• Tue. Apr 30th, 2024

PLACE YOUR AD HERE AT LOWEST PRICE

ಕೆಜಿಎಫ್: ಹುಟ್ಟು ಹಬ್ಬವನ್ನು ಯಾವುದೇ ಆಡಂಬರವಿಲ್ಲದೆ ಸರ್ಕಾರಿ ಶಾಲಾ ಮಕ್ಕಳಿಗೆ ಸಿಹಿ ಹಂಚುವ ಮೂಲಕ ಆರ್.ಕೆ ಪೌಂಡೇಶನ್ ಅಧ್ಯಕ್ಷ ಹಾಗೂ ಬಿಜೆಪಿ ಮುಖಂಡ ವಿ.ಮೋಹನ್ ಕೃಷ್ಣ ಅವರ ಜನ್ಮದಿನವನ್ನು ಅಭಿಮಾನಿ ಬಳಗ ಆಚರಿಸಿತು.

ಸುಂದರಪಾಳ್ಯ ಪಬ್ಲಿಕ್ ಶಾಲೆಯಲ್ಲಿ ಶಾಲಾ ಮಕ್ಕಳಿಗೆ ಡೈರಿ ಮಿಲ್ಕ್(ಚಾಕಲೆಟ್) ಸಿಹಿ ವಿತರಿಸಿ ಮಾತನಾಡಿದ ಸರ್ಕಾರಿ ನೌಕರರ ಸಂಘದ ಮಾಜಿ ಅಧ್ಯಕ್ಷ ರವಿರೆಡ್ಡಿ, ಕೆಜಿಎಫ್‍ನ ಮಣ್ಣಿನ ಮಗ ಮೋಹನ್ ಕೃಷ್ಣ ಅವರ ಹುಟ್ಟು ಹಬ್ಬವು ಫೆ.5 ಭಾನುವಾರವಿದ್ದು, ಸರ್ಕಾರಿ ಶಾಲೆಯ ಮಕ್ಕಳೊಂದಿಗೆ ಆಚರಿಸಲು ತೀರ್ಮಾನಿಸಿ ಸಿಹಿ ಹಂಚಿ ಶುಭ ಹಾರೈಸಲಾಗುತ್ತಿದೆ ಎಂದರು.

ಮೋಹನ್ ಕೃಷ್ಣ ಅವರ ಸಮಾಜ ಸೇವೆಯೂ ಕೆಜಿಎಫ್‍ನ ಪ್ರತಿಯೊಂದು ಹಳ್ಳಿಗೂ, ವಾರ್ಡ್‍ಗೂ ತಲುಪಲಿದೆ. ಈಗಾಗಲೇ ಸತತವಾಗಿ 4 ವರ್ಷಗಳಿಂದ ಸೇವೆ ಮಾಡುತ್ತಿದ್ದು, ಅವರಿಗೆ ದೇವರು ಒಳ್ಳೆಯ ಆರೋಗ್ಯ, ಐಶ್ವರ್ಯ, ಉನ್ನತ ಸ್ಥಾನಮಾನ ವನ್ನು ಕರುಣಿಸಲಿ, ಮತ್ತಷ್ಟು ಸೇವೆ ಮಾಡಲು ಶಕ್ತಿ ನೀಡಲಿ ಎಂದು ಆಶಿಸುತ್ತೇವೆ ಎಂದು ಹೇಳಿದರು.

ಇಂದು 16 ಸಾವಿರ ವಿದ್ಯಾರ್ಥಿಗಳಿಗೆ ಸಿಹಿ ಹಂಚುವ ಕಾರ್ಯಕ್ರಮವನ್ನು ಹಮ್ಮಿಕೊಂಡಿದ್ದೇವೆ. ಭಾನುವಾರ ಶಾಲೆಗಳ ರಜೆಯಿದ್ದು, ಇಂದೇ ಎಲ್ಲಾ ಶಾಲೆಗಳಿಗೂ ಬೇಟಿ ನೀಡಿ ವಿತರಿಸುತ್ತೇವೆ ಭಾನುವಾರ ಅನಾಥ ಆಶ್ರಮದಲ್ಲಿ ಅನ್ನದಾನ, ಸರ್ಕಾರಿ ಆಸ್ಪತ್ರೆಯಲ್ಲಿ ರೋಗಿಗಳಿಗೆ ಹಣ್ಣು ಹಂಪಲು ವಿತರಣೆ ಸೇರಿ ಹಲವು ಸಾಮಾಜಿಕ ಕಾರ್ಯಕ್ರಮಗಳನ್ನು ಅವರ ಅಭಿಮಾನಿ ಬಳಗ ಹಮ್ಮಿಕೊಂಡಿದೆ ಎಂದರು.

