• Thu. May 2nd, 2024

ಕೋಲಾರ I 80 ಲಕ್ಷ ವೆಚ್ಚದಲ್ಲಿ ನವೀಕರಣಗೊಂಡ ಕಠಾರಿಪಾಳ್ಯದ ನಾಗರಕುಂಟೆ ಕಲ್ಯಾಣಿ: ಫೆ.2 ಉದ್ಘಾಟನೆ

PLACE YOUR AD HERE AT LOWEST PRICE

ಕೋಲಾರ ನಗರದ ಕಠಾರಿಪಾಳ್ಯದಲ್ಲಿರುವ ನಾಗರಕುಂಟೆ ಪುಷ್ಕರಣಿಯನ್ನು ನಗರೋತ್ತಾನ ಅನುದಾನದ 80 ಲಕ್ಷ ವೆಚ್ಚದಲ್ಲಿ ನವೀಕರಣಗೊಳಿಸಿದ್ದು ಫೆಬ್ರವರಿ 2 ಗುರುವಾರದಂದು ಪೌರಾಡಳಿತ ಸಚಿವ ಎಂಟಿಬಿ ನಾಗರಾಜ್ ಹಾಗೂ ಕೋಲಾರ ಜಿಲ್ಲಾ ಉಸ್ತುವಾರಿ ಸಚಿವ ಮುನಿರತ್ನ ಅವರು ಲೋಕಾರ್ಪಣೆಗೊಳಿಸುವರು.

ಉದ್ಘಾಟನೆ ಕಾರ್ಯಕ್ರಮದಲ್ಲಿ ಸಂಸದ ಮುನಿಸ್ವಾಮಿ, ಶಾಸಕ ಶ್ರೀನಿವಾಸಗೌಡ ಸೇರಿದಂತೆ ಅನೇಕ ಜನಪ್ರತಿನಿಧಿಗಳು ಹಾಗೂ 35 ವಾರ್ಡಿನ ನಗರಸಭೆ ಸದಸ್ಯರು ಭಾಗವಹಿಸುವರು.

ಫೆ.1 ಬುಧವಾರ ವಿವಿಧ ಪೂಜಾ ವಿಧಾನಗಳಿಂದ ಪ್ರಾರಂಭವಾಗುವ ಕಾರ್ಯಕ್ರಮವು ಶ್ರೀ ಗಣಪತಿ, ಶ್ರೀ ನಗರೇಶ್ವರ, ಶ್ರೀ ಅನ್ನಪೂರ್ಣೇಶ್ವರಿ, ಶ್ರೀ ಸುಬ್ರಮಣ್ಯೇಶ್ವರ ಸ್ವಾಮಿ ಹಾಗೂ ನಂದೀಶ್ವರ ಸ್ವಾಮಿಯ ನೂತನ ಬಿಂಬ ಪ್ರತಿಷ್ಠಾಪನ ಸೇರಿದಂತೆ ಕುಂಭಾಭಿಷೇಕ, ನಾಗದೇವತ ಸಂಪೋಕ್ಷಣೆ, ರಾಜಗೋಪುರ ಪ್ರಾಣ ಪ್ರತಿಷ್ಠಾಪನೆ ಕುಂಭಾಭಿಷೇಕ ಮಹೋತ್ಸವವು ಜರುಗುತ್ತಿವೆ.

ಕಲ್ಯಾಣೋತ್ಸವ, ದೀಪೋತ್ಸವ, ಗಂಗಾ ಆರತಿ ತೆಪ್ಪೋತ್ಸವ ಹಾಗೂ ತೀರ್ಥ ಪ್ರಸಾದ ಅನ್ನಸಂತರ್ಪಣೆ ಕಾರ್ಯಕ್ರಮ ಫೆಬ್ರವರಿ 2 ಗುರುವಾರ ದಂದು ನಡೆಸಲಾಗುವುದು. ಎಲ್ಲಾ ಪೂಜಾ ಕಾರ್ಯಕ್ರಮವು ವಿದ್ವಾನ್ ಕೆ.ಎಸ್.ಮಂಜುನಾಥ್ ದೀಕ್ಷಿತ್ ರ ನೇತೃತ್ವದಲ್ಲಿ ನೆರವೇರಿಸಲಾಗುವುದು.

ಸುದ್ದಿ ಓದಿ ಹಂಚಿ:

Related Post

ಜೆಡಿಎಸ್‌ ಬಿಜೆಪಿ ಒಂದಾಗಿ ಸಂವಿಧಾನಕ್ಕೆ ಅಪಾಯ ಎಚ್ವತ್ತು ಕಾಂಗ್ರೆಸ್ ಬೆಂಬಲಿಸಿ: ಬೈರತಿ ಸುರೇಶ್
ವಚನ ಭ್ರಷ್ಟ ಬಿಜೆಪಿ ನೇತೃತ್ವದ ಎನ್.ಡಿ.ಎ. ಮೈತ್ರಿಕೂಟಕ್ಕೆ ಮತ ಕೇಳುವ ನೈತಿಕತೆ ಇಲ್ಲ-ಕೆ.ವಿ.ಗೌತಮ್
ಏಪ್ರಿಲ್ ೨೬ ರೊಳಗೆ ಎಕ್ಸಿಡಿ ಕಾರ್ಮಿಕರ ಬೇಡಿಕೆಗಳನ್ನು ಈಡೇರಿಸಲು ಆಗ್ರಹ ಇಲ್ಲವಾದಲ್ಲಿ ತೀವ್ರ ರೀತಿಯ ಹೋರಾಟ ನಡೆಸಲು ಕಾರ್ಮಿಕರ ಸಂಘಗಳ ಸಭೆಯಲ್ಲಿ ನಿರ್ಧಾರ

Leave a Reply

Your email address will not be published. Required fields are marked *

You missed

error: Content is protected !!