• Sat. May 18th, 2024

PLACE YOUR AD HERE AT LOWEST PRICE

ಮಾಲೂರು,ಜು.೧೬ : ಬಡವರಿಗೆ ಹಸಿವು ನೀಗಿಸಲು ಯುಪಿಐ ಸರ್ಕಾರವಿದ್ದಾಗ ಮನಮೋಹನ್ ಸಿಂಗ್ ರವರು ಎಲ್ಲ ರಾಜ್ಯಗಳಿಗೂ ಐದು ಕೆಜಿ ಅಕ್ಕಿ ನೀಡಿದ್ರು, ಆದ್ರೆ ಬಿಜೆಪಿ ಕೇಂದ್ರ ಸರ್ಕಾರ ಮೋದಿಯವರು ಬಡವರ ಅಕ್ಕಿ ರಾಜಕೀಯ ಮಾಡುತ್ತಿದ್ದಾರೆ ಎಂದು ಆಹಾರ ಸಚಿವ ಕೆ.ಹೆಚ್. ಮುನಿಯಪ್ಪ ಬಿಜೆಪಿ ಸರ್ಕಾರದ ವಾಗ್ದಾಳಿ ನಡೆಸಿದರು,

ಪಟ್ಟಣದ ಸರ್ಕಾರಿ ಬಾಲಕಿಯರ ಆಟದ ಮೈದಾನದಲ್ಲಿ ತಾಲ್ಲೂಕು ಆಡಳಿತ ತಾಲ್ಲೂಕು ಪಂಚಾಯ್ತಿ ಆಹಾರ ನಾಗರಿಕ ಸರಬರಾಜು ಇಲಾಖೆ ಹಾಗೂ ಅನ್ನ ಭ್ಯಾಗ ನೇರ ನಗದು ಸಂದಾಯವಾದ ಪಲಾನುಭವಾಯಿಗಳ ಸಮಾವೇಶವನ್ನು ಉದ್ದೇಶಿಸಿ ಅವರು ಮಾತನಾಡುತ್ತಿದ್ದರು.

ಬಡವನ ಹಸಿವು ನೀಗಿಸಲು ಕೇಂದ್ರದಲ್ಲಿ ಯುಪಿಐ ಸರ್ಕಾರವಿದ್ದಾಗ ಮನಮೋಹನ್ ಸಿಂಗ್ ಐದು ಕೆಜಿ ಅಕ್ಕಿ ನೀಡಿದ್ರು ಅದ್ದನ್ನ ಇಲ್ಲಿಯವರೆಗೂ ಬಿಜೆಪಿ ಸರ್ಕಾರ ಮುಂದುವರಿಸಿಕೊ0ಡು ಬಂದಿದೆ, ಕೇಂದ್ರದ ೫ ಕೆ.ಜಿ. ಜೊತೆಗೆ ರಾಜ್ಯ ಸರ್ಕಾರದ ೫ ಕೆಜಿ ಸೇರಿಸಿ ಒಟ್ಟು ಹತ್ತು ಕೆಜಿ ಅಕ್ಕಿ ನೀಡಲಾಗಿತ್ತು,

