• Mon. Sep 16th, 2024

ವೀರಸಿಂಹಾರೆಡ್ಡಿ ತಂಡಕ್ಕೆ ಕೋಲಾರದಲ್ಲಿ ಭರ್ಜರಿ ಸ್ವಾಗತ ನಟ ದುನಿಯಾವಿಜಿ, ನಿರ್ದೇಶಕ ಗೋಪಿಚಂದ್ ಮಲಿನೇನಿ, ಜಗನ್‌ಗೆ ಸನ್ಮಾನ

PLACE YOUR AD HERE AT LOWEST PRICE

ನಂದಮೂರಿ ಬಾಲಕೃಷ್ಣ ಅಭಿನಯದ ವೀರಸಿಂಹಾರೆಡ್ಡಿ ಚಲನಚಿತ್ರದ ಪ್ರಚಾರಕ್ಕಾಗಿ ಭಾನುವಾರ ಕೋಲಾರ ನಗರಕ್ಕೆ ಆಗಮಿಸಿದ ದುನಿಯಾ ವಿಜಿ ಮತ್ತು ಚಿತ್ರದ ನಿರ್ದೇಶದ ಗೋಪಿಚಂದ್ ಮಲಿನೇನಿ ಅವರಿಗೆ ಎನ್‌ಬಿಕೆ ಹೆಲ್ಪಿಂಗ್ ಹ್ಯಾಂಡ್ಸ್ ಮತ್ತು ಅಭಿಮಾನಿಗಳು ಭರ್ಜರಿ ಸ್ವಾಗತ ನೀಡಿದರು.

ವೀರಸಿಂಹಾರೆಡ್ಡಿ ಚಿತ್ರದ ನಿರ್ದೇಶಕ ಗೋಪಿಚಂದ್ ಮಲಿನೇನಿ ಮತ್ತು ಜಗನ್ ಶನಿವಾರ ರಾತ್ರಿಯೇ ಕೋಲಾರಕ್ಕೆ ಆಗಮಿಸಿ ನಗರದ ಹೊರವಲಯದ ನಾಗಾರ್ಜುನ ಹೋಟೆಲ್‌ನಲ್ಲಿ ವಾಸ್ತವ್ಯಹೂಡಿದ್ದರು.

ಭಾನುವಾರ ಬೆಳಿಗ್ಗೆ ಬೆಂಗಳೂರಿನಿಂದ ಆಗಮಿಸಿದ್ದ ದುನಿಯಾ ವಿಜಿ ಅವರನ್ನು ಸೇರಿಕೊಂಡರು. ಉಪಹಾರದ ನಂತರ ಇವರನ್ನು ಕೋಲಾರದ ಬಸ್ ನಿಲ್ದಾಣ ವೃತ್ತಕ್ಕೆ ಕರೆ ತರಲಾಯಿತು.

ಅಲ್ಲಿ ಅಭಿಮಾನಿಗಳು ಮತ್ತು ಎನ್‌ಬಿಕೆ ಹೆಲ್ಪಿಂಗ್ ಹ್ಯಾಂಡ್ಸ್ ಮುಖ್ಯಸ್ಥ ರಮೇಶ್‌ಯಾದವ್ ಇತರರು ಬೃಹತ್ ಆಪಲ್ ಮತ್ತು ಹೂವಿನ ಹಾರವನ್ನು ಕ್ರೇನ್ ಮೂಲಕ ಹಾಕಿ ಸ್ವಾಗತಿಸಿದರು. ಅಲಂಕೃತ ತೆರೆದ ಜೀಪಿನಲ್ಲಿ ಬಸ್ ನಿಲ್ದಾಣ ವೃತ್ತದಿಂದ ಭವಾನಿ ಚಿತ್ರ ಮಂದಿರದವರೆವಿಗೂ ಅವರನ್ನು ಹೂಗಳ ಸುರಿಮಳೆಯ ಸ್ವಾಗತ, ಡಿಜೆ ಮತ್ತು ಬ್ಯಾಂಡ್‌ಸೆಟ್ ಸಾರಥ್ಯದಲ್ಲಿ ಕಿಕ್ಕಿರಿದು ನೆರೆದಿದ್ದ ಅಭಿಮಾನಿಗಳು ಕರೆ ತಂದರು.

