• Sat. May 18th, 2024

PLACE YOUR AD HERE AT LOWEST PRICE

ಜೆಡಿಎಸ್‌ ಬಿಜೆಪಿ ಒಂದಾಗಿ ಸಂವಿಧಾನಕ್ಕೆ ಅಪಾಯ ಎಚ್ವತ್ತು ಕಾಂಗ್ರೆಸ್ ಬೆಂಬಲಿಸಿ: ಬೈರತಿ ಸುರೇಶ್

ಕೋಲಾರ: ಈ ಲೋಕಸಭಾ ಚುನಾವಣೆಯಲ್ಲಿ ಜೆಡಿಎಸ್-ಬಿಜೆಪಿ ಒಟ್ಟಿಗೆ ಸೇರಿಕೊಂಡು ಅಂಬೇಡ್ಕರ್ ಅವರ ಸಂವಿಧಾನವನ್ನು ಒಡೆಯಲು ಹೊರಟಿದ್ದಾರೆ. ಅದನ್ನು ತಡೆಯಲು ಕಾಂಗ್ರೆಸ್ ಮುಂದಾಗಿದೆ, ದಲಿತರು, ಅಲ್ಪಸಂಖ್ಯಾತರು ಬಡವರು, ‌ಮಹಿಳೆಯರಿಗೆ ರಕ್ಷಣೆ ನೀಡಲು ನಡೆಯುತ್ತಿರುವ ಚುನಾವಣೆಯಾಗಿದೆ ಎಂದು ಜಿಲ್ಲಾ ಉಸ್ತುವಾರಿ ಸಚಿವ ಬೈರತಿ ಸುರೇಶ್ ತಿಳಿಸಿದರು.

ನಗರದ ಸ್ಕೌಟ್ಸ್ ಭವನದಲ್ಲಿ ಕಾಂಗ್ರೆಸ್ ಬೆಂಬಲಿತ ವಾಲ್ಮೀಕಿ ಸಮುದಾಯದ ಮುಖಂಡರ ಸಭೆಯನ್ನು ಉದ್ದೇಶಿಸಿ ಮಾತನಾಡಿದ ಅವರು ಬಿಜೆಪಿ ಜಾತಿ ಜಾತಿಗಳ ಮಧ್ಯೆ ವಿಷಬೀಜಗಳನ್ನು ಬಿತ್ತಿ ಕೋಮು ಗಲಭೆಗಳನ್ನು ಸೃಷ್ಟಿಸಿ ಅಧಿಕಾರಕ್ಕೆ ಮುಂದಾಗಿದೆ ಕಾಂಗ್ರೆಸ್ ಅಭಿವೃದ್ಧಿ, ಸಂವಿಧಾನ ಉಳಿವಿಗಾಗಿ ಪ್ರಜಾಪ್ರಭುತ್ವ ಜಾರಿಯ ಉದ್ದೇಶಕ್ಕಾಗಿ ನಿಮ್ಮ ಬೆಂಬಲವನ್ನು ಕೇಳುತ್ತೀದ್ದೇವೆ ಜಿಲ್ಲೆಯಲ್ಲಿ ಕೆಲವರು ನಮಗೆ ಹೂವಿನ ಹಾರ ಹಾಕಿಲ್ಲ,‌ ನಮ್ಮನ್ನು ಮಾತನಾಡಿಸಿಲ್ಲ ಎನ್ನುತ್ತಿದ್ದಾರೆ. ಕ್ಷುಲ್ಲಕವಾಗಿ ಮಾತನಾಡುವವರನ್ನು ನಿರ್ಲಕ್ಷಿಸಿ ಅವರು ‌ನಿಜವಾದ ನಾಯಕರು ಅಲ್ಲ ನಾಯಕರು ಎಂದರೆ ಯೋಧರು, ಹೋರಾಟಗಾರರು ದೇಶಕ್ಕಾಗಿ ಎದೆಯುಬ್ಬಿಸಿ ಹೋರಾಟ ನಡೆಸಿದ ಮದಕರಿ ನಾಯಕನ ರೀತಿಯಲ್ಲಿ ಇರಬೇಕು ಎಂದರು.

