• Thu. May 16th, 2024

PLACE YOUR AD HERE AT LOWEST PRICE

ಶ್ರೀನಿವಾಸಪುರ : ಇದೇ ಮೊದಲ ಬಾರಿಗೆ ಭಾರತ ದೇಶದಲ್ಲಿ ಬಾಬಾ ಸಾಹೇಬ್ ಡಾ. ಬಿ.ಆರ್. ಅಂಬೇಡ್ಕರ್ ಅವರ ಬರಹಗಳು ಮತ್ತು ಭಾಷಣಗಳ ಎಲ್ಲಾ ಸಂಪುಟಗಳನ್ನು ಆಡಿಯೋ ಬುಕ್ ರೂಪದಲ್ಲಿ ಸ್ಯಾಮ್ ಆಡಿಯೋ ( Sam audio’s) ಕಂಪನಿ ಹೋರ ತರುತ್ತಿದೆ.

ಅದರಲ್ಲೂ ಕನ್ನಡದಲ್ಲಿ ಅಂಬೇಡ್ಕರ್ ಅವರ ವಿಚಾರಧಾರೆಗಳನ್ನು ಹೋರತರುತ್ತಿರುವುದು ಹೆಮ್ಮೆಯ ವಿಷಯವಾಗಿದೆ. ರಾಜ್ಯದ ಪ್ರತಿ ಮನ‌ ಮತ್ತು ಮನೆಗಳಿಗೆ ಅಂಬೇಡ್ಕರ್ ಅವರ ವಿಚಾರಧಾರೆಗಳು ತಲುಪುವ ಅವಶ್ಯಕತೆ ಇದೆ.

ಇದೇ ಪೆಬ್ರವರಿ 19 ರಂದು ಬೆಳಗ್ಗೆ 10 ಗಂಟೆಗೆ ಕೋಲಾರ ಜಿಲ್ಲೆಯ ಮಾಲೂರು ನಗರದ ಹೋಂಡಾ ಕ್ರೀಡಾಂಗಣದಲ್ಲಿ ಬಾಬಾ ಸಾಹೇಬ್ ಅಂಬೇಡ್ಕರ್ ಅವರ ಮೊದಲ ಸಂಪುಟದ ಆಡಿಯೋ ಬಿಡುಗಡೆ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿದೆ.

ಈ ಕಾರ್ಯಕ್ರಮದ ಅತಿಥಿಗಳಾಗಿ ತಮಿಳುನಾಡಿನ ಸಂಸದರಾದ ತೋಳ್ ತಿರುಮಾವಳನ್, ರಾಜ್ಯ ಇಂದನ ಮತ್ತು ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಚಿವರಾದ ಸುನೀಲ್ ಕುಮಾರ್,  ಮಾಜಿ ಸಚಿವರು ಹಾಲಿ ಶಾಸಕರಾದ ಸತೀಶ್ ಜಾರಕಿಹೊಳಿ, ಜ್ಞಾನ ಪ್ರಕಾಶ ಸ್ವಾಮಿಜಿ, ಬಿ.ಎಸ್.ಪಿ ರಾಜ್ಯಾಧ್ಯಕ್ಷರಾದ ಕೃಷ್ಣಮೂರ್ತಿ, ಎಸ್.ಡಿ.ಪಿ.ಐ ರಾಜ್ಯಾಧ್ಯಕ್ಷರಾದ ಅಬ್ದುಲ್ ಮಜಿದ್, ಮಾಲೂರು ತಾಲ್ಲೂಕಿನ ಶಾಸಕರಾದ ನಂಜೇಗೌಡರು, ವಿಧಾನ ಪರಿಷತ್ ಸದಸ್ಯರಾದ ಎಂ.ಎಲ್ ಅನಿಲ್ ಕುಮಾರ್, ಶಾಸಕರಾದ ಜಮೀರ್ ಅಹಮದ್ ಖಾನ್ ,  ಮುಖಂಡರಾದ, ಹೂಡಿ ವಿಜಯ್ ಕುಮಾರ್, ಜಿ.ಇ.ರಾಮೇಗೌಡ, ಸಿ.ಎಂ.ಆರ್.ಶ್ರೀನಾಥ್,  ಡಿಸಿಸಿ ಬ್ಯಾಂಕ್ ಅಧ್ಯಕ್ಷರಾದ ಬ್ಯಾಲಹಳ್ಳಿ ಗೋವಿಂದಗೌಡ, ಹಿರಿಯ ಹೋರಾಟಗಾರರು ಮತ್ತು ಸಾಹಿತಿಗಳಾದ ಕೋಟಿಗಾನಹಳ್ಳಿ ರಾಮಯ್ಯ, ಸಿ.ಎಂ.ಮುನಿಯಪ್ಪ, ಎನ್ ಮುನಿಸ್ವಾಮಿ, ಗೋಲ್ಲಹಳ್ಳಿ ಶಿವಪ್ರಸಾದ್, ಟಿ.ವಿಜಯ್ ಕುಮಾರ್ , ಬೆಳಗಾನಹಳ್ಳಿ ಮುನಿವೆಂಕಟಪ್ಪ, ಎಂ.ಸಿ.ವೇಣು, ಯುವ ಶಕ್ತಿ ಸುಬ್ಬು ಇನ್ನಿತರ ಮುಖಂಡರು ಭಾಗವಹಿಸಲಿದ್ದಾರೆ.

