• Thu. May 2nd, 2024

ಗಾಲ್ಫ್ ಒತ್ತುವರಿ ತೆರವಿಗೆ ಒತ್ತಾಯಿಸಿ ಎಸಿ ಕಛೇರಿ ಮುತ್ತಿಗೆ:ಬಂಗಾರಪೇಟೆಯಲ್ಲಿ ರೈತ ಸಂಘ ತೀರ್ಮಾನ.

PLACE YOUR AD HERE AT LOWEST PRICE

ಬಂಗಾರಪೇಟೆ: ನ್ಯಾಯಾಲಯದ ಆದೇಶ ಹಾಗೂ ಭೂಕಬಳಿಕೆ ನ್ಯಾಯಾಲಯದ ನಿರ್ದೇಶನದಂತೆ ಅನಿಗಾನಹಳ್ಳಿ ಸರ್ವೇ ನಂ.36ರ 35 ಗುಂಟೆ ಒತ್ತುವರಿ ತೆರವುಗೊಳಿಸುವಂತೆ ಒತ್ತಾಯಿಸಿ ಫೆ.4ರಂದು ಉಪವಿಭಾಗಾಧಿಕಾರಿಗಳ ಕಚೇರಿ ಮುತ್ತಿಗೆ ಹಾಕಲು ರೈತಸಂಘದ ಸಭೆಯಲ್ಲಿ ತೀರ್ಮಾನಿಸಲಾಯಿತು.

