• Fri. Apr 26th, 2024

PLACE YOUR AD HERE AT LOWEST PRICE

ರಾಜ್ಯದ ಅಕ್ಷರ ದಾಸೋಹ ನೌಕರರಿಗೆ ಅವರ ಸೇವೆಗೆ ತಕ್ಕಂತೆ ಮಾಹೆಯಾನ ಕನಿಷ್ಠ ವೇತನ ೧೦೫೦೦ರೂ ನೀಡಲು ಮತ್ತು ೬೦ ವರ್ಷ ಮೇಲ್ಪಟ್ಟ ೬೫೦೦ ಬಿಸಿಯೂಟ ನೌಕರರನ್ನು ಹಾಗೂ ಅನಾರೋಗ್ಯದಿಂದ ಬಳಲುತ್ತಿರುವ ನೌಕಕರನ್ನು ಕೆಲಸದಿಂದ ತೆಗೆಯುತ್ತಿದ್ದು, ಅಂತವರಿಗೆ ೨ ಲಕ್ಷ ರೂ ಇಡಗಂಟು ನೀಡಲು ಒತ್ತಾಯಿಸಿ ಕೋಲಾರ ಜಿಲ್ಲಾ ಪಂಚಾಯಿತಿ ಚಲೋ ಹೋರಾಟ ನಡೆಸಿ ಜಿಪಂ ಸಿಇಒ ಯುಕೇಶ್‌ಕುಮಾರ್ ಅವರಿಗೆ ಮನವಿ ಸಲ್ಲಿಸಲಾಯಿತು.

ಪ್ರಜಾಸೇವಾ ಸಮಿತಿ ಸಂಯೋಜಿತ ಅಕ್ಷರ ದಾಸೋಹ ಕ್ಷೇಮಾಭಿವೃದ್ಧಿ ಸಮಿತಿ ಹಾಗೂ ರೈತ ನಾಯಕ ಪ್ರೊ. ನಂಜುಂಡಸ್ವಾಮಿ ಸ್ಥಾಪಿತ ಕರ್ನಾಟಕ ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆ ಬಿಸಿಯೂಟ ನೌಕರರ ಹೋರಾಟದ ನೇತೃತ್ವ ವಹಿಸಿ ನಗರದ ನಚಿಕೇತ ನಿಲಯದಿಂದ ಜಿಪಂ ವರೆಗೂ ಕಾಲ್ನಡಿಗೆ ಜಾಥಾ ನಡೆಸಿ,ಜಿಪಂ ಮುಂದೆ ಪ್ರತಿಭಟನೆ ನಡೆಸಿದರು.

ಸಂಘಟನೆಯ ಸಂಸ್ಥಾಪಕ ಅಧ್ಯಕ್ಷ ಕಲ್ವಮಂಜಲಿ ಸಿ.ಶಿವಣ್ಣ ಮಾತನಾಡಿ, ೧೮ ವರ್ಷಗಳ ಹಿಂದೆ ರಾಜ್ಯದ ಎಲ್ಲಾ ಶಾಲೆಗಳಲ್ಲಿ ಓದುತ್ತಿರುವ ಬಡ ಮಕ್ಕಳ ಅನುಕೂಲಕ್ಕೋಸ್ಕರ ಅಕ್ಷರ ದಾಸೋಹ ಯೋಜನೆಯನ್ನು ಜಾರಿಗೆ ತರಲಾಯಿತು. ಶಾಲೆಗಳಲ್ಲಿ ಬಿಸಿಯೂಟ ತಯಾರಿಸಲು ನೌಕರರನ್ನು ಆಯ್ಕೆ ಮಾಡಿಕೊಳ್ಳಲಾಯಿತು. ಆಯಾಯ ಶಾಲೆಗಳ ಮಕ್ಕಳ ಸಂಖ್ಯೆಗೆ ಅನುಗುಣವಾಗಿ ನೌಕರರನ್ನು ನೇಮಕ ಮಾಡಿಕೊಂಡು ಅಲ್ಪ ಸಂಬಳವನ್ನು ನೀಡುತ್ತಾ ಅಕ್ಷರ ದಾಸೋಹ ನೌಕರರ ಕೈಯಲ್ಲಿ ಇಷ್ಟು ವರ್ಷಗಳ ಕಾಲ ಯಾವುದೇ ಸೇವಾ ಭದ್ರತೆಯಿಲ್ಲದೆ ದುಡಿಸಿಕೊಳ್ಳುತ್ತಿದ್ದಾರೆ ಎಂದು ಕಿಡಿಕಾರಿದರು.

