• Thu. Sep 19th, 2024

ಯೋಗಾಥಾನ್ ಕಾರ್ಯಕ್ರಮದ ೨ನೇ ದಿನದ ಪೂರ್ವ ತಯಾರಿ ಸುಮಾರು ೧೦ ಸಾವಿರ ಮಂದಿಯಿಂದ ಯೋಗ ಪ್ರದರ್ಶನ

PLACE YOUR AD HERE AT LOWEST PRICE

ಕೋಲಾರ ಜಿಲ್ಲೆಯಲ್ಲಿ ಜ.೧೫ ರಂದು ನಡೆಯಲಿರುವ ಯೋಗಾಥಾನ್ ಕಾರ್ಯಕ್ರಮದ ಪೂರ್ವಭಾವಿಯಾಗಿ ಶನಿವಾರ ನಡೆದ ಕಾರ್ಯಕ್ರಮದಲ್ಲಿ ಸುಮಾರು ೧೦ ಸಾವಿರಕ್ಕೂ ಹೆಚ್ಚು ವಿದ್ಯಾರ್ಥಿಗಳು ಆಗಮಿಸಿ ಯೋಗ ಪ್ರದರ್ಶನ ನೀಡಿದರು.

ಕೋಲಾರ ನಗರದ ಸರ್.ಎಂ.ವಿಶ್ವೇಶ್ವರಯ್ಯ ಜಿಲ್ಲಾ ಕ್ರೀಡಾಂಗಣದಲ್ಲಿ ಬೆಳಗ್ಗೆ ೭ ಗಂಟೆಗೆ ಯೋಗಾಥಾನ್ ಕಾರ್ಯಕ್ರಮದಲ್ಲಿ ನಗರ ಹಾಗೂ ತಾಲ್ಲೂಕಿನ ವಿವಿಧ ಶಾಲೆಗಳ ಸಾವಿರಾರು ಮಕ್ಕಳು ಪಾಲ್ಗೊಂಡಿದ್ದು, ಪೂರ್ವ ತಯಾರಿ ತರಬೇತಿ ಕಾರ್ಯಕ್ರಮ ನಾಳಿನ ಕಾರ್ಯಕ್ರಮಕ್ಕೆ ಮುನ್ಸೂಚನೆಯಂತೆ ಅದ್ದೂರಿಯಾಗಿ ನಡೆಯಿತು.

ಜ.೧೫ ರಂದು ನಡೆಯುವ ಯೋಗ ಪ್ರದರ್ಶನದಲ್ಲಿ ೧೫ ಸಾವಿರಕ್ಕೂ ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿ ಲಿಮ್ಕಾ ದಾಖಲೆ ನಿರ್ಮಿಸುವ ಯೋಜನೆ ರೂಪಿಸಲಾಗಿದೆ. ಆದ್ದರಿಂದ ಜಿಲ್ಲೆಯ ಪ್ರತಿ ಶಾಲಾ-ಕಾಲೇಜುಗಳಿಂದ ವಿದ್ಯಾರ್ಥಿಗಳನ್ನು ಕರೆದುಕೊಂಡು ಬರಲು ಈಗಾಗಲೇ ಸೂಚಿಸಲಾಗಿದೆ.

ವೆಬ್‌ಸೈಟ್‌ನಲ್ಲಿ ನೋಂದಣಿ ಮಾಡಿಕೊಂಡು ಯೋಗಾಥಾನ್‌ಗೆ ಪ್ರವೇಶಿಸಬಹುದಾಗಿದ್ದು, ಯೋಗ ತರಬೇತಿ ಕಾರ್ಯಕ್ರಮದಲ್ಲಿ ಸೇರಿರುವ ವಿದ್ಯಾರ್ಥಿಗಳು ಸಾಗರೋಪಾದಿಯಲ್ಲಿ ಕ್ರೀಡಾಂಗಣದಲ್ಲಿ ಕಂಡು ಬಂದಿದ್ದು, ವಿದ್ಯಾರ್ಥಿ ಸಮೂಹಕ್ಕೆ ಕ್ರೀಡಾಂಗಣ ಸಾಲದಾಯಿತು. ಸಾವಿರಾರು ಮಕ್ಕಳು ಕ್ರೀಡಾಂಗಣದ ಮೆಟ್ಟಿಲುಗಳ ಮೇಲೆ ಕುಳಿತು ವೀಕ್ಷಿಸಿದರು.

