• Fri. May 17th, 2024

ಕೋಲಾರ I ಉಸ್ತುವಾರಿ ಸಚಿವ ಮುನಿರತ್ನ ಕೊಂಬು ಬಂದಂತೆ ಆಡುತ್ತಿದ್ದಾರೆ -ಶ್ರೀನಿವಾಸಗೌಡ

PLACE YOUR AD HERE AT LOWEST PRICE

ಕೋಲಾರ ಜಿಲ್ಲಾ ಉಸ್ತುವಾರಿ ಸಚಿವ ಮುನಿರತ್ನ ಮೊದಲ ಬಾರಿಗೆ ಸಚಿವರಾಗಿದ್ದು ಅವರಿಗೆ ಕೊಂಬುಗಳು ಬಂದಂತೆ ಆಡುತ್ತಿದ್ದಾರೆ ಎಂದು ಶಾಸಕ ಕೆ ಶ್ರೀನಿವಾಸಗೌಡ ಅಸಮಾಧಾನ ವ್ಯಕ್ತಪಡಿಸಿದರು.

ಕೋಲಾರ ನಗರದ ಶಾಸಕರ ಗೃಹ ಕಚೇರಿಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿ, ಮೊದಲ ಬಾರಿಗೆ ಕಾಂಗ್ರೆಸ್ ಪಕ್ಷದಲ್ಲಿ ಶಾಸಕರಾಗಿ ಬಿಜೆಪಿ ಪಕ್ಷವನ್ನು ಸೇರ್ಪಡೆಯಾಗುವ ಮೂಲಕ ಸಚಿವರಾಗಿ ಬಾಯಿಗೆ ಬಂದಂತೆ ಉದ್ದಟನತನದಿಂದ ಮಾತನಾಡುವುದನ್ನು ಬಿಡಲಿ ಎಂದು ಕಿವಿ ಮಾತು ತಿಳಿಸಿದರು,

ತಾಲೂಕಿನಲ್ಲಿ ಯಾರು ಎಷ್ಟೇ ಅಪಪ್ರಚಾರ ಮಾಡಿದರೂ ಸಹ ಕೋಲಾರ ವಿಧಾನಸಭಾ ಕ್ಷೇತ್ರದಿಂದ ಮಾಜಿ ಸಿಎಂ ಸಿದ್ದರಾಮಯ್ಯ ಅವರು ಶಾಸಕರಾಗಿ ಆಯ್ಕೆಯಾಗಿ ರಾಜ್ಯದಲ್ಲಿ ಮುಖ್ಯಮಂತ್ರಿಯಾಗಿ ಆಡಳಿತ ಚುಕ್ಕಾಣಿ ಹಿಡಿಯುವುದು ಖಚಿತ ಎಂದು ಭವಿಷ್ಯ ನುಡಿದರು,

ಪ್ರಶ್ನೆಯೊಂದಕ್ಕೆ ಡಿಸಿಸಿ ಬ್ಯಾಂಕ್ ಮುಚ್ಚಿ ಹೋಗುವ ಹಂತದಲ್ಲಿ ಬ್ಯಾಲಹಳ್ಳಿ ಗೋವಿಂದಗೌಡ ಅಧ್ಯಕ್ಷರಾಗಿ ಕಳೆದ ೧೦ ವರ್ಷಗಳಿಂದ ಸಾಲ ನೀಡುತ್ತಿದ್ದಾರೆ. ಚುನಾವಣೆ ಬಂತು ಎಂದು ನೀಡುತ್ತಿಲ್ಲ, ವೇಮಗಲ್‌ನಲ್ಲಿ ನಡೆಯುತ್ತಿರುವುದು ಮಹಿಳೆಯರ ಮತ್ತು ರೈತರ ಸಹಕಾರಿ ಕಾರ್ಯಕ್ರಮವಾಗಿದೆ. ಜನಪ್ರತಿನಿಧಿಗಳು ಸಂಘಟಿತರಾಗಿ ಮಾಡುತ್ತಿದ್ದೇವೆ ಎಂದರು.

