• Wed. May 1st, 2024

ಕೆ.ವಿ.ಅಯ್ಯರ್ ವಿಶಿಷ್ಟ ಕಥಾ ನಿರೂಪಣೆ ಹೊಂದಿರುವ ಸಾಹಿತಿ – ರಮೇಶ್

ByNAMMA SUDDI

Dec 25, 2022 ,

PLACE YOUR AD HERE AT LOWEST PRICE

ಬದುಕಿಗೆ ಅಗತ್ಯವಾದ ನಂಬಿಕೆ, ಭರವಸೆ ಮಾನವೀಯತೆ, ಹೃದಯವಂತಿಕೆಯ ತಳಹದಿಯ ಮೇಲೆ ಕಥೆಯನ್ನು ಕಟ್ಟುವ ವಿಶಿಷ್ಟ ನಿರೂಪಣಾ ಶೈಲಿ ಹೊಂದಿರುವ ಸಾಹಿತಿ ಕೆ.ವಿ.ಅಯ್ಯರ್ ಅವರ ಕಥೆಗಳು, ಇನ್ನಿತರ ಕೃತಿಗಳನ್ನು ಇಂದಿನ ಸಾಹಿತ್ಯಾಸಕ್ತರು ಓದಬೇಕಾದ ಅವಶ್ಯಕತೆ ಇದೆ ಎಂದು ಸಾಹಿತಿ, ಕೋಲಾರ ಮಹಿಳಾ ಕಾಲೇಜಿನ ಸಹ ಪ್ರಾದ್ಯಾಪಕ ಡಾ.ಸಿ. ಎ.ರಮೇಶ್ ಅಭಿಪ್ರಾಯಪಟ್ಟರು.

ಕೋಲಾರದಲ್ಲಿ ನಡೆದ ಓದುಗ – ಕೇಳುಗ ನಮ್ಮನಡೆ ೨೧ನೇ ಕಾಯ೯ಕ್ರಮದಲ್ಲಿ ಸಾಹಿತಿ ಕೆ.ವಿ ಅಯ್ಯರ್ ಅವರ ಸಮುದ್ಯತಾ ಕಥಾ ಸಂಕಲನ ಕುರಿತು ಮಾತನಾಡಿದರು.

ನವೋದಯ ಕಾಲದ ನಂತರದ ಕಥಾ ಶೈಲಿಯನ್ನು ಓಗ್ಗೂಡಿಸಿಕೊಂಡೇ ಆಯಾ ಸನ್ನಿವೇಶಗಳಿಗೆ ತಕ್ಕಂತೆ ವಸ್ತುವಿನ ಆಯ್ಕೆ, ನಿರ್ವಹಣೆಯಲ್ಲಿ ಕೆ.ವಿ.ಅಯ್ಯರ್ ಅವರ ವಿಶೇಷತೆ ಇದೆ. ಅವರ ಕಥೆಗಳಲ್ಲಿ ಭಾಷೆ ಮತ್ತು ಬದುಕಿನ ಸಂಬಂಧ ಸಂಬಂಧಗಳ ಅದ್ಭುತ ನಿರೂಪಣೆ, ವರ್ಣನೆಯಿದೆ. ಈ ಕಥೆಗಳನ್ನು ಓದುತ್ತ ಕಥೆ ರಚಿಸುವ ಹಿಂದಿನ ಶ್ರಮವನ್ನು ಓದುಗರು ಗುರುತಿಸಬೇಕಾಗಿದೆ ಎಂದು ಡಾ.ರಮೇಶ್ ತಿಳಿಸಿದರು.

ಅಧ್ಯಕ್ಷತೆ ವಹಿಸಿದ್ದ ಸಾಹಿತಿ ಹಾಗು ಉಪನ್ಯಾಸಕ ಶಂಕರೇಗೌಡ ಶ್ರೀನಿವಾಸಪುರ ಅವರು ಕೆ.ವಿ.ಅಯ್ಯರ್ ಅವರು ಬದುಕಿನ ಹಲವು ವಿವರಗಳನ್ನು ತೆರೆದಿಟ್ಟರು. ಕೆ.ವಿ.ಅಯ್ಯರ್ ಅವರದು ಬಹುಮುಖ ಪ್ರತಿಭೆ. ಅವರು ಬದುಕಿನ ವಿವಿಧ ಆಯಾಮಗಳನ್ನು ಕಂಡವರು. ಇವರ ಶಾಂತಲಾ, ರೂಪದರ್ಶಿ ಕಾದಂಬರಿಗಳಲ್ಲಿ ಸಾಹಿತ್ಯಕ ಮೌಲ್ಯವಿದೆ, ವೈವಿಧ್ಯವಿದೆ. ಕಥೆಗಳಲ್ಲಿ ಹಾಸ್ಯ ಮಿಶ್ರಿತ ವಿಡಂಬನೆ ಸಹ ಇದೆ. ಅವರು ನಡೆಸುತ್ತಿದ್ದ ವ್ಯಾಯಾಮ ಶಾಲೆಯ ಮೂಲಕ ಅಂತರ್ಜಾತಿ ವಿವಾಹಗಳು, ವಿಧವಾ ವಿವಾಹಗಳಿಗೆ ಪ್ರೋತ್ಸಾಹಿಸುತ್ತ ಸಮಾಜಮುಖಿ ಆಗಿದ್ದವರು ಎಂದು ಬಣ್ಣಿಸಿದರು.

ಚರ್ಚೆಯಲ್ಲಿ ಹ. ಮಾ.ರಾಮಚಂದ್ರ, ರಾಯಲ್ ಪಾಡ್ ರಾಘವೇಂದ್ರ, ನೀಲಕಂಠೇಗೌಡ, ವೆಂಕಟೇಶ್ ಕುಮಾರ್ ಮುಂತಾದವರು ಭಾಗವಹಿಸಿದರು. ಮಂಜುಳಾ ಕೊಂಡರಾಜನಹಳ್ಳಿ ಆಶಯ ಗೀತೆಯೊಂದಿಗೆ ಕಾರ್ಯಕ್ರಮವನ್ನು

Related Post

ಜೆಡಿಎಸ್‌ ಬಿಜೆಪಿ ಒಂದಾಗಿ ಸಂವಿಧಾನಕ್ಕೆ ಅಪಾಯ ಎಚ್ವತ್ತು ಕಾಂಗ್ರೆಸ್ ಬೆಂಬಲಿಸಿ: ಬೈರತಿ ಸುರೇಶ್
ವಚನ ಭ್ರಷ್ಟ ಬಿಜೆಪಿ ನೇತೃತ್ವದ ಎನ್.ಡಿ.ಎ. ಮೈತ್ರಿಕೂಟಕ್ಕೆ ಮತ ಕೇಳುವ ನೈತಿಕತೆ ಇಲ್ಲ-ಕೆ.ವಿ.ಗೌತಮ್
ಏಪ್ರಿಲ್ ೨೬ ರೊಳಗೆ ಎಕ್ಸಿಡಿ ಕಾರ್ಮಿಕರ ಬೇಡಿಕೆಗಳನ್ನು ಈಡೇರಿಸಲು ಆಗ್ರಹ ಇಲ್ಲವಾದಲ್ಲಿ ತೀವ್ರ ರೀತಿಯ ಹೋರಾಟ ನಡೆಸಲು ಕಾರ್ಮಿಕರ ಸಂಘಗಳ ಸಭೆಯಲ್ಲಿ ನಿರ್ಧಾರ

Leave a Reply

Your email address will not be published. Required fields are marked *

You missed

error: Content is protected !!