• Wed. Jun 26th, 2024

ಎಪಿಎಂಸಿ ಕಾರ್ಯದರ್ಶಿ ವಿಜಯಲಕ್ಷ್ಮಿ ವಜಾಗೊಳಿಸಲು ತರಕಾರಿ ಮಂಡಿ ಮಾಲೀಕರ ಒತ್ತಾಯ. ಆರೋಪ ನಿರಾಕರಿಸಿದ ಎಪಿಎಂಸಿ ಕಾರ್ಯದರ್ಶಿ

PLACE YOUR AD HERE AT LOWEST PRICE

ಎಪಿಎಂಸಿ ಕಾರ್ಯದರ್ಶಿ ವಿಜಯಲಕ್ಷ್ಮಿ ವಜಾಗೊಳಿಸಲು ತರಕಾರಿ ಮಂಡಿ ಮಾಲೀಕರ ಒತ್ತಾಯ.

ಕೋಲಾರ: ನಗರದ ಹೊರವಲಯದ ಕೃಷಿ ಉತ್ಪನ್ನ ಮಾರುಕಟ್ಟೆಯಲ್ಲಿನ ಕಾರ್ಯದರ್ಶಿ ವಿಜಯಲಕ್ಷ್ಮಿ ಅವರ ಭ್ರಷ್ಟಾಚಾರದ ವಿರುದ್ದ ದೂರು ನೀಡಿ ೫೦ ದಿನ ಕಳೆದರೂ ಯಾವುದೇ ಕ್ರಮ ವಹಿಸಿಲ್ಲ ಎಂದು ಆರೋಪಿಸಿ ಎಪಿಎಂಸಿ ಕಛೇರಿ ಎದುರು ಶುಕ್ರವಾರ ಜೆ.ಎನ್.ಜಿ ತರಕಾರಿ ದಲ್ಲಾಳರ ಕ್ಷೇಮಾಭಿವೃದ್ಧಿ ಸಂಘದ ಪದಾಧಿಕಾರಿಗಳು ಧರಣಿ ನಡೆಸಿ ಎಪಿಎಂಸಿ ಸಹಾಯಕ ನಿರ್ದೇಶಕ ರವಿಕುಮಾರ್ ಅವರಿಗೆ ಮನವಿ ನೀಡಿ ಒತ್ತಾಯಿಸಿದರು.

ಈ ಸಂದರ್ಭದಲ್ಲಿ ಮಂಡಿ ಮಾಲೀಕ ಜಿ.ಬಿ.ಆರ್ ಸತೀಶ್ ಮಾತನಾಡಿ ಎಪಿಎಂಸಿಯಲ್ಲಿ ರೈತರು, ಮಂಡಿ ಮಾಲೀಕರು ಹಾಗೂ ದಲ್ಲಾಳಿಗಳ ಮಾರುಕಟ್ಟೆಗೆ ಸಂಬoಧಿಸಿದoತೆ ಯಾವುದೇ ಕೆಲಸಗಳು ಆಗಬೇಕಾದರೂ ಎಪಿಎಂಸಿ ಕಾರ್ಯದರ್ಶಿ ವಿಜಯಲಕ್ಷ್ಮಿ ಅವರಿಗೆ ಲಂಚ ನೀಡಬೇಕಾಗಿದೆ ಇದಕ್ಕೆ ಸಂಬoಧಿಸಿದ ಲಂಚದ ದಾಖಲೆಗಳು ಸಹ ಇದ್ದು ಈ ವ್ಯವಸ್ಥೆಗೆ ಕಡಿವಾಣ ಹಾಕಬೇಕೆಂದು ಸಂಬoಧಿಸಿದoತೆ ಅಧಿಕಾರಿಗಳಿಗೆ ದೂರು ನೀಡಿದ್ದು ಅಧಿಕಾರಿಗಳು ಬಂದು ಕಛೇರಿಯಲ್ಲಿ ಪರಿಶೀಲನೆ ನಡೆಸಲಾಗಿದೆ ಹೊರತು ಅವರ ವಿರುದ್ದ ಯಾವುದೇ ಕ್ರಮವಾಗಿಲ್ಲ ಎಂದು ದೂರಿದರು.

