• Mon. May 20th, 2024

PLACE YOUR AD HERE AT LOWEST PRICE

ಕೋಲಾರ:ನನ್ನ ಸೇವೆ ನನಗೆ ತೃಪ್ತಿ ತಂದಿದೆ. ನಿಮ್ಮೆಲ್ಲರ ಪ್ರೀತಿ, ವಿಶ್ವಾಸಕ್ಕೆ ಚಿರಋಣಿ, ನಿಮ್ಮ ಪ್ರೀತಿ ವಿಶ್ವಾಸಕ್ಕೆ ಬೆಲೆ ಕಟ್ಟಲು ಸಾಧ್ಯವೇ ಎಂದು ನಿವೃತ್ತ ದೈಹಿಕ ಶಿಕ್ಷಕ ಕೆ. ಮುನಿರಾಜು ಭಾವಕರಾಗಿ ನುಡಿದರು.

ತಾಲೂಕಿನ ಶಿಳ್ಳಂಗೆರೆ ಗ್ರಾಮದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ ಆವರಣದಲ್ಲಿ ಹಳೇ ವಿದ್ಯಾರ್ಥಿಗಳ ಸಂಘದಿಂದ ಹಮ್ಮಿಕೊಂಡಿದ್ದ ಬೀಳ್ಕೊಡುಗೆ ಸಮಾರಂಭದಲ್ಲಿ ಸನ್ಮಾನ ಸ್ವೀಕರಿಸಿ ಅವರು ಮಾತನಾಡಿದರು.

ತಾವು ದೈಹಿಕ ಶಿಕ್ಷಕರಾಗಿ ಶಿಳ್ಳಂಗೆರೆ ಗ್ರಾಮದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ೩೯ ವರ್ಷಗಳ ಕಾಲ ಸೇವೆ ಸಲ್ಲಿಸಿ ಇಂದು ನಿವೃತ್ತರಾಗುತ್ತಿರುವುದು ಬೇಸರದ ಸಂಗತಿಯಾಗಿದೆ. ಆದರೂ ಸೇವೆಯಲ್ಲಿ ನಿವೃತ್ತಿ ಸಹಜ.

ತಮ್ಮ ಸೇವಾ ಅವಧಿಯಲ್ಲಿ ಗ್ರಾಮದ ಮುಖಂಡರು, ಹಿರಿಯರು, ಕಿರಿಯರು, ಹಳೇ ವಿದ್ಯಾರ್ಥಿಗಳು, ಶಾಲಾ ಶಿಕ್ಷಕರು ನೀಡಿದ ಸಹಕಾರ, ಪ್ರೋತ್ಸಾಹ, ಬೆಂಬಲ, ಆತ್ಮಸೈರ್ಯಕ್ಕೆ ಅನಂತನಂತ ಧನುವಾದಗಳನ್ನು ತಿಳಿಸಿದರು.

ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದ ಮೇಸ್ತ್ರಿ ವೆಂಕಟೇಶಪ್ಪ, ಕೆ.ಮುನಿರಾಜು ಈ ಶಾಲೆಗೆ ಬಂದಾಗ ಯಾವುದೇ ವಾಹನಗಳ ಸೌಲಭ್ಯ ಈ ಗ್ರಾಮಕ್ಕೆ ಇರಲಿಲ್ಲ. ಇಂತಹ ಸಂದರ್ಭದಲ್ಲಿ ಕೋಲಾರದಿಂದ ನಡೆದುಕೊಂಡೇ ಶಾಲೆಗೆ ಬರುತ್ತಿದ್ದರು.

ಬೆಳಿಗ್ಗೆ ೬-೦೦ ಗಂಟೆಗೆ ಶಾಲೆಗೆ ಬಂದು ಸಂಜೆ ೬ ಗಂಟೆಯವರೆಗೆ ಶಾಲೆಯಲ್ಲಿ ಇದ್ದು ವಿದ್ಯಾರ್ಥಿಗಳಿಗೆ ಕ್ರೀಡೆಗಳಲ್ಲಿ ತರಬೇತಿ ನೀಡುತ್ತಿದ್ದರು. ಇದರ ಪರಿಣಾಮ ಹೋಬಳಿ ಮಟ್ಟದಿಂದ ಜಿಲ್ಲಾ ಮಟ್ಟದವರೆಗೆ ಈ ಶಾಲೆಯ ಕ್ರೀಡಾಪಟುಗಳಿಗೆ ಎದುರಾಳಿಯೇ ಇರಲಿಲ್ಲ.