ಮುಖಂಡ ಕೃಷ್ಣಪ್ಪ ಮಾತನಾಡಿ, ತಮ್ಮ  ಜನ್ಮದಿನಾಚರಣೆಯ ವೇಳೆ ಕೆಲ ವಲಸಿಗ ಜನಪ್ರತಿನಿಧಿಗಳು ಬಾಡೂಟಗಳನ್ನು ಏರ್ಪಡಿಸಿ ಸಂಭ್ರಮ ಸಡಗರದಿಂದ ಆಚರಿಸುವುದು ವಾಡಿಕೆಯಾದರೆ. ಮಣ್ಣಿನ ಮಕ್ಕಳು ಮಕ್ಕಳೊಂದಿಗೆ ಜನ್ಮದಿನ ಆಚರಿಸಿ ಬಡವರಿಗೆ ಅನ್ನದಾನ ಸೇವಾ ಕಾರ್ಯ ಮಾಡುವುದು ನಮ್ಮ ಸಂಸ್ಕೃತಿಯಾಗಿದೆ. ವಿ.ಮೋಹನಕೃಷ್ಣರವರು ಸರಳವಾಗಿ ತಮ್ಮ ಹುಟ್ಟುಹಬ್ಬ ಈ ರೀತಿ ಆಚರಣೆ ಮಾಡಿಕೊಳ್ಳುತ್ತಿರುವುದು ಇತರರಿಗೆ ಮಾದರಿಯಾಗಿದೆ ಎಂದರು.

ಬೇತಮಂಗಲ, ಕ್ಯಾಸಂಬಳ್ಳಿ, ರಾಬರ್ಟ್‍ಸನ್ ಪೇಟೆ ಹೋಬಳಿ, ನಗರಧ್ಯಾಂತ ಶಾಲೆಗಳಿಗೆ ಬೇಟಿ ನೀಡಿ ಸಹಿ ಹಂಚಿದರು. ಈ ಸಂದರ್ಭದಲ್ಲಿ , ಗ್ರಾಪಂ ಮಾಜಿ ಅಧ್ಯಕ್ಷ ಗಂಗಿರೆಡ್ಡಿ, ಜಗಧಭಿರಾಮ್, ಗ್ರಾಪಂ ಸದಸ್ಯ ಓಂ.ಸುರೇಶ್, ಗುತ್ತಿಗೆದಾರ ಕೃಷ್ಣಪ್ಪ, ತೇಜು, ನಾಗೇಶ್, ಶ್ಯಾಮಿಯಾನ ಮೋಹನ್, ಬಾಲಚಂದ್ರ(ಪಾಲ್), ಕೇಶವಗೌಡ ಹಾಗೂ ಅನೇಕ ಅಭಿಮಾನಿಗಳು, ಆಯಾ ವ್ಯಾಪ್ತಿಯ ಮುಖಂಡರು, ಶಾಲಾ ಶಿಕ್ಷಕರುಗಳು ಉಪಸ್ಥಿತರಿದ್ದರು.

Related Post

ಜೆಡಿಎಸ್‌ ಬಿಜೆಪಿ ಒಂದಾಗಿ ಸಂವಿಧಾನಕ್ಕೆ ಅಪಾಯ ಎಚ್ವತ್ತು ಕಾಂಗ್ರೆಸ್ ಬೆಂಬಲಿಸಿ: ಬೈರತಿ ಸುರೇಶ್
ವಚನ ಭ್ರಷ್ಟ ಬಿಜೆಪಿ ನೇತೃತ್ವದ ಎನ್.ಡಿ.ಎ. ಮೈತ್ರಿಕೂಟಕ್ಕೆ ಮತ ಕೇಳುವ ನೈತಿಕತೆ ಇಲ್ಲ-ಕೆ.ವಿ.ಗೌತಮ್
ಏಪ್ರಿಲ್ ೨೬ ರೊಳಗೆ ಎಕ್ಸಿಡಿ ಕಾರ್ಮಿಕರ ಬೇಡಿಕೆಗಳನ್ನು ಈಡೇರಿಸಲು ಆಗ್ರಹ ಇಲ್ಲವಾದಲ್ಲಿ ತೀವ್ರ ರೀತಿಯ ಹೋರಾಟ ನಡೆಸಲು ಕಾರ್ಮಿಕರ ಸಂಘಗಳ ಸಭೆಯಲ್ಲಿ ನಿರ್ಧಾರ

Leave a Reply

Your email address will not be published. Required fields are marked *

You missed

error: Content is protected !!