ಈ ಸಂದರ್ಭದಲ್ಲಿ ಸಂಘದ ಮುಖಂಡ ಎಪಿಎಂಸಿ ಪುಟ್ಟುರಾಜು ಮಾತನಾಡಿ ಎಪಿಎಂಸಿಯಲ್ಲಿ ಭ್ರಷ್ಟಾಚಾರ ನಡೆದಿದೆ ಎಂದು ದೂರು ನೀಡಿದ ಪರಿಣಾಮವಾಗಿ ಯಾವುದೇ ಕೆಲಸ ಆಗಬೇಕಾದರೆ ದೂರಿನ ನೆಪದಲ್ಲಿ ನಮ್ಮಗಳ ಮೇಲೆ ವಿನಾಕಾರಣ ಕಿರುಕುಳ ನೀಡುತ್ತಾರೆ ಸರಕಾರ ನಿಗಧಿ ಪಡಿಸಿದ ಧರಕ್ಕಿಂತ ಹೆಚ್ಚಿನ ಹಣವನ್ನು ಅಧಿಕಾರಿಗಳಿಗೆ ನೀಡಬೇಕು ಇದಕ್ಕೆ ಸಂಬoಧಿಸಿದoತೆ ದಾಖಲೆ ಸಮೇತವಾಗಿ ಮೇಲಿನ ಅಧಿಕಾರಿಗಳಿಗೆ ಕೊಟ್ಟರು ಇಂತಹ ಭ್ರಷ್ಟ ಅಧಿಕಾರಿಯನ್ನು ಇನ್ನೂ ಇಲ್ಲೇ ಉಳಿಸಿಕೊಂಡು ಇದ್ದಾರೆ ಎಂದು ದೂರಿದರು.

ನಮ್ಮಲ್ಲಿ ದಲ್ಲಾಳರ ಪರವಾನಗಿ ಪಡೆಯಲು ೨೦ ಸಾವಿರದಿಂದ ೪೦ ಸಾವಿರದಷ್ಟು ಹಣವನ್ನು ಜೊತೆಗೆ ವ್ಯಕ್ತಿಗೆ ಅನುಗುಣವಾಗಿ ಲಂಚ ಕೊಡಬೇಕು ಕೊಡದೇ ಹೋದರೆ ಯಾವುದೇ ಕೆಲಸವು ಮಾಡಿಕೊಡುವುದಿಲ್ಲ ಎಂದು ನೇರವಾಗಿ ಹೇಳುತ್ತಾರೆ ಎಪಿಎಂಸಿ ಆವರಣದ ಒಳಗಡೆ ಜಾಗದ ಸಮಸ್ಯೆಯಿಂದ ಸುಮಾರು ೬೩ ಜನ ತರಕಾರಿ ಮಂಡಿ ಮಾಲೀಕರು ನಮ್ಮ ಫೆಡರೇಶನ್ ಜಾಗದಲ್ಲಿ ಇದ್ದು ಅದಕ್ಕೆ ಸೌಕರ್ಯಗಳನ್ನು ಒದಗಿಸುವಂತೆ ಮನವಿ ಮಾಡಿದರೂ ಆ ಜಾಗದಲ್ಲಿ ಅಭಿವೃದ್ಧಿ ಮಾಡಲು ಅವಕಾಶವಿಲ್ಲ ಎಂದವರು ನಾವು ಮಾಡಿದ ಅಭಿವೃದ್ಧಿಗೆ ಇಲಾಖೆಯ ಕಡೆಯಿಂದ ಕಾಮಗಾರಿಗಳಿಗೆ ಬಿಲ್ ಮಾಡಿಕೊಂಡಿದ್ದಾರೆ ಎಪಿಎಂಸಿಯ ಅಭಿವೃದ್ಧಿ ಕೆಲಸಗಳು ಬಗ್ಗೆ ಮಾಹಿತಿ ಪಡೆದು ತನಿಖೆ ಮಾಡಿಸಿದರೆ ಇನ್ನಷ್ಟು ಸತ್ಯ ಬಯಲಿಗೆ ಬರಲಿದೆ ಎಂದು ಒತ್ತಾಯಿಸಿದರು.