ರಾಜ್ಯದಲ್ಲಿ ಸರಕಾರವು ವಾಲ್ಮೀಕಿ ಸಮುದಾಯಕ್ಕೆ ವಿಶೇಷ ಸ್ಥಾನಮಾನಗಳನ್ನು ನೀಡಲಾಗಿದೆ ಲೋಕೋಪಯೋಗಿ ಇಲಾಖೆಯನ್ನು ಸತೀಶ್ ಜಾರಕಿಹೊಳಿಗೆ ಸಹಕಾರ ಕೆ.ಸಿ.ರಾಜಣ್ಣ ಅವರಿಗೆ ಕ್ರೀಡಾ ಅಭಿವೃದ್ಧಿಯನ್ನು ನಾಗೇಂದ್ರ ಅವರಿಗೆ ನೀಡಲಾಗಿದೆ ಅದೇ ರೀತಿಯಲ್ಲಿ ನಿಗಮ ಮಂಡಳಿಗಳ ಸ್ಥಾನಗಳನ್ನು ಕೊಟ್ಟಿದ್ದು ಸರಕಾರ ಮತ್ತು ಸಿದ್ದರಾಮಯ್ಯ ಡಿ‌ಕೆ ಶಿವಕುಮಾರ್ ಅವರ ಬೆಂಬಲವು ಸದಾ ಸಮುದಾಯದ ಮೇಲೆ ಇರಲಿದೆ ಎಂದರು.

ಜಿಲ್ಲೆಯಲ್ಲಿ ಕಳೆದ ಬಾರಿ ಸಂಸದರಾಗಿ ಆಯ್ಕೆಯಾದ ಎಸ್. ಮುನಿಸ್ವಾಮಿ ಕೋಮು ಭಾವನೆಗಳ ವಿಷಯಗಳನ್ನು ತಂದು ಯಾವುದೇ ಅಭಿವೃದ್ಧಿಯನ್ನು ಮಾಡದೇ ಐದು ವರ್ಷಗಳ ಸಿಕ್ಕ ಅವಕಾಶವನ್ನು ಹಾಳು ಮಾಡಿದ್ದಾರೆ ಪ್ರತಿ ಅಭಿವೃದ್ಧಿ ವಿಚಾರದಲ್ಲಿ ಗಲಾಟೆ ಮಾಡಿದ್ದೇ ಹೆಚ್ಚು ಅವರನ್ನು ಮೊದಲಿನಿಂದಲೂ ಹೋಳು ಮುನಿಸ್ವಾಮಿ, ಮಚ್ಚು‌ ಮುನಿಸ್ವಾಮಿ ಎಂದೇ ರಾಜ್ಯಾದ್ಯಂತ ಪ್ರಸಿದ್ಧಿಯಾಗಿದ್ದಾರೆ ಎಂದು ಟೀಕಿಸಿದರು.

ಬಿಜೆಪಿ ಮತ್ತು ಜೆಡಿಎಸ್‌ ಮೈತ್ರಿ ಅಭ್ಯರ್ಥಿ ಮಲ್ಲೇಶ್ ಬಾಬು ಅವರು ಮುನಿಸ್ವಾಮಿಯ ಕೈಗೊಂಬೆಯಾಗಿದ್ದಾರೆ ಅವರನ್ನು ಬಲಿಕಾ ಬಕ್ರಾ, ಕುರುಬಾನಿಕಾ ಬಕ್ರಾ ಮಾಡಿದ್ದಾರೆ. ಬಂಗಾರಪೇಟೆಯಲ್ಲಿ ಗೆಲ್ಲಲು ಸಾಧ್ಯವಾಗದವರು ಇಲ್ಲಿ ಗೆಲ್ಲುತ್ತಾರೆಯೇ ಸಂವಿಧಾನ ಉಳಿವಿಗೆ ಕಾಂಗ್ರೆಸ್ ಅಭ್ಯರ್ಥಿ ಗೌತಮ್ ಗೆಲ್ಲಬೇಕು. ನಿಮ್ಮ ಋಣ ಗೌತಮ್ ಹಾಗೂ ಕಾಂಗ್ರೆಸ್ ಪಕ್ಷದ ಮೇಲೆ ಇರಲಿ. ನಾವು ಜೀವ ಹೋದರೂ ವಾಲ್ಮೀಕಿ ಸಮುದಾಯ ಕೈಬಿಡಲ್ಲ. ಸಿದ್ಧರಾಮಯ್ಯ ಗ್ಯಾರಂಟಿ‌ ನೀಡಿದ್ದಾರೆ‌. ಕೇಂದ್ರದಲ್ಲಿ ಗೆದ್ದರೂ ಗ್ಯಾರಂಟಿ‌ ಜಾರಿ ಆಗಲಿದೆ ಎಂದರು.