ಫುಡ್ ಕಾರ್ಪೊರೇಷನ್ ಆಫ್ ಇಂಡಿಯಾದ ಬಳಿ ೨೬೦ ಲಕ್ಷ ಟನ್ ಅಧಿಕ ಅಕ್ಕಿ ಸ್ಟಾಕ್ ಇದ್ರು. ರಾಜಕೀಯ ದುರುದ್ದೇಶದಿಂದ ಸರ್ಕಾರಕ್ಕೆ ಅಕ್ಕಿ ನೀಡಿಲ್ಲ, ಯುಪಿಎ ಸರ್ಕಾರವಿದ್ದಾಗ ಆಯಾ ಬಿಜೆಪಿ ರಾಜ್ಯಗಳಿಗೆ ಜನತೆಗೆ ಅನುಗುಣವಾಗಿ ಶಿಸ್ತು ಬದ್ಧವಾಗಿ ಮನಮೋಹನ್ ಸಿಂಗ್ ರವರು ಅಕ್ಕಿ ನೀಡಿದ್ದಾರೆ ಆದ್ರೆ ದುರದೃಷ್ಟ ಬಿಜೆಪಿ ಸರ್ಕಾರ ಮೋದಿಯವರು ಬಡವರಿಗೆ ನೀಡುವ ಅಕ್ಕಿಯಲ್ಲಿ ಅನಾನುಕೂಲವಾಗಿದೆ, ಅದ್ದಕ್ಕೆ ಹಣ ನೀಡುತ್ತಿದ್ದೇವೆ ಜುಲೈ ೧ ರಿಂದ ಹತ್ತು ಕೆಜಿ ಅಕ್ಕಿ ನೀಡುತ್ತೇವೆ ಎಂದು ಬಡವರಿಗೆ ನಾವುಗಳು ಮಾತು ಕೊಟ್ಟಿದ್ದೇವೆ ಕೇಂದ್ರ ಸರ್ಕಾರ ನಮಗೆ ಸಹಕಾರ ನೀಡುತ್ತಿಲ್ಲ ಕಾಂಗ್ರೆಸ್ ಪಕ್ಷ ಕೊಟ್ಟ ಮಾತಿನಂತೆ ನಡೆದುಕೊಂಡಿದ್ದೇವೆ ಎಂದು ಕೆ.ಹೆಚ್ ಮುನಿಯಪ್ಪ ಹೇಳಿದರು,

ಇನ್ನೂ ಈ ವೇಳೆ ಜಿಲ್ಲಾ ಉಸ್ತುವಾರಿ ಸಚಿವ ಬೈರತಿ ಸುರೇಶ್ ಮಾತನಾಡಿ,ಕೊಟ್ಟ ಮಾತಿನಂತೆ ನಮ್ಮ ಕಾಂಗ್ರೆಸ್ ಸರ್ಕಾರ ನಡೆದುಕೊಂಡಿದೆ. ೬೦ ಸಾವಿರ ಕೋಟಿ ರೂಪಾಯಿ ಗ್ಯಾರಂಟಿ ಯೋಜನೆಗಳಿಗೆ ಖರ್ಚಾಗುತ್ತೆ .ಗ್ಯಾರಂಟಿ ಯೋಜನೆಗಳಿಗೆ ದುಡ್ಡು ಎಲ್ಲಿಂದ ತರುತ್ತೀರ ಎಂದು ಕೇಳುತ್ತಿದ್ದರು. ನಾವು ಯಾವುದೇ ನೋಟ್ ಪ್ರಿಂಟ್ ಮಾಡುತ್ತಿಲ್ಲ. ಜನರು ಕೊಟ್ಟಿರುವ ಟ್ಯಾಕ್ಸ್ ಅನ್ನೇ ಜನರಿಗೆ ಕೊಡುತ್ತಿದ್ದೇವೆ. ಜನರ ಬಗ್ಗೆ ಕಾಳಜಿ ಇದ್ರೆ ಇಂಥಹ ಯೋಜನೆಗಳನ್ನು ಜಾರಿಗೆ ತರಲಾಗುತ್ತದೆ. ಜನರಿಗೆ ಯೋಜನೆಗಳನ್ನು ಜಾರಿಗೆ ತರಲು ಮಾತೃಹೃದಯ ಬೇಕು.

ಉಸ್ತುವಾರಿ ಸಚಿವ ಆದ ಮೇಲೆ ಮೂರು ಬಾರಿ ಕೋಲಾರಕ್ಕೆ ಭೇಟಿ ನೀಡಿದ್ದೇನೆ. ಹಿಂದಿನ ಸರ್ಕಾರದಲ್ಲಿ ಕಾಟಾಚಾರಕ್ಕೆ ಇದ್ದಂತಹ ಉಸ್ತುವಾರಿ ಸಚಿವ ನಾನಲ್ಲ. ಬಿಜೆಪಿ ಸಂಸದ ಎಸ್. ಮುನಿಸ್ವಾಮಿ ಪರ ಬ್ಯಾಟ್ ಬೀಸಿದ ಉಸ್ತುವಾರಿ ಸಚಿವ ಸಂಸದ ಮುನಿಸ್ವಾಮಿ ಅವರು ಮೊದಲು ಕಾಂಗ್ರೆಸ್ ಪಕ್ಷದಲ್ಲೇ ಇದ್ದವರು ನಂತರ ಕಾಂಗ್ರೆಸ್ ತೊರೆದು ಬಿಜೆಪಿಗೆ ಹೋಗಿದ್ದಾರೆ. ಮುನಿಸ್ವಾಮಿ ಅವರನ್ನು ನೀವೆಲ್ಲರೂ ಸೇರಿ ಗೆಲ್ಲಿಸಿ ಎಂಪಿ ಮಾಡಿದ್ದೀರಿ ಎಂದರು,

