• Fri. May 3rd, 2024

ಹುಣಸನಹಳ್ಳಿ ಬ್ರಿಡ್ಜ್ ಬಳಿ ಬಾರ್ ಗೆ ಲೈಸನ್ಸ್ ಕೊಡಬೇಡಿ:ವಂಕಟೇಶ್.

PLACE YOUR AD HERE AT LOWEST PRICE

ಬಂಗಾರಪೇಟೆ ತಾಲ್ಲೂಕಿನ ಹುಣಸನಹಳ್ಳಿ ಗ್ರಾಮದ ಮೇಲ್ಸುತುವೆ ಪಕ್ಕದಲ್ಲಿ ಬಾರ್ ಅಂಡ್ ರೆಸ್ಟೋರೆಂಟ್‌ಗೆ ಸಂಬಧಪಟ್ಟ ಯಾವುದೇ ರೀತಿಯ ಲೈಸನ್ಸ್, ಎನ್‌ಓಸಿ ನೀಡಬಾರದೆಂದು ಕರ್ನಾಟಕ ದಲಿತ ರೈತ ಸೇನೆಯಿಂದ ಅಬಕಾರಿ ಇಲಾಖೆಗೆ ಮನವಿ ನೀಡಲಾಯಿತು.

ಈ ವೇಳೆ ಸಂಘಟನೆಯ ಸಂಸ್ಥಾಪಕ ಅಧ್ಯಕ್ಷ ಹುಣಸನಹಳ್ಳಿ ವೆಂಕಟೇಶ್ ಮಾತನಾಡಿ, ಬಂಗಾರಪೇಟೆ ಕೆಜಿಎಫ್ ತಾಲ್ಲೂಕುಗಳ ಸಿಎಲ್-೨ ಪರವಾನಿಗೆ ಪಡೆದು ಸಿಎಲ್-೭ ಮತ್ತು ೯ ನಡೆಸುತ್ತಿರುವ ಬಗ್ಗೆಯೂ ಕ್ರಮ ಜರುಗಿಸಬೇಕು ಎಂದು ಒತ್ತಾಯ ಮಾಡಿದರು.

ಬಂಗಾರಪೇಟೆ ತಾಲ್ಲೂಕು, ಕಸಬಾ ಹೋಬಳಿ ಹುಣಸನಹಳ್ಳಿ ಗ್ರಾಮಕ್ಕೆ ಸಂಬಂಧಪಟ್ಟ ಮೇಲ್ಸುತುವೆ ಪಕ್ಕದಲ್ಲಿ ಬಾರ್ ಅಂಡ್ ರೆಸ್ಟೋರೆಂಟ್ ಕಟ್ಟಡ ಪ್ರಾರಂಭವಾಗಿದ್ದು, ಇದಕ್ಕೆ ಯಾವುದೇ ರೀತಿಯ ಎನ್‌ಓಸಿ ಮತ್ತು ಅನುಮತಿ ನೀಡಬಾರದು.

ಹುಣಸನಹಳ್ಳಿ ಗ್ರಾಮದಲ್ಲಿ ಸುಮಾರು ಶೇ.60%ರಷ್ಟು ಪರಿಶಿಷ್ಟ ಜಾತಿ, ಎಸ್ಸಿ ಆದಿಕರ್ನಾಟಕ ಹಾಗೂ ಭೋವಿ ಜನಾಂಗದವರು ವಾಸವಾಗಿದ್ದು, ಈಗಾಗಲೇ ಹುಣಸನಹಳ್ಳಿ ಬ್ರಿಡ್ಜ್ ಬಳಿ ಬಾರ್ ಇದ್ದು, ಸುಮಾರರಷ್ಟು ಕುಟುಂಬಗಳು ಬಾರಿನಿಂದ ಬೀದಿಗೆ ಬಂದಿವೆ.

ಹುಣಸನಹಳ್ಲಿ ಗ್ರಾಮದಲ್ಲಿ ಕಾನೂನು ಸುವ್ಯವಸ್ಥೆ ಅದಗೆಡಿಸುವ ನಿಟ್ಟಿನಲ್ಲಿ ಮತ್ತೊಂದು ಬಾರ್‌ನ್ನು ಸರ್ಕಾರ  ಸ್ಥಾಪಿಸಲು ಮುಂದಾಗುತ್ತಿರುವುದು ದುರಂತವಾಗಿದ್ದು,
ರಸ್ತೆಯು ರಾಜ್ಯ ಹೆದ್ದಾರಿಯಾಗಿದ್ದು, 20ಮೀ ಪಕ್ಕದಲ್ಲೇ ಬಾರನ್ನು ನಿರ್ಮಾಣ ಮಾಡುತ್ತಿರುವುದು ಕಾನೂನು ಬಾಹಿರವಾಗಿರುತ್ತದೆ.

