• Sun. May 19th, 2024

PLACE YOUR AD HERE AT LOWEST PRICE

ಸ್ಯಾಂಡಲ್‌ವುಡ್‌ನಲ್ಲಿ ಟ್ರೆಂಡ್ ಏನೇ ಇರಲಿ ಹೊಸಬರು ಹೊಸ ಹೊಸ ಪ್ರಯತ್ನಗಳನ್ನು ಮಾಡುತ್ತಲೇ ಇರುತ್ತಾರೆ. ವಿಶಿಷ್ಠವಾದ ಕಥೆಯನ್ನು ಹುಡುಕೊಂಡು ಬರುತ್ತಾರೆ. ಇಲ್ಲಾ ಸಮಾಜಕ್ಕೆ ಸಂದೇಶವನ್ನು ನೀಡುವ ಕಥೆಯನ್ನು ಹೊತ್ತು ತರುತ್ತಾರೆ.
ಇಂತಹದ್ದೇ ಒಂದು ತಂಡ ‘ಬನ್ ಟೀ’ ಅನ್ನೋ ಸಿನಿಮಾವನ್ನು ನಿರ್ಮಾಣ ಮಾಡಿದೆ. ಸಿನಿಮಾ ಟೈಟಲ್‌ ವಿಶಿಷ್ಠವಾಗಿದ್ದು, ಪ್ರೇಕ್ಷಕರನ್ನು ಸೆಳೆಯುವ ಎಲ್ಲಾ ಲಕ್ಷಣಗಳು ಇವೆ. ಸದ್ಯ ಈ ತಂಡ ಸಿನಿಮಾದ ಟ್ರೈಲರ್ ಅನ್ನು ರಿಲೀಸ್ ಮಾಡಿದ್ದು, ಮೆಚ್ಚುಗೆ ವ್ಯಕ್ತವಾಗುತ್ತಿದೆ.
‘ಬನ್ ಟೀ ಎಂದಾಕ್ಷಣ ಇದ್ಯಾವುದೋ ಕಾಮಿಡಿ ಸಿನಿಮಾ ಅಂದುಕೊಳ್ಳುವ ಹಾಗಿಲ್ಲ. ಹೊಸಬರ ತಂಡ ಗಂಭೀರವಾದ ವಿಷಯವನ್ನು ಹೊತ್ತು ಬರುತ್ತಿದೆ. ಈ ಸಿನಿಮಾ ಶಿಕ್ಷಣದ ವ್ಯವಸ್ಥೆಯ ಬಗ್ಗೆ ಇರುವ ಸಿನಿಮಾ.

ಅಂದ್ಹಾಗೆ, ‘ಬನ್ ಟೀ’ ಸಿನಿಮಾಗೆ ನಿರ್ದೇಶಕ ಉದಯ್ ಕುಮಾರ್ ಆಕ್ಷನ್ ಕಟ್ ಹೇಳಿದ್ದಾರೆ. ಇದು ನೈಜ ಘಟನೆಯನ್ನು ಆಧರಿಸಿ ಮಾಡಿದ ಸಿನಿಮಾ. ಉದಯ್ ಕುಮಾರ್ ತಮ್ಮ ಗೆಳೆಯನ ಬದುಕಿನಲ್ಲಿ ನಡೆದ ಸನ್ನಿವೇಶವನ್ನೇ ಇಟ್ಟುಕೊಂಡು ಕಥೆ ಮಾಡಿ ಸಿನಿಮಾ ಮಾಡಿದ್ದಾರೆ.

ಈ ಸಿನಿಮಾ ವಿಶೇಷ ಯಾಕೆ ಅಂದರೆ, ಇಲ್ಲಿ ಹೀರೊ-ಹೀರೊಯಿನ್ ಅನ್ನೋ ಕಾನ್ಸೆಪ್ಟ್ ಇಲ್ಲ. ಇದು ಸಂಪೂರ್ಣ ಕಂಟೆಂಟ್‌ ಅನ್ನೇ ಪ್ರಮುಖ ವಿಷಯವನ್ನಾಗಿಟ್ಟುಕೊಂಡು ಮಾಡಿದ ಸಿನಿಮಾ. ‘ಬನ್ ಟೀ’ ಪ್ರಮುಖ ಪಾತ್ರದಲ್ಲಿ ಉಮೇಶ್ ಮತ್ತು ಶ್ರೀದೇವಿ, ಗುಂಡಣ್ಣ ಚಿಕ್ಕಮಗಳೂರು ಸೇರಿದಂತೆ ಅನೇಕ ಕಲಾವಿದರು ನಟಿಸಿದ್ದಾರೆ. ವಕೀಲರಾಗಿ ಕೆಲಸ ಮಾಡುತ್ತಿದ್ದ ಉಮೇಶ್ ಸಿನಿಮಾದ ಕಾನ್ಸೆಪ್ಟ್ ಇಷ್ಟ ಆಗಿ ನಟಿಸಿದ್ದಾರೆ. ಹಾಗೇ ನಟಿ ಶ್ರೀದೇವಿಗೂ ಕೂಡ ಇದು ಮೊದಲ ಸಿನಿಮಾ.