ಕೋಲಾರ ಜಿಲ್ಲೆಯಲ್ಲಿ ಖೋ-ಖೋ ಆಟ ಎಂದರೆ ಶಿಳ್ಳಂಗೆರೆ ಶಾಲೆ, ಶಿಳ್ಳಂಗೆರೆ ಶಾಲೆ ಎಂದರೆ ಖೋ-ಖೋ ಆಟ ಎನ್ನುವಷ್ಟರ ಮಟ್ಟಿಗೆ ಶಾಲೆಗೆ ಕೀರ್ತಿಯನ್ನು ತಂದಿದ್ದರು. ಮೇಲಿನ ಅಂಶಗಳಿಗೆ ಶಾಲಾ ಕಛೇರಿಯಲ್ಲಿರುವ ಪ್ರಶಸ್ತಿ ಫಲಕಗಳೇ ಸಾಕ್ಷಿಯಾಗಿರುತ್ತವೆ.

ದೈಹಿಕ ಶಿಕ್ಷಕರಾಗಿ ಖೋ-ಖೋ ಆಟದಲ್ಲಿ ೨೦ ಸಲ ರಾಜ್ಯ ಮಟ್ಟಕ್ಕೆ ಆಯ್ಕೆ ಸೇರಿದಂತೆ ವಿವಿಧ ಕ್ರೀಡೆಗಳಲ್ಲಿ ರಾಜ್ಯ, ರಾಷ್ಟ್ರ ಮಟ್ಟದಲ್ಲಿ ಭಾಗವಹಿಸಿ ಪ್ರಶಸ್ತಿಗಳನ್ನು ತಂದಿರುವ ಶ್ರೇಯಸ್ಸು ಇವರಿಗೆ ಸಲ್ಲುತ್ತದೆ.

ಇನ್ನು ಇವರು ಪರಿಸರ ಪ್ರೇಮಿ ಎಂಬುದಕ್ಕೆ ಈ ಶಾಲೆಯ ಆವರಣದಲ್ಲಿ ಬೆಳೆದು ನಿಂತಿರುವ ಮರಗಳೇ ಸಾಕ್ಷಿಯಾಗಿದೆ. ಜೊತೆಗೆ ವಿದ್ಯಾರ್ಥಿಗಳು, ಚಿಕ್ಕವರು, ದೊಡ್ಡವರು, ಹೆಣ್ಣು ಮಕ್ಕಳು ಎಲ್ಲರನ್ನೂ ಪ್ರೀತಿಯಿಂದ ಗೌರವದಿಂದ ಮಾತನಾಡುವ ಸ್ವಭಾವ ಹೊಂದಿದ್ದರು.

ಇವರು ಶಾಲೆಯ ಶಿಕ್ಷಕರಷ್ಟೇ ಅಲ್ಲ ಶಿಳ್ಳಂಗೆರೆ ಗ್ರಾಮದ ಪ್ರತಿ ಮನೆಯ ಮಗನಂತೆ ೩೯ ವರ್ಷದಿಂದ ಬೆಳದಂತಹವರು. ಒಂದು ರೀತಿಯಲ್ಲಿ ಮುನಿರಾಜು ರವರು ಶಿಳ್ಳಂಗೆರೆ ಗ್ರಾಮದ ದತ್ತು ಪುತ್ರ, ಹೆಮ್ಮೆಯ ಪುತ್ರ, ಆಜಾತ ಶತ್ರು ಇಂತಹ ವ್ಯಕ್ತಿ ಇಂದು ಸೇವೆಯಿಂದ ನಿವೃತ್ತರಾಗುತ್ತಿರುವುದು ಬೇಸರ ತಂದಿದೆ ಎಂದರು.

ಇದೇ ಸಂದರ್ಭದಲ್ಲಿ ಇಬ್ಬರು ಮಾಜಿ ಯೋಧರನ್ನು ಸಹ ಸನ್ಮಾನಿಸಲಾಯಿತು. ಇದಕ್ಕೂ ಮುನ್ನಾ ಗ್ರಾಮದಲ್ಲಿ ಕೆ.ಮುನಿರಾಜು ಅವರನ್ನು ಮೆರವಣಿಗೆ ಮುಖಾಂತರ ವೇದಿಕೆ ಕಾರ್ಯಕ್ರಮಕ್ಕೆ ಕರೆತಂದರು.

