PLACE YOUR AD HERE AT LOWEST PRICE
ಕೆಜಿಎಫ್:ಹಳೇ ವೈಷಮ್ಯದ ಹಿನ್ನಲೆಯಲ್ಲಿ ನಗರದ ಅಂಬೇಡ್ಕರ್ ನಗರದ 2ನೇ ಮುಖ್ಯರಸ್ತೆ, 3ನೇ ಕ್ರಾಸ್‍ನ ವಾಲೀಬಾಲ್ ಮೈದಾನದ ಬಳಿ ಶುಕ್ರವಾರ ರಾತ್ರಿ ಸುಮಾರು 10.15ರಲ್ಲಿ ರಾಜೇಶ್‍ಕುಮಾರ್(33) ಎಂಬುವವರನ್ನು ಕೊಲೆ ಮಾಡಿದ್ದ ಆರೋಪಿಗಳನ್ನು ಪೋಲಿಸರು ಬಂಣಧಿಸಿದ್ದಾರೆ.
ಇಡೀ ಕೆಜಿಎಫ್ ನಗರವೇ ಭಯಗೊಂಡಿದ್ದ ಕೊಲೆ ಕೃತ್ಯ ನಡೆದ 24 ಗಂಟೆಗಳಲ್ಲಿ ಆರೋಪಿಗಳನ್ನು ಬಂಧಿಸಿ, ಕೃತ್ಯಕ್ಕೆ ಬಳಸಿದ ಆಯುಧಗಳನ್ನು ವಶಪಡಿಸಿಕೊಳ್ಳುವಲ್ಲಿ ರಾಬರ್ಟ್‍ಸನ್‍ಪೇಟೆ ಪೊಲೀಸರು ಯಶಸ್ವಿಯಾಗಿದ್ದಾರೆ.
ಒಟ್ಟು 3 ಮಂದಿ ಸೇರಿ ಕೃತ್ಯವನ್ನು ಎಸಗಿದ್ದು, ಅಂಬೇಡ್ಕರ್ ನಗರದ ರಂಜಿತ್ @ ಚೋಕನ್(23), ಶರಣ್ @ ನಯನಾ(19), ಎಂ.ಎಲ್.ಬ್ಲಾಕ್‍ನ ಮಣಿ @ ಮಣಿಮಾರನ್(22) ಎಂಬುವವರಾಗಿದ್ದು ಎಲ್ಲರೂ ಸಿಕ್ಕಿಬಿದ್ದಿದ್ದಾರೆ ಎನ್ನಲಾಗಿದೆ.
ಡಿ.ವೈ.ಎ.ಸ್‍ಪಿ ವಿ.ಎಲ್.ರಮೇಶ್ ಮಾರ್ಗದರ್ಶನದಲ್ಲಿ ಸಿಪಿಐ ಕುಮಾರಸ್ವಾಮಿ ನೇತೃತ್ವದಲ್ಲಿ ಪಿಎಸ್‍ಐ ಮೂರ್ತಿ ಮತ್ತು ಎಎಸ್‍ಐ ವೆಂಕಟೇಶ್, ಸಿಬ್ಬಂದಿ ಗೋಪಿನಾಥ್, ವಿಶ್ವನಾಥ್, ರಘು, ಮುರಳಿ, ಬಸವರಾಜ್ ಕಾಂಬ್ಲೆ, ವಿನೋದ್‍ಕುಮಾರ್‍ರವರು ಆರೋಪಿಗಳ ಪತ್ತೆಕಾರ್ಯ ಕೈಗೊಂಡಿದ್ದು, ಪೊಲೀಸ್ ವರಿಷ್ಠಾಧಿಕಾರಿ ಡಾ.ಕೆ.ಧರಣಿದೇವಿ ಸಿಬ್ಬಂದಿ ಕಾರ್ಯದಕ್ಷತೆಯನ್ನು ಪ್ರಶಂಸಿರುತ್ತಾರೆ.