• Mon. Sep 16th, 2024

ಪತ್ರಕರ್ತರ ಸಂಘದ ಇತಿಹಾಸದಲ್ಲೇ ಮೊದಲಬಾರಿಗೆ ‘ಸಂಕ್ರಾಂತಿ ಸುಗ್ಗಿ’ ಪತ್ರಕರ್ತರ ಕುಟುಂಬಗಳಿಗಾಗಿ ಕಾರ್ಯಕ್ರಮ ಶ್ಲಾಘನೀಯ-ಎಸ್ಪಿ ದೇವರಾಜ್

PLACE YOUR AD HERE AT LOWEST PRICE

ಕೋಲಾರ ಜಿಲ್ಲಾ ಪತ್ರಕರ್ತರ ಸಂಘದ ಇತಿಹಾಸದಲ್ಲೇ ಮೊದಲ ಬಾರಿಗೆ ಪತ್ರಕರ್ತರು ಮತ್ತವರ ಕುಟುಂಬದವರಿಗಾಗಿ ‘ಸಂಕ್ರಾಂತಿ ಸುಗ್ಗಿ’ ವಿಶಿಷ್ಟ ಕಾರ್ಯಕ್ರಮ ನಡೆಸುವ ಮೂಲಕ ಒಂದೆಡೆ ಸೇರಿ ಎಲ್ಲರೂ ಸಂಭ್ರಮಿಸುವ ಅವಕಾಶ ನಿಜಕ್ಕೂ ಶ್ಲಾಘನೀಯ ಎಂದು ಜಿಲ್ಲೆಯಿಂದ ವರ್ಗಾವಣೆಯಾಗಿರುವ ಪೊಲೀಸ್ ವರಿಷ್ಠಾಧಿಕಾರಿ ಡಿ.ದೇವರಾಜ್ ತಿಳಿಸಿದರು.

ಕೋಲಾರ ನಗರದ ಪತ್ರಕರ್ತರ ಭವನದಲ್ಲಿ ಸಂಘದ ಕ್ರೀಡಾ,ಸಾಂಸ್ಕೃತಿಕ ವಿಭಾಗದ ಅಧ್ಯಕ್ಷ ಹಾಗೂ ಜಿಲ್ಲಾ ಖಜಾಂಚಿ ಎ.ಜಿ.ಸುರೇಶ್‌ಕುಮಾರ್ ಕನಸಿನ ಈ ಕಾರ್ಯಕ್ರಮಕ್ಕೆ ಚಾಲನೆ ನೀಡಿ, ಪತ್ರಕರ್ತರ ಸಂಘ ನೀಡಿದ ಬೀಳ್ಕೊಡುಗೆ ಸ್ವೀಕರಿಸಿ ಅವರು ಮಾತನಾಡುತ್ತಿದ್ದರು.

ಪತ್ರಕರ್ತರೊಂದಿಗೆ ಹೆಚ್ಚು ಕಾಲ ಕಳೆಯುವ ಆಶಯವಿದೆ, ಮತ್ತೊಮ್ಮೆ ನಿಮ್ಮ ಸಂಘಕ್ಕೆ ಬಂದು ಕಾರ್ಯಕ್ರಮದಲ್ಲಿ ಭಾಗವಹಿಸುವೆ, ಸದಾ ಕೆಲಸದ ಒತ್ತಡದಲ್ಲೇ ಇರುವ ಪತ್ರಕರ್ತರು ತಮ್ಮ ಕುಟುಂಬದೊಂದಿಗೆ ಒಂದೆಡೆ ಸೇರಿರುವುದು ಒಂದು ಒಳ್ಳೆಯ ಬೆಳವಣಿಗೆ ಎಂದರು.

ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದ ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘದ ಅಧ್ಯಕ್ಷ ಬಿ.ವಿ.ಗೋಪಿನಾಥ್, ಕೋಲಾರ ಜಿಲ್ಲೆಯಲ್ಲಿ ಕೇವಲ ಒಂದು ವರ್ಷದಲ್ಲಿ ಓರ್ವ ಅಧಿಕಾರಿ ಏನೆಲ್ಲಾ ಕೆಲಸ ಮಾಡಬಹುದು ಎಂಬುದನ್ನು ತೋರಿಸಿಕೊಟ್ಟ ಡಿ.ದೇವರಾಜ್ ಅವರ ಕಾರ್ಯ ಮರೆಯುವಂತಿಲ್ಲ ಎಂದರು.

ಕಾರ್ಯಕ್ರಮದಲ್ಲಿ ಪತ್ರಕರ್ತರ ಸಂಘದ ರಾಜ್ಯಕಾರ್ಯಕಾರಿ ಸದಸ್ಯರಾದ ಕೆ.ಎಸ್.ಗಣೇಶ್, ವಿ.ಮುನಿರಾಜು, ಸಾಂಸ್ಕೃತಿಕ ವಿಭಾಗದ ಸದಸ್ಯ ರಾಜೇಂದ್ರಸಿಂಹ, ಮಾಮಿ, ವೆಂಕಟೇಶ್‌ಬಾಬಾ ಮತ್ತಿತರಿದ್ದು, ಎಸ್ಪಿ ಡಿ.ದೇವರಾಜ್ ಅವರನ್ನು ಸನ್ಮಾನಿಸಿದರು.

ಸಂಕ್ರಾಂತಿ ಸಡಗರ
ಪತ್ರಕರ್ತರಸಂಭ್ರಮ

ಕಾರ್ಯಕ್ರಮದ ನಂತರ ನಡೆದ ‘ಸಂಕ್ರಾಂತಿ ಸುಗ್ಗಿ’ ಕಾರ್ಯಕ್ರಮದಲ್ಲಿ ಕಲಾವಿದ ಶ್ರೀನಿವಾಸಪುರ ತಾಲೂಕಿನ ಗೌನಪಲ್ಲಿ ಸಮೀಪದೆ ಯಡಗಾನಪಲ್ಲಿ ಗ್ರಾಮದ ಖ್ಯಾತ ಹಿನ್ನಲೆ ಗಾಯಕ ವೈ.ಇ.ಅಕ್ಬರ್ ಮತ್ತು ನಾಗಶ್ರೀ ನಡೆಸಿಕೊಟ್ಟ ಸಂಗೀತ ಸಂಜೆ ಸಂಕ್ರಾಂತಿ ಸಡಗರಕ್ಕೆ ಮೆರಗು ನೀಡಿತು.

ಕೆ.ಎಸ್.ಗಣೇಶ್, ಮದನ್,ರವಿ,ರಾಜೇಂದ್ರ,ಸುರೇಶ್ ಸೇರಿದಂತೆ ಹಲವಾರು ಪತ್ರಕರ್ತರೂ ಮತ್ತು ಅವರ ಮಕ್ಕಳು ಕಲಾವಿದರೊಂದಿಗೆ ವೇದಿಕೆ ಹಂಚಿಕೊಂಡು ಹಾಡುವ ಮೂಲಕ ತಮ್ಮ ಪ್ರತಿಭೆ ಪ್ರದರ್ಶಿಸಿದರಲ್ಲದೇ ಒಟ್ಟಾಗಿ ಕುಣಿದು ಸಂಭ್ರಮಿಸಿದ್ದು ವಿಶೇಷವಾಗಿತ್ತು. ಅದರಲ್ಲೂ ಪತ್ರಕರ್ತರ ಪುಟ್ಟ ಮಕ್ಕಳ ಕಲರವ ಇಡೀ ಕಾರ್ಯಕ್ರಮಕ್ಕೆ ಮೆರಗು ನೀಡಿತ್ತು.

ಪ್ರೇಮ್ ಮಿಮಿಕ್ರಿ
ಇದೇ ಕಾರ್ಯಕ್ರಮದಲ್ಲಿ ಕೋಲಾರದ ಹಾರೋಹಳ್ಳಿಯವರಾಗಿ ತಮ್ಮ ಮೂಗಿನ ಮೂಲಕ ಶಹನಾಯಿ ಬಾರಿಸುವ ಮೂಲಕ ಗಿನ್ನೀಸ್ ದಾಖಲೆ ಬರೆದಿರುವ ಪ್ರೇಮ್ ನಡೆಸಿಕೊಟ್ಟ ಸಂಗೀತ, ಮಿಮಿಕ್ರಿ ಮನಸೂರೆಗೊಂಡಿತು.