ಬಂಗಾರಪೇಟೆ ಪಟ್ಟಣದಲ್ಲಿ ಕರೆದಿದ್ದ ಸಭೆಯಲ್ಲಿ ಮಾತನಾಡಿದ ರಾಜ್ಯ ಉಪಾಧ್ಯಕ್ಷ ಕೆ.ನಾರಾಯಣಗೌಡ,  ಪ್ರಜೆಗಳಿಂದ ಪ್ರಜೆಗಳಿಗಾಗಿ ಪ್ರಜೆಗಳಿಗೋಸ್ಕರ ಆಯ್ಕೆಯಾದ ಶಾಸಕರು ಪ್ರಜಾ ಸೇವಕರಾಗಿರಬೇಕು.
ಅದನ್ನು ಬಿಟ್ಟು ಸರ್ಕಾರಿ ಕೆರೆ, ಗೋಮಾಳ, ಗುಂಡುತೋಪನ್ನು ಅಕ್ರಮವಾಗಿ ಒತ್ತುವರಿ ಮಾಡಿಕೊಂಡು ಖಾಸಗಿ ಲೇಔಟ್ ಹಾಗೂ ಮೋಜು ಮಸ್ತಿಗಾಗಿ ಗಾಲ್ಫ್ ಅಭಿವೃದ್ಧಿಪಡಿಸುವ ಮೂಲಕ ಸರ್ಕಾರಿ ಆಸ್ತಿಯನ್ನು ಶಾಸಕರೇ
ಒತ್ತುವರಿ ಮಾಡಿರುವ ಬಗ್ಗೆ ಅಸಮಧಾನ ವ್ಯಕ್ತಪಡಿಸಿದರು.
ಹಿಂದಿನ ಜಿಲ್ಲಾಧಿಕಾರಿಯಾಗಿದ್ದ ದಿ.ಡಿ.ಕೆ.ರವಿ ಅವರು ಹತ್ತಾರು ಹಳ್ಳಿಗಳ ಜೀವನಾಡಿಯಾಗಿರುವ ಕೆರೆ, ರಾಜಕಾಲುವೆಯನ್ನು ಒತ್ತುವರಿ ಮಾಡಿಕೊಂಡು ಮೋಜು ಮಸ್ತಿಗಾಗಿ ಅಭಿವೃದ್ಧಿಪಡಿಸಿರುವ ಗಾಲ್ಫ್ ಮಾಲೀಕರ ವಿರುದ್ಧ ಕಾನೂನು ಕ್ರಮಕೈಗೊಂಡು ಸರ್ಕಾರಿ ಆಸ್ತಿಗಳನ್ನು ಉಳಿಸುವಂತೆ ಮಾನ್ಯ ಗೌರವಾನ್ವಿತ ನ್ಯಾಯಾಲಯದ ಮೊರೆ ಹೋಗಿದ್ದರು.
ಅದರ ಪರಿಣಾಮ ಅವರು ಮರಣ ಹೊಂದಿದ 8 ವರ್ಷಗಳ ನಂತರ ವಗ್ಗಯ್ಯನದಿನ್ನೆ ಒತ್ತುವರಿ ತೆರವುಗೊಳಿಸುವಂತೆ
ಆದೇಶವಾಗಿದ್ದರೂ ಕಂದಾಯ ಅಧಿಕಾರಿಗಳು ಬಲಾಢ್ಯರ ಒತ್ತುವರಿ ಮುಟ್ಟದೇ ಇರುವುದು ಹಲವು ಅನುಮಾನಗಳಿಗೆ
ಎಡೆ ಮಾಡಿಕೊಟ್ಟಿದೆ ಎಂದು ಅವ್ಯವಸ್ಥೆ ವಿರುದ್ಧ ಅಸಮಧಾನ ವ್ಯಕ್ತಪಡಿಸಿದರು.
ಜಿಲ್ಲಾಧ್ಯಕ್ಷ ಈಕಂಬಳ್ಳಿ ಮಂಜುನಾಥ್ ಮಾತನಾಡಿ, ರಾಜ್ಯ ಹೆದ್ದಾರಿಯ ಪಕ್ಕದಲ್ಲಿರುವ ಕೋಟ್ಯಾಂತರ ರೂಪಾಯಿ ಬೆಲೆ ಬಾಳುವ ಗುಂಡುತೋಪನ್ನು ಎಸ್.ಎನ್. ಸಿಟಿ ಮಾಲೀಕತ್ವದ ಶಾಸಕರು ಒತ್ತುವರಿ ಮಾಡಿಕೊಂಡಿರುವ ಬಗ್ಗೆ ಮಾನ್ಯ ಭೂಕಬಳಿಕೆ ನ್ಯಾಯಾಲಯದಲ್ಲಿ ನಳಿನಿಗೌಡ ಅವರಿಂದ ದೂರು ದಾಖಲಾಗಿದೆ.
ಅದರಂತೆ ಮಾನ್ಯ ಭೂಕಬಳಿಕೆ ನ್ಯಾಯಾಲಯದಿಂದ ಉಪ ವಿಭಾಗಧಿಕಾರಿಗಳಿಗೆ ಸರ್ವೇ ಮಾಡಿಸಿ ವರದಿ ನೀಡುವಂತೆ ಆದೇಶ ಮಾಡಿದ ಹಿನ್ನೆಲೆಯಲ್ಲಿ ತಾಲೂಕು ಆಡಳಿತದಿಂದ ಸರ್ವೇ ಮಾಡಿ ಶಾಸಕರಿಂದ ಒತ್ತುವರಿಯಾಗಿರುವುದು ಸರ್ವೇಯಿಂದ ಕಂಡು ಬಂದಿದೆ.
ಅದರಂತೆ ಒತ್ತುವರಿ ತೆರವುಗೊಳಿಸಲು ಅನುಮತಿಗಾಗಿ ಮಾನ್ಯ ಉಪ ವಿಭಾಗಾಧಿಕಾರಿಗಳಿಗೆ ಪತ್ರವನ್ನು ಬರೆದಿದ್ದಾರೆ. ಆದರೂ ಒತ್ತುವರಿಯನ್ನು ತೆರವುಗೊಳಿಸಲು ಮೀನಾ ಮೇಷ ಎಣಿಸುತ್ತಿರುವುದಕ್ಕೆ ಅಧಿಕಾರಿಗಳ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು.
ಒಬ್ಬ ಸಾಮಾನ್ಯ ವ್ಯಕ್ತಿ 1 ಗುಂಟೆ ಸರ್ಕಾರಿ ಆಸ್ತಿಯನ್ನು ಒತ್ತುವರಿ ಮಾಡಿಕೊಂಡರೆ 24 ಗಂಟೆಯಲ್ಲಿ ತೆರವುಗೊಳಿಸುವ
ತಾಲೂಕು ಆಡಳಿತ ಪ್ರಭಾವಿಗಳು ಒತ್ತುವರಿ ಮಾಡಿಕೊಂಡಿರುವ ಸರ್ಕಾರಿ ಜಮೀನನ್ನು ತೆರವುಗೊಳಿಸಲು ಹಿಂದೇಟು ಯಾಕೆ ಎಂದು ಪ್ರಶ್ನಿಸಿದರು.
ಸರ್ವೇಯಲ್ಲಿ ಒತ್ತುವರಿ ಸಾಭೀತಾಗಿರುವ ಸರ್ವೇ ನಂ.36ರ 35 ಗುಂಟೆ ಗುಂಡು ತೋಪನ್ನು ಹಾಗೂ ಗಾಲ್ಫ್ ಮಾಲೀಕರು ಒತ್ತುವರಿ ಮಾಡಿಕೊಂಡಿರುವ ಸರ್ಕಾರಿ ಕೆರೆಯನ್ನು ತೆರವುಗೊಳಿಸುವಂತೆ ಫೆ.4ರ ಶನಿವಾರ ಮಾನ್ಯ
ಉಪವಿಭಾಗಾಧಿಕಾರಿಗಳ ಕಚೇರಿ ಮುತ್ತಿಗೆ ಹಾಕಲು ಸಭೆಯಲ್ಲಿ ತೀರ್ಮಾನ ಮಾಡಲಾಯಿತು.
ಸಭೆಯಲ್ಲಿ ರಾಜ್ಯ ಪ್ರಧಾನ ಕಾರ್ಯದರ್ಶಿ ಫಾರೂಖ್‍ಪಾಷ, ಮುಳಬಾಗಿಲು ತಾಲೂಕು ಅಧ್ಯಕ್ಷ ಯಲುವಳ್ಳಿ ಪ್ರಭಾಕರ್, ಬಂಗಾರಿ ಮಂಜು, ಬಾಬು, ಭಾಸ್ಕರ್, ಸುನೀಲ್ ಕುಮಾರ್, ಸುಪ್ರಿಂ ಚಲ, ಆನಂದರೆಡ್ಡಿ, ಜಿಲ್ಲಾಉಪಾಧ್ಯಕ್ಷ ಚಾಂದ್‍ಪಾಷ, ತಾಲೂಕು ಅಧ್ಯಕ್ಷ ಐತಾಂಡಹಳ್ಳಿ ಮುನ್ನಾ, ಬಾಬಾಜಾನ್, ಕದಿರಿನತ್ತ ಅಪ್ಪೋಜಿರಾಜ್,ಕಾಮಸಮುದ್ರ ಮುನಿಕೃಷ್ಣ, ಭೀಮಗಾನಹಳ್ಳಿ ಮುನಿರಾಜು, ವಿಶ್ವ, ಮಾಲೂರು ತಾಲೂಕು ಅಧ್ಯಕ್ಷ ಯಲ್ಲಣ್ಣ, ಹರೀಶ್, ಮಾಸ್ತಿ ವೆಂಕಟೇಶ್, ಸಂದೀಪ್‍ರೆಡ್ಡಿ, ಸಂದೀಪ್‍ಗೌಡ, ರಾಮಸಾಗರ ವೇಣು ಸುರೇಶ್‍ಬಾಬು, ಕಿರಣ್, ಮುನಿಯಪ್ಪ, ಮಂಗಸಂದ್ರ ತಿಮ್ಮಣ್ಣ, ಯಾರಂಘಟ್ಟ ಗಿರೀಶ್ ಮುಂತಾದವರಿದ್ದರು.

