• Tue. Apr 30th, 2024

ಕೋಲಾರ I‌ ಸಂವಿಧಾನ ಬದಲಿಸುವವರ ಜೊತೆ ನಿಂತ ಸಿ.ಟಿ.ರವಿ ದಲಿತರೊಂದಿಗೆ ಸಂವಾದ ಮಾಡಿದರೆ ಪ್ರಯೋಜನವೇನು-ಕದಸಂಸ

PLACE YOUR AD HERE AT LOWEST PRICE

ಸಂವಿಧಾನ ಬದಲಿಸುವವರ ಜೊತೆ ನಿಂತುಕೊಂಡಿರುವ ಸಿ.ಟಿ.ರವಿ ದಲಿತ ಮುಖಂಡರ ಜೊತೆ ಸಂವಾದ ನಡೆಸಿದರೆ ಪ್ರಯೋಜನವೇನು ಎಂದು ಕದಸಂಸ ರಾಜ್ಯ ಸಂಘಟನಾ ಸಂಚಾಲಕ ಸೂಲಿಕುಂಟೆ ರಮೇಶ್ ಪ್ರಶ್ನಿಸಿದರು.

ಕೋಲಾರ ನಗರದ ಬುದ್ಧ ಮಂದಿರದಲ್ಲಿ ಕದಸಂಸ ಸಮಿತಿ ಜಿಲ್ಲಾ ಶಾಖೆ ವತಿಯಿಂದ ನಡೆದ ವಿಭಾಗ ಮಟ್ಟದ ಪದಾಧಿಕಾರಿಗಳ ಸಭೆಯಲ್ಲಿ ಮಾತನಾಡಿ, ಸಂವಿಧಾನ ವಿರುದ್ಧ ಹೇಳಿಕೆಯನ್ನು ನೀಡುವವರ ಜೊತೆಯಲ್ಲಿ ಸಂವಿಧಾನವನ್ನು ಬದಲಿಸುವ ಬಿಜೆಪಿಯ ಶಾಸಕ ಸಿ.ಟಿ.ರವಿ ಅವರು ಬಯಕೆಯನ್ನು ಹೊಂದಿರುವ ಅವರು ದಲಿತ ಸಮುದಾಯದ ಮುಖಂಡರೊಂದಿಗೆ ಸಂವಾದ ಏನು ಹೇಳುತ್ತದೆ ಎಂದು ಲೇವಡಿ ಮಾಡಿದರು.

ಸಂವಿಧಾನ ಶಿಲ್ಪಿ ಡಾ.ಬಿ.ಆರ್.ಅಂಬೇಡ್ಕರ್ ಹಾಗೂ ಅವರು ರಚಿಸಿರುವ ಸಂವಿಧಾನವನ್ನು ಒಪ್ಪುದಿಲ್ಲ, ಜತೆಗೆ ಅವರ ವಿಚಾರಧಾರೆಗಳು ಸಹ ಬೇಕಿಲ್ಲ, ಇಂತಹವರ ಬಗ್ಗೆ ಮಾತನಾಡುವ ಯೋಗ್ಯತೆ ನೈತಿಕತೆ ಅವರಿಗೆ ಇಲ್ಲವಾಗಿದೆ ಕದಸಂಸ ತೀವ್ರವಾಗಿ ಖಂಡಿಸುತ್ತೇವೆ ಎಂದು ದೂರಿದರು.

ದಲಿತ ಹಿರಿಯ ಹೋರಾಟಗಾರ ಎನ್.ಶಿವಣ್ಣ ಅವರು ಶೋಷಿತರ ನೊಂದವರ ಪರವಾಗಿ ಹೋರಾಟಗಳ ದಲಿತ ಸಮುದಾಯದ ಮುಖಂಡರು ಹೆಜ್ಜೆ ಗುರ್ತಿನಲ್ಲಿ ನಡೆಯುತ್ತಿದ್ದೇವೆ ಎಂದರು.

ದಲಿತ ಹಿರಿಯ ಹೋರಾಟಗಾರದ ದಿವಂಗತ ಎನ್.ಶಿವಣ್ಣ ಅವರ ಪುಣ್ಯತಿಥಿ ಮಾರ್ಚ್ ೪ರ ಅಂಗವಾಗಿ ದಲಿತ ಜನ ಜಾಗೃತಿ ಸಮಾವೇಶವನ್ನು ನಗರದಲ್ಲಿ ಹಮ್ಮಿಕೊಳ್ಳಲಾಗಿದೆ ಎಂದು ಹೇಳಿದರು.