ಈ ಕಟ್ಟಡಕ್ಕೆ ಅಂಟಿಕೊಂಡಂತೆ ಕ್ಲಿನಿಕ್ ಸಹ ಇರುತ್ತದೆ. ಯಾವುದೇ ಕಾರಣಕ್ಕೂ ಅನುಮತಿ ನೀಡಬಾರದೆಂದು ಒತ್ತಾಯಿಸುತ್ತಾಯಿಸಿದ ಅವರು ಬಂಗಾರಪೇಟೆ ಮತ್ತು ಕೆಜಿಎಫ್ ತಾಲ್ಲೂಕಿನಾದ್ಯಂತ ಸಿಎಲ್-2 ವೈನ್ಸ್ಗಳು ಪರವಾನಿಗೆ ಅನುಮತಿ ಪಡೆದು ಅಬಕಾರಿ ನಿಯಮಗಳನ್ನು ಉಲ್ಲಂಘಿಸಿವೆ ಎಂದು ಆರೋಪಿಸಿದರು.

ರಾಜ ರೋಷವಾಗಿ ಗ್ರಾಹಕರಿಗೆ ಮದ್ಯ ಮಾರಾಟ ಮಾಡುತ್ತಿರುವ ವೈನ್ಸ್ ಮಾಲೀಕರ ವಿರುದ್ದ ಕ್ರಮ ಕೈಗೊಂಡು ಸಾರ್ವಜನಿಕ ಹಿತಾಸಕ್ತಿಯನ್ನು ಕಾಯಬೇಕೆಂದು ಒತ್ತಾಯಿಸಿದ ಅವರು ಅನುಮತಿ ನೀಡಿದ್ದೇ ಆದಲ್ಲಿ ತಮ್ಮ ಕಛೇರಿ ಎದುರು ಅನಿರ್ಧಿಷ್ಠಾವಧಿ ಧರಣಿ ಹಮ್ಮಿಕೊಳ್ಳಲಾಗುವುದೆಂದು  ಎಚ್ಚರಿಕೆ ನೀಡಿದರು.

ಈ ಸಂದರ್ಭದಲ್ಲಿ ಕಾರಮಾನಹಳ್ಳಿ ಅಶೋಕ್, ರಾಮಾಪುರ ಚಲಪತಿ, ಕೊಂಡನಹಳ್ಳ ರವಿ ಕುಮಾರ್, ಬಟ್ರಕುಪ್ಪ ಅರುಣ್, ಮುಂತಾದವರು ಇದ್ದರು.

Related Post

ಜೆಡಿಎಸ್‌ ಬಿಜೆಪಿ ಒಂದಾಗಿ ಸಂವಿಧಾನಕ್ಕೆ ಅಪಾಯ ಎಚ್ವತ್ತು ಕಾಂಗ್ರೆಸ್ ಬೆಂಬಲಿಸಿ: ಬೈರತಿ ಸುರೇಶ್
ವಚನ ಭ್ರಷ್ಟ ಬಿಜೆಪಿ ನೇತೃತ್ವದ ಎನ್.ಡಿ.ಎ. ಮೈತ್ರಿಕೂಟಕ್ಕೆ ಮತ ಕೇಳುವ ನೈತಿಕತೆ ಇಲ್ಲ-ಕೆ.ವಿ.ಗೌತಮ್
ಏಪ್ರಿಲ್ ೨೬ ರೊಳಗೆ ಎಕ್ಸಿಡಿ ಕಾರ್ಮಿಕರ ಬೇಡಿಕೆಗಳನ್ನು ಈಡೇರಿಸಲು ಆಗ್ರಹ ಇಲ್ಲವಾದಲ್ಲಿ ತೀವ್ರ ರೀತಿಯ ಹೋರಾಟ ನಡೆಸಲು ಕಾರ್ಮಿಕರ ಸಂಘಗಳ ಸಭೆಯಲ್ಲಿ ನಿರ್ಧಾರ

Leave a Reply

Your email address will not be published. Required fields are marked *

You missed

error: Content is protected !!