Related Post

ಜೆಡಿಎಸ್‌ ಬಿಜೆಪಿ ಒಂದಾಗಿ ಸಂವಿಧಾನಕ್ಕೆ ಅಪಾಯ ಎಚ್ವತ್ತು ಕಾಂಗ್ರೆಸ್ ಬೆಂಬಲಿಸಿ: ಬೈರತಿ ಸುರೇಶ್
ವಚನ ಭ್ರಷ್ಟ ಬಿಜೆಪಿ ನೇತೃತ್ವದ ಎನ್.ಡಿ.ಎ. ಮೈತ್ರಿಕೂಟಕ್ಕೆ ಮತ ಕೇಳುವ ನೈತಿಕತೆ ಇಲ್ಲ-ಕೆ.ವಿ.ಗೌತಮ್
ಏಪ್ರಿಲ್ ೨೬ ರೊಳಗೆ ಎಕ್ಸಿಡಿ ಕಾರ್ಮಿಕರ ಬೇಡಿಕೆಗಳನ್ನು ಈಡೇರಿಸಲು ಆಗ್ರಹ ಇಲ್ಲವಾದಲ್ಲಿ ತೀವ್ರ ರೀತಿಯ ಹೋರಾಟ ನಡೆಸಲು ಕಾರ್ಮಿಕರ ಸಂಘಗಳ ಸಭೆಯಲ್ಲಿ ನಿರ್ಧಾರ

Leave a Reply

Your email address will not be published. Required fields are marked *

You missed

error: Content is protected !!