುಷ್ಯನಿಗೂ ಬದುಕುವ ಹಕ್ಕು ಇದೆ ಎಂಬುದನ್ನು ಮಾನವೀಯತೆ ಮತ್ತು ಸಾಮಾಜಿಕ ನ್ಯಾಯದ ಪರವಾಗಿ ಮನುಕುಲಕ್ಕೆ ಒಂದು ಸಂದೇಶವನ್ನು ಸಾರುವಂತ ಈ ಚಲನ ಚಿತ್ರಕ್ಕೆ ಕೋಲಾರದ ಅಂತರ ರಾಷ್ಟ್ರೀಯ ಮಾಸ್ಟರ್ ಅಥ್ಲೇಟಿಕ್ ಕ್ರೀಡಾ ಪಟು ಬಿ.ಎಂ.ಶ್ರೀನಿವಾಸ್ ಅವರು ನಿರ್ಮಾಪಕರಾಗಿದ್ದಾರೆ.

ಮಾನವರೆಲ್ಲರೂ ಒಂದೇ ಎಂಬ ಒಂದು ಸಂದೇಶವನ್ನು ಜೀವಜಗತ್ತಿಗೆ ನೀಡುವ ಉದ್ದೇಶದಿಂದ “1979 ಅನ್ ಟೋಲ್ಡ್ ಸ್ಟೋರಿ” ಚಲನಚಿತ್ರಕ್ಕೆ ಕಳೆದ ೨೦೨೩ರ ಅಕ್ಟೋಬರ್ ತಿಂಗಳ ೨೭ರಂದು ಮುಹೂರ್ತ ನಡೆಸಲಾಗಿತ್ತು. ಕೇವಲ ೭ ತಿಂಗಳ ಅವಧಿಯಲ್ಲೇ ಬಹುತೇಕ ಚಿತ್ರೀಕರಣ ಪೂರ್ಣಗೊಂಡಿದ್ದು, ಜೂನ್ ಮೊದಲ ವಾರಾಂತ್ಯಕ್ಕೆ ಸಿನಿಮಾ ಪೂರ್ಣಗೊಳ್ಳಲಿದ್ದು, ಇನ್ನುಳಿದ ಚಿತ್ರೀಕರಣ ಕೋಲಾರ ನೆಲದಲ್ಲೇ ನಡೆಯಲಿದೆ. ಚಳುವಳಿಗಳ ತವರೂರು ಎಂದೇ ಖ್ಯಾತಿ ಹೊಂದಿರುವ ಕೋಲಾರ ಜಿಲ್ಲೆಯವರಿಂದಲೇ ಈ ಚಿತ್ರ ನಿರ್ಮಾಣವಾಗುತ್ತಿದ್ದು, ಚಿತ್ರ ಕನ್ನಡ ಚಿತ್ರ ರಂಗದಲ್ಲಿ ಹೊಸ ಮೈಲಿಗಲ್ಲು ನಿರ್ಮಿಸಲು ಚಿತ್ರತಂಡ ತುದಿಗಾಲಲ್ಲಿ ನಿಂತಿದೆ.

ಚಿತ್ರ ನಿರ್ಮಾಣದಲ್ಲಿ ಸಿನಿಮಾದ ಕಥೆ, ಚಿತ್ರಕಥೆ, ಸಂಭಾಷಣೆ, ನಿರ್ದೇಶನ-ಪುಷ್ಪರಾಜ್, ನಿರ್ಮಾಪಕರು-ಬಿ.ಎಂ.ಶ್ರೀನಿವಾಸ್, ಸಹ ನಿರ್ಮಾಪಕರು-ಶ್ರೀನಿವಾಸ್ ಬೀರಮಾನಹಳ್ಳಿ, ಛಾಯಾಗ್ರಾಹಕರು-ಚರಣ್ ತೇಜಾ, ಕಲಾ ನಿರ್ದೇಶಕರು-ಶಿವಕಾಂತ.ಎಸ್.ಥರಕಾರ್, ಸಹ ನಿರ್ದೇಶನ- ಸುನಿತಾ ನಂದನ್, ನಿರ್ಮಾಣ ವ್ಯವಸ್ಥಾಪಕರು–ಸುಹಾಸ್, ಸಹಾಯಕ ನಿರ್ದೇಕರು- ಲೋಕೇಶ್, ತಕ್ಷರಾಮ್, ದುರ್ಗಾ ಬುಡ್ಡಿದೀಪ, ಪೃಥ್ವಿ, ಮೇಕಪ್-ಪ್ರವೀಣ್, ಯೂನಿಟ್-ನಂಜುoಡಸ್ವಾಮಿ(ಮಧು). ಕಲಾವಿದರು ಬಹುತೇಕ ಕೋಲಾರ ಜಿಲ್ಲೆಯವರೇ ಆಗಿದ್ದಾರೆ.