ಈ ಸಂದರ್ಭದಲ್ಲಿ ಜೆ.ಎನ್.ಜಿ ತರಕಾರಿ ದಲ್ಲಾಳರ ಕ್ಷೇಮಾಭಿವೃದ್ಧಿ ಸಂಘದ ಅಧ್ಯಕ್ಷ ಅಮರೇಶ್ ಮಾತನಾಡಿ ಎಪಿಎಂಸಿ ಭ್ರಷ್ಟಾಚಾರದ ಬಗ್ಗೆ ಮೇಲಿನ ಅಧಿಕಾರಿಗಳು ಎಚ್ಚತ್ತುಕೊಂಡು ಕಾರ್ಯದರ್ಶಿ ವಿಜಯಲಕ್ಷ್ಮಿ ಅವರನ್ನು ವಜಾಗೊಳಿಸಬೇಕು ಇಲ್ಲದೇ ಹೋದರೆ ಮುಂದಿನ ದಿನಗಳಲ್ಲಿ ಎಲ್ಲಾ ಮಂಡಿ ಮಾಲೀಕರು, ವ್ಯಾಪಾರಸ್ಥರು ಹಾಗೂ ಕೂಲಿ ಕಾರ್ಮಿಕರು ತಮ್ಮ ವೈವಾಟನ್ನು ಸ್ಥಗಿತಗೊಳಿಸಿ ಎಪಿಎಂಸಿ ಮುಂದೆ ಅನಿರ್ಧಿಷ್ಟಾವಧಿ ಧರಣಿ ನಡೆಸಲಾಗುತ್ತದೆ ಎಂದು ಎಚ್ಚರಿಕೆ ನೀಡಿದರು.

ಈ ಸಂದರ್ಭದಲ್ಲಿ ಜೆಡಿಎಸ್ ಮುಖಂಡ ಸಿಎಂಆರ್ ಶ್ರೀನಾಥ್, ತರಕಾರಿ ದಲ್ಲಾಳರ ಕ್ಷೇಮಾಭಿವೃದ್ಧಿ ಸಂಘದ ಕಾರ್ಯದರ್ಶಿ ವೆಂಕಟೇಗೌಡ, ಖಜಾಂಚಿ ನಾಗೇಶ್, ಉಪಾಧ್ಯಕ್ಷ ಗೋಪಾಲಕೃಷ್ಣ, ಪದಾಧಿಕಾರಿಗಳಾದ ವೆಂಕಟರಾಮ್, ವೆಂಕಟೇಶ್, ಮುನಿರಾಜು, ಮಂಜುನಾಥರೆಡ್ಡಿ, ಶ್ರೀನಿವಾಸ್, ರೆಡ್ಡೆಪ್ಪ, ನವೀನ್ ಮುಂತಾದವರು ಇದ್ದರು.