‘ಬನ್ ಟೀ’ ಸಿನಿಮಾದಲ್ಲಿ ಮೌರ್ಯ ಮತ್ತು ತನ್ಮಯಿ ಎಂಬ ಇಬ್ಬರು ಬಾಲ ಕಲಾವಿದರು ನಟಿಸಿದ್ದಾರೆ. ಈ ಸಿನಿಮಾದ ಮತ್ತೊಂದು ವಿಶೇಷ ಅಂದರೆ, ಈ ಸಿನಿಮಾವನ್ನು ಯಾವುದೇ ಸೆಟ್ ಅನ್ನು ಬಳಸದೆಯೇ ಶೂಟಿಂಗ್ ಮಾಡಲಾಗಿದೆ. ಹದಗೆಟ್ಟಿರುವ ಶಿಕ್ಷಣದ ವ್ಯವಸ್ಥೆ, ಖಾಸಗಿ ಶಾಲೆಯ ಶಿಕ್ಷಣ ಇಂತಹ ಗಂಭೀರ ವಿಷಯದ ಸುತ್ತವೇ ಸುತ್ತವೇ ‘ಬನ್ ಟೀ’ ಸಿನಿಮಾದ ಕಥೆಯನ್ನು ಹೆಣೆಯಲಾಗಿದೆ.

‘ಬನ್ ಟೀ’ ಸಿನಿಮಾವನ್ನು ಕೇಶವ್ ಆರ್ ನಿರ್ಮಾಣ ಮಾಡಿದ್ದಾರೆ. ಪ್ರದ್ಯೋತ್ತನ್ ಸಂಗೀತ ನೀಡಿದ್ದಾರೆ. ಈ ಸಿನಿಮಾದಲ್ಲಿ ಹಾಡುಗಳು ಇಲ್ಲ. ಆದರೂ, ಹಿನ್ನೆಲೆ ಸಂಗೀತಕ್ಕೆ ಪ್ರಾಮುಖ್ಯತೆ ಹೆಚ್ಚಿದೆ. ‘ಬನ್ ಟೀ’ ಟ್ರೈಲರ್ ರಿಲೀಸ್ ಆಗಿದ್ದು, ಸಿನಿಮಾ ಇದೇ ತಿಂಗಳು 22ಕ್ಕೆ ರಿಲೀಸ್ ಆಗಲಿದೆ.

Related Post

ಎಪಿಎಂಸಿ ಕಾರ್ಯದರ್ಶಿ ವಿಜಯಲಕ್ಷ್ಮಿ ವಜಾಗೊಳಿಸಲು ತರಕಾರಿ ಮಂಡಿ ಮಾಲೀಕರ ಒತ್ತಾಯ. ಆರೋಪ ನಿರಾಕರಿಸಿದ ಎಪಿಎಂಸಿ ಕಾರ್ಯದರ್ಶಿ
ಯರಗೋಳ್ ಗ್ರಾಮದಲ್ಲಿ “ದಿ 1979 ಅನ್ ಟೋಲ್ಡ್ ಸ್ಟೋರಿ” ಸಿನಿಮಾದ ಅಂತಿಮ ಚಿತ್ರೀಕರಣ
ಶಿಕ್ಷಕರ ಸಮಸ್ಯೆಗಳನ್ನು ಬಗೆಹರಸದೆ, ಶಿಕ್ಷಕರಿಗೆ ದ್ರೋಹವೆಸಗಿದ ಎಂ.ಎಲ್.ಸಿ. ವೈ.ಎ.ನಾರಾಯಣಸ್ವಾಮಿ : ರುಪ್ಸಾ ಅಧ್ಯಕ್ಷ ಹಾಗೂ ಪಕ್ಷೇತರ ಅಭ್ಯರ್ಥಿ ಲೋಕೇಶ್ ತಾಳಿಕಟ್ಟೆ ಆರೋಪ

Leave a Reply

Your email address will not be published. Required fields are marked *

You missed

error: Content is protected !!