• Fri. May 3rd, 2024

ಸಿದ್ದರಾಮಯ್ಯ ವಿರುದ್ಧ ದಲಿತ ವಿರೋಧಿ ಅಸ್ತ್ರ – ಮುಖಂಡರಿಂದ ಕರಪತ್ರ ವಿತರಣೆ

PLACE YOUR AD HERE AT LOWEST PRICE

ಕೋಲಾರ ವಿಧಾನಸಭಾ ಚುನಾವಣಾ ಅಖಾಡ ರಂಗೇರಿದ್ದು, ವಿಪಕ್ಷ ನಾಯಕ, ಮಾಜಿ ಸಿಎಂ ಸಿದ್ದರಾಮಯ್ಯ ಕೋಲಾರದಿಂದ ಸ್ಪರ್ಧೆ ಖಚಿತವಾಗುತ್ತಿದ್ದಂತೆ ಇದೀಗ ಸಿದ್ದರಾಮಯ್ಯ ಸೋಲಿಸಲು ದಲಿತ ವಿರೋಧಿ ಅಸ್ತ್ರವನ್ನು ಪ್ರಯೋಗಿಸಲಾಗುತ್ತಿದೆ.

ಕೋಲಾರ ಕ್ಷೇತ್ರದಾದ್ಯಂತ ಸಿದ್ದರಾಮಯ್ಯ ವಿರುದ್ಧ ಕರಪತ್ರ ಅಭಿಯಾನ ಆರಂಭವಾಗಿದ್ದು, ಸಿದ್ದರಾಮಯ್ಯ ಅವರನ್ನು ಕೋಲಾರದಿಂದ ಸೋಲಿಸಿ, ಅವರಿಗೆ ದಲಿತ ಶಕ್ತಿ ತೋರಿಸಿ ಎಂಬ ಅನಾಮಧೇಯ ಕರಪತ್ರಗಳನ್ನು ಹಂಚಲಾಗುತ್ತಿದೆ. ಈ ಮೂಲಕ ಕೋಲಾರದಲ್ಲಿ ದಲಿತ ಸಿಎಂ ಕೂಗು ಜೋರಾಗಿದೆ.

ಈ ಹಿನ್ನೆಲೆ ಶನಿವಾರ ದಲಿತ ಸ್ವಾಭಿಮಾನಿಗಳು ನಗರದ ಪ್ರಮುಖ ಜನಸಂದಣಿ ವೃತ್ತ, ಬೀದಿಗಳಲ್ಲಿ ದಲಿತ ಮತದಾರರ ಜಾಗೃತಿ ಅಭಿಯಾನ ಮಾಡುವ ಮೂಲಕ ಸಾರ್ವಜನಿಕರಿಗೆ ಕರಪತ್ರಗಳನ್ನು ಹಂಚಿದರು. ಈ ಕರಪತ್ರಗಳನ್ನು ಆಕರ್ಷಕವಾಗಿ ಮುದ್ರಿಸಿದ್ದರು ಯಾರ ಹೆಸರಿನಲ್ಲೂ ಮುದ್ರಿಸದೇ ಇರುವುದು ಅನುಮಾನಕ್ಕೆಡೆ ಮಾಡುತ್ತಿದೆ. ಆದರೆ ಕೆಲವು ಕರಪತ್ರಗಳನ್ನು ಬಿಡಿಎಸ್‌ ರಾಜ್ಯಾಧ್ಯಕ್ಷ  ಎಂ.ನಾರಾಯಣಸ್ವಾಮಿ ಹೆಸರಿನಲ್ಲಿದೆ. ಕರಪತ್ರ ವಿತರಣೆಯಲ್ಲೂ ಅವರೇ ಮಂಚೂಣಿಯಲ್ಲಿದ್ದರು.

