• Sat. Apr 27th, 2024

ಕೋಲಾರ I ಡಿಸಿ ವೆಂಕಟ್‌ ರಾಜಾ ಎಸ್ಪಿ ನಾರಾಯಣ ರಿಂದ ರಕ್ತದಾನ

PLACE YOUR AD HERE AT LOWEST PRICE

ರಸ್ತೆ ಅಪಘಾತದಲ್ಲಿ ಗಾಯಗೊಂಡ ವ್ಯಕ್ತಿಗೆ ಅತಿಯಾದ ರಕ್ತಸ್ರಾವ, ಶಸ್ತ್ರಚಿಕಿತ್ಸೆಗೆ ಒಳಗಾಗುವ ಅಧಿಕ ಗಂಭೀರ ಕಾಯಿಲೆಗಳಿಂದ ಬಳಲುತ್ತಿರುವ ರೋಗಿಗೆ ರಕ್ತದ ಅಗತ್ಯ ಹೆಚ್ಚಿರುತ್ತದೆ. ರಕ್ತವನ್ನು ಪಡೆಯುವುದಕ್ಕಿಂತ ನೀಡುವುದರಲ್ಲೆ ಹೆಚ್ಚು ಸಂತೋಷ ಸಿಗುತ್ತದೆ ಎಂದು ಜಿಲ್ಲಾಧಿಕಾರಿ ವೆಂಕಟ್‌ರಾಜಾ ಹೇಳಿದರು.

ಕೋಲಾರ ನಗರದ ಪೊಲೀಸ್ ಜಿಲ್ಲಾ ಸಮುದಾಯ ಭವನದಲ್ಲಿ ಕೋಲಾರ ಜಿಲ್ಲಾ ಪೊಲೀಸ್ ಘಟಕ ವತಿಯಿಂದ ಆಯೋಜಿಸಲಾಗಿದ್ದ ರಾಷ್ಟ್ರೀಯ ರಸ್ತೆ ಸುರಕ್ಷತಾ ಸಪ್ತಾಹದ ಅಂಗವಾಗಿ ರಕ್ತದಾನ ಶಿಬಿರಕ್ಕೆ ಚಾಲನೆ ನೀಡುವ ಮೂಲಕ ಮಾತನಾಡಿದರು.

ರಕ್ತದಾನ ಎನ್ನುವುದು ಶ್ರೇಷ್ಠದಾನ. ಏಕೆಂದರೆ ಯಾವುದೋ ಉತ್ಪನ್ನದಂತೆ ಇದನ್ನು ಯಂತ್ರಗಳ ಮೂಲಕವೋ, ಬೀಜಗಳ ಮೂಲಕವೋ ಉತ್ಪಾದಿಸಲಾಗದು. ಏನಿದ್ದರೂ ಇದರ ಮೂಲ ಮಾನವನ ದೇಹವೇ. ಹಾಗಾಗಿ ರಕ್ತದಾನ ಎನ್ನುವುದು ಅಮೂಲ್ಯ. ರಕ್ತದಾನದ ಮೂಲಕ ಅನೇಕ ರೋಗಿಗಳು ಮತ್ತು ಜೀವಗಳನ್ನು ಉಳಿಸಬಹುದು ಎಂದು ಹೇಳಿದರು.

ಆರೋಗ್ಯ ಮತ್ತು ದೇಹ ಸದೃಢವಾಗಿರಲು ಪ್ರತಿ ಮೂರು ತಿಂಗಳಿಗೊಮ್ಮೆ ರಕ್ತದಾನ ಮಾಡಿ ಎಂದು ತಿಳಿಸಿದರು ಮತ್ತು ಅನೇಕ ರೋಗಗಳನ್ನು ದೂರವಿಡುತ್ತದೆ ಎಂದು ಹೇಳಿದರು.

ಈ ಶಿಬಿರದಲ್ಲಿ ಜಿಲ್ಲಾಧಿಕಾರಿಗಳು ಹಾಗೂ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಎಂ.ನಾರಾಯಣ ರಕ್ತದಾನ ಮಾಡಿದರು.
ಈ ರಕ್ತದಾನ ಶಿಬಿರದಲ್ಲಿ ರಕ್ತದಾನ ಮಾಡಿದವರಿಗೆ ಪ್ರಮಾಣ ಪತ್ರ ವಿತರಿಸಿದರು. ಪೊಲೀಸ್ ಅಧಿಕಾರಿಗಳು, ಲಯನ್ಸ್ ಕ್ಲಬ್ ರಕ್ತನಿಧಿ ಕೇಂದ್ರದ ಪ್ರಕೃತಿ ಪ್ರಸನ್ನನವರು ಸೇರಿದಂತೆ ಮತ್ತಿತರರು ಇದ್ದರು.

 

Related Post

ಜೆಡಿಎಸ್‌ ಬಿಜೆಪಿ ಒಂದಾಗಿ ಸಂವಿಧಾನಕ್ಕೆ ಅಪಾಯ ಎಚ್ವತ್ತು ಕಾಂಗ್ರೆಸ್ ಬೆಂಬಲಿಸಿ: ಬೈರತಿ ಸುರೇಶ್
ವಚನ ಭ್ರಷ್ಟ ಬಿಜೆಪಿ ನೇತೃತ್ವದ ಎನ್.ಡಿ.ಎ. ಮೈತ್ರಿಕೂಟಕ್ಕೆ ಮತ ಕೇಳುವ ನೈತಿಕತೆ ಇಲ್ಲ-ಕೆ.ವಿ.ಗೌತಮ್
ಏಪ್ರಿಲ್ ೨೬ ರೊಳಗೆ ಎಕ್ಸಿಡಿ ಕಾರ್ಮಿಕರ ಬೇಡಿಕೆಗಳನ್ನು ಈಡೇರಿಸಲು ಆಗ್ರಹ ಇಲ್ಲವಾದಲ್ಲಿ ತೀವ್ರ ರೀತಿಯ ಹೋರಾಟ ನಡೆಸಲು ಕಾರ್ಮಿಕರ ಸಂಘಗಳ ಸಭೆಯಲ್ಲಿ ನಿರ್ಧಾರ

Leave a Reply

Your email address will not be published. Required fields are marked *

You missed

error: Content is protected !!