ವಿಧಾನಪರಿಷತ್ ಸದಸ್ಯ ಎಂ.ಎಲ್. ಅನಿಲ್ ಕುಮಾರ್ ಮಾತನಾಡಿ, ಸಿದ್ದರಾಮಯ್ಯ ಸಮ್ಮಿಶ್ರ ಸರ್ಕಾರದ ಆಡಳಿತದಲ್ಲಿ ೩೬೦ ಕೋಟಿ ಸಾಲ ಮನ್ನಾ, ಪ್ರಧಾನಿ ಮನಮೋಹನ್ ಸಿಂಗ್ ಆಡಳಿತದಲ್ಲಿ ರಾಷ್ಟ್ರದಲ್ಲಿ ೭೨ ಸಾವಿರ ಕೋಟಿ ಸಾಲ ಮನ್ನ್ನಾ ಮಾಡಿದ್ದಾರೆ. ಪಕ್ಷಾತೀತವಾಗಿ ಡಿಸಿಸಿ ಬ್ಯಾಂಕ್ ಸಾಲ ವಿತರಣೆ ಮಾಡುತ್ತಿದೆ. ಸುಮಾರು ಅವಿಭಜಿತ ಜಿಲ್ಲೆಯಲ್ಲಿ ೪೦ ಸಾವಿರಕ್ಕೂ ಹೆಚ್ಚು ಸಂಘಗಳನ್ನು ಡಿಸಿಸಿ ಬ್ಯಾಂಕ್ ಹೊಂದಿದೆ ಎಂದು ವಿವರಿಸಿದರು.

ರಾಜ್ಯದಲ್ಲಿ ಕಾಂಗ್ರೇಸ್ ಪಕ್ಷ ಅಧಿಕಾರಕ್ಕೆ ಬಂದಲ್ಲಿ ಗೃಹಲಕ್ಷ್ಮಿ ಯೋಜನೆಯಲ್ಲಿ ೨ ಸಾವಿರ ರೂ ಹಾಗೂ ಪ್ರತಿ ಮನೆಗೆ ೨೦೦ ಯನೀಟ್ ಉಚಿತ ವಿದ್ಯುತ್ ನೀಡಲಾಗುವುದು ಎಂದು ಭರವಸೆ ನೀಡಿರುವ ನಮ್ಮ ಪಕ್ಷ ನುಡಿದಂತೆ ನಡೆವ ಪಕ್ಷವಾಗಿದೆ ಎಂದರು.
ಈ ಸಂದರ್ಭದಲ್ಲಿ ಕಾಂಗ್ರೆಸ್ ಮುಖಂಡರಾದ ಶ್ರೀಕೃಷ್ಣ , ಆನಂತಪ್ಪ, ವೈ.ಶಿವಕುಮಾರ್, ಚಂಜಿಮಲೆ ರಮೇಶ್, ನಗರಸಭೆ ಮಾಜಿ ಸದಸ್ಯ ಚೆನ್ನವೀರಯ್ಯ, ಮೋಹನ್ ಬಾಬು. ಮುಂತಾದವರು ಹಾಜರಿದ್ದರು.

ಸುದ್ದಿ ಓದಿ ಹಂಚಿ:

 

Related Post

ಶಿಕ್ಷಕರ ಸಮಸ್ಯೆಗಳನ್ನು ಬಗೆಹರಸದೆ, ಶಿಕ್ಷಕರಿಗೆ ದ್ರೋಹವೆಸಗಿದ ಎಂ.ಎಲ್.ಸಿ. ವೈ.ಎ.ನಾರಾಯಣಸ್ವಾಮಿ : ರುಪ್ಸಾ ಅಧ್ಯಕ್ಷ ಹಾಗೂ ಪಕ್ಷೇತರ ಅಭ್ಯರ್ಥಿ ಲೋಕೇಶ್ ತಾಳಿಕಟ್ಟೆ ಆರೋಪ
ಜೆಡಿಎಸ್‌ ಬಿಜೆಪಿ ಒಂದಾಗಿ ಸಂವಿಧಾನಕ್ಕೆ ಅಪಾಯ ಎಚ್ವತ್ತು ಕಾಂಗ್ರೆಸ್ ಬೆಂಬಲಿಸಿ: ಬೈರತಿ ಸುರೇಶ್
ವಚನ ಭ್ರಷ್ಟ ಬಿಜೆಪಿ ನೇತೃತ್ವದ ಎನ್.ಡಿ.ಎ. ಮೈತ್ರಿಕೂಟಕ್ಕೆ ಮತ ಕೇಳುವ ನೈತಿಕತೆ ಇಲ್ಲ-ಕೆ.ವಿ.ಗೌತಮ್

Leave a Reply

Your email address will not be published. Required fields are marked *

You missed

error: Content is protected !!