ಮನುಕುಲಕ್ಕೆ ಸಾಮಾಜಿಕ ನ್ಯಾಯದ ಸಂದೇಶ ನೀಡುವ ಉದ್ದೇಶದಿಂದ ಹೋರಾಟಗಳ ತವರೂರು ಕೋಲಾರದಿಂದಲೇ ಕನ್ನಡ ಚಲನಚಿತ್ರರಂಗಕ್ಕೆ ಒಂದು ಹೊಸತನದ ಕೊಡುಗೆ ನೀಡುವ ಮೂಲಕ, ಕನ್ನಡ ಚಿತ್ರರಂಗದಲ್ಲಿ ಹೊಸ ಮೈಲಿಗಲ್ಲು ನಿರ್ಮಿಸಬೇಕೆಂಬ ಮಹದಾಸೆಯೊಂದಿಗೆ ಬಹಳ ಶ್ರಮಪಟ್ಟು ಚಲನಚಿತ್ರ ಮಾಡುತ್ತಿದ್ದೇವೆ. ಕನ್ನಡ ನಾಡಿನ ಸಮಸ್ತ ಚಿತ್ರಪ್ರೇಮಿಗಳು ಚಲನಚಿತ್ರವನ್ನು ಚಿತ್ರಮಂದಿರಗಳಲ್ಲಿ ವೀಕ್ಷಿಸಿ ಬೆಂಬಲಿಸಬೇಕೆoದು ಮನವಿ ಮಾಡುತ್ತೇನೆ.

– ಬಿ.ಎಂ.ಶ್ರೀನಿವಾಸ್, ನಿರ್ಮಾಪಕರು ಹಾಗೂ ಅಂತರ ರಾಷ್ಟ್ರೀಯ ಮಾಸ್ಟರ್ ಅಥ್ಲೇಟಿಕ್ ಕ್ರೀಡಾ ಪಟು 

ಕಳದೆ ೭ ತಿಂಗಳಿoದ ದಣಿವರಿಯದೇ ಎಲ್ಲಾ ಕಲಾವಿದರು ಹಾಗೂ ತಂತ್ರಜ್ಞರು ಬೆವರು ಸುರಿಸಿ, ಚಿತ್ರ ನಿರ್ಮಾಣಕ್ಕೆ ಸಹಕರಿಸಿದ್ದಾರೆ. ಏನೇ ಕಷ್ಟಬಂದರೂ ಎದೆಗುಂದದೆ ಚಿತ್ರಕರಣಕ್ಕೆ ದಕ್ಕೆಯಾಗದಂತೆ ಸಹಕರಿಸಿದ್ದಾರೆ. ಎಲ್ಲಾ ಕಲಾವಿದರ ಶ್ರಮದಿಂದ ಚಿತ್ರೀಕರಣ ಬಹುತೇಕ ಅಂತಿಮ ಹಂತಕ್ಕೆ ತಲುಪುವಂತಾಗಿದೆ. ಇನ್ನುಳಿದ ತಾಂತ್ರಿಕ ಕೆಲಸಗಳು ಹಾಗೂ ರಿಕಾರ್ಡಿಂಗ್, ಡಬ್ಬಿಂಗ್ ಕೆಲಸಗಳು ಸೇರಿದಂತೆ ಎಲ್ಲಾ ಅಂತಿಮ ಕೆಲಸಗಳು ಮುಂದಿನ ಮೂರು ತಿಂಗಳಲ್ಲಿ ನಡೆಯಲಿದೆ. ಕನ್ನಡ ಚಿತ್ರರಂಗದ ಇತಿಹಾಸದಲ್ಲೇ ಹೊಸ ತಲೆಮಾರಿಗೆ ಹೊಸ ಚೈತನ್ಯ ನೀಡುವ ಚಿತ್ರಕಥೆ ಇದಾಗಿದೆ. ಎಲ್ಲರೂ ಚಿತ್ರವನ್ನು ವೀಕ್ಷಿಸಿ ಬೆಂಬಲಿಸಿ.

– ಪುಷ್ಪರಾಜ್, ಚಿತ್ರ ನಿರ್ದೇಶಕ.

Related Post

ಗ್ರಾಮ ಪಂಚಾಯಿತಿಗಳು ಕಾನೂನು ಪ್ರಕಾರ ಜನರ ಕೆಲಸ ಮಾಡುತ್ತಿಲ್ಲ:ಆರೋಪ.
ಜನ್ಮದಿನಕ್ಕೊಂದು ಸಸಿ ನೆಟ್ಟು ಹಸಿರನ್ನು ಉಸಿರಾಗಿಸಿ – ಹೆಚ್.ಎನ್.ಮೂರ್ತಿ
ಅಂಧಕಾರದಲ್ಲಿ ಮುಳುಗಿದ ವಿಶ್ವವನ್ನು ಸಮ-ಸಮಾಜದ ಬೆಳಕೆಂಬ ಜ್ಞಾನದ ಕಡೆ ಕೊಂಡೊಯ್ಯುವ ನವಯುಗವನ್ನು ಪ್ರತಿಷ್ಠಾಪನೆ ಮಾಡಿದ ಚೇತನ  ಗೌತಮಬುದ್ದ: ಕಲಾವಿದ ಯಲ್ಲಪ್ಪ

Leave a Reply

Your email address will not be published. Required fields are marked *

You missed

error: Content is protected !!