ರಾಜ್ಯದ ೮ ಜಿಲ್ಲೆಗಳಿಂದ ಕದಸಂಸ ಮುಖಂಡರು ಆಗಮಿಸುತ್ತಿದ್ದು, ಕೋಲಾರ ನಗರದಲ್ಲಿ ನಡೆಯುವ ಸಮಾವೇಶದಲ್ಲಿ ರಾಜಕೀಯ ನಿರ್ಧಾರವನ್ನು ರಾಜ್ಯ ಸಮಿತಿಯಿಂದ ನಿರ್ಣಯ ಮಾಡಲಾಗಿದೆ ಎಂದರು.

ಸಭೆಯಲ್ಲಿ ಕದಸಂಸ ರಾಜ್ಯ ಸಂಘಟನಾ ಸಂಚಾಲಕ ವಿಜಯನರಸಿಂಹ, ಬೆಂಗಳೂರು ವಿಭಾಗೀಯ ಸಂಚಾಲಕ ಎಚ್.ವಿ.ವೆಂಕಟೇಶ್, ಜಿಲ್ಲಾ ಸಂಚಾಲಕ ನಾಗನಾಳ ಮುನಿಯಪ್ಪ, ಬೆಂಗಳೂರು ಜಿಲ್ಲಾ ಸಂಚಾಲಕ ನಂಜುಂಡಪ್ಪ, ಬೆಂಗಳೂರು ಗ್ರಾಮಾಂತರ ಸಂಚಾಲಕ ದೇವರಾಜ್, ಜಿಲ್ಲಾ ಮುಖಂಡರಾದ ಎಚ್.ಮುನಿಚೌಡಪ್ಪ, ಗನ್ ವೆಂಕಟರಮಣಪ್ಪ, ರೋಜಾರಹಳ್ಳಿ ವೆಂಕಟರಮಣ, ಗೋವಿಂದರಾಜು, ಸಿ ಈರಪ್ಪ, ಮರಸನಹಳ್ಳಿ ವೆಂಕಟರಮಣ, ದೇಶಿಹಳ್ಳಿ ಶ್ರೀನಿವಾಸ್, ರೆಡಪ್ಪ, ಎಸ್.ಎನ್.ವೆಂಕಟೇಶ್, ಯಲಪ್ಪ, ಬೆಳ್ಳೂರು ಅನಿಲ್ ಇದ್ದರು.

ಸುದ್ದಿ ಓದಿ ಹಂಚಿ:

Related Post

ಜೆಡಿಎಸ್‌ ಬಿಜೆಪಿ ಒಂದಾಗಿ ಸಂವಿಧಾನಕ್ಕೆ ಅಪಾಯ ಎಚ್ವತ್ತು ಕಾಂಗ್ರೆಸ್ ಬೆಂಬಲಿಸಿ: ಬೈರತಿ ಸುರೇಶ್
ವಚನ ಭ್ರಷ್ಟ ಬಿಜೆಪಿ ನೇತೃತ್ವದ ಎನ್.ಡಿ.ಎ. ಮೈತ್ರಿಕೂಟಕ್ಕೆ ಮತ ಕೇಳುವ ನೈತಿಕತೆ ಇಲ್ಲ-ಕೆ.ವಿ.ಗೌತಮ್
ಏಪ್ರಿಲ್ ೨೬ ರೊಳಗೆ ಎಕ್ಸಿಡಿ ಕಾರ್ಮಿಕರ ಬೇಡಿಕೆಗಳನ್ನು ಈಡೇರಿಸಲು ಆಗ್ರಹ ಇಲ್ಲವಾದಲ್ಲಿ ತೀವ್ರ ರೀತಿಯ ಹೋರಾಟ ನಡೆಸಲು ಕಾರ್ಮಿಕರ ಸಂಘಗಳ ಸಭೆಯಲ್ಲಿ ನಿರ್ಧಾರ

Leave a Reply

Your email address will not be published. Required fields are marked *

You missed

error: Content is protected !!