• Wed. May 1st, 2024

ಗೂರ್ಖಾ ಸಮುದಾಯಕ್ಕೆ ಸರ್ಕಾರಿ ಸೌಲಭ್ಯ ಕಲ್ಪಿಸಿ : ಜೋಗಮಲ್ ಒತ್ತಾಯ

PLACE YOUR AD HERE AT LOWEST PRICE

ಹಿಂದುಳಿದ ವರ್ಗ ಪ್ರವರ್ಗ ೧ ಜಾತಿಗಳ ಗೂರ್ಖಾ ಸಮುದಾಯ ಸಮುದಾಯಕ್ಕೆ ಸರ್ಕಾರಿ ಸೌಲಭ್ಯಕ್ಕಾಗಿ ಒತ್ತಾಯಿಸಿ ಕರ್ನಾಟಕ ಗೂರ್ಖಾ ವೆಲ್ಫೇರ್ ಅಸೋಸಿಯೇಷನ್ ರಾಜ್ಯಾಧ್ಯಕ್ಷ ಆರ್.ಜೋಗ್‌ಮಲ್ ಒತ್ತಾಯಿಸಿದ್ದಾರೆ.

ಕರ್ನಾಟಕ ರಾಜ್ಯದಲ್ಲಿ ಕಳೆದ ೧೦೦ ವರ್ಷಗಳಿಂದ ಮೂಲ ನಿವಾಸಿಗಳಾಗಿ ವಾಸಿಸುತ್ತಿರುವ ಗೂರ್ಖಾ ಸಮುದಾಂi ದ ಜನರು ಅತೀ ಹಿಂದುಳಿದಿದ್ದು, ಕಡುಬಡvನದಲ್ಲಿ ಜೀವಿಸುತ್ತಿದ್ದಾg. ಕಡದ ಮಣ್ಣಿನಲ್ಲೇ ಹುಟ್ಟಿ ಕನ್ನಡವನ್ನೇ ಮಾತೃಭಾಷೆಯನ್ನಾಗಿಸಿಕೊಂಡು ಈ ನೆಲದಲ್ಲೇ ವಿದ್ಯಾಭ್ಯಾಸ ಮಾಡುತಾ ಇಲ್ಲೇ ಉದ್ಯೋಗ ಮಾಡುತ್ತಿರುವ ಈ ಸಮಾಜದ ಜನರು ರಾಜ್ಯದಲ್ಲಿ ಅಂದಾಜು ೪೦-೫೦ ಸಾವಿರ ಜನಸಂಖ್ಯೆಯಲ್ಲಿ ಇದ್ದಾರೆ.
ಕರ್ನಾಟಕ ರಾಜ್ಯದ ಅತಿ ಹಿಂದುಳಿದ ಜಾತಿಗಳ ಪಟ್ಟಿಯಲ್ಲಿರುವ ಪ್ರವರ್ಗ-೧ರ ಜಾತಿಗಳ ಗುಂಪಿನಲ್ಲಿ ಸೇರಿರುವ ಈ ಸಮಾಜದ ಜನರು ಶೈಕ್ಷಣಿಕವಾಗಿ, ಸಾರ್ವಜನಿಕವಾಗಿ, ಆರ್ಥಿಕವಾಗಿ ಔದ್ಯೋಗಿಕವಾಗಿ, ರಾಜಕೀಯವಾಗಿ ಅತೀ ಹಿಂದುಳಿದಿದ್ದು ಸರ್ಕಾರದ ಯಾವುದೇ ಸೌಲಭ್ಯಗಳು ಜನರಿಗೆ ಕ್ರಮವಾಗಿ ದೊರಕುತ್ತಿಲ್ಲ ಕಳೆದ ೧೫ ವರ್ಷಗಳಿಂದ ಹಿಂದಿನ ಮತ್ತು ಈಗಿನ ಸರ್ಕಾರP ನಾವು ಹಲವಾರು ಮನವಿಗಳನ್ನು ಸಲ್ಲಿಸಿದ್ದರೂ ಸಕಾರಾತ್ಮಕವಾಗಿ ಸ್ಪಂದಿಸದೆ ಸರ್ಕಾರ ಮಲತಾಯಿ ದೋರಣೆ ತೋರುತ್ತಿದೆ. ಅದರಲ್ಲೂ ಗೂರ್ಖಾ ಸಮುದಾಯದ ಮಕ್ಕಳು ವಿದ್ಯಾಭ್ಯಾಸ ಮಾಡಲು ಅನುಕೂಲವಾಗುವಂತೆ ಪ್ರವರ್ಗ-೧ರ ಜಾತಿಯ ಮಾಣ ಪತ್ರಗಳನ್ನು ನೀಡಲು ಕಂದಾಯ ಇಲಾಖೆಯ ವ್ಯಾಪ್ತಿಯಲ್ಲಿ ಬರುವಂತಹ ತಹಶೀಲ್ದಾರ್‌ರು ನಿರಾಕರಿಸಿ ಈ ಸಮಾಜಕ್ಕೆ ತೊಂದರೆ ನೀಡುತ್ತಿದ್ದಾರೆ ಎಂದು ದೂರಿದ್ದಾರೆ.