ಚಿತ್ರ ಮಂದಿರದಲ್ಲಿಯೂ ನೂರಾರು ಸಂಖ್ಯೆಯಲ್ಲಿ ನೆರೆದಿದ್ದ ಅಭಿಮಾನಿಗಳತ್ತ ಕೈಬೀಸುತ್ತಾ ಚಿತ್ರದ ತಂಡ ಚಿತ್ರಮಂದಿರವನ್ನು ಪ್ರವೇಶಿಸಿತು. ಚಿತ್ರಮಂದಿರದಲ್ಲಿ ರಮೇಶ್‌ಯಾದವ್ ತಂಡವು ಅವರಿಗೆ ಆತ್ಮೀಯ ಸ್ವಾಗತಕೋರಿ ಕೇಕ್ ಕತ್ತರಿಸಿ, ಆಗಮಿಸಿದ್ದ ಚಿತ್ರ ತಂಡದ ಸದಸ್ಯರಿಗೆ ಸನ್ಮಾನ ಮಾಡಿದರು.

ಕೆಲ ಹೊತ್ತು ಅಭಿಮಾನಿಗಳೊಂದಿಗೆ ವೀರಸಿಂಹಾರೆಡ್ಡಿ ಚಿತ್ರ ವೀಕ್ಷಿಸಿದ ದುನಿಯಾವಿಜಿ ಮತ್ತು ಚಿತ್ರದ ತಂಡ ಕೋಲಾರದ ಅಭಿಮಾನಿಗಳ ಸ್ವಾಗತಕ್ಕೆ ಮನಸೋತರು. ನಿರ್ದೇಶಕ ಗೋಪಿಚಂದ್ ಮಲಿನೇನಿಮಾತನಾಡಿ, ಮುಂದಿನ ದಿನಗಳಲ್ಲಿ ಬಾಲಕೃಷ್ಣರನ್ನು ಕೋಲಾರಕ್ಕೆ ಕರೆ ತರುವುದಾಗಿ ಘೋಷಿಸಿದರು.

ತೆಲುಗು ಚಿತ್ರವೊಂದರಲ್ಲಿ ಇದೇ ಮೊದಲ ಬಾರಿಗೆ ವಿಲನ್ ಪಾತ್ರ ಮಾಡಿ ಆರ್ಭಟಿಸುತ್ತಿರುವ ದುನಿಯಾ ವಿಜಿ ಕೋಲಾರದ ಅಭಿಮಾನಿಗಳಿಗೆ ಧನ್ಯವಾದ ಹೇಳಿದರು. ಅಭಿಮಾನಿಗಳ ನೂಕುನುಗ್ಗಾಟದಲ್ಲಿಯೇ ಚಿತ್ರತಂಡ ಕೋಲಾರದಿಂದ ಎಚ್‌ಕ್ರಾಸ್, ವಿಜಯಪುರ ಹಾಗೂ ಚಿಕ್ಕಬಳ್ಳಾಪುರಕ್ಕೆ ವೀರಸಿಂಹಾರೆಡ್ಡಿ ಪ್ರಚಾರಕ್ಕಾಗಿ ತೆರಳಿತು.


ಕೋಲಾರದಲ್ಲಿ ಸಿಕ್ಕ ಭರ್ಜರಿ ಸ್ವಾಗತವನ್ನು ಮೆಚ್ಚಿ ದುನಿಯಾ ವಿಜಿ ತಮ್ಮ ಟ್ವಿಟ್ಟರ್ ಪೇಜ್‌ನಲ್ಲಿ ಧನ್ಯವಾದ ಅರ್ಪಿಸಿ ಹಂಚಿಕೊಂಡಿರುವುದು ಕೆಲ ಹೊತ್ತಿನಲ್ಲಿಯೇ ವೈರಲ್ ಆಗಿತ್ತು.
ಕೋಲಾರದ ನಂದಮೂರಿ ಬಾಲಕೃಷ್ಣ ಅಭಿಮಾನಿಗಳು ಚಿತ್ರ ತಂಡವನ್ನು ಸ್ವಾಗತಿಸಲು ಹೆಚ್ಚಿನ ಸಂಖ್ಯೆಯಲ್ಲಿ ಹಾಜರಿದ್ದು, ಕಾರ್ಯಕ್ರಮವನ್ನು ಯಶಸ್ವಿಗೊಳಿಸಿದರು. ನೂರಾರು ಮಂದಿ ನೆಟ್ಟಿನ ನಟ, ನಿರ್ದೇಶಕರೊಂದಿಗೆ ಸೆಲಿಗೆ ಮುಗಿಬಿದ್ದಿದ್ದರಿಂದ ಜನ ನಿಯಂತ್ರಣ ಪೊಲೀಸರಿಗೆ ಪ್ರಯಾಸವಾಗಿ ಪರಿಣಮಿಸಿತ್ತು.

 

 

Leave a Reply

Your email address will not be published. Required fields are marked *

You missed

error: Content is protected !!