ಜೊತೆಗೆ ರಾಜ್ಯದ ಎಲ್ಲಾ ಮಹಿಳಾ ಪರ ಸಂಘಟನೆಗಳು, ಕನ್ನಡ ಪರ ಸಂಘಟನೆಗಳು, ರೈತಪರ ಸಂಘಟನೆಗಳು, ಅಲ್ಪಸಂಖ್ಯಾತ ಸಂಘಟನೆಗಳು, ದಲಿತ ಪರ ಸಂಘಟನೆಗಳು ಜೀವಪರ ಇರುವ ಎಲ್ಲಾ ಸಂಘಟನೆಗಳ ಸದಸ್ಯರು ಕಾರ್ಯಕ್ರಮದಲ್ಲಿ ಪಾಲ್ಗೊಳ್ಳುತ್ತಿದ್ದು ತಾವುಗಳು ಕೂಡ ಈ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳಲು ಸ್ಯಾಮ್ ಆಡಿಯೋ ಸಂಸ್ಥಾಪಕ ಸಿದ್ದಾರ್ಥ್ ಆನಂದ್ ಶ್ರೀನಿವಾಸಪುರದ ಸರ್ಕಾರಿ ನೌಕರರ ಭವನದಲ್ಲಿ ಹಮ್ಮಿಕೊಂಡಿದ್ದ ವಿಶೇಷ ಸಭೆಯಲ್ಲಿ ತಾಲ್ಲೂಕಿನ ಹಾಗೂ ಜಿಲ್ಲೆಯ ಜನರಲ್ಲಿ ಮನವಿ ಮಾಡಿದರು.

ವಿಶೇಷ ಸಭೆಯಲ್ಲಿ ತಾಲ್ಲೂಕಿನ ಮುಖಂಡರಾದ ಶಿವಕುಮಾರ್, ನರಸಿಂಹಮೂರ್ತಿ, ಎಂ ಶ್ರೀನಿವಾಸನ್, ತಿಮ್ಮಪ್ಪ, ಹೋಳೂರು ಸಂತೋಷ್, ಎಂ ಟಿ ಎಸ್ ಮಣಿ, ಚಲಪತಿ, ರಾಮಾಮೂರ್ತಿ, ಈರಪ್ಪ, ವೆಂಕಟರವಣ ಹಾಗೂ ಇನ್ನಿತರರು ಇದ್ದರು.

Related Post

ಶಿಕ್ಷಕರ ಸಮಸ್ಯೆಗಳನ್ನು ಬಗೆಹರಸದೆ, ಶಿಕ್ಷಕರಿಗೆ ದ್ರೋಹವೆಸಗಿದ ಎಂ.ಎಲ್.ಸಿ. ವೈ.ಎ.ನಾರಾಯಣಸ್ವಾಮಿ : ರುಪ್ಸಾ ಅಧ್ಯಕ್ಷ ಹಾಗೂ ಪಕ್ಷೇತರ ಅಭ್ಯರ್ಥಿ ಲೋಕೇಶ್ ತಾಳಿಕಟ್ಟೆ ಆರೋಪ
ಜೆಡಿಎಸ್‌ ಬಿಜೆಪಿ ಒಂದಾಗಿ ಸಂವಿಧಾನಕ್ಕೆ ಅಪಾಯ ಎಚ್ವತ್ತು ಕಾಂಗ್ರೆಸ್ ಬೆಂಬಲಿಸಿ: ಬೈರತಿ ಸುರೇಶ್
ವಚನ ಭ್ರಷ್ಟ ಬಿಜೆಪಿ ನೇತೃತ್ವದ ಎನ್.ಡಿ.ಎ. ಮೈತ್ರಿಕೂಟಕ್ಕೆ ಮತ ಕೇಳುವ ನೈತಿಕತೆ ಇಲ್ಲ-ಕೆ.ವಿ.ಗೌತಮ್

Leave a Reply

Your email address will not be published. Required fields are marked *

You missed

error: Content is protected !!