ಈ ಸಂದರ್ಭದಲ್ಲಿ ಮುಖ್ಯಮಂತ್ರಿಗಳ ರಾಜಕೀಯ ಕಾರ್ಯದರ್ಶಿ ನಸೀರ್ ಅಹಮದ್ ಮಾತನಾಡಿ ಕ್ಷೇತ್ರದಲ್ಲಿ ಸುಮಾರು ೧.೨೫‌ ಲಕ್ಷದ ನಾಯಕರ ಸಮುದಾಯದವರು ಇದ್ದಾರೆ ಅವರಿಗೆ ಕಳೆದ ಹತ್ತು ವರ್ಷಗಳಿಂದ ಮೋಸ‌ ಮಾಡಿ ಆಡಳಿತ ನಡೆಸುತ್ತಿದ್ದಾರೆ. ಪಕ್ಕಾ ‌ಮನೆ‌‌ಗಳನ್ನು ಕೊಟ್ಟಿರುವುದಾಗಿ ‌ಸುಳ್ಳು ಹೇಳುತ್ತಿದ್ದಾರೆ ದೇಶದ‌ ಸಾಲ ಕಳೆದ ೧೦ ವರ್ಷಗಳಲ್ಲಿ ೫೬ ಲಕ್ಷ ಕೋಟಿಯಿಂದ ೧೮೬ ಲಕ್ಷ ‌ಕೋಟಿಗೇರಿದೆ‌‌. ಕಾರ್ಪೊರೇಟ್ ತೆರಿಗೆ ಕಡಿಮೆ‌ ಮಾಡಿ ಬಡವರಿಗೆ ಹೆಚ್ಚು ತೆರಿಗೆ ವಿಧಿಸುತ್ತಿದ್ದಾರೆ ಇದು ಸಂವಿಧಾನ ವಿರೋಧಿ‌ ಸರ್ಕಾರವಾಗಿದೆ ದೇಶದ ಪ್ರಧಾನಿಯಾಗಿ ಬೇರೆಯವರಿಂದ ಕಿತ್ತು‌ ಮುಸ್ಲಿಮರಿಗೆ ‌ಹಂಚಿಕೆ‌ ಮಾಡುತ್ತಿದ್ದಾರೆ ಎಂದು ಸುಳ್ಳು ‌ಭಾಷಣ‌ ಮಾಡುತ್ತಿದ್ದಾರೆ. ಚುನಾವಣಾ ಆಯೋಗಕ್ಕೆ ದೂರು ನೀಡಿದ್ದೇವೆ ಆದರೂ ಕ್ರಮ ವಹಿಸಿಲ್ಲ ಎ‌ಂದರು.

ಶಾಸಕ ಕೊತ್ತೂರು ಮಂಜುನಾಥ್ ಮಾತನಾಡಿ, ದೇಶದಲ್ಲಿ ಇರಬೇಕೆಂದರೆ ಬಿಜೆಪಿಯವರು ದಾಖಲೆ ಕೇಳುತ್ತಾರೆ. ದೇಶದಲ್ಲಿ ಅದೆಲ್ಲಾ ನಡೆಯಲ್ಲ. ಜನರ ಬಳಿ ‌ಹಳೆಯ ದಾಖಲೆಗಳು‌ ಎಲ್ಲಿರುತ್ತವೆ ಅಂಬೇಡ್ಕರ್ ‌ಆಶಯ ಉಳಿಸುವುದು ಕಾಂಗ್ರೆಸ್ ಮಾತ್ರ ಈಗಾಗಲೇ ಜಿಲ್ಲಾ ಕೇಂದ್ರದಲ್ಲಿ ವಾಲ್ಮೀಕಿ ಸಮುದಾಯ ಭವನವನ್ನು ‌ಉದ್ಘಾಟಿಸಿದ್ದೇವೆ ಮುಂದಿನ ದಿನಗಳಲ್ಲಿ ಪ್ರತಿಮೆಯನ್ನು ಕೂಡ ಮಾಡಿಕೊಡುತ್ತೇವೆ ಸಮುದಾಯದ ಬಂಧುಗಳು ಕಾಂಗ್ರೆಸ್ ಪಕ್ಷವನ್ನು ಬೆಂಬಲಿಸುವಂತೆ ಮನವಿ ಮಾಡಿದರು