ಮೆರವಣಿಗೆಯ ಸಂದರ್ಭದಲ್ಲಿ ಪ್ರತಿ ಮನೆಯಲ್ಲೂ ಆರತಿ ಬೆಳಗಿ ಅವರಿಗೆ ಶುಭಾಶಯಗಳನ್ನು ಕೋರಿದರು. ಈ ಸಂದರ್ಭದಲ್ಲಿ ಗ್ರಾಮಸ್ಥರು, ಶಿಕ್ಷಕರು, ಹಳೇ ವಿದ್ಯಾರ್ಥಿಗಳ ಕಣ್ಣಾಲಿಗಳು ತೇವಗೊಂಡಿದ್ದವು.

ಕಾರ್ಯಕ್ರಮದಲ್ಲಿ ದೈಹಿಕ ಶಿಕ್ಷಕ ವೆಂಕಟೇಶ್, ಅಂಬೇಡ್ಕರ್ ಸಂಘದ ಅಧ್ಯಕ್ಷ ಅರುಣ್, ರಾಜೇಂದ್ರ ಸಿಂಗ್, ಅಶೋಕ್, ನಾಗರಾಜ್, ಎಸ್‌ಡಿಎಂಸಿ ಅಧ್ಯಕ್ಷ ಸುಬ್ರಮಣಿ, ಗ್ರಾಮ ಪಂಚಾಯತ್ ಸದಸ್ಯ  ವೇಣುಗೋಪಾಲ್, ಗಣೇಶ್ ಸಿಂಗ್, ನಾರಾಯಣಪ್ಪ, ನಾಗರಾಜ್, ಎಂ.ಅಶೋಕ, ಕಾಂತ, ಶಿವಮೂರ್ತಿ, ಜಿಲ್ಲಾ ದೈಃಇಕ ಶಿಕ್ಷಣಾಧಿಕಾರಿ ಎಂ.ಮಂಜುನಾಥ್, ಕೋಲಾರ ಜಿಲ್ಲಾ ದೈಹಿಕ ಶಿಕ್ಷಣ ಶಿಕ್ಷಕರ ಸಂಘದ ಅಧ್ಯಕ್ಷ ವಿ.ಮುರಳಿಮೋಹನ್,ತಾಲೂಕು ಅಧ್ಯಕ್ಷ ಆರ್,ನಾಗರಾಜ್, ಇಸಿಓ ನಂಜುಂಡೇಗೌಡ, ಸಿ.ಆರ್.ಪಿ.ಗಂಗಾಧರ್, ಶಾಲಾ ಮುಖ್ಯೋಪಾಧ್ಯಾಯ ಕೆ.ವೆಂಕಟೇಶ್, ಹನುಮಂತಪ್ಪ, ಪ್ಲೂಡರ್ ಬೈಲೋ, ಬಸವರಾಜ್ ಚಿಲಕಾಂತಮಠ್ ಉಪಸ್ಥಿತರಿದ್ದರು. ಅರುಣ್ ಸ್ವಾಗತಿಸಿ, ನಿರೂಪಿಸಿದರು.

Related Post

ಎಪಿಎಂಸಿ ಕಾರ್ಯದರ್ಶಿ ವಿಜಯಲಕ್ಷ್ಮಿ ವಜಾಗೊಳಿಸಲು ತರಕಾರಿ ಮಂಡಿ ಮಾಲೀಕರ ಒತ್ತಾಯ. ಆರೋಪ ನಿರಾಕರಿಸಿದ ಎಪಿಎಂಸಿ ಕಾರ್ಯದರ್ಶಿ
ಯರಗೋಳ್ ಗ್ರಾಮದಲ್ಲಿ “ದಿ 1979 ಅನ್ ಟೋಲ್ಡ್ ಸ್ಟೋರಿ” ಸಿನಿಮಾದ ಅಂತಿಮ ಚಿತ್ರೀಕರಣ
ಶಿಕ್ಷಕರ ಸಮಸ್ಯೆಗಳನ್ನು ಬಗೆಹರಸದೆ, ಶಿಕ್ಷಕರಿಗೆ ದ್ರೋಹವೆಸಗಿದ ಎಂ.ಎಲ್.ಸಿ. ವೈ.ಎ.ನಾರಾಯಣಸ್ವಾಮಿ : ರುಪ್ಸಾ ಅಧ್ಯಕ್ಷ ಹಾಗೂ ಪಕ್ಷೇತರ ಅಭ್ಯರ್ಥಿ ಲೋಕೇಶ್ ತಾಳಿಕಟ್ಟೆ ಆರೋಪ

Leave a Reply

Your email address will not be published. Required fields are marked *

You missed

error: Content is protected !!