ಅಂತಹ ಸಂದರ್ಭದಲ್ಲಿ ಪ್ರವರ್ಗ-೧ರ ಜಾತಿಗಳಿಗೆ ಸೇರಿದ ಹಿಂದುಳಿದ ವರ್ಗದ ನಾಯಕರು ಮತ್ತು ವಿಧಾನಪರಿಷತ್ ಸದಸ್ಯರು ಆದ ನಾಗರಾಜ್ ಯಾದವ್ ನಮ್ಮ ಬೆಂಬಲಕ್ಕೆ ನಿಂತು ನಮ್ಮ ನ್ಯಾಯಬದ್ದವಾದ ಹಕ್ಕಿಗಾಗಿ ಬೆಳಗಾವಿಯ ಸುವರ್ಣಸೌಧದಲ್ಲಿ ನಡೆದ ವಿಧಾನಪರಿಷತ್ ನಲ್ಲಿ ಗೂರ್ಖಾ ಸಮುದಾಯಕ್ಕೆ ಸಂಬಂಧಿಸಿದಂತೆ ಸಮುದಾಯ ಭವನ ನಿರ್ಮಾಣಕ್ಕಾಗಿ ಮತ್ತು ಅವರ ವಿದ್ಯಾಭ್ಯಾಸ ಮತ್ತು ಶೈಕ್ಷಣಿಕವಾಗಿ, ಸಾಮಾಜಿಕವಾಗಿ ಹಿಂದುಳಿದಿರುವ ಗೂರ್ಖಾ ಸಮುದಾಯದವರಿಗೆ ಮೀಸಲಾತಿಯನ್ನು ಹೆಚ್ಚಿಸುವ ಬಗ್ಗೆ ಹಾಗೂ ಜಾತಿ ಪ್ರಮಾಣ ಪತ್ರವನ್ನು ನೀಡುವ ಬಗ್ಗೆ ವಿಧಾನ ಪರಿಸತ್ತಿನಲ್ಲಿ ಚುಕ್ಕೆಗುರುತಿಲ್ಲದೆ ಪ್ರಶ್ನೆಯನ್ನು ಕೇಳಿ ಈ ನಿಟ್ಟಿಲ್ಲಿ ಗೂರ್ಖಾ ಸಮುದಾಯಕ್ಕೆ ಜಾತಿ ಪ್ರಮಾಣ ಪತ್ರ ನೀಡಲು ಮತ್ತು ಸಾಮಾಜಿP ಸೌಲಭ್ಯಗಳನ್ನು ನೀಡಲು ಕ್ರಮಕೈಗೊಳ್ಳುವುದಾಗಿ ಮಾನ್ಯ ಹಿಂದುಳಿದ ವರ್ಗಗಳ ಸಚಿವರಾದ ಕೋಟಾಶ್ರೀನಿವಾಸ ಪೂಜಾರಿ ರವರಿಂದ ಉತ್ತರ ಪಡೆದಿರುವುದು ಗೂರ್ಖಾ ಸಮುದಾಯಕ್ಕೆ ಸಂತೋಷವಾಗಿರುತ್ತದೆ.
ಈ ನಿಟ್ಟಿನಲ್ಲಿ ಕರ್ನಾಟಕ ರಾಜ್ಯ ಪ್ರವರ್ಗ-೧ರ ಜಾತಿಗಳ ಒಕ್ಕೂಟದ ರಾಜ್ಯ ಅಧ್ಯಕ್ಷ ಡಿ.ಟಿ ಶ್ರೀನಿವಾಸ್‌ರ ಮಾರ್ಗದರ್ಶನದಲ್ಲ್ಲಿ ಗೂರ್ಖಾ ಸಮುದಾಯವು ಸಂಘಟಿತವಾಗುತ್ತಿದೆ, ರಾಜ್ಯದ ಗೂರ್ಖಾ ಸಮುದಾಯ ಇಲ್ಲೇ ಹುಟ್ಟಿ ಇಲ್ಲೇ ಬೆಳೆದು ಈ ಮಣ್ಣಿನ ಮಕ್ಕಳಾಗಿದ್ದಾರೆ. ಈ ಜನರು ಎಲ್ಲಾ ಕಾಲದಲ್ಲೂ ಎಲ್ಲಾ ಸಂದರ್ಬದಲ್ಲೂ ಕರ್ನಾಟಕದ ಅಬಿವೃದ್ಧಿಯ ಪಥಕ್ಕೆ ತನ್ನ ಕೈಲಾದ ಸೇವೆಯನ್ನು ನಿರಂತರವಾಗಿ ಸಲ್ಲಿಸುತ್ತದೆ ಎಂದು ಜೋಗ್‌ಮಲ್ ತಿಳಿಸಿದ್ದಾರೆ.