ವಿಶಿಷ್ಟ ರೀತಿಯ
ತಿಂಡಿ ವ್ಯವಸ್ಥೆ
ಕಾರ್ಯಕ್ರಮಕ್ಕೆ ಆಗಮಿಸಿದ್ದ ಪತ್ರಕರ್ತರು,ಕುಟುಂಬದವರಿಗೆ ಸಬ್ಬಕ್ಕಿ ಇಡ್ಲಿ, ಚಟ್ನಿ,ಸಾಗು, ಸಿಹಿ,ಖಾರ ಪೊಂಗಲ್, ಪ್ರಸಿದ್ದ ಮುಳಬಾಗಿಲು ದೋಸೆ, ಪಾನಿಪೂರಿ ವ್ಯವಸ್ಥೆ ಮಾಡಿದ್ದು, ಎಲ್ಲರೂ ಒಂದಾಗಿ ಸವಿದು ಸಂಭ್ರಮಿಸಿದ್ದು, ಸಂಕ್ರಾಂತಿಯ ಮುನ್ನಾದಿನವೇ ಪತ್ರಕರ್ತರ ಪಾಲಿಗೆ ಸಂಕ್ರಾಂತಿ ಸಂತಸ ತಂದಿತು ಜತೆಗೆ ಎಲ್ಲರಿಗೂ ಕಬ್ಬು,ಎಳ್ಳುಬೆಲ್ಲ ವಿತರಿಸಲಾಯಿತು.
ಇಡೀ ಕಾರ್ಯಕ್ರಮದ ಉಸ್ತುವಾರಿಯನ್ನು ಪತ್ರಕರ್ತರ ಸಂಘದ ಸಾಂಸ್ಕೃತಿಕ ವಿಭಾಗದ ಅಧ್ಯಕ್ಷ ಎ.ಜಿ.ಸುರೇಶ್‌ಕುಮಾರ್,ಸದಸ್ಯರಾದ ರಾಜೇಂದ್ರ ಸಿಂಹ,ರವಿ, ಮಹೇಶ್, ಸುನೀಲ್, ವೆಂಕಟೇಶ್, ಮದನ್,ಬೆಟ್ಟಪ್ಪ,ಗಂಗಾಧರ್ ಮತ್ತಿತರರು ವಹಿಸಿದ್ದರು.

ಸಂಕ್ರಾಂತಿ ಸಡಗರದಲ್ಲಿಹಿರಿಯ ಪತ್ರಕರ್ತರಾದ ಸಚ್ಚಿದಾನಂದ್,ಅಬ್ಬಣಿ ಶಂಕರ್,ಸಿ.ವಿ.ನಾಗರಾಜ್, ಬಿ.ಸುರೇಶ್,ಜಗದೀಶ್, ನಾ.ಮಂಜುನಾಥ್,ಕೆಜಿಎಫ್ ತಾಲೂಕು ಅಧ್ಯಕ್ಷ ತ್ಯಾಗರಾಜ್,ಶಿವಶಂಕರ್, ಮಾಲೂರು ಅಧ್ಯಕ್ಷ ವಿಜಯಕುಮಾರ್, ಜಿಲ್ಲಾ ಕಾರ್ಯಕಾರಿ ಸದಸ್ಯ ಮಂಜುನಾಥ್, ನಾರಾಯಣಸ್ವಾಮಿ, ಸಹಕಾರ ಸಂಘದ ಕಾರ್ಯದರ್ಶಿ ಗಂಗಾಧರ್, ಸತೀಶ್, ಕಿರಣ್ ಮತ್ತಿತರು ಭಾಗವಹಿಸಿದ್ದರು.

 

Leave a Reply

Your email address will not be published. Required fields are marked *

You missed

error: Content is protected !!