ಅಕ್ಷರ ದಾಸೋಹ ನೌಕರರ ಸೇವೆಗೆ ತಕ್ಕಂತೆ ಸಂಬಳ ನೀಡದೆ ಅಂದಿನಿಂದ ಬಂದ ಎಲ್ಲಾ ಸರ್ಕಾರಗಳು ಅನ್ಯಾಯ ಮಾಡುತ್ತಾ ಬಂದಿವೆ. ಆದ್ದರಿಂದ ತಮ್ಮ ಸರ್ಕಾರ ಈಗಾಗಲೇ ರಾಜ್ಯದ ಅನೇಕ ಇಲಾಖೆಗಳಲ್ಲಿ ಸೇವೆ ಸಲ್ಲಿಸುತ್ತಿರುವ ನೌಕರರಿಗೆ ಸಂಬಳ ಮತ್ತು ಗೌರವಧನ ಹೆಚ್ಚಿಸಿರುವುದು ಸಂತೋಷದ ವಿಷಯ. ಆದರೆ ರಾಜ್ಯದ ಅಕ್ಷರ ದಾಸೋಹ ನೌಕರಿಗೆ ೧೦೦೦ ಹೆಚ್ಚುವರಿ ಮಾಡಿದ್ದನ್ನು ಬಿಟ್ಟರೆ ಮತ್ತೆ ಯಾವುದೇ ಅನುಕೂಲ ಮಾಡಿಲ್ಲ. ಆದ್ದರಿಂದ ಅವರ ಸೇವೆಗೆ ತಕ್ಕ ಸಂಬಳ ಮತ್ತು ಇತರೆ ಸೌಲಭ್ಯಗಳನ್ನು ನೀಡಬೇಕೆಂದು ಒತ್ತಾಯಿಸಿದರು.

ರೈತ ಸಂಘದ ಪ್ರಧಾನ ಕಾರ್ಯದರ್ಶಿ ಜಿ.ನಾರಾಯಣಸ್ವಾಮಿ ಮಾತನಾಡಿ, ೬೦ ವರ್ಷ ಮೇಲ್ಪಟ್ಟ ೬೫೦೦ ಜನ ಬಿಸಿಯೂಟ ನೌಕರರನ್ನು ಹಾಗೂ ಅನಾರೋಗ್ಯದಿಂದ ಬಳಲುತ್ತಿರುವ ನೌಕರರನ್ನು ಹಾಗೂ ಇನ್ನಿತರ ಕಾರಣಗಳಿಂದ ಬಿಸಿಯೂಟ ನೌಕರರನ್ನು ಕೆಲಸದಿಂದ ತೆಗೆಯುತ್ತಿದ್ದು, ಅವರಿಗೆ ಯಾವುದೇ ರೀತಿಯ ಭದ್ರತೆ ನೀಡದೆ ಬರಿ ಗೈಯಲ್ಲಿ ಸೇವೆಯಿಂದ ತೆಗೆಯುವುದು ನ್ಯಾಯವಲ್ಲ. ಇಷ್ಟು ದಿನ ಸರ್ಕಾರದ ಯೋಜನೆಯಾದ ಬಿಸಿಯೂಟ ಕ್ಷೀರ ಭಾಗ್ಯ ಯೋಜನೆಯನ್ನು ಸರ್ಕಾರ ರಾಜ್ಯಾದ್ಯಂತ ಜಾರಿಗೆ ತಂದಿದ್ದು, ಅದನ್ನು ಯಶಸ್ವಿಗೊಳಿಸಿದ್ದು ಈ ಬಿಸಿಯೂಟ ಮಹಿಳೆಯರು. ಹಾಗಾಗಿ ಅವರು ಮಾಸಿಕ ರೂ.೨೦೦ ರಿಂದ ಇಲ್ಲಿಯವರಿಗೂ ದುಡಿದ ನೌಕರರನ್ನು ಕೆಸಲದಿಂದ ತೆಗೆಯುವಾಗ ಅವರ ಮುಂದಿನ ಜೀವನೋಪಾಯಕ್ಕಾಗಿ ೨ ಲಕ್ಷ ಇಡಗಂಟು ನೀಡುವ ಕಾರ್ಯಕ್ರಮ ರೂಪಿಸಲು ಒತ್ತಾಯಿಸಿದರು.