ಸರ್ಕಾರಿ ನೌಕರರೂ ಸಹಾ ಯೋಗಾಥಾನ್ ಕಾರ್ಯಕ್ರಮದಲ್ಲಿ ಭಾಗವಹಿಸುತ್ತಿದ್ದು, ಜಿಲ್ಲಾಡಳಿತದ ಈ ಕಾರ್ಯಕ್ರಮಕ್ಕೆ ಸಂಪೂರ್ಣ ಸಹಕಾರ ನೀಡುತ್ತಿರುವುದಾಗಿ ನೌಕರರ ಸಂಘದ ಅಧ್ಯಕ್ಷ ಜಿ.ಸುರೇಶ್‌ಬಾಬು ತಿಳಿಸಿದರು.

ಭಾನುವಾರ ನಡೆಯುವ ಕಾರ್ಯಕ್ರಮಕ್ಕಾಗಿ ಶಿಷ್ಠಾಚಾರ, ಭದ್ರತೆ, ಸಾರಿಗೆ, ಸ್ವಚ್ಛತೆ, ಪಾರ್ಕಿಂಗ್, ಕುಡಿಯುವ ನೀರು, ಲಘು ಉಪಹಾರ, ಶೌಚಾಲಯ ಹಾಗೂ ಆಂಬುಲೆನ್ಸ್ ವ್ಯವಸ್ಥೆಯನ್ನು ಮಾಡಲು ಈಗಾಗಲೇ ಜಿಲ್ಲಾಧಿಕಾರಿಗಳು ಸೂಚಿಸಿದ್ದಾರೆ.
ಯೋಗ ಶಿಕ್ಷಕರಾದ ಮಾರ್ಕಂಡೇಶ್ವರ್. ಚಂದ್ರಣ್ಣ, ಮಂಜುಳಕ್ಕ ಹಾಗೂ ವೆಂಕಟ, ಸೋಮಣ್ಣ ತರಬೇತಿ ನೀಡಿದರು.

ಇಲಾಖೆ ಸಹಾಯಕ ನಿರ್ದೇಶಕಿ ಶಶಿಕಲಾ, ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಇಲಾಖೆ ಉಪನಿರ್ದೇಶಕ ಕೃಷ್ಣಮೂರ್ತಿ, ಪದವಿ ಪೂರ್ವ ಶಿಕ್ಷಣ ಇಲಾಖೆ ಉಪನಿರ್ದೇಶಕ ರಾಮಚಂದ್ರಪ್ಪ, ಬಿಇಒ ಕನ್ನಯ್ಯ, ಆಯುಷ್ ಇಲಾಖೆ ಅಧಿಕಾರಿಗಳು, ದೈಹಿಕ ಶಿಕ್ಷಕರು ಹಾಗೂ ವಿದ್ಯಾರ್ಥಿಗಳು ಭಾಗವಹಿಸಿದ್ದರು.

ಪೋಷಕರ ಆತಂಕ
ಕೋಲಾರ ನಗರದಲ್ಲಿ ಇತ್ತೀಚಿಗೆ ಬೆಳಗಿನ ಜಾವ ವಿಪರೀತವಾದ ದಟ್ಟ ಮಂಜು ಆವರಿಸಿಕೊಳ್ಳುತ್ತಿದ್ದು, ಚಳಿ ಮಂಜಿನ ವಾತಾವರಣದಲ್ಲಿಯೇ ಸಾವಿರಾರು ಶಾಲಾ ಮಕ್ಕಳನ್ನು ಹೀಗೆ ಕೂರಿಸಿ ಯೋಗಾಭ್ಯಾಸ ಮಾಡುತ್ತಿದ್ದು, ಮಕ್ಕಳ ಆರೋಗ್ಯ ಕೆಟ್ಟರೆ ಹೇಗೆಂಬ ಆತಂಕವನ್ನು ಹಲವಾರು ಪೋಷಕರು ವ್ಯಕ್ತಪಡಿಸಿದರು.

ಮಕ್ಕಳ ಯೋಗದ ಮೂಲಕ ಲಿಮ್ಕಾ ದಾಖಲೆ ಮಾಡಲು ಮಂದಾಗಿರುವ ಸಾರ್ವಜನಿಕ ಶಿಕ್ಷಣ ಇಲಾಖೆ ಮತ್ತು ಜಿಲ್ಲಾಡಳಿತ, ಜಿಪಂ ಅಽಕಾರಿಗಲು ಈ ಕುರಿತು ಗಮನ ಹರಿಸಿ ಮಕ್ಕಳ ಆರೋಗ್ಯ ಕಾಪಾಡುವ ವಿಚಾರದಲ್ಲಿ ಸೂಕ್ತ ಅಗತ್ಯ ಕ್ರಮಗಳನ್ನು ಕೈಗೊಳ್ಳಬೇಕೆಂದು ಆಗ್ರಹಿಸಿದರು.

 

Leave a Reply

Your email address will not be published. Required fields are marked *

You missed

error: Content is protected !!