ರಾಮಸಂದ್ರ ತಿರುಮಲೇಶ್ ಮಾತನಾಡಿ, ದಲಿತ ನಾಯಕರ ವಿರುದ್ಧ ಒಳಸಂಚು ಮಾಡಿದ್ದ ಸಿದ್ದರಾಮಯ್ಯ ಅವರನ್ನು ಚುನಾವಣೆಯಲ್ಲಿ ಸೋಲಿಸಬೇಕು ಎಂಬ ಕರೆ ಕ್ಷೇತ್ರಾದ್ಯಂತ ಕೇಳಿಬರುತ್ತಿದೆ. ಒಟ್ಟಾರೆ ಕೋಲಾರದಿಂದ ಸಿದ್ದರಾಮಯ್ಯ‌ ಸ್ಪರ್ಧಿಸುವುದಾಗಿ ಘೋಷಣೆಯಾಗುತ್ತಿದ್ದಂತೆ ದಲಿತ ನಾಯಕರು ಸಿದ್ದರಾಮಯ್ಯ ವಿರುದ್ಧ ತಂತ್ರ ರೂಪಿಸಿದ್ದೇವೆ ಎಂದರು.

೨೦೧೮ ರಲ್ಲಿ ನಡೆದ ಚಾಮುಂಡೇಶ್ವರಿ ಕ್ಷೇತ್ರದಲ್ಲಿನ ಚುನಾವಣೆಯಲ್ಲಿ ಅಲ್ಲಿನ ದಲಿತ ಮತದಾರರು ಒಗಟ್ಟಾಗಿ ಸಿದ್ದರಾಮಯ್ಯನವರ ವಿರುದ್ಧ ಮತ ಚಲಾಯಿಸಿ ೩೬ ಸಾವಿರಕ್ಕೂ ಹೆಚ್ಚು ಮತಗಳ ಅಂತರದಿಂದ ಸೋಲಿಸಿದ್ದರು. ಇದೇ ರೀತಿ ಕೋಲಾರ ವಿಧಾನಸಭಾ ಕ್ಷೇತ್ರದ ದಲಿತ ಮತದಾರರು ಸಾಬೀತುಪಡಿಸಬೇಕು ಎಂದು ಮನವಿ ಮಾಡಿದರು.


ಕರಪತ್ರಗಳ ವಿತರಣೆಗೂ ಮುನ್ನ ಕೋಲಾರ ಪತ್ರಕರ್ತರ ಭವನದಲ್ಲಿ ಬಾಲಾಜಿ ಚನ್ನಯ್ಯ, ದಲಿತ ನಾರಾಯಣಸ್ವಾಮಿ, ಸಾಹುಕಾರ್ ಶಂಕರಪ್ಪ, ಬೆಳಮಾರನಹಳ್ಳಿ ಅಶೋಕ್, ಮೂರ್ತಿ, ಅನಿಲ್ ಕುಮಾರ್ ಬೆಳ್ಳೂರು, ಸುದರ್ಶನ್ ಇತರರು ಸುದ್ದಿಗೋಷ್ಠಿ ನಡೆಸಿ ಸಿದ್ದರಾಮಯ್ಯ ದಲಿತ ಮುಖಂಡರನ್ನು ರಾಜಕೀಯವಾಗಿ ಮುಗಿಸಿದ್ದಾರೆಂದು ಆಪಾದಿಸಿದರು.

Related Post

ಜೆಡಿಎಸ್‌ ಬಿಜೆಪಿ ಒಂದಾಗಿ ಸಂವಿಧಾನಕ್ಕೆ ಅಪಾಯ ಎಚ್ವತ್ತು ಕಾಂಗ್ರೆಸ್ ಬೆಂಬಲಿಸಿ: ಬೈರತಿ ಸುರೇಶ್
ವಚನ ಭ್ರಷ್ಟ ಬಿಜೆಪಿ ನೇತೃತ್ವದ ಎನ್.ಡಿ.ಎ. ಮೈತ್ರಿಕೂಟಕ್ಕೆ ಮತ ಕೇಳುವ ನೈತಿಕತೆ ಇಲ್ಲ-ಕೆ.ವಿ.ಗೌತಮ್
ಏಪ್ರಿಲ್ ೨೬ ರೊಳಗೆ ಎಕ್ಸಿಡಿ ಕಾರ್ಮಿಕರ ಬೇಡಿಕೆಗಳನ್ನು ಈಡೇರಿಸಲು ಆಗ್ರಹ ಇಲ್ಲವಾದಲ್ಲಿ ತೀವ್ರ ರೀತಿಯ ಹೋರಾಟ ನಡೆಸಲು ಕಾರ್ಮಿಕರ ಸಂಘಗಳ ಸಭೆಯಲ್ಲಿ ನಿರ್ಧಾರ

Leave a Reply

Your email address will not be published. Required fields are marked *

You missed

error: Content is protected !!