ಈ ಸಂದರ್ಭದಲ್ಲಿ ಅಕ್ಷರ ದಾಸೋಹ ಮುಖಂಡರಾದ ಕೋಡಿಹಳ್ಳಿ ಜ್ಯೋತಿ, ವನಿತ, ಜಯಂತಿ, ಕೋಲಾರ ಮಮತ, ಮುಳಬಾಗಿಲು ಅಮ್ಮಯ್ಯಮ್ಮ, ಎಮ್ಮೆನತ್ತ ಶೋಭ, ಪ್ರಮೀಳಮ್ಮ, ವಕ್ಕಲೇರಿ ನಾಗವೇಣಮ್ಮ, ಆಶಾ, ಸುಗಟೂರು ಶೋಭಮ್ಮ, ರಾಧಮ್ಮ, ಮುನಿರತ್ನ, ಲಲಿತಮ್ಮ, ಮಂಜುಳ, ಲಕ್ಷ್ಮಮ್ಮ, ಕಾಂತಮ್ಮ, ರತ್ನಮ್ಮ, ಅಮರಾವತಿ, ಲಕ್ಷ್ಮಿ, ಕವಿತ, ನೇತ್ರಾವತಿ, ದಾಕ್ಷಾಯಿಣಿ, ಜಮುನ, ರೈತ ಸಂಘದ ಮುಖಂಡರಾದ ಕಲ್ವಮಂಜಲಿ ರಾಮುಶಿವಣ್ಣ, ದೊಡ್ಡಕುರುಬರಹಳ್ಳಿ ಶಂಕರಪ್ಪ, ಕೊಲದೇವಿ ಗೋಪಾಲಕೃಷ್ಣಮೂರ್ತಿ, ಚಂದ್ರಪ್ಪ, ಎಲ್.ಎನ್.ಬಾಬು, ಜಗನ್ನಾಥರೆಡ್ಡಿ ಇನ್ನು ಮುಂತಾದವರು ಭಾಗವಹಿಸಿದ್ದರು.

ಚಿತ್ರಶೀರ್ಷಿಕೆ;(ಫೋಟೊ-೭ಕೋಲಾರ೧);ರಾಜ್ಯದ ಅಕ್ಷರ ದಾಸೋಹ ನೌಕರರಿಗೆ ಅವರ ಸೇವೆಗೆ ತಕ್ಕಂತೆ ಮಾಹೆಯಾನ ಕನಿಷ್ಠ ವೇತನ ೧೦೫೦೦ರೂ ನೀಡಲು ಮತ್ತು ೬೦ ವರ್ಷ ಮೇಲ್ಪಟ್ಟ ೬೫೦೦ ಬಿಸಿಯೂಟ ನೌಕರರನ್ನು ಹಾಗೂ ಅನಾರೋಗ್ಯದಿಂದ ಬಳಲುತ್ತಿರುವ ನೌಕಕರನ್ನು ಕೆಲಸದಿಂದ ತೆಗೆಯುತ್ತಿದ್ದು, ಅಂತವರಿಗೆ ೨ ಲಕ್ಷ ರೂ ಇಡಗಂಟು ನೀಡಲು ಒತ್ತಾಯಿಸಿ ಕೋಲಾರದಲ್ಲಿ ಜಿಲ್ಲಾ ಪಂಚಾಯಿತಿ ಚಲೋ ಹೋರಾಟ ನಡೆಸಿ ಜಿಪಂ ಸಿಇಒ ಯುಕೇಶ್‌ಕುಮಾರ್ ಅವರಿಗೆ ಮನವಿ ಸಲ್ಲಿಸಲಾಯಿತು.

Related Post

ಜೆಡಿಎಸ್‌ ಬಿಜೆಪಿ ಒಂದಾಗಿ ಸಂವಿಧಾನಕ್ಕೆ ಅಪಾಯ ಎಚ್ವತ್ತು ಕಾಂಗ್ರೆಸ್ ಬೆಂಬಲಿಸಿ: ಬೈರತಿ ಸುರೇಶ್
ವಚನ ಭ್ರಷ್ಟ ಬಿಜೆಪಿ ನೇತೃತ್ವದ ಎನ್.ಡಿ.ಎ. ಮೈತ್ರಿಕೂಟಕ್ಕೆ ಮತ ಕೇಳುವ ನೈತಿಕತೆ ಇಲ್ಲ-ಕೆ.ವಿ.ಗೌತಮ್
ಏಪ್ರಿಲ್ ೨೬ ರೊಳಗೆ ಎಕ್ಸಿಡಿ ಕಾರ್ಮಿಕರ ಬೇಡಿಕೆಗಳನ್ನು ಈಡೇರಿಸಲು ಆಗ್ರಹ ಇಲ್ಲವಾದಲ್ಲಿ ತೀವ್ರ ರೀತಿಯ ಹೋರಾಟ ನಡೆಸಲು ಕಾರ್ಮಿಕರ ಸಂಘಗಳ ಸಭೆಯಲ್ಲಿ ನಿರ್ಧಾರ

Leave a Reply

Your email address will not be published. Required fields are marked *

You missed

error: Content is protected !!