• Thu. Sep 19th, 2024

PLACE YOUR AD HERE AT LOWEST PRICE

ಕೆಜಿಎಫ್:ಭರತ ಹುಣ್ಣಿಮೆಯ ಪ್ರಯುಕ್ತ ಬಡವರ ಬಂಗಾರು ತಿರುಪತಿ ಎಂದೇ ಪ್ರಖ್ಯಾತಿ ಪಡೆದಿರುವ ಗುಟ್ಟಹಳ್ಳಿ  ಬಂಗಾರು ತಿರುಪತಿಯಲ್ಲಿ ಸಾವಿರಾರೂ ಭಕ್ತರಿಂದ ಬ್ರಹ್ಮರಥೋತ್ಸವ ಶ್ರದ್ಧ ಭಕ್ತಿಯಿಂದ ನಡೆಯಿತು.

ಕೆಜಿಎಫ್ ತಾಲ್ಲೂಕಿನ ಬಂಗಾರು ತಿರುಪತಿ (ಗುಟ್ಟಹಳ್ಳಿ) ಶ್ರೀ ವೆಂಕಟರಮಣ ಸ್ವಾಮಿ ದೇವಾಲಯದಲ್ಲಿ ಪ್ರತಿ ವರ್ಷವು
ಭರತ ಹುಣ್ಣಿಮೆಯಂದು ಬ್ರಹ್ಮರಥೋತ್ಸವ ಹಾಗೂ ತೇಪೋತ್ಸವ ನಡೆಸುವುದು ಸಂಪ್ರದಾಯವಾಗಿದೆ.
ಶನಿವಾರ ರಾತ್ರಿ ಶ್ರೀ ವೆಂಕಟರೆಮಣ ಸ್ವಾಮಿಗೆ ವಿಶೇಷ ಪೂಜೆ ಹಾಗೂ ಕಲ್ಯಾಣೋತ್ಸವ ಸೇರಿದಂತೆ ಪುಪ್ಪ ಪಲ್ಲಕ್ಕಿಯಲ್ಲಿ ಮೆರವಣಿಗೆ ಮಾಡಿ, ಕೊಳದಲ್ಲಿ ದೇವಿಯನ್ನು ಪ್ರದರ್ಶನೆ ಮಾಡುವ ಮೂಲಕ ತೇಪೋತ್ಸವ
ನಡೆಸಲಾಯಿತು.
ಭಾನುವಾರ ಕರ್ನಾಟಕ, ಆಂದ್ರ ಹಾಗೂ ತಮಿಳುನಾಡಿನ ಸಾವಿರಾರೂ ಮಂದಿಯ ಭಕ್ತರ ಸಮ್ಮುಖದಲ್ಲಿ ಬ್ರಹ್ಮರಥೋತ್ಸವ ನಡೆಸಲಾಯಿತು, ಭರತ ಹುಣ್ಣಿಮೆಯ ಪ್ರಯುಕ್ತ ದೇವಾಲಯ ಆಡಳಿತ ಮಂಡಳಿಯಿಂದ ಭಕ್ತರಿಗೆ ಅಗತ್ಯ ಕ್ರಮಗಳನ್ನು ಕೈಗೊಳ್ಳಲಾಗಿತು. ವಿದ್ಯುತ್ ದೀಪಗಳಿಂದ ದೇವಾಲಯವನ್ನು ಅಲಂಕಾರ ಮಡಲಾಗಿತು.
ಈ ಪೂಜಾ ಕೈಕರ್ಯದಲ್ಲಿ ದೇವಾಲಯ ಸಮಿತಿ ಅಧ್ಯಕ್ಷ ಅಶೋಕ್ ಕೃಷ್ಣಪ್ಪ, ಮಾಜಿ ಶಾಸಕ ವೈ.ಸಂಪಂಗಿ, ಸಮಾಜ
ಸೇವಕ ವಿ.ಮೋಹನ್ ಕೃಷ್ಣ, ಕಮ್ಮಸಂದ್ರ ಸುರೇಶ್, ದೇವಾಲಯ ಸಮಿತಿಯ ಸದಸ್ಯರಾದ ನವೀನ್ ರಾಮ್, ರೇಣುಕಾ ಜಯರಾಮ್ ರೆಡ್ಡಿ, ಪಾಪೇಗೌಡ, ಪ್ರಧಾನ ಅರ್ಚಕ ಶಾಮಚಾರಿ, ನರಸಿಂಹ ಗೌಡ, ವಿಜಯಲಕ್ಷ್ಮೀ ಬಾಲಾಜಿ, ಚಿನ್ನಪ್ಪ, ಸ್ಥಳೀಯ ಮುಖಂಡರಾದ ಹುಲ್ಕೂರು ಹರೀಕುಮಾರ್, ತಾಪಂ ಮಾಜಿ ಅಧ್ಯಕ್ಷ ಶಂಕರಪ್ಪ, ಹಂಗಳ ರಮೇಶ್, ದೇವಾಲಯ ಕಾರ್ಯ ನಿರ್ವಹಣಾಧಿಕಾರಿ ಸುಬ್ರಮಣಿ, ಪೇಷ್ಕಾರ ಸುರೇಶ್ ಸೇರಿದಂತೆ ಸ್ಥಳೀಯ ಜನಪ್ರತಿನಿಧಿಗಳು, ಸಾವಿರಾರೂ ಮಂದಿ ಭಕ್ತರು ಭಾಗವಹಿಸಿದ್ದರು.

Leave a Reply

Your email address will not be published. Required fields are marked *

You missed

error: Content is protected !!