ಕೆ.ಹೆಚ್. ಮುನಿಯಪ್ಪ ವೇದಿಕೆಯಲ್ಲಿ ಮಾತನಾಡುವಾಗ ಸಂಸದ ಎಸ್ ಮುನಿಸ್ವಾಮಿಗೆ ವಾಗ್ವಾದ ನಡೆಯಿತು, ಇನ್ನೂ ವೇದಿಕೆ ಕಾರ್ಯಕ್ರಮದಲ್ಲಿ ಸಂಸದ ಮುನಿಸ್ವಾಮಿ ಮೇಲೆ ಕಾಂಗ್ರೆಸ್ ಕಾರ್ಯಕರ್ತರು ತಿರುಗಿಬಿದ್ರು ವೇದಿಕೆ ರಣ ರಂಗ ವಾಗಿತ್ತು,

ಈ ಸಂದರ್ಭದಲ್ಲಿ ಶಾಸಕ ಕೆ.ವೈ ನಂಜೇಗೌಡ, ಸಂಸದ ಎಸ್ ಮುನಿಸ್ವಾಮಿ, ಜಿಲ್ಲಾ ಉಪವಿಭಾಗಾಧಿಕಾರಿ ವೆಂಕಟಲಕ್ಷ್ಮಿ, ತಹಶೀಲ್ದಾರ್ ರಮೇಶ್, ಇಒ ಮುನಿರಾಜು, ಆಹಾರ ಉಪ ನಿರೀಕ್ಷಕ ಚಂದ್ರ ಮೋಹನ್,ಎಇಇ ಅನ್ಸರ್ ಭಾಷಾ, ಇನ್ನೂ ಮುಂತಾದವರು ಭಾಗವಹಿಸಿದ್ದರು,

Related Post

ಎಪಿಎಂಸಿ ಕಾರ್ಯದರ್ಶಿ ವಿಜಯಲಕ್ಷ್ಮಿ ವಜಾಗೊಳಿಸಲು ತರಕಾರಿ ಮಂಡಿ ಮಾಲೀಕರ ಒತ್ತಾಯ. ಆರೋಪ ನಿರಾಕರಿಸಿದ ಎಪಿಎಂಸಿ ಕಾರ್ಯದರ್ಶಿ
ಯರಗೋಳ್ ಗ್ರಾಮದಲ್ಲಿ “ದಿ 1979 ಅನ್ ಟೋಲ್ಡ್ ಸ್ಟೋರಿ” ಸಿನಿಮಾದ ಅಂತಿಮ ಚಿತ್ರೀಕರಣ
ಶಿಕ್ಷಕರ ಸಮಸ್ಯೆಗಳನ್ನು ಬಗೆಹರಸದೆ, ಶಿಕ್ಷಕರಿಗೆ ದ್ರೋಹವೆಸಗಿದ ಎಂ.ಎಲ್.ಸಿ. ವೈ.ಎ.ನಾರಾಯಣಸ್ವಾಮಿ : ರುಪ್ಸಾ ಅಧ್ಯಕ್ಷ ಹಾಗೂ ಪಕ್ಷೇತರ ಅಭ್ಯರ್ಥಿ ಲೋಕೇಶ್ ತಾಳಿಕಟ್ಟೆ ಆರೋಪ

Leave a Reply

Your email address will not be published. Required fields are marked *

You missed

error: Content is protected !!