ಸುದ್ದಿ ಓದಿ ಹಂಚಿ ಪ್ರೋತ್ಸಾಹಿಸಿ

ಇದನ್ನೂ ಓದಿ: ನೌಕರರ ಸಂಘದ ನೂತನ ಪದಾಧಿಕಾರಿಗಳಿಂದ ಸಂಸದರ ಭೇಟಿ ನೌಕರರ ಭವನ ನಿರ್ಮಾಣಕ್ಕೆ ಅಗತ್ಯ ನೆರವು ಮುನಿಸ್ವಾಮಿ ಭರವಸೆ

Related Post

ಜೆಡಿಎಸ್‌ ಬಿಜೆಪಿ ಒಂದಾಗಿ ಸಂವಿಧಾನಕ್ಕೆ ಅಪಾಯ ಎಚ್ವತ್ತು ಕಾಂಗ್ರೆಸ್ ಬೆಂಬಲಿಸಿ: ಬೈರತಿ ಸುರೇಶ್
ವಚನ ಭ್ರಷ್ಟ ಬಿಜೆಪಿ ನೇತೃತ್ವದ ಎನ್.ಡಿ.ಎ. ಮೈತ್ರಿಕೂಟಕ್ಕೆ ಮತ ಕೇಳುವ ನೈತಿಕತೆ ಇಲ್ಲ-ಕೆ.ವಿ.ಗೌತಮ್
ಏಪ್ರಿಲ್ ೨೬ ರೊಳಗೆ ಎಕ್ಸಿಡಿ ಕಾರ್ಮಿಕರ ಬೇಡಿಕೆಗಳನ್ನು ಈಡೇರಿಸಲು ಆಗ್ರಹ ಇಲ್ಲವಾದಲ್ಲಿ ತೀವ್ರ ರೀತಿಯ ಹೋರಾಟ ನಡೆಸಲು ಕಾರ್ಮಿಕರ ಸಂಘಗಳ ಸಭೆಯಲ್ಲಿ ನಿರ್ಧಾರ

Leave a Reply

Your email address will not be published. Required fields are marked *

You missed

error: Content is protected !!