ಪ್ರಾಸ್ತಾವಿಕವಾಗಿ ವಾಲ್ಮೀಕಿ ಸಮುದಾಯ ಮುಖಂಡ ಹಾಗೂ ನಗರಸಭೆ ಸದಸ್ಯ ಅಂಬರೀಷ್ ಮಾತನಾಡಿ ಇವತ್ತು ಸಂವಿಧಾನ ಉಳಿಸಲು ಕಾಂಗ್ರೆಸ್ ಅಗತ್ಯವಾಗಿದೆ ಈಗ ಸಂವಿಧಾನ ಬದಲಾಯಿಸಲು ಸಂಚು ನಡೆದಿದೆ. ಎಸ್ಟಿ ಸಮುದಾಯದ ೧೭ ಜನ ಶಾಸಕರಿದ್ದೇವೆ. ಆದಿವಾಸಿಗಳಿಗೆ ಬಿಜೆಪಿಯಿಂದ ಅನ್ಯಾಯವಾಗಿದೆ. ೨೦೧೩ರಲ್ಲಿ ಸಿದ್ಧರಾಮಯ್ಯ ಬಹಳ ಅನುಕೂಲ‌‌ ಮತ್ತು ಅನುದಾನ ಕೊಟ್ಟಿದ್ದಾರೆ ಬೀದಿಯಲ್ಲಿ ‌ಕುಳಿತು ಹೋರಾಟ ನಡೆಸಿದ್ದಕ್ಕೆ ಮೀಸಲಾತಿ‌ ಕೊಟ್ಟರು. ಆದರೆ, ರಾಜಕೀಯ ಮೀಸಲಾತಿಯನ್ನು ರಾಜಕೀಯ ಲಾಭಕ್ಕಾಗಿ ನೀಡಿದ್ದಾರೆ ಎಂದು ಟೀಕಿಸಿದರು.

ಈ ಸಂದರ್ಭದಲ್ಲಿ ವಿಧಾನ ಪರಿಷತ್ ಸದಸ್ಯ ಎಂ.ಎಲ್.ಅನಿಲ್‌ಕುಮಾರ್, ಕಾಂಗ್ರೆಸ್ ಅಭ್ಯರ್ಥಿ ಕೆ.ವಿ.ಗೌತಮ್,ಕೆಪಿಸಿಸಿ ಸದಸ್ಯ ನಂದಿನಿ ಪ್ರವೀಣ್, ವಾಲ್ಮೀಕಿ ಸಂಘದ ಜಿಲ್ಲಾ ಅಧ್ಯಕ್ಷ ಕುಡುವನಹಳ್ಳಿ ಆನಂದ್, ಮುಖಂಡರಾದ ರಾಮಣ್ಣ, ಶ್ರೀನಿವಾಸ್, ಅಂಜಿನಪ್ಪ, ರಾಮಾಂಜಿನಪ್ಪ, ವಕ್ಕಲೇರಿ ರಾಜಪ್ಪ,, ಅನೀಫ್, ಪ್ರಸಾದ್ ಬಾಬು, ಮುಂತಾದವರು ಇದ್ದರು

Related Post

ಎಪಿಎಂಸಿ ಕಾರ್ಯದರ್ಶಿ ವಿಜಯಲಕ್ಷ್ಮಿ ವಜಾಗೊಳಿಸಲು ತರಕಾರಿ ಮಂಡಿ ಮಾಲೀಕರ ಒತ್ತಾಯ. ಆರೋಪ ನಿರಾಕರಿಸಿದ ಎಪಿಎಂಸಿ ಕಾರ್ಯದರ್ಶಿ
ಯರಗೋಳ್ ಗ್ರಾಮದಲ್ಲಿ “ದಿ 1979 ಅನ್ ಟೋಲ್ಡ್ ಸ್ಟೋರಿ” ಸಿನಿಮಾದ ಅಂತಿಮ ಚಿತ್ರೀಕರಣ
ಶಿಕ್ಷಕರ ಸಮಸ್ಯೆಗಳನ್ನು ಬಗೆಹರಸದೆ, ಶಿಕ್ಷಕರಿಗೆ ದ್ರೋಹವೆಸಗಿದ ಎಂ.ಎಲ್.ಸಿ. ವೈ.ಎ.ನಾರಾಯಣಸ್ವಾಮಿ : ರುಪ್ಸಾ ಅಧ್ಯಕ್ಷ ಹಾಗೂ ಪಕ್ಷೇತರ ಅಭ್ಯರ್ಥಿ ಲೋಕೇಶ್ ತಾಳಿಕಟ್ಟೆ ಆರೋಪ

Leave a Reply

Your email address will not be published. Required fields are marked *

You missed

error: Content is protected !!