• Mon. Sep 16th, 2024

ಕೋಲಾರದ ಗೋಪಾಲಕರ ತವರಾದ ಕಿಲಾರಿಪೇಟೆಯಲ್ಲಿ ಸಂಕ್ರಾಂತಿ ಸಂಭ್ರಮ-ಗೋವುಗಳಿಗೆ ಅಲಂಕಾರ-ಪೂಜೆ

PLACE YOUR AD HERE AT LOWEST PRICE

ಕೋಲಾರ ನಗರದ ಗೋಪಾಲಾಕರ ತವರಾದ ಕಿಲಾರಿಪೇಟೆಯಲ್ಲಿ ಸಂಕ್ರಾಂತಿ ಸಂಭ್ರಮ ಮನೆ ಮಾಡಿದ್ದು, ಅಲ್ಲಿನ ಗೋಪಾಲಕರು ತಮ್ಮ ರಾಸುಗಳನ್ನು ಸಿಂಗರಿಸಿ ಪೂಜೆ ಸಲ್ಲಿಸಿದರು.

ಕೋಲಾರ ಕಿಲಾರಿಪೇಟೆಯ ರುಕ್ಮಿಣಿ,ಸತ್ಯಭಾಮ ಸಮೇತ ವೇಣುಗೋಪಾಲಸ್ವಾಮಿ ದೇವಾಲಯದಲ್ಲಿ ಪೂಜೆ ಸಲ್ಲಿಸಿದ ನಂತರ ಪ್ರತಿ ವರ್ಷದಂತೆ ಈ ವರ್ಷವೂ ಗೋವುಗಳನ್ನು ಅಲಂಕರಿಸಿ ಮೆರವಣಿಗೆ ನಡೆಸುತ್ತಿದ್ದ ಕಿಲಾರಿಪೇಟೆಯ ಗೋಪಾಲಕರು ಈ ಬಾರಿಯೂ ಗೋವುಗಳನ್ನು ಸಿಂಗರಿಸಿ ಪೂಜೆ ಸಲ್ಲಿಸಿ ಮೆರವಣಿಗೆ ಮಾಡಿ ಸಂಭ್ರಮಿಸಿದರು.

ಗೋವುಗಳಿಗೆ ಇಲ್ಲಿನ ಹಲವಾರು ಮುಖಂಡರು ಪಶು ಆಹಾರ, ಹಸಿ ಮೇವು ನೀಡಿ ಪೂಜೆ ಸಲ್ಲಿಸಿ ಗಮನ ಸೆಳೆದರು. ಇಲ್ಲಿನ ವೇಣುಗೋಪಾಲಸ್ವಾಮಿ ದೇವಾಲಯದ ಮುಂದೆ ಗೋವುಗಳನ್ನು ಅಲಂಕರಿಸಿ ಮೆರವಣಿಗೆ ನಡೆಸಿದರು.
ಸಂಕ್ರಾಂತಿ ಅಂಗವಾಗಿ ವೇಣುಗೋಪಾಲಸ್ವಾಮಿಯ ಇಡೀ ದೇವಾಲಯವನ್ನು ವಿವಿಧ ಪುಷ್ಪಗಳಿಂದ ಅಲಂಕರಿಸಿದ್ದು, ತಮ್ಮ ಗೋವುಗಳಿಗೆ ಉತ್ತಮ ಆರೋಗ್ಯ ಸಿಗಲಿ ಎಂದು ಗೋಪಾಲಕರು ಪ್ರಾರ್ಥಿಸಿದರು.

ಪೂಜಾ ಕಾರ್ಯದಲ್ಲಿ ಮೇಸ್ತ್ರಿ ನಾರಾಯಣಸ್ವಾಮಿ, ಕೆ.ವಿ.ಚೌಡಪ್ಪ, ಮುನಿಸ್ವಾಮಪ್ಪ,ಒಳ್ಳೆಪ್ಪ, ತಬಲ ಕಿಟ್ಟಣ್ಣ, ಮುನಿರಾಮಪ್ಪ, ವೆಂಕಟಪ್ಪ, ಪ್ರಸನ್ನ ಕುಮಾರ್, ಉಪ್ಪರಪೇಟೆ ಗೋವಿಂದಪ್ಪ, ಮುನಿರಾಜಪ್ಪ, ಪುರುಷೋತ್ತಮ, ಕೆ.ಎನ್.ವೆಂಕಟೇಶ್, ಕೆ.ಎನ್.ಮುನಿಕೃಷ್ಣ, ಎಂ.ಮಣಿ, ಮುನಿವೆಂಕಟಸ್ವಾಮಿ, ಮುನಿವೆಂಕಟಯಾದವ್, ಕೆ.ವಿ.ಮಂಜು, ವಿಶ್ವನಾಥ್, ಕೆ.ವಿ.ರಮೇಶ್, ಚಿನ್ನಪ್ಪಿ, ಅಡಿಕೆ ನಾರಾಯಣಸ್ವಾಮಿ, ಜಿ.ಕೃಷ್ಣಮೂರ್ತಿ,ದೊಡ್ಡವೀರಪ್ಪ, ಕೋಳಿನಾರಾಯಣಸ್ವಾಮಿ,ಪೋಸ್ಟ್‌ಮಾಸ್ಟರ್ ನಾರಾಯಣಸ್ವಾಮಿ, ಭಜನೆ ಪ್ರಭಾಕರ್,ವೆಂಕಟರಾಮ್ ಮತ್ತಿತರರು ಹಾಜರಿದ್ದರು.

 

Leave a Reply

Your email address will not be published. Required fields are marked *

You missed

error: Content is protected !!