ಜೆಎನ್‌ಜಿ ತರಕಾರಿ ದಲ್ಲಾಳರ ಕ್ಷೇಮಾಭಿವೃದ್ಧಿ ಸಂಘ ಕಾನೂನು ಬಾಹಿರವಾಗಿ ಪ್ರತಿ ದಲ್ಲಾಳರಿಂದ ೩,೫ ಲಕ್ಷ ವಸೂಲಿ ಮಾಡಲಾಗುತ್ತಿದೆ. ಈ ಬಗ್ಗೆ ಬಹಳಷ್ಟು ದಲ್ಲಾಳರು ಈಗಾಗಲೇ ದೂರು ನೀಡಿದ್ದಾರೆ, ಈ ಬಗ್ಗೆ ಸಂಘದವರನ್ನು ಕರೆದು ದಲ್ಲಾಳರಿಗೆ ಕಿರುಕುಳ ನೀಡಬಾರದೆಂದು ತಿಳಿಸಲಾಗಿದೆ. ಸದರಿ ಮಾಹಿತಿಯನ್ನು ಎಪಿಎಂಸಿ ಆಡಳಿತಾಧಿಕಾರಿಗಳಾದ ಜಿಲ್ಲಾಧಿಕಾರಿಗಳ ಗಮನಕ್ಕೂ ತರಲಾಗಿದೆ. ಮನಬಂದoತೆ ಹರಾಜು ಹಾಕುತ್ತಾರೆ, ನಿಗಧಿತ ಸಮಯದಲ್ಲಿ ಹರಾಜು ಮಾಡಬೇಕೆಂದು ಸೂಚನೆ ನೀಡಿದರೂ ಸಹ, ರೈತರಿಗೆ ತೊಂದರೆ ಆಗುವ ರೀತಿಯಲ್ಲಿ ಹರಾಜು ಹಾಕಲಾಗುತ್ತಿದೆ. ರೈತರ ಬೆಳೆಗಳಿಂದ ೧೦ ಕೆಜಿ ವರೆಗೂ ತರಕಾರಿಗಳನ್ನು ತೆಗೆದು ಹಾಕಲಾಗುತ್ತಿದೆ. ತರಕಾರಿಗಳನ್ನು ರೈತರು ತರುವ ವೇಳೆಗೆ ಬೆಲೆ ಕುಸಿದಿದೆ ಎಂದು ಅವರನ್ನು ನಂಬಿಸಿ ಹರಾಜು ಹಾಕದೆ ಕನಿಷ್ಠ ಬೆಲೆ ಅವರೇ ನಿಗಧಿ ಮಾಡಿ ರೈತರಿಗೆ ವಂಚನೆ ಮಾಡುತ್ತಿದ್ದಾರೆ. ಇದನ್ನು ಮಾಡಬಾರದೆಂದು ತಾಕೀತು ಮಾಡಿದ್ದಕ್ಕೆ ನನ್ನ ವಿರುದ್ಧ ಇಲ್ಲಸಲ್ಲದ ಆರೋಪ ಮಾಡಲಾಗುತ್ತಿದೆ. ಸರ್ಕಾರಿ ನಿಯಮಗಳಡಿ ನೋಂದಣಿ ಮಾಡದ ಸಂಘವೊoದು ಎಪಿಎಂಸಿ ವ್ಯಾಪ್ತಿಯಲ್ಲಿ ದಲ್ಲಾಳಿಗಳಿಂದ ವಸೂಲಿ ಮಾಡುವುದು ಸರಿಯಿಲ್ಲ, ದಲ್ಲಾಳಿಗಳು ಎಪಿಎಂಸಿಗೆ ನಗದು ಕಟ್ಟಬಾರದು ಆನ್‌ಲೈನ್ ಅಥವಾ ಚೆಕ್ ಮೂಲಕ ಸಂದಾಯ ಮಾಡಲು ಹೇಳಿದರೆ ಅದನ್ನು ವಿರೋಧಿಸುತ್ತಿದ್ದಾರೆ. ತರಕಾರಿ ವ್ಯಾಪಾರಿಗಳು ಮಾತ್ರ ಈ ರೀತಿ ಮಾಡುತ್ತಿದ್ದಾರೆ.

– ವಿಜಯಲಕ್ಷಿö್ಮ. ಕಾರ್ಯದರ್ಶಿ, ಎ.ಪಿ.ಎಂ.ಸಿ. ಕೋಲಾರ.

Related Post

ಗ್ರಾಮ ಪಂಚಾಯಿತಿಗಳು ಕಾನೂನು ಪ್ರಕಾರ ಜನರ ಕೆಲಸ ಮಾಡುತ್ತಿಲ್ಲ:ಆರೋಪ.
ಜನ್ಮದಿನಕ್ಕೊಂದು ಸಸಿ ನೆಟ್ಟು ಹಸಿರನ್ನು ಉಸಿರಾಗಿಸಿ – ಹೆಚ್.ಎನ್.ಮೂರ್ತಿ
ಅಂಧಕಾರದಲ್ಲಿ ಮುಳುಗಿದ ವಿಶ್ವವನ್ನು ಸಮ-ಸಮಾಜದ ಬೆಳಕೆಂಬ ಜ್ಞಾನದ ಕಡೆ ಕೊಂಡೊಯ್ಯುವ ನವಯುಗವನ್ನು ಪ್ರತಿಷ್ಠಾಪನೆ ಮಾಡಿದ ಚೇತನ  ಗೌತಮಬುದ್ದ: ಕಲಾವಿದ ಯಲ್ಲಪ್ಪ

Leave a Reply

Your email address will not be published. Required fields are marked *

You missed

error: Content is protected !!